Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 19:16 - ಕನ್ನಡ ಸಮಕಾಲಿಕ ಅನುವಾದ

16 ಅವರು ತಡಮಾಡಿದಾಗ ಯೆಹೋವ ದೇವರು ಅವನನ್ನು ಕನಿಕರಿಸಿದ್ದರಿಂದ, ಆ ದೂತರು ಅವನ ಕೈಯನ್ನೂ, ಅವನ ಹೆಂಡತಿಯ ಕೈಯನ್ನೂ, ಅವನ ಇಬ್ಬರು ಪುತ್ರಿಯರ ಕೈಗಳನ್ನೂ ಹಿಡಿದು, ಅವರನ್ನು ಪಟ್ಟಣದ ಹೊರಗೆ ತಂದುಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅವನು ತಡಮಾಡಲು ಯೆಹೋವನು ಅವನನ್ನು ಕನಿಕರಿಸಿದ್ದರಿಂದ ಆ ಮನುಷ್ಯರು ಅವನನ್ನೂ ಅವನ ಹೆಂಡತಿ ಮಕ್ಕಳನ್ನೂ ಕೈಹಿಡಿದು ಹೊರಗೆ ತಂದು ಪಟ್ಟಣದ ಆಚೆಗೆ ಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಅವನು ಇನ್ನೂ ತಡಮಾಡುತ್ತಿರುವುದನ್ನು ಕಂಡು, ಆ ಮನುಷ್ಯರು ಅವನನ್ನು ಹಾಗು ಅವನ ಹೆಂಡತಿ ಮಕ್ಕಳನ್ನು ಕೈಹಿಡಿದು ಹೊರಗೆ ತಂದು ಊರಾಚೆಗೆ ಬಿಟ್ಟರು. ಸರ್ವೇಶ್ವರ ಸ್ವಾಮಿಗೆ ಅವನ ಮೇಲೆ ಅಷ್ಟು ಕನಿಕರವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅವನು ತಡಮಾಡಲು ಯೆಹೋವನು ಅವನನ್ನು ಕನಿಕರಿಸಿದ್ದರಿಂದ ಆ ಮನುಷ್ಯರು ಅವನನ್ನೂ ಅವನ ಹೆಂಡತಿ ಮಕ್ಕಳನ್ನೂ ಕೈಹಿಡಿದು ಹೊರಗೆ ತಂದು ಊರಾಚೆಗೆ ಬಿಟ್ಟರು. ಹೊರಗೆ ತಂದ ಮೇಲೆ ಆತನು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆದರೆ ಲೋಟನು ಗಲಿಬಿಲಿಗೊಂಡು ತಡಮಾಡಲು ಆ ಇಬ್ಬರು ಪುರುಷರು ಲೋಟನನ್ನೂ ಅವನ ಹೆಂಡತಿಯನ್ನೂ ಅವನ ಇಬ್ಬರು ಹೆಣ್ಣುಮಕ್ಕಳನ್ನೂ ಕೈಹಿಡಿದುಕೊಂಡು ನಗರದ ಹೊರಕ್ಕೆ ಸುರಕ್ಷಿತವಾಗಿ ತಂದುಬಿಟ್ಟರು. ಹೀಗೆ ಯೆಹೋವನು ಲೋಟನಿಗೂ ಅವನ ಕುಟುಂಬದವರಿಗೂ ದಯೆತೋರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 19:16
39 ತಿಳಿವುಗಳ ಹೋಲಿಕೆ  

ಕರ್ತದೇವರು ಭಕ್ತರನ್ನು ಸಂಕಟದೊಳಗಿಂದ ತಪ್ಪಿಸುವುದಕ್ಕೂ ಅನೀತಿವಂತರನ್ನು ಶಿಕ್ಷಿಸುವುದಕ್ಕಾಗಿ ನ್ಯಾಯತೀರ್ಪಿನ ದಿನದ ತನಕ ಇಡುವುದಕ್ಕೂ ಬಲ್ಲವರಾಗಿದ್ದಾರೆ.


ಅವರು ನಮ್ಮನ್ನು ರಕ್ಷಿಸಿದರು. ಹೇಗೆಂದರೆ, ನಾವು ಮಾಡಿದ ಪುಣ್ಯ ಕ್ರಿಯೆಗಳಿಂದಲ್ಲ, ಅವರ ಕರುಣೆಗೆ ಅನುಸಾರವಾಗಿ ಆತ್ಮಿಕವಾಗಿ ಹುಟ್ಟುವಂತೆ ಮಾಡಿ, ನಮ್ಮನ್ನು ತೊಳೆದೂ ಪವಿತ್ರಾತ್ಮ ದೇವರು ನೂತನ ಜೀವನವನ್ನು ಕೊಡುವುದರ ಮೂಲಕವೇ ಅವರು ನಮ್ಮನ್ನು ರಕ್ಷಿಸಿದರು.


ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ಅವರು ಕರುಣೆಯುಳ್ಳ ತಂದೆಯೂ ಎಲ್ಲರನ್ನೂ ಆದರಿಸುವ ದೇವರೂ ಆಗಿದ್ದಾರೆ.


ನನ್ನನ್ನು ಕಳುಹಿಸಿದ ತಂದೆ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬರಲಾರರು. ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು.


“ಆದರೆ ಸುಂಕದವನು ದೂರದಲ್ಲಿ ನಿಂತು, ಆಕಾಶದ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಧೈರ್ಯಗೊಳ್ಳದೇ ತನ್ನ ಎದೆಯನ್ನು ಬಡಿದುಕೊಳ್ಳುತ್ತಾ, ‘ದೇವರೇ ಪಾಪಿಯಾದವನು ನಾನೇ ನನ್ನನ್ನು ಕರುಣಿಸು,’ ಎಂದು ಪ್ರಾರ್ಥಿಸಿದನು.


ನಾವು ನಾಶವಾಗದೇ ಉಳಿದಿರುವುದು ಯೆಹೋವ ದೇವರ ಮಹಾ ಪ್ರೀತಿಯಿಂದಲೇ. ಏಕೆಂದರೆ ಅವರ ಅನುಕಂಪಗಳು ಮುಗಿಯುವುದಿಲ್ಲ.


ಅವರಿಗೆ ಬಂದ ಎಲ್ಲಾ ಇಕ್ಕಟ್ಟಿನಲ್ಲಿ ಆತನಿಗೆ ಇಕ್ಕಟ್ಟಾಯಿತು. ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು. ತನ್ನ ಪ್ರೀತಿಯಲ್ಲಿಯೂ, ತನ್ನ ಕನಿಕರದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು. ಪೂರ್ವಕಾಲದ ದಿವಸಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.


ಯೆಹೋವ ದೇವರಿಗೆ ಉಪಕಾರ ಸಲ್ಲಿಸಿರಿ; ಅವರು ಒಳ್ಳೆಯವರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.


ನಿಮ್ಮ ಆಜ್ಞೆಗಳನ್ನು ಪಾಲಿಸಲು ನಾನು ತಡಮಾಡದೆ ತ್ವರೆಪಟ್ಟಿದ್ದೇನೆ.


ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ; ಅವರು ಒಳ್ಳೆಯವರು. ಅವರ ಪ್ರೀತಿ ಶಾಶ್ವತವಾಗಿರುವುದು.


ದೇವರು ತಮ್ಮ ಅದ್ಭುತಗಳ ಜ್ಞಾಪಕವನ್ನು ಉಳಿದಿರುವಂತೆ ಮಾಡಿದ್ದಾರೆ; ಯೆಹೋವ ದೇವರು ಕೃಪೆಯೂ, ಅನುಕಂಪವೂ ಉಳ್ಳವರು.


ಯೆಹೋವ ದೇವರನ್ನು ಕೊಂಡಾಡಿರಿ, ಅವರು ಒಳ್ಳೆಯವರು; ಅವರ ಪ್ರೀತಿಯು ಯುಗಯುಗಕ್ಕೂ ಇರುವುದು.


ಆದರೂ ದೇವರು ತಮ್ಮ ಮಹಾಶಕ್ತಿಯನ್ನು ಅವರಿಗೆ ತಿಳಿಯಮಾಡುವ ಹಾಗೆ, ತಮ್ಮ ಹೆಸರಿನ ನಿಮಿತ್ತ ಅವರನ್ನು ರಕ್ಷಿಸಿದರು.


ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ; ಅವರು ಒಳ್ಳೆಯವರು. ಅವರ ಪ್ರೀತಿ ಶಾಶ್ವತವಾಗಿರುವುದು.


ಒಬ್ಬ ತಂದೆಯು ತಮ್ಮ ಮಕ್ಕಳ ಮೇಲೆ ಅನುಕಂಪಗೊಳ್ಳುವಂತೆ, ಯೆಹೋವ ದೇವರು ತಮಗೆ ಭಯಪಡುವವರ ಮೇಲೆ ಅನುಕಂಪ ತೋರಿಸುವವರಾಗಿದ್ದಾರೆ.


ಆದರೆ ನೀವು ಯೆಹೋವ ದೇವರೇ, ಅನುಕಂಪವೂ ದಯೆಯೂ ಉಳ್ಳ ದೇವರು ಮತ್ತು ದೀರ್ಘಶಾಂತರೂ ಪ್ರೀತಿಯಲ್ಲಿ ಸಮೃದ್ಧಿವಂತನೂ ಸತ್ಯತೆಯುಳ್ಳವರೂ ಆಗಿದ್ದೀರಿ.


ಯೆಹೋವ ದೇವರೇ, ನೀವು ಒಳ್ಳೆಯವರೂ ಕ್ಷಮಿಸುವುದಕ್ಕೆ ಸಿದ್ಧರೂ ಆಗಿದ್ದೀರಿ. ನಿಮ್ಮನ್ನು ಬೇಡುವವರೆಲ್ಲರಿಗೆ ಪ್ರೀತಿಯಲ್ಲಿ ಸಮೃದ್ಧಿವಂತರೂ ಆಗಿರುವಿರಿ.


ನಿಮ್ಮಲ್ಲಿ ಜೀವನವನ್ನು ಪ್ರೀತಿಸುವವನು ಮತ್ತು ಬಹಳ ದಿನಗಳವರೆಗೆ ಬದುಕಬೇಕೆ?


ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ. ಅವರು ಒಳ್ಳೆಯವರು; ಅವರ ಪ್ರೀತಿ ಶಾಶ್ವತವಾಗಿರುವುದು.


ನಿಮ್ಮ ದೇವರಾದ ಯೆಹೋವ ದೇವರು ಕರುಣೆಯುಳ್ಳ ದೇವರು, ಅವರು ನಿಮ್ಮನ್ನು ಕೈಬಿಡುವುದಿಲ್ಲ, ನಾಶಮಾಡುವುದಿಲ್ಲ, ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಒಡಂಬಡಿಕೆಯನ್ನು ಮರೆಯುವುದಿಲ್ಲ.


ಯೆಹೋವ ದೇವರು ದೀರ್ಘಶಾಂತನು, ಮಹಾ ಪ್ರೀತಿಯುಳ್ಳವನು, ತಿರುಗಿಬೀಳುವುದನ್ನು ಮತ್ತು ಪಾಪವನ್ನು ಕ್ಷಮಿಸುವಾತನು, ಆದರೂ ಅಪರಾಧಿಯನ್ನು ಶಿಕ್ಷಿಸದೆ ಬಿಡದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆಗಳವರೆಗೂ ಶಿಕ್ಷಿಸುವಾತನೂ ಎಂದು ನೀವು ಹೇಳಿದ್ದೀರಲ್ಲಾ?


ಯೆಹೋವ ದೇವರು ಅವನೆದುರಿಗೆ ಹಾದು ಹೋಗಿ, “ಯೆಹೋವ ದೇವರು, ಯೆಹೋವ ದೇವರು, ಕರುಣಾಳುವು, ಕೃಪಾಳುವು, ದೀರ್ಘಶಾಂತನು, ಮಹಾ ಪ್ರೀತಿಯುಳ್ಳವನು ಮತ್ತು ಸತ್ಯದಲ್ಲಿ ಸಮೃದ್ಧಿಯಾದಾತನೂ


ಆದ್ದರಿಂದ ದೇವರು ಯಾರನ್ನು ಕರುಣಿಸಬೇಕೆಂದು ಬಯಸುತ್ತಾರೋ, ಅವರನ್ನು ಕರುಣಿಸುತ್ತಾರೆ. ಯಾರನ್ನು ಕಠಿಣಪಡಿಸಬೇಕೆಂದು ಬಯಸುತ್ತಾರೋ, ಅವರನ್ನು ಕಠೋರನ್ನಾಗಿ ಮಾಡುತ್ತಾರೆ.


ಆ ನಾಡನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಇಬ್ಬರು ಮನುಷ್ಯರಿಗೆ ಯೆಹೋಶುವನು, “ನೀವು ಆ ವೇಶ್ಯೆಯ ಮನೆಗೆ ಹೋಗಿ, ಅವಳನ್ನೂ ಅವಳಿಗೆ ಇರುವ ಸಮಸ್ತವನ್ನೂ ನೀವು ಅವಳಿಗೆ ಆಣೆ ಇಟ್ಟ ಹಾಗೆ ಅಲ್ಲಿಂದ ಹೊರಗೆ ತೆಗೆದುಕೊಂಡು ಬನ್ನಿರಿ,” ಎಂದನು.


ದೇವರು ಆ ದುಷ್ಟರ ನಡತೆಗೆ ವೇದನೆಗೊಂಡಿದ್ದ ನೀತಿವಂತನಾದ ಲೋಟನನ್ನು ಕಾಪಾಡಿದರು.


ಸೂರ್ಯೋದಯವಾಗುವ ಮೊದಲು ದೂತರು ಲೋಟನನ್ನು ತ್ವರೆಪಡಿಸಿ, “ಈ ಪಟ್ಟಣಕ್ಕೆ ಉಂಟಾಗುವ ದಂಡನೆಯಿಂದ ನೀನು ನಾಶವಾಗದ ಹಾಗೆ ಎದ್ದು ನಿನ್ನ ಹೆಂಡತಿಯನ್ನೂ ಇಲ್ಲಿರುವ ನಿನ್ನ ಪುತ್ರಿಯರನ್ನೂ ಕರೆದುಕೊಂಡು ನಡೆ,” ಎಂದರು.


ಸಾವಿರ ತಲೆಗಳವರೆಗೂ ಕರುಣೆ ತೋರಿಸುವಾತನು. ದೋಷವನ್ನು, ಅಪರಾಧವನ್ನು, ಪಾಪವನ್ನು ಕ್ಷಮಿಸುವಾತನು ಆದರೂ ಅಪರಾಧಿಯನ್ನು ಶಿಕ್ಷಿಸದೆ ಬಿಡದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆಗಳವರೆಗೂ ಶಿಕ್ಷಿಸುವಾತನು,” ಎಂದು ಪ್ರಕಟಿಸಿಕೊಂಡರು.


ನೀನು ಈಜಿಪ್ಟ್ ದೇಶದಲ್ಲಿ ದಾಸನಾಗಿದ್ದಿಯೆಂದೂ, ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಅಲ್ಲಿಂದ ಬಲವಾದ ಹಸ್ತದಿಂದಲೂ ಚಾಚಿದ ಭುಜದಿಂದಲೂ ಹೊರಗೆ ಬರಮಾಡಿದರೆಂದೂ ಜ್ಞಾಪಕಮಾಡಿಕೊಳ್ಳಬೇಕು. ಆದಕಾರಣ ನಿನ್ನ ದೇವರಾದ ಯೆಹೋವ ದೇವರು ನಿನಗೆ ಸಬ್ಬತ್ ದಿನವನ್ನು ಆಚರಿಸಬೇಕೆಂದು ಆಜ್ಞಾಪಿಸಿದ್ದಾರೆ.


ಆಗ ನೀವು ಅವರಿಗೆ, “ನಾವು ಈಜಿಪ್ಟ್ ದೇಶದಲ್ಲಿ ಫರೋಹನನಿಗೆ ದಾಸರಾಗಿದ್ದೆವು. ಯೆಹೋವ ದೇವರು ಬಲವಾದ ಕೈಯಿಂದ ನಮ್ಮನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದರು.


ಯೆಹೋವ ದೇವರು ನಿಮ್ಮನ್ನು ಪ್ರೀತಿಸಿದ್ದರಿಂದಲೂ, ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ನೆರವೇರಿಸುವುದರಿಂದಲೂ, ಯೆಹೋವ ದೇವರು ನಿಮ್ಮನ್ನು ಬಲವಾದ ಕೈಯಿಂದ ಹೊರಗೆ ಬರಮಾಡಿ ನಿಮ್ಮನ್ನು ಗುಲಾಮತನದಿಂದಲೂ, ಈಜಿಪ್ಟಿನ ಅರಸನಾದ ಫರೋಹನ ಕೈಯಿಂದಲೂ ವಿಮೋಚಿಸಿದರು.


ದುಷ್ಟರಿಗೆ ವ್ಯಥೆಗಳು ಬಹಳ; ಆದರೆ ಯೆಹೋವ ದೇವರಲ್ಲಿ ಭರವಸವಿಡುವವನನ್ನು ಅದರ ಒಂಡಬಡಿಕೆಯ ಪ್ರೀತಿಯು ಸುತ್ತುವರಿಯುವುದು.


ಯೆಹೋವ ದೇವರ ಕಣ್ಣು ತಮಗೆ ಭಯಪಡುವವರ ಮೇಲಿರುತ್ತದೆ, ಅವರ ಒಡಂಬಡಿಕೆಯ ಪ್ರೀತಿಯನ್ನು ಎದುರು ನೋಡುವವರ ಮೇಲೆಯೂ ಇರುತ್ತೆ.


ಇದರಿಂದ ದೇವರು ಅವರ ಪ್ರಾಣವನ್ನು ಮರಣದಿಂದ ಬಿಡಿಸಿ, ಬರಗಾಲದಲ್ಲಿ ಅವರ ಜೀವವನ್ನು ಕಾಪಾಡುತ್ತಾರೆ.


ಏಕೆಂದರೆ ನಾವು ತಡಮಾಡದೆ ಇದ್ದಿದ್ದರೆ, ಇಷ್ಟರಲ್ಲಿ ಎರಡು ಸಾರಿ ಹೋಗಿ ಬರಬಹುದಾಗಿತ್ತು,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು