Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 10:19 - ಕನ್ನಡ ಸಮಕಾಲಿಕ ಅನುವಾದ

19 ಕಾನಾನ್ಯರ ಮೇರೆಯು ಸೀದೋನ್ ಪಟ್ಟಣದಿಂದ ಗೆರಾರಿನ ಮಾರ್ಗವಾಗಿ ಗಾಜಾ ಪಟ್ಟಣದವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳ ಮಾರ್ಗವಾಗಿ ಲೆಷಾ ಊರಿನವರೆಗೂ ಇರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಕಾನಾನ್ಯರ ಸೀಮೆಯು ಸೀದೋನ್ ಪಟ್ಟಣದಿಂದ ಗೆರಾರಿಗೆ ಹೋಗುವ ದಾರಿಯಲ್ಲಿರುವ ಗಾಜಾ ಪಟ್ಟಣದ ವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿರುವ ಲೆಷಾ ಊರಿನವರೆಗೂ ಇರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಕಾನಾನ್ಯರ ನಾಡು ಸೀದೋನ್ ಪಟ್ಟಣದಿಂದ ಗೆರಾರಿಗೆ ಹೋಗುವ ದಾರಿಯಲ್ಲಿ ಇರುವ ಗಾಜಾ ಪಟ್ಟಣದವರೆಗೂ ಮತ್ತು ಸೊದೋಮ್, ಗೊಮೋರ, ಆದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿದ್ದ ಲೆಷಾ ಊರಿನವರೆಗೂ ಹಬ್ಬಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಕಾನಾನ್ಯರ ಸೀಮೆಯು ಸೀದೋನ್ ಪಟ್ಟಣದಿಂದ ಗೆರಾರಿಗೆ ಹೋಗುವ ದಾರಿಯಲ್ಲಿರುವ ಗಾಜಾ ಪಟ್ಟಣದವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿರುವ ಲೆಷಾ ಊರಿನವರೆಗೂ ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಕಾನಾನ್ಯರ ಸೀಮೆಯು ಸೀದೋನಿನ ಉತ್ತರದಿಂದಿಡಿದು ಗೆರಾರಿನ ದಕ್ಷಿಣದವರೆಗೂ, ಗಾಜಾದಿಂದ ಪೂರ್ವದ ಸೊದೋಮ್ ಗೊಮೋರ ಪಟ್ಟಣಗಳವರೆಗೂ, ಅದ್ಮಾ ಮತ್ತು ಚೆಬೋಯಿಮ್‌ಗಳಿಂದ ಲೆಷಾದವರೆಗೆ ವಿಸ್ತರಿಸಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 10:19
29 ತಿಳಿವುಗಳ ಹೋಲಿಕೆ  

ಇವರು ಸೊದೋಮಿನ ಅರಸ ಬೆರಗನೂ ಗೊಮೋರದ ಅರಸ ಬಿರ್ಶಗನೂ ಅದ್ಮಾಹದ ಅರಸ ಶಿನಾಬನಿಗೂ ಚೆಬೋಯಿಮಿನ ಅರಸ ಶೆಮೇಬರನಿಗೂ ಬೆಲಗಿನ ಅಂದರೆ, ಚೋಗರದ ಅರಸನಿಗೂ ವಿರೋಧವಾಗಿ ಯುದ್ಧಮಾಡಿದರು.


“ಎಫ್ರಾಯೀಮೇ, ನಿನ್ನನ್ನು ಹೇಗೆ ಬಿಟ್ಟುಬಿಡಲಿ? ಇಸ್ರಾಯೇಲೇ, ನಿನ್ನನ್ನು ಹೇಗೆ ಕೈಬಿಡಲಿ? ಅದ್ಮದ ಹಾಗೆ ನಿನ್ನನ್ನು ದುರ್ಗತಿಗೆ ಹೇಗೆ ಒಪ್ಪಿಸಲಿ? ಚೆಬೋಯಿಮನಂತೆ ನಿನ್ನನ್ನು ಹೇಗೆ ನಾಶಮಾಡಲಿ? ನನ್ನ ಹೃದಯವು ನನ್ನಲ್ಲಿ ಮಾರ್ಪಟ್ಟಿದೆ. ನನ್ನಲ್ಲಿ ಕರುಣೆ ಉಕ್ಕಿ ಬಂದಿದೆ.


ವಿದೇಶೀಯ ಜನರೆಲ್ಲರಿಗೂ, ಊಚ್ ದೇಶದ ಅರಸರೆಲ್ಲರಿಗೂ, ಫಿಲಿಷ್ಟಿಯ ದೇಶದ ಅರಸರಾದ, ಅಷ್ಕೆಲೋನಿಗೂ, ಗಾಜಕ್ಕೂ, ಎಕ್ರೋನಿಗೂ, ಅಷ್ಡೋದಿನ ಉಳಿದವರಿಗೂ,


ಸಂಸೋನನು ಗಾಜಕ್ಕೆ ಹೋಗಿ, ಅಲ್ಲಿ ಒಬ್ಬ ಜಾರಸ್ತ್ರೀಯನ್ನು ಕಂಡು, ಅವಳ ಬಳಿಗೆ ಹೋದನು.


ಮಹೋನ್ನತ ದೇವರು ಜನಾಂಗಗಳಿಗೆ ಸ್ಥಳವನ್ನು ಕೊಡುವಾಗಲೂ, ಅವರು ಮಾನವರನ್ನು ವಿಂಗಡಿಸುವಾಗಲೂ, ಇಸ್ರಾಯೇಲರ ಲೆಕ್ಕದ ಪ್ರಕಾರ ಜನರ ಮೇರೆಗಳನ್ನು ಗುರುತಿಸಿಕೊಂಡರು.


ಅಬ್ರಹಾಮನ ದಿನಗಳಲ್ಲಿ ಬಂದ ಮೊದಲನೆಯ ಬರವಲ್ಲದೆ, ದೇಶದಲ್ಲಿ ಮತ್ತೊಂದು ಬರವು ಬಂದಿತು. ಆಗ ಇಸಾಕನು ಗೆರಾರಿನಲ್ಲಿದ್ದ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಹೋದನು.


ಅಬ್ರಹಾಮನು ಅಲ್ಲಿಂದ ನೆಗೆವ ಕಡೆಗೆ ಕಾದೇಶಿಗೆ ಪ್ರಯಾಣಮಾಡಿ, ಕಾದೇಶ್ ಹಾಗೂ ಶೂರಿನ ಮಧ್ಯದ ಗೆರಾರಿನಲ್ಲಿ ಸ್ವಲ್ಪಕಾಲ ಪ್ರವಾಸಿಯಾಗಿದ್ದನು.


ಇದಲ್ಲದೆ ಯೆಹೋವ ದೇವರು, “ಸೊದೋಮ್ ಗೊಮೋರಗಳ ಕೂಗು ದೊಡ್ಡದಾಗಿದೆ. ಅವರ ಪಾಪವೂ ಘೋರವಾಗಿದೆ.


ದೇವದೂತನೊಬ್ಬನು ಫಿಲಿಪ್ಪನಿಗೆ, “ದಕ್ಷಿಣ ದಿಕ್ಕಿಗೆ ಹೋಗುವ ಮಾರ್ಗದಲ್ಲಿ ಹೋಗು, ಅದು ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ಅರಣ್ಯ ಮಾರ್ಗ,” ಎಂದು ಹೇಳಿದನು.


ಅರ್ವಾದಿಯರು, ಚೆಮಾರಿಯರು, ಹಮಾತಿಯರು, ಕಾನಾನನಿಂದ ಹುಟ್ಟಿದರು. ತರುವಾಯ ಕಾನಾನ್ ಕುಟುಂಬಗಳು ವಿಸ್ತಾರವಾಗಿ ಹರಡಿದವು.


ಇವರು ತಮ್ಮ ಕುಟುಂಬಗಳ ಮತ್ತು ತಮ್ಮ ಭಾಷೆಗಳ ಪ್ರಕಾರ, ತಮ್ಮ ಸೀಮೆ ಹಾಗು ದೇಶಗಳಲ್ಲಿಯೂ ಇರುವ ಹಾಮನ ಪುತ್ರರು.


ಇವರೆಲ್ಲರು ಉಪ್ಪಿನ ಸಮುದ್ರವಾಗಿರುವ ಸಿದ್ದೀಮ್ ತಗ್ಗಿನಲ್ಲಿ ಒಟ್ಟಾಗಿ ಕೂಡಿಬಂದರು.


ಅಲ್ಲಿಂದ ಅಬ್ದೋನ್, ರೆಹೋಬ್, ಹಮ್ಮೋನ್, ಕಾನಾ ಹಾಗೂ ಸೀದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ.


ಆಗ ಆಸನೂ, ಅವನ ಸಂಗಡ ಇದ್ದ ಜನರೂ ಅವರನ್ನು ಗೆರಾರಿನವರೆಗೂ ಹಿಂದಟ್ಟಿದರು. ಹೆಚ್ಚಿನ ಸಂಖ್ಯೆಯಲ್ಲಿ ಕೂಷ್ಯರು ಸೋತುಹೋದರು. ಅವರು ಯೆಹೋವ ದೇವರ ಮುಂದೆಯೂ, ಅವರ ಸೈನ್ಯದ ಮುಂದೆಯೂ ನಾಶವಾದರು. ಯೆಹೂದ್ಯರು ಬಹು ಕೊಳ್ಳೆಯನ್ನು ಒಯ್ದರು.


ಸೀದೋನೇ ಮತ್ತು ಸಮುದ್ರದ ಕೋಟೆಯೇ ನಾಚಿಕೆಪಡಿರಿ. ಏಕೆಂದರೆ ಇದೇ ಸಮುದ್ರದ ಘೋಷಣೆಯಾಗಿದೆ: “ನಾವು ಪ್ರಸವವೇದನೆ ಪಡುವುದಿಲ್ಲ, ಹೆರುವುದಿಲ್ಲ, ಇಲ್ಲವೆ ಪುತ್ರಪುತ್ರಿಯರನ್ನು ಸಾಕಿ ಸಲಹುವುದಿಲ್ಲ,”


ಫರೋಹನು ಗಾಜಾ ಪಟ್ಟಣವನ್ನು ಮುತ್ತಿಗೆ ಹಾಕುವ ಮೊದಲು, ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆಮೀಯನಿಗೆ ಬಂದ ಯೆಹೋವ ದೇವರ ವಾಕ್ಯವು:


“ಮನುಷ್ಯಪುತ್ರನೇ, ನೀನು ಸೀದೋನಿಗೆ ಅಭಿಮುಖವಾಗಿ ಅದಕ್ಕೆ ವಿರುದ್ಧವಾಗಿ ಪ್ರವಾದಿಸು.


ಹಾಗೆ ಗಾಜಾ ಪಟ್ಟಣದವರೆಗೂ ವಾಸವಾಗಿದ್ದ ಅವ್ವೀಯರನ್ನು ಕಫ್ತೋರಿಂದ ಬಂದ ಕಫ್ತೋರ್ಯರು ನಾಶಮಾಡಿ, ಅವರ ಬದಲಾಗಿ ವಾಸಿಸಿದರು.


ಗಾಜದ ಪ್ರದೇಶದ ಮಟ್ಟಿಗೂ ಭೂಮಿಯ ಫಲವನ್ನು ಕೆಡಿಸಿಬಿಟ್ಟು, ಇಸ್ರಾಯೇಲಿನಲ್ಲಿ ಆಹಾರವಾದರೂ ಕುರಿ, ದನ, ಕತ್ತೆಗಳಾದರೂ ಉಳಿಯಗೊಡಿಸಲಿಲ್ಲ.


ಮತ್ತೊಂದು ಗುಂಪು ಬೇತ್ ಹೋರೋನಿನ ಮಾರ್ಗವಾಗಿ ಹೋಯಿತು. ಬೇರೊಂದು ಗುಂಪು ಮರುಭೂಮಿಗೆ ಎದುರಾಗಿರುವ ಜೆಬೋಯಿಮ್ ತಗ್ಗಿಗೆದುರಾದ ಮೇರೆಯ ಮಾರ್ಗವಾಗಿ ಹೋಯಿತು.


ಆಗ ಯೆಹೋವ ದೇವರು ಕೂಷ್ಯರನ್ನು ಆಸನ ಮುಂದೆಯೂ, ಯೆಹೂದದವರ ಮುಂದೆಯೂ ಸೋಲುವಂತೆ ಮಾಡಿದರು. ಆದ್ದರಿಂದ ಕೂಷ್ಯರು ಓಡಿಹೋದರು.


ನೀನು ಬೆಳಕನ್ನೂ ಕತ್ತಲನ್ನೂ ಅವುಗಳ ಸ್ಥಳಕ್ಕೆ ತೆಗೆದುಕೊಂಡು ಹೋಗಬಲ್ಲೆಯಾ? ಅವು ತಮ್ಮ ಮನೆಗಳಿಗೆ ಹೋಗುವ ಹಾದಿಗಳನ್ನು ನೀನು ಬಲ್ಲೆಯಾ?


ಯೆಹೋವ ದೇವರು ಸಮುದ್ರದ ಮೇಲೆ ತನ್ನ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ. ಅವರು ವ್ಯಾಪಾರದ ಪಟ್ಟಣವನ್ನು ಕಾನಾನಿನ ದುರ್ಗಗಳನ್ನು ನಾಶಮಾಡಬೇಕೆಂದು ಆಜ್ಞಾಪಿಸಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು