Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 32:32 - ಕನ್ನಡ ಸಮಕಾಲಿಕ ಅನುವಾದ

32 ನಾವು ಯುದ್ಧಕ್ಕೆ ಸಿದ್ಧವಾಗಿ ಯೆಹೋವ ದೇವರ ಮುಂದೆ ಕಾನಾನ್ ದೇಶಕ್ಕೆ ದಾಟಿ ಹೋಗುವೆವು. ಆದರೆ ಯೊರ್ದನ್ ನದಿಯ ಈಚೆಯಲ್ಲಿರುವ ನಮ್ಮ ಸೊತ್ತಿನ ಭಾಗವೇ ನಮಗಿರಲಿ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ನಾವು ಯೆಹೋವನ ಮುಂದೆ ಯುದ್ಧಸನ್ನದ್ಧರಾಗಿ ಕಾನಾನ್ ದೇಶಕ್ಕೆ ಹೊರಡುವೆವು, ಆಗ ಯೊರ್ದನ್ ನದಿಯ ಆಚೆಯೇ ನಮಗೆ ಸ್ವತ್ತು ದೊರಕಬೇಕು” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಸರ್ವೇಶ್ವರನ ಸಮ್ಮುಖದಲ್ಲಿ ಯುದ್ಧ ಸನ್ನದ್ಧರಾಗಿ ಕಾನಾನ್ ನಾಡಿಗೆ ಹೊರಡುತ್ತೇವೆ. ಜೋರ್ಡನ್ ನದಿಯ ಈಚೆಯೇ ನಮಗೆ ಆಸ್ತಿ ದೊರಕಬೇಕು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ನಾವು ಯೇಹೋವನ ಮುಂದೆ ಯುದ್ಧಸನ್ನದ್ಧರಾಗಿ ಕಾನಾನ್ ದೇಶಕ್ಕೆ ಹೊರಡುವೆವು; ಆಗ ಯೊರ್ದನ್ ಹೊಳೆಯ ಈಚೆಯೇ ನಮಗೆ ಸ್ವಾಸ್ತ್ಯವು ದೊರಕಬೇಕು ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ನಾವೇ ಯುದ್ಧ ಮಾಡುವ ಸೈನಿಕರಾಗಿ ನದಿಯನ್ನು ದಾಟಿ ಯೆಹೋವನ ಮುಂದೆ ಕಾನಾನ್ ದೇಶದೊಳಗೆ ಹೋಗುವೆವು. ಆದರೆ ನಮ್ಮ ಸ್ವಾಸ್ತ್ಯವಾದ ಭೂಮಿಯು ಜೋರ್ಡನ್ ನದಿಯ ಈಚೆಕಡೆಯಲ್ಲಿರುವುದು” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 32:32
10 ತಿಳಿವುಗಳ ಹೋಲಿಕೆ  

ಆಗ ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಉತ್ತರವಾಗಿ, “ಯೆಹೋವ ದೇವರು ನಿನ್ನ ಸೇವಕರಿಗೆ ಹೇಳಿದ್ದಂತೆಯೇ ನಾವು ಮಾಡುವೆವು.


ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ, ರೂಬೇನನ ಮಕ್ಕಳಿಗೂ, ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ, ಅಮೋರಿಯರ ಅರಸನಾದ ಸೀಹೋನನ ರಾಜ್ಯವನ್ನೂ, ಅರಸನಾದ ಓಗನ ರಾಜ್ಯವನ್ನೂ, ಬಾಷಾನಿನ ಅರಸನಾದ ಓಗನ ರಾಜ್ಯವನ್ನೂ, ಅದರ ಭೂಮಿಯನ್ನೂ, ಅದರ ಮೇರೆಗಳಲ್ಲಿ ಸುತ್ತಮುತ್ತಲ ಪಟ್ಟಣಗಳನ್ನೂ ಕೊಟ್ಟನು.


ಆ ಕಾಲದಲ್ಲಿ ನಾವು ಸ್ವತಂತ್ರಿಸಿಕೊಂಡ ದೇಶವನ್ನು ಅರ್ನೋನ್ ಹಳ್ಳದ ಸಮೀಪದಲ್ಲಿರುವ ಅರೋಯೇರಿನಿಂದ ಮೊದಲ್ಗೊಂಡು, ಅರ್ಧ ಗಿಲ್ಯಾದ್ ಬೆಟ್ಟವನ್ನೂ, ಅದರ ಪಟ್ಟಣಗಳನ್ನೂ ರೂಬೇನ್ಯರ ಪ್ರದೇಶದವರೆಗೂ, ಗಾದನ ಪ್ರದೇಶದವರೆಗೂ ಕೊಟ್ಟೆನು.


ಅವರ ದೇಶವನ್ನು ತೆಗೆದುಕೊಂಡು ರೂಬೇನ್ಯರಿಗೂ ಗಾದನವರಿಗೂ ಮನಸ್ಸೆಯ ಅರ್ಧ ಗೋತ್ರಕ್ಕೂ ಸೊತ್ತಾಗಿ ಕೊಟ್ಟೆವು.


“ನಾನು ನಿಮಗೆ ಸೊತ್ತಾಗಿ ಕೊಡುವ ಕಾನಾನ್ ದೇಶದೊಳಗೆ ನೀವು ಬಂದ ಬಳಿಕ ನಾನು ನಿಮಗೆ ಸೊತ್ತಾಗಿ ಕೊಡುವ ಮನೆಯಲ್ಲಿ ಬೂಜನ್ನು ಬರಮಾಡಿದಾಗ,


ನಾವು ಯೊರ್ದನ್ ನದಿಯ ಆಚೆಯಲ್ಲಿ ಅವರ ಸಂಗಡ ಸೊತ್ತನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ನಮ್ಮ ಸೊತ್ತು ನಮಗೆ ಯೊರ್ದನ್ ನದಿಯ ಈಚೆ ಪೂರ್ವದಿಕ್ಕಿನಲ್ಲಿ ಬಂತು,” ಎಂದನು.


ಎರಡೂವರೆ ಗೋತ್ರಗಳು ತಮ್ಮ ಸೊತ್ತನ್ನು ಯೊರ್ದನಿನ ಈಚೆಯಲ್ಲಿ ಯೆರಿಕೋವಿಗೆ ಸೂರ್ಯನು ಉದಯಿಸುವ ಪೂರ್ವದಿಕ್ಕಿನಲ್ಲಿ ಪಡೆದುಕೊಂಡಿದ್ದಾರೆ,” ಎಂದನು.


ಯೊರ್ದನ್ ನದಿಯ ಆಚೆ ಪಾರಾನ್, ತೋಫೆಲ್, ಲಾಬಾನ್, ಹಚೇರೋತ್, ದೀಜಾಹಾಬ್ ಎಂಬ ಊರುಗಳ ನಡುವೆ, ಮರುಭೂಮಿಯಲ್ಲಿ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಸೂಫಿಗೆ ಎದುರಾಗಿ, ಮೋಶೆ ಇಸ್ರಾಯೇಲರಿಗೆ ಹೇಳಿದ ಮಾತುಗಳು ಇವು.


ಇಸ್ರಾಯೇಲರು ಯೊರ್ದನ್ ನದಿಯ ಆಚೆ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಅರ್ನೋನ್ ಕಣಿವೆಯಿಂದ ಹೆರ್ಮೋನ್ ಬೆಟ್ಟದವರೆಗೂ ಅರಾಬಾ ಎಲ್ಲಾ ಪೂರ್ವ ಭಾಗಗಳನ್ನು ಒಳಗೊಂಡಂತೆ ಭೂಪ್ರದೇಶವನ್ನು ಸ್ವಾಧೀನ ಮಾಡಿಸಿಕೊಂಡ ದೇಶಗಳ ಅರಸರು ಯಾರಾರೆಂದರೆ:


ಯೆಹೋವ ದೇವರ ಸೇವಕನಾದ ಮೋಶೆಯೂ ಇಸ್ರಾಯೇಲರೂ ಅವರನ್ನು ಸೋಲಿಸಿ, ಅವರ ರಾಜ್ಯವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆ ಕುಲದ ಅರ್ಧ ಗೋತ್ರದವರಿಗೂ ಸೊತ್ತಾಗಿ ಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು