ಅರಣ್ಯಕಾಂಡ 4:32 - ಕನ್ನಡ ಸಮಕಾಲಿಕ ಅನುವಾದ32 ಸುತ್ತಲಿರುವ ಅಂಗಳದ ಕಂಬಗಳ ಆಧಾರಗಳೂ ಅದರ ಗದ್ದಿಗೇ ಕಲ್ಲುಗಳೂ ಅದರ ಗೂಟಗಳೂ ಅವುಗಳ ಹಗ್ಗಗಳೂ ಅವುಗಳ ಎಲ್ಲಾ ಸಲಕರಣೆಗಳ ಪ್ರಕಾರವಾಗಿಯೂ ಅವುಗಳ ಸಮಸ್ತ ಸೇವೆಯ ಪ್ರಕಾರವಾಗಿಯೂ ಅವರು ಹೊರುವುದಕ್ಕೆ ಕೊಟ್ಟ ಅಪ್ಪಣೆಯ ಸಲಕರಣೆಗಳನ್ನು ನೀವು ಹೆಸರೆಸರಾಗಿ ಎಣಿಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201932 ಅಂಗಳದ ಕಂಬಗಳನ್ನು, ಇವುಗಳ ಗದ್ದಿಗೆಕಲ್ಲುಗಳನ್ನೂ, ಗೂಟಗಳನ್ನೂ, ಹಗ್ಗಗಳನ್ನೂ ಎಲ್ಲಾ ಉಪಕರಣಗಳನ್ನೂ ಹೊರಬೇಕು; ಇವುಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಅವರು ಮಾಡಬೇಕು. ಅವರವರ ಜವಾಬ್ದಾರಿಗಳನ್ನೆಲ್ಲಾ ನೀವು ಹೆಸರು ಹೇಳಿ ಗೊತ್ತುಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)32 ಅವರು ಗುಡಾರದ ಚೌಕಟ್ಟುಗಳನ್ನು, ಅಗುಳಿಗಳನ್ನು, ಕಂಬಗಳನ್ನು, ಗದ್ದಿಗೆ ಕಲ್ಲುಗಳನ್ನು, ಗೂಟಗಳನ್ನು, ಹಗ್ಗಗಳನ್ನು ಮತ್ತು ಅವುಗಳ ಎಲ್ಲ ಉಪಕರಣಗಳನ್ನು ಹೊರಬೇಕು. ಅವರವರ ಹೊರೆಗಳನ್ನೆಲ್ಲ ನೀವೇ ಹೆಸರಿಸಿ ಗೊತ್ತುಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)32 ಇವುಗಳ ಗದ್ದಿಗೇಕಲ್ಲುಗಳನ್ನೂ ಗೂಟಗಳನ್ನೂ ಹಗ್ಗಗಳನ್ನೂ ಎಲ್ಲಾ ಉಪಕರಣಗಳನ್ನೂ ಹೊರಬೇಕು; ಇವುಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಅವರು ಮಾಡಬೇಕು. ಅವರವರ ಹೊರೆಗಳನ್ನೆಲ್ಲಾ ನೀವು ಹೆಸರು ಹೇಳಿ ಗೊತ್ತುಮಾಡಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್32 ಅಂಗಳದ ಸ್ತಂಭಗಳು ಮತ್ತು ಅವುಗಳ ಗದ್ದಿಗೇಕಲ್ಲುಗಳು, ಅಗುಳಿಗಳು, ಹಗ್ಗಗಳು ಮತ್ತು ಅವರ ಕೆಲಸಕ್ಕೆ ಬೇಕಾದ ಎಲ್ಲಾ ಉಪಕರಣಗಳು. ಅವರು ವರ್ಗಾಯಿಸಬೇಕಾದ ಮತ್ತು ಕಾವಲುಕಾಯಬೇಕಾದ ವಸ್ತುಗಳನ್ನು ನೀನು ಹೆಸರೆಸರಾಗಿ ಅವರಿಗೆ ವಹಿಸಿಕೊಡಬೇಕು. ಅಧ್ಯಾಯವನ್ನು ನೋಡಿ |