ಅರಣ್ಯಕಾಂಡ 4:34 - ಕನ್ನಡ ಸಮಕಾಲಿಕ ಅನುವಾದ34 ಮೋಶೆಯೂ, ಆರೋನನೂ, ಸಭೆಯ ಮುಖ್ಯಸ್ಥನೂ, ಕೊಹಾತ್ಯರ ಪುತ್ರರನ್ನು ಅವರ ಕುಲಗಳ ಪ್ರಕಾರವಾಗಿಯೂ, ಅವರ ಕುಟುಂಬಗಳ ಪ್ರಕಾರವಾಗಿಯೂ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201934 ಮೋಶೆ ಮತ್ತು ಆರೋನರೂ, ಸಮೂಹದ ಪ್ರಧಾನರೂ ಕೆಹಾತ್ಯರನ್ನು ಅವರ ಗೋತ್ರಕುಟುಂಬಗಳ ಪ್ರಕಾರ ಎಣಿಕೆ ಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)34-35 ಮೋಶೆ ಹಾಗು ಆರೋನರು ಮತ್ತು ಸಮೂಹದ ಮುಖ್ಯಸ್ಥರು ಕೆಹಾತ್ಯರಲ್ಲಿ ಯಾರಾರು ಮೂವತ್ತರಿಂದ ಐವತ್ತು ವರ್ಷದವರೆಗಿನ ವಯಸ್ಸುಳ್ಳವರಾಗಿದ್ದಾರೋ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಎಣಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)34-35 ಮೋಶೆ ಆರೋನರೂ ಸಮೂಹದ ಪ್ರಧಾನರೂ ಕೆಹಾತ್ಯರಲ್ಲಿ ಯಾರಾರು ಮೂವತ್ತರಿಂದ ಐವತ್ತು ವರುಷದವರೆಗೂ ವಯಸ್ಸುಳ್ಳವರಾಗಿ ದೇವದರ್ಶನದ ಗುಡಾರದ ಸೇವಕಮಂಡಲಿಗೆ ಸೇರತಕ್ಕವರಾಗಿದ್ದಾರೋ ಅವರನ್ನು ಗೋತ್ರ ಕುಟುಂಬಗಳ ಪ್ರಕಾರ ಲೆಕ್ಕಿಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್34-35 ಮೋಶೆ ಆರೋನರೂ, ಸಮುದಾಯದ ಪ್ರಧಾನರೂ ಕುಲ ಮತ್ತು ಕುಟುಂಬಗಳಿಗನುಗುಣವಾಗಿ ಕೆಹಾತ್ಯರಲ್ಲಿ ಮೂವತ್ತು ವರ್ಷದಿಂದ ಮೊದಲುಗೊಂಡು ಐವತ್ತು ವರ್ಷದೊಳಗಿರುವ ಗಂಡಸರನ್ನು ಲೆಕ್ಕಿಸಿದರು. ದೇವದರ್ಶನಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸ ಮಾಡಲು ಯೋಗ್ಯರಾದ ಗಂಡಸರನ್ನೇ ಅವರು ಲೆಕ್ಕಿಸಿದರು. ಅಧ್ಯಾಯವನ್ನು ನೋಡಿ |