ಅರಣ್ಯಕಾಂಡ 9:14 - ಕನ್ನಡ ಸಮಕಾಲಿಕ ಅನುವಾದ14 “ಪರದೇಶಿಯಾದವನು ನಿಮ್ಮ ಸಂಗಡ ಇದ್ದು, ಯೆಹೋವ ದೇವರಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಬಯಸಿದರೆ, ಅದರ ಆಜ್ಞಾವಿಧಿಗಳ ಪ್ರಕಾರವೇ ಆಚರಿಸಲಿ. ಸ್ಥಳೀಯ ಮೂಲದ ಇಸ್ರಾಯೇಲರಿಗೂ ಮತ್ತು ನಿಮ್ಮ ನಡುವೆ ವಾಸಿಸುವ ಪರದೇಶಸ್ತನಿಗೂ ಒಂದೇ ನಿಯಮ ಇರಬೇಕು,” ಎಂದು ಹೇಳಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 “ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯದೇಶದವನು ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ ಅದರ ವಿಷಯವಾದ ಆಜ್ಞಾವಿಧಿಗಳ ಪ್ರಕಾರವೇ ಅದನ್ನು ಆಚರಿಸಲಿ. ಪರದೇಶದವನಿಗೂ ಸ್ವದೇಶದವನಿಗೂ ಒಂದೇ ನಿಯಮವಿರಬೇಕು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ನಿಮ್ಮಲ್ಲಿ ಅನ್ಯದೇಶಿಯನೊಬ್ಬನು ಪ್ರವಾಸಿಯಾಗಿದ್ದು ಸರ್ವೇಶ್ವರನಿಗೆ ಪಾಸ್ಕ ಹಬ್ಬವನ್ನು ಆಚರಿಸಬೇಕೆಂದು ಬಯಸಿದರೆ ಅದನ್ನು ವಿಧಿನಿಯಮಗಳ ಅನುಸಾರವೇ ಆಚರಿಸಲಿ. ಪರದೇಶದವನಿಗೂ ಸ್ವದೇಶದವನಿಗೂ ಒಂದೇ ವಿಧಿಯಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯದೇಶದವನು ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ ಅದರ ವಿಷಯವಾದ ಆಜ್ಞಾವಿಧಿಗಳ ಪ್ರಕಾರವೇ ಅದನ್ನು ಆಚರಿಸಲಿ. ಪರದೇಶದವನಿಗೂ ಸ್ವದೇಶದವನಿಗೂ ಒಂದೇ ವಿಧಿಯಿರಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 “ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯದೇಶಸ್ಥನು ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ, ಅದರ ವಿಷಯವಾದ ನಿಯಮಗಳ ಪ್ರಕಾರವೇ ಅದನ್ನು ಆಚರಿಸಬೇಕು. ಪರದೇಶದವನಿಗೂ ಸ್ವದೇಶದವನಿಗೂ ಒಂದೇ ವಿಧಿಯಿರಬೇಕು.” ಅಧ್ಯಾಯವನ್ನು ನೋಡಿ |