Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 5:18 - ಕನ್ನಡ ಸಮಕಾಲಿಕ ಅನುವಾದ

18 ಯಾಜಕನು ಆ ಸ್ತ್ರೀಯನ್ನು ಯೆಹೋವ ದೇವರ ಸಮ್ಮುಖದಲ್ಲಿ ನಿಲ್ಲಿಸಿ, ಆಕೆಯ ತಲೆಯ ಮೇಲಿರುವ ಮುಸುಕನ್ನು ತೆಗೆದು, ಅವಳ ಕೈಗಳಲ್ಲಿ ಸಂಶಯ ಸೂಚಿಸುವ ಕಾಣಿಕೆಯಾದ ನೈವೇದ್ಯದ ಹಿಟ್ಟನ್ನು ಇಡಬೇಕು. ಯಾಜಕನ ಕೈಯಲ್ಲಿ ಶಾಪತರುವ ಕಹಿಯಾದ ನೀರು ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಯಾಜಕನು ಆ ಸ್ತ್ರೀಯನ್ನು ಯೆಹೋವನ ಸಮ್ಮುಖದಲ್ಲಿ ನಿಲ್ಲಿಸಿ, ಅವಳ ತಲೆಯ ಮೇಲಿರುವ ಮುಸುಕನ್ನು ತೆಗೆದು, ಕೂದಲನ್ನು ಕೆದರಿಸಿ ವ್ಯಭಿಚಾರದ ಸಂಶಯವನ್ನು ಸೂಚಿಸುವ ಆ ನೈವೇದ್ಯದ ಹಿಟ್ಟನ್ನು ಅವಳ ಕೈಯಲ್ಲಿ ಇಟ್ಟು, ಶಾಪವನ್ನುಂಟುಮಾಡುವ ವಿಷಕರವಾದ ಆ ನೀರನ್ನು ಯಾಜಕನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಯಾಜಕನು ಆಕೆಯನ್ನು ಸರ್ವೇಶ್ವರನ ಸಮ್ಮುಖದಲ್ಲಿ ನಿಲ್ಲಿಸಿ, ಅವಳ ತಲೆಕೂದಲನ್ನು ಕೆದರಿಸಿ, ವ್ಯಭಿಚಾರದ ಸಂಶಯವನ್ನು ಸೂಚಿಸುವ ಆ ನೈವೇದ್ಯದ ಹಿಟ್ಟನ್ನು ಅವಳ ಕೈಯಲ್ಲಿಡಬೇಕು; ಶಾಪವನ್ನು ತರುವ ವಿಷಕರವಾದ ನೀರನ್ನು ತನ್ನ ಕೈಯಲ್ಲೇ ಹಿಡಿದುಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಅವನು ಆ ಸ್ತ್ರೀಯನ್ನು ಯೆಹೋವನ ಮುಂದೆ ನಿಲ್ಲಿಸಿ ಅವಳ ತಲೆಯ ಕೂದಲನ್ನು ಕೆದರಿಸಿ ಹಾದರದ ಸಂಶಯವನ್ನು ಸೂಚಿಸುವ ಆ ನೈವೇದ್ಯದ ಹಿಟ್ಟನ್ನು ಅವಳ ಕೈಯಲ್ಲಿ ಇಟ್ಟು ಶಾಪವನ್ನುಂಟುಮಾಡುವ ವಿಷಕರವಾದ ಆ ನೀರನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಯಾಜಕನು ಅವಳನ್ನು ಯೆಹೋವನ ಮುಂದೆ ನಿಲ್ಲಿಸಿ ಅವಳ ತಲೆಯ ಕೂದಲನ್ನು ಕೆದರಿಸಿ ಆಕೆಯ ದೋಷವನ್ನು ಹೊರಪಡಿಸುವ ಧಾನ್ಯಸಮರ್ಪಣೆಯನ್ನು ಅವಳ ಕೈಯಲ್ಲಿ ಇಡಬೇಕು. ಅದು ಈರ್ಷೆಯುಳ್ಳ ಗಂಡನ ಧಾನ್ಯಸಮರ್ಪಣೆ. ಅದೇ ಸಮಯದಲ್ಲಿ ಶಾಪವನ್ನು ಉಂಟುಮಾಡುವ ನೀರಿನ ವಿಶೇಷ ಪಾತ್ರೆಯನ್ನು ಯಾಜಕನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 5:18
18 ತಿಳಿವುಗಳ ಹೋಲಿಕೆ  

ಎಲ್ಲರೂ ವಿವಾಹವನ್ನು ಗೌರವಿಸಬೇಕು ಮತ್ತು ದಾಂಪತ್ಯ ಜೀವನವು ಪರಿಶುದ್ಧವಾದದ್ದಾಗಿರಬೇಕು. ಏಕೆಂದರೆ ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವರು.


ಸ್ತ್ರೀಯು ಮುಸುಕು ಹಾಕಿಕೊಳ್ಳದೆ ಇದ್ದರೆ, ಆಕೆಯು ಕೂದಲನ್ನು ಕತ್ತರಿಸಿಕೊಳ್ಳಲಿ. ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ, ತಲೆ ಬೋಳಿಸಿಕೊಳ್ಳವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ, ಆಕೆಯು ಮುಸುಕನ್ನು ಹಾಕಿಕೊಳ್ಳಬೇಕು.


ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವುದು. ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವುದು. ಹೀಗಿರುವುದರಿಂದ ನೀನು ನಿನ್ನ ದೇವರಾದ ಯೆಹೋವ ದೇವರನ್ನು ಬಿಟ್ಟದ್ದೂ, ನನ್ನ ಭಯವು ನಿನ್ನಲ್ಲಿ ಇಲ್ಲದಿರುವುದೂ, ಕೆಟ್ಟದ್ದೂ, ಕಹಿಯಾದದ್ದೂ ಎಂದು ತಿಳಿದುಕೊಂಡು ನೋಡು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು. ಆದರೆ ನನ್ನ ಆತ್ಮವನ್ನು ನಾಶದಿಂದ ಬಿಡುಗಡೆ ಮಾಡಿದ್ದು ನಿಮ್ಮ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.


ಕೆಟ್ಟ ಹೆಂಗಸಿನ ಹೃದಯವು ಬೋನೂ ಬಲೆಯೂ ಆಗಿರುತ್ತದೆ. ಅವಳ ಕೈ ಸಂಕೋಲೆ ಆಗಿರುತ್ತದೆ. ಇದು ಮರಣಕ್ಕಿಂತಲೂ ಕಠೋರವಾದದ್ದು ಎಂದು ನಾನು ಕಂಡಿದ್ದೇನೆ. ದೇವರನ್ನು ಮೆಚ್ಚಿಸುವವನು, ಅವಳಿಂದ ತಪ್ಪಿಸಿಕೊಳ್ಳುವನು. ಆದರೆ ಪಾಪಿಯು ಅವಳ ಕೈಗೆ ಸಿಕ್ಕಿಬೀಳುವನು.


ಆದರೆ ಅಂತ್ಯದಲ್ಲಿ ಅವಳು ಮಾಚಿಪತ್ರೆಯಂತೆ ಕಹಿಯೂ, ಇಬ್ಬಾಯಿ ಖಡ್ಗದಂತೆ ಹರಿತವೂ ಆಗಿರುವಳು.


ಸಮುಯೇಲನು, “ಅಮಾಲೇಕ್ಯರ ಅರಸನಾದ ಅಗಾಗನನ್ನು ನನ್ನ ಬಳಿಗೆ ತನ್ನಿರಿ,” ಎಂದನು. ಅಗಾಗನು ಆನಂದವಾಗಿ ಅವನ ಬಳಿಗೆ ಹೋಗಿ, “ನಿಶ್ಚಯವಾಗಿ ಮರಣದ ಕಹಿ ತಪ್ಪಿಹೋಯಿತು,” ಎಂದುಕೊಂಡನು.


ಈ ಹೊತ್ತು ನಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು ಆ ಜನಾಂಗಗಳ ದೇವರುಗಳಿಗೆ ಸೇವೆ ಮಾಡುವುದಕ್ಕೆ ತಿರುಗಿಕೊಳ್ಳುವ ಹೃದಯವುಳ್ಳ ಪುರುಷನಾದರೂ ಸ್ತ್ರೀಯಾದರೂ ಕುಟುಂಬವಾದರೂ ಗೋತ್ರವಾದರೂ ಇರಬಾರದು. ಈ ಘೋರ ವಿಷವನ್ನೂ, ಬೆಳೆಸುವ ಬೇರೂ ನಿಮ್ಮಲ್ಲಿ ಇರಬಾರದು.


ಶಪಿಸುವಂಥ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆ ಉಬ್ಬುವಂತೆ, ತೊಡೆಯನ್ನು ಕ್ಷೀಣವಾಗಿ ಹೋಗುವಂತೆ ನಿನ್ನ ಜನನೇಂದ್ರಿಯಗಳು ಬತ್ತಿಹೋಗುವಂತೆ ಮಾಡಲಿ ಎಂದು ಹೇಳಬೇಕು, ಈ ಪ್ರಕಾರ ಯಾಜಕನು ಆ ಸ್ತ್ರೀಯನ್ನು ಶಾಪದ ಪ್ರಮಾಣ ಮಾಡಿಸಬೇಕು.” “ ‘ಅದಕ್ಕೆ ಆ ಸ್ತ್ರೀಯು, “ಆಮೆನ್, ಆಮೆನ್,” ಎಂದು ಹೇಳಬೇಕು.


ಆಗ ಯಾಜಕನು ಪವಿತ್ರ ನೀರನ್ನು ಮಣ್ಣಿನ ಗಡಿಗೆಗಳಲ್ಲಿ ತೆಗೆದುಕೊಳ್ಳಬೇಕು. ಗುಡಾರದ ನೆಲದಲ್ಲಿರುವ ಧೂಳನ್ನು ಯಾಜಕನು ತೆಗೆದುಕೊಂಡು, ಆ ನೀರಿನೊಳಗೆ ಹಾಕಬೇಕು.


ಆ ಮನುಷ್ಯನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ತರಬೇಕು. ಅವಳಿಗೋಸ್ಕರ ಕಾಣಿಕೆಯಾಗಿ ಒಂದು ಓಮರ್ ಜವೆಗೋಧಿಯ ಹಿಟ್ಟನ್ನು ತರಬೇಕು. ಅದರ ಮೇಲೆ ಎಣ್ಣೆಯನ್ನಾದರೂ ಸಾಂಬ್ರಾಣಿಯನ್ನಾದರೂ ಹಾಕಬಾರದು. ಏಕೆಂದರೆ ಅದು ಸಂಶಯವನ್ನು ಸೂಚಿಸುವುದಕ್ಕೂ ಅಪರಾಧವನ್ನು ಹೊರಪಡಿಸುವುದಕ್ಕೂ ಜ್ಞಾಪಕಕ್ಕೆ ತರುವ ಕಾಣಿಕೆಯೂ ಆಗಿದೆ.


“ಚರ್ಮರೋಗ ಇರುವ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡವನಾಗಿ, ತಲೆಗೂದಲನ್ನು ಕೆದರಿಕೊಂಡು, ಮುಖದ ಕೆಳಭಾಗವನ್ನು ಮುಚ್ಚಿಕೊಂಡು, ‘ನಾನು ಅಶುದ್ಧನು, ಅಶುದ್ಧನು,’ ಎಂದು ಕೂಗಬೇಕು.


ಸ್ತ್ರೀಯು ಕೂದಲು ಬೆಳೆಸಿಕೊಂಡರೆ, ಅದು ಅವಳಿಗೆ ಮಹಿಮೆಯಾಗಿದೆಯೆಂದೂ ಪ್ರಕೃತಿಯೇ ಸ್ಪಷ್ಟಪಡಿಸುತ್ತದೆ ಅಲ್ಲವೇ? ಏಕೆಂದರೆ, ಅವಳಿಗೆ ಉದ್ದ ಕೂದಲು ಮುಸುಕಿನಂತೆ ಕೊಡಲಾಗಿದೆ.


ಯಾಜಕನು ಅವಳನ್ನು ಪ್ರಮಾಣ ಮಾಡಿಸಿ, ಸ್ತ್ರೀಗೆ ಹೇಳಬೇಕಾದದ್ದು, “ಮದುವೆಯಾಗಿ ಗಂಡನೊಂದಿಗೆ ಸಂಸಾರ ನಡೆಸುವಾಗ, ಒಬ್ಬ ಪರಪುರುಷನು ನಿನ್ನ ಸಂಗಡ ಮಲಗಿರದಿದ್ದರೆ, ನಿನ್ನ ಗಂಡನನ್ನು ಬಿಟ್ಟು ನೀನು ಜಾರತ್ವ ಮಾಡದೆ ಇದ್ದರೆ, ಶಾಪವನ್ನು ಉಂಟುಮಾಡುವ ಈ ನೀರು ನಿನಗೆ ಯಾವ ಹಾನಿಮಾಡುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು