Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 30:6 - ಕನ್ನಡ ಸಮಕಾಲಿಕ ಅನುವಾದ

6 “ಆದರೆ ಅವಳಿಗೆ ಗಂಡನಿರುವ ವೇಳೆಯಲ್ಲಿ ಅವಳ ಮೇಲೆ ಹರಕೆಗಳು ಇಲ್ಲವೆ ಪ್ರಾಣವನ್ನು ಬಂಧಿಸುವ ಬಾಯಿಂದ ಬಂದ ಮಾತು ಇದ್ದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 “ಅವಳು ಮದುವೆಯಾದ ಪಕ್ಷದಲ್ಲಿ ಮಾಡಿದ ಹರಕೆ ಇಲ್ಲವೆ ಯೋಚಿಸದೆ ಮಾಡಿದ ಪ್ರತಿಜ್ಞೆ ನಡೆಯುವಷ್ಟರೊಳಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 “ಆಕೆ ಮಾಡಿದ ಹರಕೆ ಇಲ್ಲವೆ ಪರ್ಯಾಲೋಚಿಸದೆ ಮಾಡಿದ ಪ್ರತಿಜ್ಞೆ ಮುಗಿಯುವಷ್ಟರೊಳಗೆ ಅವಳಿಗೆ ಮದುವೆಯಾಯಿತೆಂದು ಇಟ್ಟುಕೊಳ್ಳೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅವಳು ಮಾಡಿದ ಹರಕೆ ಇಲ್ಲವೆ ಯೋಚಿಸದೆ ಮಾಡಿದ ಪ್ರತಿಜ್ಞೆ ನಡೆಯುವಷ್ಟರೊಳಗೆ ಅವಳಿಗೆ ಮದುವೆಯಾದ ಪಕ್ಷದಲ್ಲಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 “ಆದರೆ ಅವಳು ತನ್ನ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಿಲ್ಲದಿರುವಾಗಲೇ ಮದುವೆಯಾದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 30:6
6 ತಿಳಿವುಗಳ ಹೋಲಿಕೆ  

ನನ್ನ ದೇವರೇ ನಾನು ನಿಮಗೆ ಸಲ್ಲಿಸಿದ ಹರಕೆಗಳಿಗೆ ಅಧೀನವಾಗಿದ್ದೇನೆ. ನಾನು ಉಪಕಾರ ಸ್ತುತಿಯ ಕಾಣಿಕೆಗಳನ್ನು ನಿಮಗೆ ಸಲ್ಲಿಸುವೆನು.


ಒಬ್ಬನು ಆಣೆಯಿಟ್ಟು ಕೆಟ್ಟದ್ದನ್ನಾಗಲಿ, ಒಳ್ಳೆಯದನ್ನಾಗಲಿ ಮಾಡುವುದನ್ನು ತನ್ನ ತುಟಿಗಳಿಂದ ಉಚ್ಛರಿಸಿದರೆ, ಒಬ್ಬ ಮನುಷ್ಯನು ಪ್ರಮಾಣದೊಡನೆ ಉಚ್ಚರಿಸಿದ್ದು ಯಾವುದೇ ಆಗಿರಲಿ, ಅದು ಅವನಿಗೆ ತಿಳಿಯದೆ ಇದ್ದು, ತರುವಾಯ ಅದು ಅವನಿಗೆ ತಿಳಿದಾಗ, ಇವುಗಳೊಂದರಲ್ಲಿ ಅವನು ಅಪರಾಧಿಯಾಗಿರುವನು.


ಆದರೆ ಅವಳ ತಂದೆ ಅದನ್ನು ಕೇಳಿ ಅವಳನ್ನು ತಡೆದರೆ, ಅವಳ ಎಲ್ಲಾ ಹರಕೆಗಳೂ ಪ್ರತಿಜ್ಞೆಗಳೂ ವ್ಯರ್ಥವಾಗುತ್ತವೆ. ಅವಳ ತಂದೆ ಅವಳನ್ನು ತಡೆದ ಕಾರಣ ಯೆಹೋವ ದೇವರು ಅವಳನ್ನು ಕ್ಷಮಿಸುವರು.


ಅವಳ ಗಂಡನು ಆ ವಿಷಯವನ್ನು ತಿಳಿದು ಸುಮ್ಮನಿದ್ದ ಪಕ್ಷದಲ್ಲಿ ಅವಳ ಹರಕೆಗಳೂ ಪ್ರತಿಜ್ಞೆಗಳೂ ನೆರವೇರಬೇಕು.


ಹರಕೆಮಾಡಿ, “ಸೇನಾಧೀಶ್ವರ ಯೆಹೋವ ದೇವರೇ, ನೀವು ನಿಶ್ಚಯವಾಗಿ ನಿಮ್ಮ ದಾಸಿಯ ದೀನತೆಯನ್ನು ಕಂಡು, ನಿಮ್ಮ ದಾಸಿಯನ್ನು ಮರೆಯದೆ, ನನ್ನನ್ನು ನೆನಸಿ, ನಿಮ್ಮ ದಾಸಿಗೆ ಗಂಡು ಮಗುವನ್ನು ಕೊಟ್ಟರೆ, ಅವನು ಬದುಕುವ ಸಕಲ ದಿವಸಗಳಲ್ಲಿ ಅವನನ್ನು ಯೆಹೋವ ದೇವರಿಗೆ ಒಪ್ಪಿಸಿಕೊಡುವೆನು. ಅವನ ತಲೆಯ ಮೇಲೆ ಕ್ಷೌರಿಕನ ಕತ್ತಿ ಬೀಳುವುದಿಲ್ಲ,” ಎಂದಳು.


ಇದಲ್ಲದೆ, “ನಾವು ಗಗನದ ಒಡತಿಗೆ ಧೂಪ ಸುಟ್ಟು, ಅವಳಿಗೆ ಪಾನಾರ್ಪಣೆಗಳನ್ನು ಹೊಯ್ದಾಗ, ನಮ್ಮ ಗಂಡಂದಿರನ್ನು ಬಿಟ್ಟು, ಅವಳ ಪೂಜೆಗೋಸ್ಕರ ದೋಸೆಗಳನ್ನು ಮಾಡಿ, ಅವಳಿಗೆ ಪಾನಾರ್ಪಣೆಗಳನ್ನು ಅರ್ಪಿಸಿದೆವೋ?” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು