Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 36:7 - ಕನ್ನಡ ಸಮಕಾಲಿಕ ಅನುವಾದ

7 ಇಸ್ರಾಯೇಲರ ಸೊತ್ತು ಒಂದು ಗೋತ್ರದಿಂದ ಮತ್ತೊಂದು ಗೋತ್ರದ ಕೈಗೆ ಹೋಗಬಾರದು. ಏಕೆಂದರೆ ಇಸ್ರಾಯೇಲರು, ಒಬ್ಬೊಬ್ಬನು ತನ್ನ ಪಿತೃಗಳ ಗೋತ್ರದ ಸೊತ್ತನ್ನು ತಾನೇ ಹೊಂದಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಇಸ್ರಾಯೇಲರ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರಾಯೇಲರೆಲ್ಲರೂ ತಮ್ಮತಮ್ಮ ಕುಲಗಳ ಸ್ವತ್ತನ್ನು ಹೊಂದಿಕೊಂಡೇ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಇಸ್ರಯೇಲರ ಯಾವ ಸೊತ್ತೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರಯೇಲರೆಲ್ಲರು ತಮ್ಮ ತಮ್ಮ ಕುಲಗಳ ಸೊತ್ತನ್ನು ತಾವೇ ಹೊಂದಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಇಸ್ರಾಯೇಲ್ಯರ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರಾಯೇಲ್ಯರೆಲ್ಲರೂ ತಮ್ಮ ತಮ್ಮ ಕುಲಗಳ ಸ್ವಾಸ್ತ್ಯವನ್ನು ಹೊಂದಿಕೊಂಡೇ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಇಸ್ರೇಲರ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರೇಲರೆಲ್ಲರೂ ತಮ್ಮ ಪೂರ್ವಿಕರಿಂದ ಸ್ವಾಸ್ತ್ಯವಾಗಿ ಪಡೆದುಕೊಂಡ ತಮ್ಮ ಗೋತ್ರದ ಭೂಮಿಯನ್ನು ತಮ್ಮ ಸ್ವಾಧೀನದಲ್ಲೇ ಇಟ್ಟುಕೊಂಡಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 36:7
5 ತಿಳಿವುಗಳ ಹೋಲಿಕೆ  

ಆದರೆ ನಾಬೋತನು ಅಹಾಬನಿಗೆ, “ನಾನು ನನ್ನ ಪಿತೃಗಳ ಬಾಧ್ಯತೆಯನ್ನು ನಿನಗೆ ಕೊಡದಂತೆ ಯೆಹೋವ ದೇವರು ನನ್ನನ್ನು ತಡೆಯಲಿ,” ಎಂದನು.


ಒಂದು ಸೊತ್ತು ಒಂದು ಗೋತ್ರದಿಂದ ಮತ್ತೊಂದು ಗೋತ್ರಕ್ಕೆ ಹಸ್ತಾಂತರಗೊಳ್ಳಬಾರದು ಆದರೆ ಇಸ್ರಾಯೇಲರ ಗೋತ್ರಗಳಲ್ಲಿ ಒಬ್ಬೊಬ್ಬನು ತನ್ನ ಸೊತ್ತಿಗೆ ತಾನೇ ಹೊಂದಿಕೊಳ್ಳಬೇಕು,” ಎಂದನು.


ಇದಕ್ಕಾಗಿ ಇಸ್ರಾಯೇಲರಲ್ಲಿ ಒಬ್ಬೊಬ್ಬನು ತನ್ನ ಪಿತೃಗಳ ಸೊತ್ತನ್ನು ಸ್ವಾಧೀನ ಮಾಡಿಕೊಳ್ಳುವಂತೆ ಇಸ್ರಾಯೇಲರ ಗೋತ್ರಗಳೊಳಗೆ ಸೊತ್ತನ್ನು ಹೊಂದಿರುವ ಒಬ್ಬೊಬ್ಬ ಪುತ್ರಿಯು ತನ್ನ ಪಿತೃವಿನ ಕುಟುಂಬದ ಗೋತ್ರದಲ್ಲಿರುವವನೊಂದಿಗೇ ಮದುವೆ ಮಾಡಿಕೊಳ್ಳಬೇಕು.


ಹೀಗೆ ಯೆಹೋಶುವನು ಜನರನ್ನು ಅವರವರ ಸೊತ್ತಿನ ಕಡೆಗೆ ಕಳುಹಿಸಿಬಿಟ್ಟನು.


ನನ್ನ ಕೈಯಲ್ಲಿ ಏನು ಕೆಟ್ಟತನವಿದೆ? ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಯೆಹೋವ ದೇವರು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ, ಕಾಣಿಕೆಯನ್ನು ಅಂಗೀಕರಿಸಲಿ. ಆದರೆ ಮಾನವರು ಇದನ್ನು ಮಾಡಿದರೆ, ಅವರು ಯೆಹೋವ ದೇವರ ಮುಂದೆ ಶಾಪಗ್ರಸ್ತರಾಗಿರಲಿ. ಏಕೆಂದರೆ, ‘ನೀನು ಹೋಗಿ? ಅನ್ಯದೇವರುಗಳನ್ನು ಸೇವಿಸು,’ ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಯೆಹೋವ ದೇವರ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು