Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 15:17 - ಕನ್ನಡ ಸಮಕಾಲಿಕ ಅನುವಾದ

17 ಇದಾದ ಮೇಲೆ ಹೊತ್ತು ಮುಳುಗಿ ಕತ್ತಲಾಗುತ್ತಿರಲು, ಹೊಗೆ ಹಾಯುವ ಒಲೆಯೂ ಉರಿಯುವ ದೀಪವೂ ಆ ತುಂಡುಗಳ ಮಧ್ಯದಲ್ಲಿ ಹಾದು ಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಹೊತ್ತು ಮುಳುಗಿ ಕಾರ್ಗತ್ತಲಾದಾಗ, ಇಗೋ, ಹೊಗೆ ಹಾಯುವ ಒಲೆಯೂ ಉರಿಯುವ ದೀಪವೂ ಕಾಣಿಸಿ ಆ ತುಂಡುಗಳ ಮಧ್ಯದಲ್ಲಿ ಹಾದು ಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಹೊತ್ತು ಮುಳುಗಿ ಕಾರ್ಗತ್ತಲಾದಾಗ ಇಗೋ, ಹೊಗೆಯಾಡುವ ಒಲೆಯೊಂದು ಹಾಗು ಉರಿಯುವ ದೀವಿಟಿಗೆಯೊಂದು ಕಾಣಿಸಿಕೊಂಡು ಆ ತುಂಡುಗಳ ನಡುವೆ ಹಾದುಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಹೊತ್ತು ಮುಣುಗಿ ಕಾರ್ಗತ್ತಲಾದಾಗ ಇಗೋ ಹೊಗೆಹಾಯುವ ಒಲೆಯೂ ಉರಿಯುವ ದೀವಟಿಗೆಯೂ ಕಾಣಿಸಿ ಆ ತುಂಡುಗಳ ನಡುವೆ ಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಸೂರ್ಯನು ಮುಳುಗಿದ ಮೇಲೆ ತುಂಬ ಕತ್ತಲಾಯಿತು. ಕಡಿದುಹಾಕಿದ್ದ ಪ್ರತಿಯೊಂದು ಪ್ರಾಣಿಗಳ ದೇಹದ ಎರಡೆರಡು ಹೋಳುಗಳು ಇನ್ನೂ ನೆಲದ ಮೇಲೆ ಇದ್ದವು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಹೊಗೆ ಮತ್ತು ಬೆಂಕಿಗಳಿಂದ ಕೂಡಿದ ದೀವಿಟಿಗೆಯು ಈ ತುಂಡುಗಳ ನಡುವೆ ಹಾದುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 15:17
13 ತಿಳಿವುಗಳ ಹೋಲಿಕೆ  

ಆಗ ಯೆಹೋವ ದೇವರ ದೂತನು ತನ್ನ ಕೈಯಲ್ಲಿದ್ದ ಕೋಲಿನ ಕೊನೆಯನ್ನು ಚಾಚಿ, ಮಾಂಸವನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ಮುಟ್ಟಿದನು. ಆಗ ಬೆಂಕಿಯು ಬಂಡೆಯಿಂದ ಎದ್ದು, ಮಾಂಸವನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ದಹಿಸಿಬಿಟ್ಟಿತು. ಆಗ ಯೆಹೋವ ದೇವರ ದೂತನು ಅವನ ಕಣ್ಣುಗಳಿಗೆ ಕಾಣಿಸದೆ ಹೋದನು.


ಕಬ್ಬಿಣ ಕರಗಿಸುವ ಕುಲುಮೆಯಂತಿದ್ದ ಈಜಿಪ್ಟ್ ದೇಶದಿಂದ ನಿಮ್ಮ ಪೂರ್ವಜರನ್ನು ನಾನು ಬರಮಾಡಿದಾಗ, ನೀವು ನನ್ನ ಮಾತನ್ನು ಕೇಳಿ, ನಾನು ನಿಮಗೆ ಆಜ್ಞಾಪಿಸಿರುವ ವಿಧಿಗಳನ್ನೆಲ್ಲಾ ಕೈಗೊಂಡರೆ, ನನ್ನ ಪ್ರಜೆಯಾಗುವಿರಿ; ನಾನು ನಿಮ್ಮ ದೇವರಾಗಿರುವೆನು.


ದಾವೀದನು ಯೆಹೋವ ದೇವರಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿಸಿ, ಅದರ ಮೇಲೆ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿ ಯೆಹೋವ ದೇವರನ್ನು ಪ್ರಾರ್ಥಿಸಿದನು. ಆಗ ಅವರು ಆಕಾಶದಿಂದ ದಹನಬಲಿಪೀಠದ ಮೇಲೆ ಅಗ್ನಿಯಿಂದ ಅವನಿಗೆ ಉತ್ತರಕೊಟ್ಟರು.


ಚೀಯೋನಿಗೋಸ್ಕರ ನಾನು ಮೌನವಾಗಿರುವುದಿಲ್ಲ! ಯೆರೂಸಲೇಮಿಗೋಸ್ಕರ ಅದರ ವಿಮೋಚನೆಯು ಪ್ರಕಾಶದಂತೆಯೂ, ಅದರ ರಕ್ಷಣೆಯು ಉರಿಯುವ ದೀವಿಟಿಗೆಯಂತೆಯೂ ಹೊರಡುವವರೆಗೆ ನಾನು ವಿಶ್ರಾಂತಿಯಿಂದ ಇರುವುದಿಲ್ಲ.


ಮೂಗಿನಿಂದ ಹೊಗೆ ಬಂದಂತೆಯೂ, ಬಾಯಿಯೊಳಗಿಂದ ದಹಿಸುವ ಅಗ್ನಿ ಹೊರಟಂತೆಯೂ; ಕೆಂಡಗಳು ಅದರಿಂದ ಜ್ವಾಲಿಸಿದಂತೆಯೂ ಇತ್ತು.


ಅಗ್ನಿ ಜ್ವಾಲೆಯು ಬಲಿಪೀಠದಿಂದ ಆಕಾಶಕ್ಕೆ ಸರಿಯಾಗಿ ಏಳುವಾಗ, ಯೆಹೋವ ದೇವರ ದೂತನು ಬಲಿಪೀಠದ ಜ್ವಾಲೆಯಲ್ಲಿ ಮೇಲಕ್ಕೆ ಹೋದನು. ಅದನ್ನು ಮಾನೋಹನೂ, ಅವನ ಹೆಂಡತಿಯೂ ಕಂಡು, ನೆಲದ ಮೇಲೆ ಬೋರಲು ಬಿದ್ದರು.


ನಿಮ್ಮನ್ನಾದರೋ ಯೆಹೋವ ದೇವರು ತಮಗೆ ಸ್ವಕೀಯ ಜನರನ್ನಾಗಿ ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿ, ಕಬ್ಬಿಣವನ್ನು ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಈಜಿಪ್ಟ್ ದೇಶದಿಂದ ಹೊರತಂದರು.


ಅನಂತರ ಅವನು ಇವುಗಳನ್ನೆಲ್ಲಾ ಯೆಹೋವ ದೇವರಿಗಾಗಿ ತೆಗೆದುಕೊಂಡು ಬಂದು ಎರಡೆರಡು ಹೋಳುಮಾಡಿ, ಒಂದು ತುಂಡನ್ನು ಇನ್ನೊಂದರ ಎದುರಾಗಿ ಇಟ್ಟನು. ಆದರೆ ಅವನು ಪಕ್ಷಿಗಳನ್ನು ತುಂಡು ಮಾಡಲಿಲ್ಲ.


ಯೆಹೋವ ದೇವರು ಅಗ್ನಿಯೊಳಗೆ ಬೆಟ್ಟದ ಮೇಲೆ ಇಳಿದಿದ್ದರಿಂದ ಸೀನಾಯಿ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.


ಕೂಡಲೇ ಯೆಹೋವ ದೇವರ ಬೆಂಕಿಯು ಇಳಿದುಬಂದು, ದಹನಬಲಿಯನ್ನೂ, ಕಟ್ಟಿಗೆಗಳನ್ನೂ, ಕಲ್ಲುಗಳನ್ನೂ, ಮಣ್ಣನ್ನೂ ಸುಟ್ಟುಬಿಟ್ಟು, ಕಾಲುವೆಯಲ್ಲಿದ್ದ ನೀರನ್ನು ಹೀರಿಬಿಟ್ಟಿತು.


ಜನರೆಲ್ಲಾ ಗುಡುಗುಗಳನ್ನೂ ಮಿಂಚುಗಳನ್ನೂ ತುತೂರಿಯ ಶಬ್ದವನ್ನೂ ಬೆಟ್ಟದಲ್ಲಿ ಹೊಗೆ ಹಾಯುವುದನ್ನೂ ನೋಡಿದರು. ಜನರು ಅದನ್ನು ನೋಡಿ ನಡುಗುತ್ತಾ ದೂರಹೋಗಿ ನಿಂತುಕೊಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು