Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 14:1 - ಕನ್ನಡ ಸಮಕಾಲಿಕ ಅನುವಾದ

1 ಶಿನಾರಿನ ಅರಸ ಅಮ್ರಾಫೆಲನು ಎಲ್ಲಸಾರಿನ ಅರಸ ಅರಿಯೋಕನು, ಏಲಾಮಿನ ಅರಸ ಕೆದೊರ್ಲಗೋಮರನು, ಗೋಯಿಮದ ಅರಸ ತಿದ್ಗಾಲನು ಇವರ ದಿನಗಳಲ್ಲಿ ಆದದ್ದೇನೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆ ದಿನಗಳಲ್ಲಿ ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಜಾರಿನ ಅರಸನಾದ ಅರಿಯೋಕನು, ಏಲಾಮಿನ ಅರಸನಾದ ಕೆದೊರ್ಲಗೋಮರನು, ಗೋಯಿಮದ ಅರಸನಾದ ತಿದ್ಗಾಲನು ಈ ನಾಲ್ವರು ಈಗಿನ ಲವಣಸಮುದ್ರ ಎನ್ನಿಸಿಕೊಳ್ಳುವ ಸಿದ್ದೀಮ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಆ ದಿನಗಳಲ್ಲಿ ಬಾಬೆಲೋನಿನ ಅರಸ ಅಮ್ರಾಫೆಲನು, ಎಲ್ಲಸಾರಿನ ಅರಸ ಅರಿಯೋಕನು, ಎಲಾಮಿನ ಅರಸ ಕೆದೊರ್ಲಗೋಮರನು ಮತ್ತು ಗೋಯಿಮದ ಅರಸ ತಿದ್ಗಾಲನು - ಈ ನಾಲ್ವರು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆ ದಿವಸಗಳಲ್ಲಿ ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಸಾರಿನ ಅರಸನಾದ ಅರಿಯೋಕನು. ಏಲಾವಿುನ ಅರಸನಾದ ಕೆದೊರ್ಲಗೋಮರನು, ಗೋಯಿಮದ ಅರಸನಾದ ತಿದ್ಗಾಲನು ಈ ನಾಲ್ವರು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಆ ದಿನಗಳಲ್ಲಿ ಅಮ್ರಾಫೆಲನು ಶಿನಾರಿನ ರಾಜನಾಗಿದ್ದನು; ಅರಿಯೋಕನು ಎಲ್ಲಸಾರಿನ ರಾಜನಾಗಿದ್ದನು; ಕೆದೊರ್ಲಗೋಮರನು ಏಲಾಮಿನ ರಾಜನಾಗಿದ್ದನು; ತಿದ್ಗಾಲನು ಗೋಯಿಮದ ರಾಜನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 14:1
15 ತಿಳಿವುಗಳ ಹೋಲಿಕೆ  

ಶಿನಾರ್ ದೇಶದಲ್ಲಿರುವ ಬಾಬಿಲೋನ್, ಯೆರೆಕ್, ಅಕ್ಕದ್, ಕಲ್ನೇ ಎಂಬವು ಅವನ ರಾಜ್ಯದ ಪ್ರಾರಂಭದ ಕೇಂದ್ರಗಳು.


ಜನರು ಪೂರ್ವದಿಕ್ಕಿಗೆ ಪ್ರಯಾಣ ಮಾಡುವಾಗ, ಶಿನಾರ್ ದೇಶದ ಬಯಲನ್ನು ಕಂಡು ಅಲ್ಲಿ ವಾಸಮಾಡಿದರು.


ಶೇಮನ ಪುತ್ರರು: ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್, ಅರಾಮ್.


ನನ್ನ ಪಿತೃಗಳು ಹಾಳುಮಾಡಿದ ಗೋಜಾನ್, ಹಾರಾನ್, ರೆಜೆಫ್ ಮುಂತಾದ ದೇವರುಗಳು ಅವರನ್ನು ಬಿಡುಗಡೆ ಮಾಡಲಿಲ್ಲ. ತೆಲ್ ಅಸ್ಸಾರ್ ಎಂಬಲ್ಲಿದ್ದ ಏದೆನಿನ ಜನರನ್ನು ಈ ದೇವರುಗಳು ಅವರನ್ನು ರಕ್ಷಿಸಲು ಸಾಧ್ಯವಾಯಿತೇ?


ಆ ದಿನದಲ್ಲಿ ಯೆಹೋವ ದೇವರು ಉಳಿದ ತಮ್ಮ ಜನರನ್ನು ಬಿಡಿಸಿಕೊಳ್ಳುವುದಕ್ಕೆ ಎರಡನೇ ಸಾರಿ ಕೈಹಾಕಿ ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾತ್ ಮತ್ತು ಮೆಡಿಟರೇನಿಯನ್ ಸಮುದ್ರದ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವರು.


ದೂತನು ನನಗೆ, “ಶಿನಾರ್ ದೇಶದಲ್ಲಿ ಅದಕ್ಕೆ ಮನೆ ಕಟ್ಟುವುದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಅದು ಸ್ಥಾಪಿತವಾಗಿ, ತನ್ನ ಸ್ಥಾನದಲ್ಲಿ ಇರಿಸಲಾಗುವುದು,” ಎಂದನು.


ಆಗ ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು ದೇವಾಲಯದ ಕೆಲವು ವಸ್ತುಗಳನ್ನು ಕೂಡ ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್ ದೇಶಕ್ಕೂ, ತನ್ನ ದೇವರ ಆಲಯಕ್ಕೂ ತಂದು, ಅವುಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು.


“ಅಲ್ಲಿ ಏಲಾಮು ಮತ್ತು ಅದರ ಎಲ್ಲಾ ಸಮೂಹವು ಆಕೆಯ ಸಮಾಧಿಯ ಸುತ್ತಲೂ ಇದೆ. ಅವರೆಲ್ಲರೂ ಖಡ್ಗದಿಂದ ಹತರಾದವರೇ. ಸುನ್ನತಿಯಿಲ್ಲದವರಾಗಿ ಭೂಮಿಯ ಕೆಳಗಿನ ಭಾಗಗಳಿಗೆ ಇಳಿದು ಹೋದವರೇ. ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದರೂ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡಿದ್ದಾರೆ.


ಜಿಮ್ರಿಯ ಅರಸರೆಲ್ಲರಿಗೂ, ಏಲಾಮಿನ ಅರಸರೆಲ್ಲರಿಗೂ, ಮೇದ್ಯದ ಅರಸರೆಲ್ಲರಿಗೂ,


ಏಲಾಮಿನವರು ಕುದುರೆಗಳ, ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿಯನ್ನು ತೆರೆದರು.


ಘೋರ ದರ್ಶನವು ನನಗೆ ತಿಳಿಯಬಂದಿದೆ: ಬಾಧಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡುತ್ತಿದ್ದಾನೆ. ಏಲಾಮೇ, ಏಳು! ಮೇದ್ಯವೇ ಮುತ್ತಿಗೆ ಹಾಕು, ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.


ಏಲಾಮಿನ ಅರಸ ಕೆದೊರ್ಲಗೋಮರನಿಗೂ ಗೋಯಿಮದ ಅರಸನಾದ ತಿದ್ಗಾಲನಿಗೂ ಶಿನಾರಿನ ಅರಸ ಅಮ್ರಾಫೆಲನಿಗೂ ಎಲ್ಲಸಾರಿನ ಅರಸ ಅರಿಯೋಕನಿಗೂ ವಿರೋಧವಾಗಿ ಸಿದ್ದೀಮ್ ತಗ್ಗಿನಲ್ಲಿ ಯುದ್ಧಮಾಡಿದರು. ಹೀಗೆ ನಾಲ್ವರು ಅರಸರಿಗೆ ವಿರೋಧವಾಗಿ ಐದು ಮಂದಿ ಅರಸರು ಎದುರಿಸಿದರು.


ನೆಪೊತ್ ದೋರ್ ಪ್ರಾಂತದ ದೋರಿನ ಅರಸನು. ಗಿಲ್ಗಾಲದಲ್ಲಿಯ ಗೊಯ್ಮದ ಅರಸನು.


ಈ ದರ್ಶನದಲ್ಲಿ ನಾನು ನೋಡಿದ್ದೇನೆಂದರೆ: ನಾನು ಏಲಾಮ್ ಸೀಮೆಯಲ್ಲಿರುವ ಶೂಷನಿನ ಅರಮನೆಯಲ್ಲಿದ್ದೆನು. ಆ ದರ್ಶನದಲ್ಲಿ ನಾನು ಊಲಾ ನದಿಯ ದಡದ ಬಳಿಯಲ್ಲಿ ನಿಂತಿರುವ ಹಾಗೆ ತೋರಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು