Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 1:26 - ಕನ್ನಡ ಸಮಕಾಲಿಕ ಅನುವಾದ

26 ತರುವಾಯ ದೇವರು, “ನಾವು ನಮ್ಮ ಸ್ವರೂಪದಲ್ಲಿ, ನಮ್ಮ ಹೋಲಿಕೆಯಲ್ಲಿ ಮನುಷ್ಯನನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಜೀವಿಗಳ ಮೇಲೆಯೂ ಆಳ್ವಿಕೆ ಮಾಡಲಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಆಮೇಲೆ ದೇವರು, ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟು ಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ, ಪ್ರಾಣಿಗಳ ಮೇಲೆಯೂ, ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ದೊರೆತನಮಾಡಲಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಅದಾದನಂತರ ದೇವರು, “ನಮ್ಮಂತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ - ಚಿಕ್ಕ ಸಾಕುಪ್ರಾಣಿ ಹಾಗು ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ,” ಎಂದರು. ಹೀಗೆ ದೇವರು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಆಮೇಲೆ ದೇವರು - ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿವಿುಕೀಟಗಳ ಮೇಲೆಯೂ ಎಲ್ಲಾ ಭೂವಿುಯ ಮೇಲೆಯೂ ದೊರೆತನಮಾಡಲಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಬಳಿಕ ದೇವರು, “ಈಗ ನಾವು ಮನುಷ್ಯನನ್ನು ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ನಿರ್ಮಿಸೋಣ. ಅವರು ಸಮುದ್ರದಲ್ಲಿರುವ ಎಲ್ಲಾ ಮೀನುಗಳ ಮೇಲೆ, ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳ ಮೇಲೆ ಮತ್ತು ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳ ಮೇಲೆ ದೊರೆತನ ಮಾಡಲಿ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 1:26
34 ತಿಳಿವುಗಳ ಹೋಲಿಕೆ  

ಸೃಷ್ಟಿಕರ್ತನ ಸ್ವರೂಪವನ್ನು, ತಿಳುವಳಿಕೆಯಲ್ಲಿ ನವೀಕರಣ ಹೊಂದುತ್ತಿರುವ ಆ ನೂತನ ಸ್ವಭಾವವನ್ನೇ ಧರಿಸಿಕೊಂಡವರಾಗಿದ್ದೀರಲ್ಲಾ.


ಸತ್ಯವಾದ ನೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ದೇವರ ಹೋಲಿಕೆಯ ಪ್ರಕಾರವಾಗಿರಲು ಸೃಷ್ಟಿಸಲಾದ ಹೊಸ ಸ್ವಭಾವವನ್ನು ಧರಿಸಿಕೊಳ್ಳಿರಿ.


ಯೆಹೋವ ದೇವರು, “ಇಗೋ, ಮನುಷ್ಯನು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ತಿಳಿದು, ನಮ್ಮಲ್ಲಿ ಒಬ್ಬನಂತಾದನಲ್ಲಾ. ಈಗ ಅವನು ಕೈಚಾಚಿ, ಜೀವವೃಕ್ಷದ ಹಣ್ಣನ್ನು ಸಹ ತಿಂದು, ಶಾಶ್ವತವಾಗಿ ಬದುಕುವವನಾಗಬಾರದು,” ಎಂದರು.


ಆದಾಮನ ವಂಶದವರ ದಾಖಲೆಯಿದು: ದೇವರು ಮನುಷ್ಯನನ್ನು ಸೃಷ್ಟಿಸಿದ ದಿನದಲ್ಲಿ ಅವನನ್ನು ತಮ್ಮನ್ನೇ ಹೋಲುವಂತೆ ಉಂಟುಮಾಡಿದರು.


ಯೆಹೋವ ದೇವರೇ ದೇವರೆಂದು ತಿಳುಕೊಳ್ಳಿರಿ; ಅವರೇ ನಮ್ಮನ್ನು ಉಂಟುಮಾಡಿದ್ದಾರೆ; ನಾವು ಅವರ ಜನರೂ, ಅವರು ಮೇಯಿಸುವ ಕುರಿ ಮಂದೆಯೂ ಆಗಿದ್ದೇವೆ.


ಹಾಗೆಯೇ, ನಾವು ಮುಸುಕಿಲ್ಲದ ನಮ್ಮ ಮುಖದಲ್ಲಿ ಕರ್ತದೇವರ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಇದ್ದೇವೆ. ಹೀಗೆ ನಾವು ಮಹಿಮೆಯಿಂದ ಅಧಿಕ ಮಹಿಮೆಗೆ ಸಾಗಿ ಅವರ ಸಾರೂಪ್ಯಕ್ಕೆ ಅನುಸಾರವಾಗಿ ನಾವು ರೂಪಾಂತರವಾಗುತ್ತಿದ್ದೇವೆ. ಈ ರೂಪಾಂತರವು ದೇವರಾತ್ಮನಾಗಿರುವ ಕರ್ತನಿಂದಲೇ.


ಆದರೆ ಈಗ ಯೆಹೋವ ದೇವರೇ, ನಮ್ಮ ತಂದೆಯು ನೀನೇ, ನಾವು ಮಣ್ಣು. ನೀನು ನಮ್ಮ ಕುಂಬಾರನು. ನಾವೆಲ್ಲರೂ ನಿನ್ನ ಕೈಕೆಲಸಗಳು.


ಕ್ರಿಸ್ತ ಯೇಸು ಅದೃಶ್ಯರಾದ ದೇವರ ಸ್ವರೂಪವೂ ಸರ್ವಸೃಷ್ಟಿಗು ಜ್ಯೇಷ್ಠ ಪುತ್ರರೂ ಆಗಿದ್ದಾರೆ.


ಅದೇ ನಾಲಿಗೆಯಿಂದ ನಮ್ಮ ತಂದೆಯಾದ ಕರ್ತದೇವರನ್ನು ಕೊಂಡಾಡುತ್ತೇವೆ, ಅದರಿಂದಲೇ ದೇವರ ಹೋಲಿಕೆಗೆ ಸರಿಯಾಗಿ ಸೃಷ್ಟಿಸಲಾದ ಮನುಷ್ಯರನ್ನು ನಾವು ಶಪಿಸುತ್ತೇವೆ.


ಈ ಲೋಕದ ದೇವರು ನಂಬದವರ ಮನಸ್ಸನ್ನು ಕುರುಡುಮಾಡಿರುತ್ತಾನೆ. ಆದ್ದರಿಂದ ದೇವರ ಸ್ವರೂಪವಾಗಿರುವ ಕ್ರಿಸ್ತ ಯೇಸುವಿನ ಸುವಾರ್ತೆಯ ಮಹಿಮೆಯ ಬೆಳಕನ್ನು ಅವರು ಕಾಣಲಾರರು.


ಪುರುಷನು ದೇವರ ಸ್ವರೂಪವೂ ಮಹಿಮೆಯೂ ಆಗಿರುವುದರಿಂದ, ತನ್ನ ತಲೆಗೆ ಮುಸುಕು ಹಾಕಬೇಕಾಗಿಲ್ಲ. ಆದರೆ ಸ್ತ್ರೀಯು ಪುರುಷನ ಮಹಿಮೆಯಾಗಿದ್ದಾಳೆ.


“ಯಾರಾದರೂ ಮನುಷ್ಯರ ರಕ್ತವನ್ನು ಸುರಿಸುತ್ತಾರೋ, ಅವರ ರಕ್ತವನ್ನು ಮನುಷ್ಯರೇ ಸುರಿಸುವರು. ಏಕೆಂದರೆ ದೇವರು ತಮ್ಮ ಸ್ವರೂಪದಲ್ಲಿಯೇ ಮನುಷ್ಯರನ್ನು ಸೃಷ್ಟಿಸಿದರು.


ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ: ದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದರು. ಮನುಷ್ಯರಾದರೋ ಅನೇಕ ಸ್ವಾರ್ಥ ಯೋಜನೆಗಳನ್ನು ಮಾಡಿಕೊಂಡಿದ್ದಾರೆ.


ದೇವರು ಒಬ್ಬ ಮನುಷ್ಯನಿಂದ ಎಲ್ಲಾ ದೇಶಗಳನ್ನು ಸೃಷ್ಟಿಸಿ, ಜನರು ಇಡೀ ಭೂಲೋಕವನ್ನು ತುಂಬಿಕೊಳ್ಳುವಂತೆ ಮಾಡಿದರು; ಅವರವರು ಇರತಕ್ಕ ಕಾಲಾವಧಿಯನ್ನೂ ವಾಸಿಸಲು ನಿರ್ದಿಷ್ಟ ಸ್ಥಳಗಳನ್ನೂ ನೇಮಿಸಿದ್ದಾರೆ.


ಯೇಸು ಅವನಿಗೆ, “ಯಾವನಾದರೂ ನನ್ನನ್ನು ಪ್ರೀತಿಸುವುದಾದರೆ ಅವನು ನನ್ನ ವಾಕ್ಯವನ್ನು ಕೈಗೊಳ್ಳುವನು. ನನ್ನ ತಂದೆಯು ಅವನನ್ನು ಪ್ರೀತಿಸುವರು. ಇದಲ್ಲದೆ ನಾವು ಅವನ ಬಳಿಗೆ ಬಂದು ಅವನೊಂದಿಗೆ ನಿವಾಸಮಾಡಿಕೊಳ್ಳುವೆವು.


ಇದಲ್ಲದೆ ಸಾಕ್ಷಿಕೊಡುವವರು ಮೂವರಿದ್ದಾರೆ.


ಸಕಲ ವಿಧವಾದ ಮೃಗ, ಪಕ್ಷಿ, ಸರ್ಪ, ಜಲಚರಗಳನ್ನು ಮಾನವರು ಹತೋಟಿಗೆ ತರುತ್ತಾರೆ ಮತ್ತು ತಂದಿದ್ದಾರೆ.


ಆಗ, “ಯಾರನ್ನು ಕಳುಹಿಸಲಿ, ಯಾರು ನಮಗೋಸ್ಕರ ಹೋಗುವರು?” ಎಂಬ ಯೆಹೋವ ದೇವರ ನುಡಿಯನ್ನು ನಾನು ಕೇಳಿ, “ಇಗೋ, ನಾನು ಸಿದ್ಧ, ನನ್ನನ್ನು ಕಳುಹಿಸಿರಿ,” ಎಂದೆನು.


ಇಸ್ರಾಯೇಲು ತನ್ನನ್ನು ಉಂಟುಮಾಡಿದ ದೇವರಲ್ಲಿ ಸಂತೋಷಿಸಲಿ; ಚೀಯೋನಿನ ಜನರು ತಮ್ಮ ಅರಸರಲ್ಲಿ ಉಲ್ಲಾಸಿಸಲಿ.


ನಾವು ಇಳಿದು ಹೋಗಿ, ಇವರು ಒಬ್ಬರ ಮಾತನ್ನು ಒಬ್ಬರು ತಿಳಿಯದಂತೆ, ಇವರ ಭಾಷೆಯನ್ನು ಗಲಿಬಿಲಿ ಮಾಡೋಣ,” ಎಂದರು.


ಈಗ ಈ ನಾಡುಗಳನ್ನೆಲ್ಲಾ ಬಾಬಿಲೋನಿಯದ ಅರಸ ಹಾಗು ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈವಶ ಮಾಡಿದ್ದೇನೆ. ಅವನ ಸೇವೆಗಾಗಿ ಕಾಡುಮೃಗಗಳನ್ನೂ ಕೊಟ್ಟಿದ್ದೇನೆ.


ಆದರೆ, ‘ರಾತ್ರಿಯಲ್ಲಿ ಗೀತೆಗಳನ್ನು ಕೊಡುವ ನನ್ನ ಸೃಷ್ಟಿಕರ್ತರಾದ ದೇವರು ಎಲ್ಲಿ?


ಯೇಸು ಅವರಿಗೆ, “ನನ್ನ ತಂದೆ ಯಾವಾಗಲೂ ಕೆಲಸ ಮಾಡುತ್ತಾರೆ. ನಾನೂ ಕೆಲಸ ಮಾಡುತ್ತೇನೆ,” ಎಂದರು.


ನೀನು ಕೆಲವು ವಿಚಿತ್ರವಾದ ವಿಚಾರಗಳನ್ನು ನಮಗೆ ಹೇಳುತ್ತಿರುವೆ. ಆದ್ದರಿಂದ ಅವುಗಳ ಅರ್ಥವನ್ನು ತಿಳಿಯಬಯಸುತ್ತೇವೆ,” ಎಂದರು.


ಹೊಲದ ಕಲ್ಲುಗಳ ಸಂಗಡ ನಿನಗೆ ಒಪ್ಪಂದ ಇರುವುದು; ಕಾಡು ಮೃಗಗಳೂ ನಿನ್ನೊಂದಿಗೆ ಸಮಾಧಾನವಾಗಿರುವವು.


ಯೆಹೋವ ದೇವರು ಭೂಮಿಯಲ್ಲಿರುವ ಎಲ್ಲಾ ಕಾಡುಮೃಗಗಳನ್ನೂ ಆಕಾಶದ ಎಲ್ಲಾ ಪಕ್ಷಿಗಳನ್ನೂ ಮಣ್ಣಿನಿಂದ ರೂಪಿಸಿದ ಮೇಲೆ, ಅವುಗಳಿಗೆ ಮನುಷ್ಯನು ಏನು ಹೆಸರಿಡುವನೋ ಎಂದು ನೋಡುವುದಕ್ಕೆ, ಅವುಗಳನ್ನು ಅವನ ಬಳಿಗೆ ತಂದರು. ಒಂದೊಂದು ಜೀವಿಗೂ ಮನುಷ್ಯನು ಕರೆದದ್ದೇ ಆ ಜೀವಿಗಳಿಗೆಲ್ಲಾ ಹೆಸರಾಯಿತು.


ಆಕಾಶಗಳನ್ನು ನಿರ್ಮಿಸಿದ ಯೆಹೋವ ದೇವರು ಇಂತೆನ್ನುತ್ತಾನೆ, “ದೇವರು ತಾನೇ ಭೂಮಿಯನ್ನು ನಿರ್ಮಿಸಿ, ಅದನ್ನು ಉಂಟುಮಾಡಿದನು. ಆತನೇ ಅದನ್ನು ಸ್ಥಾಪಿಸಿದನು. ಅದನ್ನು ವ್ಯರ್ಥವಾಗಿ ಸೃಷ್ಟಿಸದೆ, ಜನನಿವಾಸಕ್ಕಾಗಿಯೇ ರೂಪಿಸಿದನು. ನಾನೇ ಯೆಹೋವ ದೇವರು, ನಾನಲ್ಲದೆ ಇನ್ನಾರೂ ಇಲ್ಲ.


ಅದರ ಶಕ್ತಿ ಹೆಚ್ಚಾಗಿರುವುದರಿಂದ ನೀನು ಕೆಲಸಕ್ಕಾಗಿ ಅದನ್ನೇ ನಂಬಿರುವೆಯಾ? ನಿನ್ನ ಭಾರವಾದ ಕೆಲಸವನ್ನು ಅದಕ್ಕೆ ಒಪ್ಪಿಸಿಬಿಡುವೆಯಾ?


ನಾವು ನಿನಗೋಸ್ಕರ ಬಂಗಾರದ ಕಿವಿಯೋಲೆಗಳನ್ನು ಬೆಳ್ಳಿಯ ಸರಪಳಿಗಳೊಂದಿಗೆ ಮಾಡಿಸುವೆವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು