Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 3:7 - ಕನ್ನಡ ಸಮಕಾಲಿಕ ಅನುವಾದ

7 ಇದಲ್ಲದೆ ಅವರು ದೇವದರ್ಶನದ ಗುಡಾರದ ಬಳಿಯಲ್ಲಿದ್ದು ದೇವದರ್ಶನದ ಗುಡಾರದ ಸೇವೆಮಾಡುತ್ತಾ ಆರೋನನಿಗಾಗಿಯೂ ಸಮಸ್ತ ಸಮೂಹದವರಿಗಾಗಿಯೂ ಕರ್ತವ್ಯಗಳನ್ನು ನಿರ್ವಹಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 “ಅವರು ದೇವದರ್ಶನದ ಗುಡಾರದ ಬಳಿಯಲ್ಲಿದ್ದು, ಆರೋನನಿಗೋಸ್ಕರವೂ ಸರ್ವಸಮೂಹದವರಿಗೋಸ್ಕರವೂ ದೇವಸ್ಥಾನದ ಸೇವಾಕಾರ್ಯವನ್ನು ನಡೆಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಅವರು ದೇವದರ್ಶನದ ಗುಡಾರದ ಬಳಿಯಲ್ಲಿರಬೇಕು; ಆರೋನನಿಗೂ ಇಡೀ ಸಮಾಜಕ್ಕೂ ನೆರವಾಗಿ ದೇವಸ್ಥಾನದ ಪರಿಚರ್ಯವನ್ನು ನಡೆಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಅವರು ದೇವದರ್ಶನದ ಗುಡಾರದ ಬಳಿಯಲ್ಲಿದ್ದು ಆರೋನನಿಗೋಸ್ಕರವೂ ಸರ್ವಸಮೂಹದವರಿಗೋಸ್ಕರವೂ ದೇವಸ್ಥಾನದ ಪರಿಚರ್ಯವನ್ನು ನಡಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಲೇವಿಯರು ಅವನಿಗಾಗಿ ಮತ್ತು ಇಡೀ ಸಮೂಹಕ್ಕಾಗಿ ದೇವದರ್ಶನಗುಡಾರದ ಮುಂದೆ ಕಾವಲುಗಾರರಾಗಿರುವರು ಮತ್ತು ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸಗಳನ್ನು ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 3:7
13 ತಿಳಿವುಗಳ ಹೋಲಿಕೆ  

ಆದರೆ ನೀನು ಸಾಕ್ಷಿಯ ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಅದಕ್ಕೆ ಬೇಕಾದ ಎಲ್ಲವನ್ನೂ ನೋಡಿಕೊಳ್ಳಲು ಲೇವಿಯರನ್ನು ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಹೊತ್ತುಕೊಳ್ಳುವರು. ಅದರ ಸೇವೆಮಾಡಿ, ಗುಡಾರದ ಸುತ್ತುಮುತ್ತಲೂ ಇಳಿದುಕೊಳ್ಳಬೇಕು.


“ಅದರ ತರುವಾಯ ಲೇವಿಯರು ಸೇವೆ ಮಾಡವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸುವರು. ಆಗ ನೀನು ಅವರನ್ನು ಶುದ್ಧೀಮಾಡಿ, ನೈವೇದ್ಯದಂತೆ ಸಮರ್ಪಿಸಬೇಕು.


ಲೇವಿಯರು ಇಸ್ರಾಯೇಲರ ಪರವಾಗಿ ಯೆಹೋವ ದೇವರ ಸೇವೆಯನ್ನು ಮಾಡುವುದಕ್ಕೆ ಸಿದ್ಧರಾಗುವಂತೆ ಆರೋನನು ಅವರನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯದಂತೆ ಸಮರ್ಪಿಸಬೇಕು.


ಈ ಶೆಲೋಮೋತನೂ ಅವನ ಸಹೋದರರೂ ಅರಸನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತ್ರುಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆ ಮಾಡಿದ ಪ್ರತಿಷ್ಠಿತವಾದವುಗಳ ಬೊಕ್ಕಸಗಳನ್ನು ಕಾಯುತ್ತಿದ್ದರು.


ಯೆಹೀಯೇಲನ ಪುತ್ರರು ಜೇತಾಮನು, ಅವನ ಸಹೋದರನಾದ ಯೋಯೇಲನು; ಇವರು ಯೆಹೋವ ದೇವರ ಆಲಯದ ಬೊಕ್ಕಸಗಳ ಮೇಲೆ ಇದ್ದರು.


ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಆಲಯದ ಬೊಕ್ಕಸದ ಮೇಲೆಯೂ, ಪ್ರತಿಷ್ಠಿತವಾದವುಗಳ ಬೊಕ್ಕಸಗಳ ಮೇಲೆಯೂ ಅಧಿಕಾರಿಯಾಗಿದ್ದನು.


ಇಸ್ರಾಯೇಲರ ಅರ್ಧ ಪಾಲಿನಿಂದ ಜನರಿಂದಲೂ, ಕತ್ತೆಗಳಿಂದಲೂ, ಮಂದೆಗಳಿಂದಲೂ, ಸಮಸ್ತ ಪಶುಗಳಿಂದಲೂ ಐವತ್ತರಲ್ಲಿ ಒಂದು ಪಾಲು ತೆಗೆದುಕೊಂಡು, ಅವುಗಳನ್ನು ಯೆಹೋವ ದೇವರ ಗುಡಾರವನ್ನು ನಿರ್ವಹಿಸುವ ಲೇವಿಯರಿಗೆ ಕೊಡಬೇಕು,” ಎಂದರು.


ಇದಲ್ಲದೆ ಯಾಜಕನಾಗಿರುವ ಆರೋನನ ಮಗ ಎಲಿಯಾಜರನು ಲೇವಿಯರ ಮತ್ತೊಬ್ಬ ನಾಯಕನಾಗಿದ್ದನು. ಪರಿಶುದ್ಧಸ್ಥಳದ ಜವಾಬ್ದಾರಿಕೆಯುಳ್ಳವನ ಮೇಲೆ ವಿಚಾರಕನು ಅವನೇ.


ಆದ್ದರಿಂದ ಏಳು ದಿನಗಳವರೆಗೆ ನೀವು ಸಾಯದಂತೆ ಹಗಲೂ ರಾತ್ರಿ ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಆಜ್ಞೆಯನ್ನು ಕೈಗೊಳ್ಳಬೇಕು. ಏಕೆಂದರೆ ಹಾಗೆಯೇ ನನಗೆ ಅಪ್ಪಣೆಯಾಗಿದೆ,” ಎಂದನು.


ಅವರು ದೇವದರ್ಶನದ ಗುಡಾರದ ಎಲ್ಲಾ ಸಲಕರಣೆಗಳನ್ನು ನೋಡಿಕೊಳ್ಳಬೇಕು. ಗುಡಾರದ ಸೇವೆಯನ್ನು ಮಾಡುವ ಮೂಲಕ ಇಸ್ರಾಯೇಲರ ಜವಾಬ್ದಾರಿಗಳನ್ನು ಪೂರೈಸಬೇಕು.


ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದುಕೊಳ್ಳಬೇಕು. ಹೀಗೆ ಇಸ್ರಾಯೇಲರ ಸಭೆಯ ಮೇಲೆ ನನ್ನ ಕೋಪಕ್ಕೆ ಆಸ್ಪದವಿರದು. ಲೇವಿಯರು ಸಭೆಯ ಗುಡಾರ ಕಾಯುವ ಜವಾಬ್ದಾರಿಕೆಯುಳ್ಳವರಾಗಿರಬೇಕು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು