Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 35:12 - ಕನ್ನಡ ಸಮಕಾಲಿಕ ಅನುವಾದ

12 ಕೊಂದವನು ಸಭೆಯ ಮುಂದೆ ನ್ಯಾಯತೀರ್ಪಿಗೆ ನಿಲ್ಲುವವರೆಗೂ ಸೇಡು ತೀರಿಸುವವನ ದೆಸೆಯಿಂದ ಸಾಯದಂತೆ ಅವು ನಿಮಗೆ ಆಶ್ರಯದ ಪಟ್ಟಣಗಳಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅವನು ಸಭೆಯವರಿಂದ ತೀರ್ಪು ಹೊಂದುವುದಕ್ಕಿಂತ ಮೊದಲೇ ಹತವಾದವನ ಸಮೀಪಬಂಧುವಿನಿಂದ ಸಾಯದಂತೆ ಆ ಆಶ್ರಯ ಪಟ್ಟಣಗಳು ನಿಮ್ಮೊಳಗೆ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಅಂಥವನು ಸಭೆಯವರಿಂದ ತೀರ್ಪುಹೊಂದುವುದಕ್ಕಿಂತ ಮೊದಲೇ ಹತನಾದವನ ಸಮೀಪ ಬಂಧುವಿನಿಂದ ಸಾಯದಂತೆ ಈ ಆಶ್ರಯಧಾಮಗಳು ನಿಮ್ಮಲ್ಲಿ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅವನು ಸಭೆಯವರಿಂದ ತೀರ್ಪುಹೊಂದುವದಕ್ಕಿಂತ ಮೊದಲೇ ಹತವಾದವನ ಸಮೀಪಬಂಧುವಿನಿಂದ ಸಾಯದಂತೆ ಆ ಆಶ್ರಯಸ್ಥಾನಗಳು ನಿಮ್ಮೊಳಗೆ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಕೊಂದವನು ನ್ಯಾಯ ವಿಚಾರಣಾಸಭೆಯ ಮುಂದೆ ನಿಂತುಕೊಳ್ಳುವುದಕ್ಕಿಂತ ಮೊದಲೇ ಕೊಲ್ಲಲ್ಪಟ್ಟವನ ಸಂಬಂಧಿಕನಿಂದ ಕೊಲ್ಲಲ್ಪಡದೆ ಸುರಕ್ಷಿತನಾಗಿರಲು ಆ ಆಶ್ರಯ ಸ್ಥಳಗಳು ನಿಮ್ಮ ಮಧ್ಯದಲ್ಲಿ ಇರಲೇಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 35:12
10 ತಿಳಿವುಗಳ ಹೋಲಿಕೆ  

ಸತ್ತವನಲ್ಲಿ ಅವನಿಗೆ ಮೊದಲಿನಿಂದಲೂ ದ್ವೇಷವಿರಲಿಲ್ಲ. ಆದ್ದರಿಂದ ಅವನು ಮರಣಶಿಕ್ಷೆಗೆ ಪಾತ್ರನಲ್ಲ. ಆದರೂ ಹತ್ಯೆ ಮಾಡಿದವನಿಗೆ ಮುಯ್ಯಿ ತೀರಿಸುವ ಹಂಗುಳ್ಳ ಸಮೀಪ ಬಂಧು ಕೋಪದಿಂದ ಉರಿಯುತ್ತಾ, ಅವನನ್ನು ಹಿಂದಟ್ಟಬಹುದು. ಮಾರ್ಗದ ಮಧ್ಯದಲ್ಲೇ ಅವನನ್ನು ಹಿಡಿದು ಕೊಂದು ಹಾಕಬಹುದು.


ಕೈತಪ್ಪಿ ಅರಿಯದೆ ಅಕಸ್ಮಾತ್ತಾಗಿ ಕೊಂದವನು ಯಾವನಾದರೂ ನ್ಯಾಯಸಭೆಯ ಮುಂದೆ ಬಂದು ನಿಲ್ಲುವ ತನಕ, ಸೇಡು ತೀರಿಸಿಕೊಳ್ಳುವವನ ಕೈಯಿಂದ ಸಾಯದ ಹಾಗೆ ಅಲ್ಲಿ ಓಡಿಹೋಗುವುದಕ್ಕೆ ಇಸ್ರಾಯೇಲರೆಲ್ಲರಿಗೂ, ಅವರ ಮಧ್ಯದಲ್ಲಿ ವಾಸವಾಗಿರುವ ಪರಕೀಯರಿಗೂ ನೇಮಿಸಲಾದ ಪಟ್ಟಣಗಳು ಇವೇ.


ಆದ್ದರಿಂದ ಕುಟುಂಬದವರೆಲ್ಲರು ನಿನ್ನ ಸೇವಕಿಯ ವಿರೋಧವಾಗಿ ಎದ್ದು, ‘ತನ್ನ ಸಹೋದರನನ್ನು ಕೊಂದವನನ್ನು ಅವನ ಸಹೋದರನ ಪ್ರಾಣಕ್ಕೋಸ್ಕರ ಅವನನ್ನು ಒಪ್ಪಿಸಿಕೊಡು, ತಮ್ಮನ ಪ್ರಾಣಕ್ಕಾಗಿ ಅವನ ಪ್ರಾಣವನ್ನೂ ತೆಗೆದುಬಿಟ್ಟು ನಿನ್ನನ್ನು ಬಾಧ್ಯಸ್ಥವಿಲ್ಲದ ಹಾಗೆ ಮಾಡಿಬಿಡುತ್ತೇವೆ’ ಎನ್ನುತ್ತಾರೆ. ಹೀಗೆಯೇ ಅವರು ನನಗೆ ಉಳಿದಿರುವ ಒಂದು ಕೆಂಡವನ್ನು ಆರಿಸಿ, ಭೂಮಿಯ ಮೇಲೆ ನನ್ನ ಗಂಡನ ಹೆಸರನ್ನೂ, ಸಂತಾನವನ್ನೂ ಅಳಿಸಬೇಕೆಂದಿದ್ದಾರೆ,” ಎಂದಳು.


ರಕ್ತಪಾತಕ್ಕೆ ಸೇಡು ತೀರಿಸಿಕೊಳ್ಳುವವನು ಕೊಲೆಪಾತಕನನ್ನು ಕೊಲ್ಲಬೇಕು. ಅವನು ಕೊಲೆಪಾತಕನನ್ನು ನೋಡಿದಾಗ, ಅವನನ್ನೂ ಕೊಲ್ಲಬೇಕು.


ನೀವು ಕೊಡುವ ಪಟ್ಟಣಗಳೊಳಗೆ ಆರು ಆಶ್ರಯದ ಪಟ್ಟಣಗಳು ಇರಬೇಕು.


ಬದುಕಿ ಉಳಿಯಲು ಅಲ್ಲಿ ಓಡಿಹೋಗತಕ್ಕ ಕೊಲೆಪಾತಕನ ವಿವರವೇನೆಂದರೆ, ತಿಳಿಯದೆ ಇಲ್ಲವೆ ಪೂರ್ವ ಕಲ್ಪಿತ ಹಗೆ ಮಾಡದೆ, ತನ್ನ ನೆರೆಯವನನ್ನು ಹೊಡೆದವನೇ.


“ನಾನು ಮೋಶೆಯ ಮುಖಾಂತರ ನಿನಗೆ ಹೇಳಿದ ಆಶ್ರಯದ ಪಟ್ಟಣಗಳನ್ನು ಗೊತ್ತುಮಾಡಿಕೊಳ್ಳುವಂತೆ ನೀನು ಇಸ್ರಾಯೇಲರಿಗೆ ಹೇಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು