ಅರಣ್ಯಕಾಂಡ 4:15 - ಕನ್ನಡ ಸಮಕಾಲಿಕ ಅನುವಾದ15 “ಆರೋನನು ಮತ್ತು ಅವನ ಪುತ್ರರು ಪರಿಶುದ್ಧ ಸ್ಥಳವನ್ನೂ, ಪರಿಶುದ್ಧಸ್ಥಳದ ಎಲ್ಲಾ ಸಲಕರಣೆಗಳನ್ನೂ ಮುಚ್ಚಿದ ಮೇಲೆ, ಪಾಳೆಯವು ಹೊರಡುವಾಗ ಕೊಹಾತ್ಯರು ಅದನ್ನು ಹೊತ್ತುಕೊಂಡು ಹೋಗುವುದಕ್ಕೆ ಪ್ರವೇಶಿಸಬೇಕು. ಆದರೆ ಅವರು ಸಾಯದೆ ಇರಬೇಕಾದರೋ, ಪರಿಶುದ್ಧವಾದ ಯಾವುದನ್ನೂ ಮುಟ್ಟಬಾರದು. ದೇವದರ್ಶನದ ಗುಡಾರದಲ್ಲಿ ಕೊಹಾತ್ಯನ ಪುತ್ರರ ಹೊರೆಗಳು ಇವೇ ಆಗಿವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ದಂಡು ಹೊರಡುವಾಗ ಆರೋನನೂ ಮತ್ತು ಅವನ ಮಕ್ಕಳೂ ದೇವಸ್ಥಾನದ ಎಲ್ಲಾ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದ ನಂತರ ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು, ಮುಟ್ಟಿದರೆ ಸತ್ತು ಹೋಗುವರು. ದೇವದರ್ಶನದ ಗುಡಾರದ ಸಾಮಾನುಗಳಲ್ಲಿ ಕೆಹಾತ್ಯರು ಹೊರಬೇಕಾದವುಗಳು ಇವೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಆರೋನನು ಮತ್ತು ಅವನ ಮಕ್ಕಳು ದಂಡು ಹೊರಡುವ ಕಾಲದಲ್ಲಿ ದೇವಸ್ಥಾನದ ಎಲ್ಲ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದ ನಂತರ ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು. ಮುಟ್ಟಿದರೆ ಬದುಕಲಾರರು. ಕೆಹಾತ್ಯರು ದೇವದರ್ಶನದ ಗುಡಾರದ ಸಲಕರಣೆಗಳಲ್ಲಿ ಹೊರಬೇಕಾದವುಗಳು ಇವೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ದಂಡು ಹೊರಡುವ ಕಾಲದಲ್ಲಿ ಆರೋನನೂ ಅವನ ಮಕ್ಕಳೂ ದೇವಸ್ಥಾನದ ಎಲ್ಲಾ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದನಂತರ ಕೆಹಾತ್ಯರು ಅವುಗಳನ್ನು ಹೊರುವದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು; ಮುಟ್ಟಿದರೆ ಸತ್ತಾರು. ದೇವದರ್ಶನದ ಗುಡಾರದ ಸಾಮಾನುಗಳಲ್ಲಿ ಕೆಹಾತ್ಯರು ಹೊರಬೇಕಾದವುಗಳು ಇವೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 “ಇಸ್ರೇಲರು ಪ್ರಯಾಣಮಾಡುವ ಸಮಯದಲ್ಲಿ ಆರೋನನು ಮತ್ತು ಅವನ ಪುತ್ರರು ಪವಿತ್ರವಸ್ತುಗಳಿಗೂ ಪವಿತ್ರ ಉಪಕರಣಗಳಿಗೂ ಹೊದಿಸಿದ ನಂತರ, ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಹೋಗಬಹುದು. ಈ ರೀತಿ ಅವರು ಪವಿತ್ರವಸ್ತುಗಳನ್ನು ಮುಟ್ಟಬಾರದು; ಅವರು ಮುಟ್ಟಿದರೆ ಸಾಯುತ್ತಾರೆ. ಅಧ್ಯಾಯವನ್ನು ನೋಡಿ |