Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 17:12 - ಕನ್ನಡ ಸಮಕಾಲಿಕ ಅನುವಾದ

12 ನಿಮ್ಮ ಸಂತತಿಯವರಲ್ಲಿ ಪ್ರತಿಯೊಂದು ಗಂಡು ಮಗುವಿಗೂ ಎಂಟು ದಿನಗಳಾದ ಮೇಲೆ ಸುನ್ನತಿ ಮಾಡಿಸಬೇಕು. ಮನೆಯಲ್ಲಿ ಹುಟ್ಟಿದವನಾಗಲಿ, ನಿನ್ನ ಸಂತತಿಯಲ್ಲದೆ ಪರರ ಮಕ್ಕಳಾಗಲಿ, ಕ್ರಯಕ್ಕೆ ತೆಗೆದುಕೊಂಡವನಾಗಲಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಮುಂದಿನ ಎಲ್ಲಾ ತಲತಲಾಂತರವಾಗಿ ಬರುವ ನಿಮ್ಮ ಪ್ರತಿಯೊಂದು ಗಂಡು ಮಗುವಿಗೂ, ಎಂಟು ದಿನಗಳಾದ ಮೇಲೆ ಸುನ್ನತಿ ಮಾಡಿಸಬೇಕು; ಮನೆಯಲ್ಲಿ ಹುಟ್ಟಿದವನಾಗಲಿ, ನಿನ್ನ ಸಂತತಿಯಲ್ಲದೆ ಪರರ ಮಕ್ಕಳಾಗಲಿ, ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವನಾಗಲಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಎಲ್ಲ ತಲಾಂತರಗಳಲ್ಲಿ ನಿಮ್ಮಲ್ಲಿರುವ ಪ್ರತಿಯೊಂದು ಗಂಡುಮಗುವಿಗೂ ಜೀತಗಾರರಿಗೂ ಮನೆಯಲ್ಲಿ ಹುಟ್ಟಿದ ಅಥವಾ ಅನ್ಯರಿಂದ ಕ್ರಯಕ್ಕೆ ಕೊಂಡುಕೊಂಡವರಿಗೂ, ಎಂಟು ದಿನಗಳ ವಯಸ್ಸಾದಾಗ ಸುನ್ನತಿ ಮಾಡಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಎಲ್ಲಾ ತಲಾಂತರಗಳಲ್ಲಿ ನಿಮ್ಮಲ್ಲಿರುವ ಪ್ರತಿಯೊಬ್ಬ ಗಂಡಸೂ, ಮನೆಯಲ್ಲಿ ಹುಟ್ಟಿದವನಾದರೂ ನಿನ್ನ ಸಂತತಿಯಲ್ಲಿ ಹುಟ್ಟದೆ ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವನಾದರೂ ಎಂಟು ದಿನಗಳ ವಯಸ್ಸುಳ್ಳವನಾದಾಗ ಅವನಿಗೆ ಸುನ್ನತಿ ಮಾಡಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 17:12
12 ತಿಳಿವುಗಳ ಹೋಲಿಕೆ  

ಎಂಟನೆಯ ದಿನದಲ್ಲಿ ಮಗುವಿಗೆ ಸುನ್ನತಿ ಮಾಡಿಸಬೇಕು.


ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಎಂಟನೆಯ ದಿನದಲ್ಲಿ, ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದಂತೆ “ಯೇಸು” ಎಂದು ನಾಮಕರಣ ಮಾಡಿದರು.


ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು, ನಾನು ಇಸ್ರಾಯೇಲ್ ವಂಶದವನು; ಬೆನ್ಯಾಮೀನನ ಕುಲದವನು; ಹೀಬ್ರಿಯರಿಂದ ಹುಟ್ಟಿದ ಹೀಬ್ರಿಯನು; ಮೋಶೆಯ ನಿಯಮದ ಅನುಸಾರವಾಗಿ ನಾನು ಫರಿಸಾಯನು.


ಅವರು ಎಂಟನೆಯ ದಿನ ಆ ಮಗುವಿಗೆ ಸುನ್ನತಿ ಮಾಡಿಸುವುದಕ್ಕಾಗಿ ಬಂದು, ಅವನ ತಂದೆಯ ಹೆಸರಿನಂತೆ ಮಗನನ್ನು ಜಕರೀಯನೆಂದು ನಾಮಕರಣ ಮಾಡಲಿದ್ದರು.


ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ. ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.


ಆಮೇಲೆ ದೇವರು ಅಬ್ರಹಾಮನಿಗೆ ಸುನ್ನತಿಯ ಒಡಂಬಡಿಕೆಯನ್ನೂ ಕೊಟ್ಟರು. ಅಬ್ರಹಾಮನಿಗೆ ಇಸಾಕನು ಜನಿಸಿದನು. ಇಸಾಕನು ಜನಿಸಿದ ಎಂಟನೆಯ ದಿನ ಅಬ್ರಹಾಮನು ಇಸಾಕನಿಗೆ ಸುನ್ನತಿ ಮಾಡಿಸಿದನು. ಅನಂತರ ಇಸಾಕನಿಗೆ ಯಾಕೋಬನು ಜನಿಸಿದನು. ಯಾಕೋಬನು ನಮ್ಮ ಹನ್ನೆರಡು ಮಂದಿ ಪಿತೃಗಳಿಗೆ ತಂದೆಯಾದನು.


ದೇವರು ತನಗೆ ಅಪ್ಪಣೆಕೊಟ್ಟ ಹಾಗೆ ಅಬ್ರಹಾಮನು ತನ್ನ ಮಗ ಇಸಾಕನಿಗೆ ಎಂಟನೆಯ ದಿನದಲ್ಲಿ ಸುನ್ನತಿ ಮಾಡಿದನು.


ಅಬ್ರಹಾಮನು ತನ್ನ ಮಗ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿ ಹುಟ್ಟಿದವರೆಲ್ಲರಿಗೂ ತಾನು ಕ್ರಯಕ್ಕೆ ತೆಗೆದುಕೊಂಡವರೆಲ್ಲರಿಗೂ ಹೀಗೆ ತನ್ನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ದೇವರು ತನಗೆ ಹೇಳಿದ ಹಾಗೆ, ಆ ದಿನವೇ ಸುನ್ನತಿ ಮಾಡಿಸಿದನು.


ಆದರೆ ಕ್ರಯಕ್ಕೆ ತೆಗೆದುಕೊಂಡ ಪ್ರತಿಯೊಬ್ಬ ಗುಲಾಮನು ಸುನ್ನತಿ ಮಾಡಿಸಿಕೊಂಡ ತರುವಾಯ, ಅಂಥವನು ಅದನ್ನು ತಿನ್ನಬಹುದು.


ಅದರಂತೆಯೇ ನಿಮ್ಮ ದನಕುರಿಗಳನ್ನೂ ನನಗೆ ಸಮರ್ಪಿಸಬೇಕು. ಅದು ಏಳು ದಿನಗಳು ತಾಯಿಯ ಬಳಿಯಲ್ಲಿರಲಿ, ಎಂಟನೆಯ ದಿನದಲ್ಲಿ ಅದನ್ನು ನನಗೆ ಸಮರ್ಪಿಸಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು