Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 3:23 - ಕನ್ನಡ ಸಮಕಾಲಿಕ ಅನುವಾದ

23 ಆದ್ದರಿಂದ ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡುವುದಕ್ಕೆ ಯೆಹೋವ ದೇವರು ಏದೆನ್ ತೋಟದೊಳಗಿಂದ ಅವನನ್ನು ಹೊರಗೆ ಕಳುಹಿಸಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಆದ್ದರಿಂದ ಯೆಹೋವನು ಅವನನ್ನು ಸೃಷ್ಟಿಸಿದ ಮಣ್ಣಿನ ಭೂಮಿಯನ್ನೇ ವ್ಯವಸಾಯ ಮಾಡುವುದಕ್ಕಾಗಿ ಅವನನ್ನು ಏದೆನ್ ತೋಟದಿಂದ ಹೊರಗೆ ಕಳುಹಿಸಿ ಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡಲೆಂದು ಏದೆನ್ ತೋಟದಿಂದ ಹೊರಡಿಸಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಅವನು ಉತ್ಪತ್ತಿಯಾದ ಭೂವಿುಯನ್ನೇ ವ್ಯವಸಾಯ ಮಾಡುವದಕ್ಕಾಗಿ ಅವನನ್ನು ಏದೆನ್ ತೋಟದಿಂದ ಹೊರಡಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಆದ್ದರಿಂದ ಆತನು ಆದಾಮನನ್ನು ಅವನು ಉತ್ಪತ್ತಿಗೊಂಡಿದ್ದ ನೆಲದಲ್ಲಿ ವ್ಯವಸಾಯ ಮಾಡಲು ಬಲವಂತವಾಗಿ ಏದೆನ್ ತೋಟದಿಂದ ಹೊರಡಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 3:23
10 ತಿಳಿವುಗಳ ಹೋಲಿಕೆ  

ಅನಂತರ ಆಕೆಯು ಅವನ ತಮ್ಮನಾದ ಹೇಬೆಲನನ್ನು ಹೆತ್ತಳು. ಹೇಬೆಲನು ಕುರಿ ಕಾಯುವವನಾದನು ಮತ್ತು ಕಾಯಿನನು ವ್ಯವಸಾಯ ಮಾಡುವವನಾದನು.


ನೀನು ಭೂಮಿಯನ್ನು ವ್ಯವಸಾಯ ಮಾಡಿದರೂ ಅದು ಇನ್ನು ಮುಂದೆ ಫಲಿಸುವುದಿಲ್ಲ. ನೀನು ಭೂಲೋಕದಲ್ಲಿ ಅಲೆಮಾರಿಯಾಗಿ ತಿರುಗುವವನು ಆಗಿರುವೆ,” ಎಂದರು.


ನೀನು ಪುನಃ ಮಣ್ಣಿಗೆ ಸೇರುವ ತನಕ, ಬೆವರಿಡುತ್ತಾ ಆಹಾರವನ್ನು ಉಣ್ಣುವೆ. ನೀನು ಮಣ್ಣಿನಿಂದ ತೆಗೆದವನಾಗಿರುವುದರಿಂದ ನೀನು ಮಣ್ಣೇ. ನೀನು ಪುನಃ ಮಣ್ಣಿಗೆ ಸೇರತಕ್ಕವನು.”


ಭೂಮಿಯಿಂದ ಲಾಭವು ಎಲ್ಲರಿಗೂ ಇದೆ. ಹೊಲಗದ್ದೆಗಳಿಂದ ಅರಸನಿಗೂ ಲಾಭವಿದೆ.


ಭೂಮಿಯಲ್ಲಿ ಯಾವ ಗಿಡವೂ ಇನ್ನೂ ಬೆಳೆದಿರಲಿಲ್ಲ, ಯಾವ ಪಲ್ಯವೂ ಇನ್ನೂ ಮೊಳೆತಿರಲಿಲ್ಲ. ಏಕೆಂದರೆ ಯೆಹೋವ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ. ಆಗ ಭೂಮಿಯನ್ನು ವ್ಯವಸಾಯ ಮಾಡುವುದಕ್ಕೆ ಮನುಷ್ಯನೂ ಇರಲಿಲ್ಲ.


ನೋಹನು ವ್ಯವಸಾಯಗಾರನಾಗಿದ್ದನು. ಅವನು ಒಂದು ದ್ರಾಕ್ಷಿತೋಟವನ್ನು ಪ್ರಾರಂಭಿಸಿದನು.


ಯೆಹೋವ ದೇವರು, “ಇಗೋ, ಮನುಷ್ಯನು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ತಿಳಿದು, ನಮ್ಮಲ್ಲಿ ಒಬ್ಬನಂತಾದನಲ್ಲಾ. ಈಗ ಅವನು ಕೈಚಾಚಿ, ಜೀವವೃಕ್ಷದ ಹಣ್ಣನ್ನು ಸಹ ತಿಂದು, ಶಾಶ್ವತವಾಗಿ ಬದುಕುವವನಾಗಬಾರದು,” ಎಂದರು.


ಹೀಗೆ ಅವರು ಮನುಷ್ಯನನ್ನು ಹೊರಗೆ ಹಾಕಿ, ಜೀವವೃಕ್ಷದ ದಾರಿಯನ್ನು ಕಾಯುವುದಕ್ಕೆ ಏದೆನ್ ತೋಟದ ಪೂರ್ವದಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಖಡ್ಗವನ್ನೂ ಇರಿಸಿದರು.


ಹೀಗಿರಲು ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ, ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು ಆಗ ಅವನು ಜೀವಿಸುವ ವ್ಯಕ್ತಿಯಾದನು.


ಯೆಹೋವ ದೇವರು ಪೂರ್ವದಿಕ್ಕಿಗಿರುವ ಏದೆನ್ ಸೀಮೆಯಲ್ಲಿ ತೋಟವನ್ನು ಮಾಡಿ, ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು