Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 5:13 - ಕನ್ನಡ ಸಮಕಾಲಿಕ ಅನುವಾದ

13 ಇಲ್ಲವೆ ಒಬ್ಬನು ಅವಳ ಸಂಗಡ ಮಲಗಿ ಸಂಗಮ ಮಾಡಿದ್ದು, ಅವಳ ಗಂಡನ ಕಣ್ಣುಗಳಿಗೆ ಮರೆಯಾಗಿದ್ದರೆ, ಅವಳು ಅಶುದ್ಧಳೆಂಬುದು ಗುಪ್ತವಾಗಿದ್ದರೆ, ಅವಳಿಗೆ ವಿರೋಧವಾಗಿ ಸಾಕ್ಷಿ ಇಲ್ಲದೆ, ಅವಳನ್ನು ಹಿಡಿಯದೇ ಇದ್ದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಯಾರ ಕೈಗೆ ಸಿಕ್ಕದೆಯೂ ಸಾಕ್ಷಿ ಇಲ್ಲದೆಯೂ ರಹಸ್ಯವಾಗಿಯೇ ಪರಪುರುಷನೊಡನೆ ಸಂಗಮಿಸಿ ಗಂಡನಿಗೆ ದ್ರೋಹಿಯಾಗಿ ಅಶುದ್ಧಳಾದ ಸಂದರ್ಭದಲ್ಲಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಗುಟ್ಟಾಗಿಯೇ ಪರಪುರುಷನೊಡನೆ ಸಂಗಮಿಸಿ, ಗಂಡನಿಗೆ ದ್ರೋಹಿಯಾಗಿ ಅಶುದ್ಧಳಾಗಿರಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಕೈಗೆ ಸಿಕ್ಕದೆಯೂ ಸಾಕ್ಷಿಯಿಲ್ಲದೆಯೂ ರಹಸ್ಯವಾಗಿಯೇ ಪರಪುರುಷನೊಡನೆ ಸಂಗವಿುಸಿ ಗಂಡನಿಗೆ ದ್ರೋಹಿಯಾಗಿ ಅಶುದ್ಧಳಾದ ಸಂದರ್ಭದಲ್ಲೂ ಅವಳು ಹೀಗೆ ಮಾಡದೆ ಕೆಟ್ಟುಹೋಗದ ಸಂದರ್ಭದಲ್ಲೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಇನ್ನೊಬ್ಬನೊಡನೆ ಲೈಂಗಿಕ ಸಂಬಂಧ ಮಾಡಿರಬಹುದು. ಅವಳ ಈ ಕಾರ್ಯವು ಗಂಡನಿಗೆ ಗೊತ್ತಿಲ್ಲದಿರಬಹುದು; ಯಾವ ಸಾಕ್ಷಿಯೂ ಇಲ್ಲದಿರುವುದರಿಂದ ಮತ್ತು ಅವಳು ಈ ಕಾರ್ಯ ಮಾಡುತ್ತಿರುವಾಗಲೇ ಸಿಕ್ಕಿಕೊಂಡಿಲ್ಲದಿರುವುದರಿಂದ ತಾನು ತನ್ನನ್ನು ಅಶುದ್ಧಳನ್ನಾಗಿ ಮಾಡಿಕೊಂಡ ಸತ್ಯಾಂಶವನ್ನು ಆಕೆ ಗುಪ್ತವಾಗಿಡಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 5:13
6 ತಿಳಿವುಗಳ ಹೋಲಿಕೆ  

“ ‘ಪರರ ಹೆಂಡತಿಯೊಂದಿಗೆ ನೀನು ಸಂಗಮಿಸಿ ಅಶುದ್ಧನಾಗಬೇಡ.


“ ‘ಇದಲ್ಲದೆ ಒಬ್ಬನು ಮತ್ತೊಬ್ಬನ ಹೆಂಡತಿಯೊಡನೆ ವ್ಯಭಿಚಾರ ಮಾಡಿದರೆ, ವ್ಯಭಿಚಾರ ಮಾಡುವವನಿಗೂ ಮತ್ತು ವ್ಯಭಿಚಾರ ಮಾಡುವವಳಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು.


“ಜಾರಸ್ತ್ರೀಯ ನಡತೆಯು ಹೀಗಿದೆ: ಅವಳು ತಿಂದು, ತನ್ನ ಬಾಯನ್ನು ಒರೆಸಿಕೊಂಡು ‘ನಾನು ಯಾವುದೇ ತಪ್ಪು ಮಾಡಿಲ್ಲ,’ ಎಂದು ಹೇಳುತ್ತಾಳೆ.


ಅವನು ತನ್ನೊಂದಿಗೆ ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ; ಹುಣ್ಣಿಮೆಗೆ ಮುಂಚೆ ಅವನು ಮನೆಗೆ ಬರುವುದಿಲ್ಲ.”


ನೀವು ನಿಮ್ಮ ಖಡ್ಗದ ಮೇಲೆ ಭರವಸೆ ಇಟ್ಟು ಅಸಹ್ಯವಾದ ಕೆಲಸಗಳನ್ನು ಮಾಡುವಿರಿ. ನಿಮ್ಮಲ್ಲಿ ಪ್ರತಿಯೊಬ್ಬನೂ ನಿಮ್ಮ ನೆರೆಯವನ ಹೆಂಡತಿಯನ್ನು ಕೆಡಿಸುವಿರಿ. ಹೀಗಾದರೆ ನೀವು ದೇಶವನ್ನು ಸ್ವಾಧೀನಪಡಿಸಿಕೊಂಡಿರೇನು?’


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು