ಅರಣ್ಯಕಾಂಡ 32:22 - ಕನ್ನಡ ಸಮಕಾಲಿಕ ಅನುವಾದ22 ದೇಶವು ಯೆಹೋವ ದೇವರ ಮುಂದೆ ವಶವಾದ ತರುವಾಯ, ನೀವು ಯೆಹೋವ ದೇವರ ಮತ್ತು ಇಸ್ರಾಯೇಲರ ದೃಷಿಯಲ್ಲಿ ನಿರಪರಾಧಿಗಳಾಗಿದ್ದು, ಈ ದೇಶವು ಯೆಹೋವ ದೇವರ ಮುಂದೆ ನಿಮ್ಮ ಸೊತ್ತಾಗುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಯುದ್ಧಮಾಡಿ ತರುವಾಯ ನೀವು ತಿರುಗಿ ಬಂದು ಆತನ ದೃಷ್ಟಿಯಲ್ಲೂ, ಇಸ್ರಾಯೇಲರ ದೃಷ್ಟಿಯಲ್ಲೂ ನಿರ್ದೋಷಿಗಳಾಗಿರುವಿರಿ ಮತ್ತು ಈ ದೇಶವು ಯೆಹೋವನ ಸನ್ನಿಧಿಯಲ್ಲೇ ನಿಮಗೆ ಸ್ವತ್ತಾಗಿರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ತರುವಾಯ ನೀವು ಹಿಂದಿರುಗಿ ಬರಬಹುದು. ಆಗ ಸರ್ವೇಶ್ವರನ ಮುಂದೆ, ಇಸ್ರಯೇಲರ ಮುಂದೆ ನಿರ್ದೋಷಿಗಳಾಗುವಿರಿ, ಮಾತ್ರವಲ್ಲ ಈ ಪ್ರದೇಶ ಸರ್ವೇಶ್ವರನ ಸನ್ನಿಧಿಯಲ್ಲೇ ನಿಮಗೆ ಸೇರಿದ ಸೊತ್ತಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ತರುವಾಯ ನೀವು ತಿರಿಗಿ ಬಂದು ಆತನ ದೃಷ್ಟಿಯಲ್ಲೂ ಇಸ್ರಾಯೇಲ್ಯರ ದೃಷ್ಟಿಯಲ್ಲೂ ನಿರ್ದೋಷಿಗಳಾಗಿರುವಿರಿ, ಮತ್ತು ಈ ಪ್ರದೇಶವು ಯೆಹೋವನ ಸನ್ನಿಧಿಯಲ್ಲೇ ನಿಮಗೆ ಸ್ವಾಸ್ತ್ಯವಾಗಿರುವದು. ಅಧ್ಯಾಯವನ್ನು ನೋಡಿ |
ಯೆಹೋವ ದೇವರು ನಿಮ್ಮ ಹಾಗೆಯೇ ನಿಮ್ಮ ಸಹೋದರರನ್ನು ವಿಶ್ರಾಂತಿಪಡಿಸಿ, ಅವರು ನಿಮ್ಮ ದೇವರಾದ ಯೆಹೋವ ದೇವರು ತಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳುವವರೆಗೆ ಅವರಿಗೆ ಸಹಾಯಮಾಡಬೇಕು. ತರುವಾಯ ಯೆಹೋವ ದೇವರ ಸೇವಕನಾದ ಮೋಶೆಯು ಯೊರ್ದನ್ ನದಿಯ ಈಚೆಯಲ್ಲಿ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ನಿಮಗೆ ಕೊಟ್ಟ ನಿಮ್ಮ ಸೊತ್ತಾಗಿರುವ ದೇಶಕ್ಕೆ ತಿರುಗಿಬಂದು, ಅದನ್ನು ಸ್ವಾಧೀನಮಾಡಿಕೊಂಡು, ಅದನ್ನು ಅನುಭವಿಸಿರಿ,” ಎಂದನು.