ಅರಣ್ಯಕಾಂಡ 3:10 - ಕನ್ನಡ ಸಮಕಾಲಿಕ ಅನುವಾದ10 ಇದಲ್ಲದೆ ಯಾಜಕ ಉದ್ಯೋಗವನ್ನು ನಡೆಸುವುದಕ್ಕಾಗಿ ಆರೋನನನ್ನೂ ಅವನ ಪುತ್ರರನ್ನೂ ನೇಮಿಸಬೇಕು. ಪರಕೀಯನು ಸಮೀಪಿಸಿದರೆ ಸಾಯಬೇಕು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಯಾಜಕ ಉದ್ಯೋಗವನ್ನು ನಡೆಸುವುದಕ್ಕಾಗಿ ಆರೋನನನ್ನು ಮತ್ತು ಅವನ ಮಕ್ಕಳನ್ನು ನೇಮಿಸಬೇಕು. ಇತರರು ಆ ಕೆಲಸಕ್ಕೆ ಕೈಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಯಾಜಕ ಸೇವಾವೃತ್ತಿಯನ್ನು ಕೈಗೊಳ್ಳುವುದಕ್ಕೆ ಆರೋನನನ್ನು ಹಾಗೂ ಅವನ ಮಕ್ಕಳನ್ನು ನೇಮಿಸು. ಬೇರೆ ಯಾರಾದರು ಆ ವೃತ್ತಿಗೆ ಕೈ ಹಾಕಿದರೆ ಅಂಥವನಿಗೆ ಮರಣ ಶಿಕ್ಷೆಯಾಗಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಯಾಜಕೋದ್ಯೋಗವನ್ನು ನಡಿಸುವದಕ್ಕೆ ಆರೋನನನ್ನೂ ಅವನ ಮಕ್ಕಳನ್ನೂ ನೇವಿುಸಬೇಕು. ಇತರನು ಆ ಕೆಲಸಕ್ಕೆ ಕೈಹಾಕಿದರೆ ಅವನಿಗೆ ಮರಣಶಿಕ್ಷೆಯಾಗಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 “ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸು. ಅವರು ತಮ್ಮತಮ್ಮ ಯಾಜಕ ಉದ್ಯೋಗವನ್ನು ಕಾಪಾಡಿಕೊಳ್ಳಬೇಕು. ಯಾಜಕರ ಕರ್ತವ್ಯಗಳನ್ನು ಮಾಡಲು ಪವಿತ್ರ ವಸ್ತುಗಳ ಬಳಿಗೆ ಬರಲು ಬೇರೆ ಯಾವನಾದರೂ ಪ್ರಯತ್ನಿಸಿದರೆ ಅವನು ಕೊಲ್ಲಲ್ಪಡಬೇಕು.” ಅಧ್ಯಾಯವನ್ನು ನೋಡಿ |