ಅರಣ್ಯಕಾಂಡ 7:9 - ಕನ್ನಡ ಸಮಕಾಲಿಕ ಅನುವಾದ9 ಆದರೆ ಕೊಹಾತ್ಯರಿಗೆ ಯಾವುದನ್ನೂ ಕೊಡಲಿಲ್ಲ. ಏಕೆಂದರೆ ಅವರು ತಮ್ಮ ಹೆಗಲುಗಳ ಮೇಲೆ ಪರಿಶುದ್ಧಸ್ಥಳದ ವಸ್ತುಗಳನ್ನು ಹೊತ್ತುಕೊಂಡು ಹೋಗುವುದೇ ಅವರಿಗೆ ಸೇವೆಯಾಗಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಕೆಹಾತ್ಯರಿಗೆ ಮಾತ್ರ ಏನೂ ಕೊಡಲಿಲ್ಲ. ಏಕೆಂದರೆ ಅವರು ದೇವದರ್ಶನ ಗುಡಾರದ ಸಾಮಾನುಗಳನ್ನು ಸಾಗಿಸುವುದೇ ಅವರಿಗೆ ನೇಮಕವಾದ ಕೆಲಸವಾಗಿತ್ತು. ಅವರು ಅವುಗಳನ್ನು ಹೆಗಲಿನ ಮೇಲೆ ಹೊರುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಕೆಹಾತ್ಯರಿಗೆ ಮಾತ್ರ ಏನನ್ನೂ ಕೊಡಲಿಲ್ಲ. ಏಕೆಂದರೆ ದೇವದರ್ಶನದ ಗುಡಾರದ ಸಾಮಾನುಗಳನ್ನು ಸಾಗಿಸುವುದೇ ಅವರಿಗೆ ನೇಮಕವಾದ ಕೆಲಸವಾಗಿತ್ತು. ಅವರು ಅವುಗಳನ್ನು ಹೆಗಲ ಮೇಲೆ ಹೊರಬೇಕಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಕೆಹಾತ್ಯರಿಗೆ ಮಾತ್ರ ಏನೂ ಕೊಡಲಿಲ್ಲ; ದೇವದರ್ಶನದ ಗುಡಾರದ ಸಾಮಾನುಗಳನ್ನು ವಹಿಸುವದೇ ಅವರಿಗೆ ನೇಮಕವಾದ ಕೆಲಸ; ಅವರು ಅವುಗಳನ್ನು ಹೆಗಲಿನ ಮೇಲೆ ಹೊರುತ್ತಿದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಮೋಶೆಯು ಕೆಹಾತ್ಯರಿಗೆ ಎತ್ತುಗಳನ್ನಾಗಲಿ ಬಂಡಿಗಳನ್ನಾಗಲಿ ಕೊಡಲಿಲ್ಲ. ಯಾಕೆಂದರೆ ಅವರು ಪವಿತ್ರವಸ್ತುಗಳನ್ನು ತಮ್ಮ ಭುಜದ ಮೇಲೆ ಹೊರಬೇಕು. ಅವರಿಗೆ ಈ ಕೆಲಸವು ಕೊಡಲ್ಪಟ್ಟಿತು. ಅಧ್ಯಾಯವನ್ನು ನೋಡಿ |