Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 28:14 - ಕನ್ನಡ ಸಮಕಾಲಿಕ ಅನುವಾದ

14 ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಎಂದರೆ, ಹೋರಿಗೆ ಸುಮಾರು ಎರಡು ಲೀಟರ್ ದ್ರಾಕ್ಷಾರಸವು, ಟಗರಿಗೆ ಸುಮಾರು ಒಂದುವರೆ ಲೀಟರ್ ದ್ರಾಕ್ಷಾರಸವು, ಕುರಿಮರಿಗೆ ಸುಮಾರು ಒಂದು ಲೀಟರ್ ದ್ರಾಕ್ಷಾರಸವು ಇರಬೇಕು. ಇದು ವರ್ಷದ ಪ್ರತಿ ತಿಂಗಳಿನ ಆರಂಭದಲ್ಲಿ ಹೀಗೆ ದಹನಬಲಿಯನ್ನು ಅರ್ಪಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಇವುಗಳಿಗೆ ತಕ್ಕ ಪಾನದ್ರವ್ಯಾರ್ಪಣೆ ಯಾವುದೆಂದರೆ: ಒಂದೊಂದು ಹೋರಿಗೆ ಮೂರು ಸೇರು ದ್ರಾಕ್ಷಾರಸವನ್ನು, ಟಗರಿಗೆ ಎರಡು ಸೇರು ದ್ರಾಕ್ಷಾರಸವನ್ನು, ಕುರಿಗೆ ಒಂದುವರೆ ಸೇರು ದ್ರಾಕ್ಷಾರಸವನ್ನು, ವರ್ಷದ ಪ್ರತಿ ತಿಂಗಳಿನ ಆರಂಭದಲ್ಲಿ ಹೀಗೆ ಸರ್ವಾಂಗಹೋಮವನ್ನು ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಇವುಗಳಿಗೆ ತಕ್ಕ ಪಾನಾರ್ಪಣೆ ಯಾವುವೆಂದರೆ - ಒಂದೊಂದು ಹೋರಿಯೊಡನೆ ಮೂರು ಸೇರು, ಟಗರಿನೊಡನೆ ಎರಡು ಸೇರು, ಕುರಿಯೊಡನೆ ಒಂದು ಸೇರು ದ್ರಾಕ್ಷಾರಸ. ವರ್ಷದ ಪ್ರತಿ ಅಮಾವಾಸ್ಯೆಯಲ್ಲಿ ಹೀಗೆ ದಹನಬಲಿಯನ್ನು ಕೊಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಇವುಗಳಿಗೆ ತಕ್ಕ ಪಾನದ್ರವ್ಯಾರ್ಪಣೆ ಯಾವದಂದರೆ - ಒಂದೊಂದು ಹೋರಿಯೊಡನೆ ಮೂರು ಸೇರೂ ಟಗರಿನೊಡನೆ ಎರಡು ಸೇರೂ ಕುರಿಯೊಡನೆ ಒಂದುವರೆ ಸೇರೂ ದ್ರಾಕ್ಷಾರಸ. ಸಂವತ್ಸರದ ಪ್ರತಿ ಅಮಾವಾಸ್ಯೆಯಲ್ಲಿಯೂ ಹೀಗೆ ಸರ್ವಾಂಗಹೋಮವನ್ನು ಮಾಡಬೇಕು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಇವುಗಳಿಗೆ ತಕ್ಕ ಪಾನದ್ರವ್ಯಾರ್ಪಣೆಗಳನ್ನು ಮಾಡಬೇಕು. ಅವು ಯಾವುವೆಂದರೆ: ಒಂದು ಹೋರಿಯೊಡನೆ ಮೂರು ಸೇರು ದ್ರಾಕ್ಷಾರಸವನ್ನೂ ಟಗರಿನೊಡನೆ ಎರಡು ಸೇರು ದ್ರಾಕ್ಷಾರಸವನ್ನೂ ಕುರಿಮರಿಯೊಡನೆ ಒಂದೂವರೆ ಸೇರು ದ್ರಾಕ್ಷಾರಸವನ್ನೂ ಅರ್ಪಿಸಬೇಕು. ವರ್ಷದ ಪ್ರತಿತಿಂಗಳು ಅಮಾವಾಸ್ಯೆಯಲ್ಲಿ ಅರ್ಪಿಸತಕ್ಕ ಮಾಸಿಕ ಸರ್ವಾಂಗಹೋಮಗಳು ಇವುಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 28:14
11 ತಿಳಿವುಗಳ ಹೋಲಿಕೆ  

ಕುರಿಮರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಒಂದು ಭಾಗ ಹಿಟ್ಟನ್ನೂ, ಯೆಹೋವ ದೇವರಿಗೆ ಸುವಾಸನೆಯ ದಹನಬಲಿಗಾಗಿ ಬೆಂಕಿಯಿಂದ ಮಾಡಿದ ಬಲಿಯೂ ಇದೇ.


ಇದಲ್ಲದೆ ನಿತ್ಯ ದಹನಬಲಿಯ ಹೊರತು, ಯೆಹೋವ ದೇವರಿಗೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನೂ ಸಮರ್ಪಿಸಬೇಕು.


ಪಾನದ ಅರ್ಪಣೆಗಾಗಿ ದಹನಬಲಿಯ ಸಂಗಡ ಒಂದು ಕುರಿಗೋಸ್ಕರ ಒಂದು ಲೀಟರ್ ದ್ರಾಕ್ಷಾರಸವನ್ನು ಅರ್ಪಿಸಬೇಕು.


ನೀವು ಆ ಹೋರಿಯೊಂದಿಗೆ ಧಾನ್ಯ ಸಮರ್ಪಣೆಯಾಗಿ ಸುಮಾರು ಎರಡು ಲೀಟರ್ ಓಲಿವ್ ಎಣ್ಣೆ ಬೆರೆಸಿದ ಐದು ಕಿಲೋಗ್ರಾಂ ಗೋಧಿ ಹಿಟ್ಟನ್ನು ಅರ್ಪಿಸಬೇಕು.


ಒಂದು ಕುರಿಮರಿಯೊಂದಿಗೆ ಪರಿಶುದ್ಧ ಸ್ಥಳದಲ್ಲಿ ಒಂದು ಲೀಟರ್ ಹುದುಗಿದ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಯೆಹೋವ ದೇವರಿಗೋಸ್ಕರ ಸುರಿಯಬೇಕು.


ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,


ಅದರ ತರುವಾಯ ಅವರು ನಿತ್ಯ ದಹನಬಲಿ, ಅಮಾವಾಸ್ಯೆ ಬಲಿ, ಯೆಹೋವ ದೇವರ ಎಲ್ಲಾ ಪರಿಶುದ್ಧ ಹಬ್ಬಗಳಲ್ಲಿಯೂ ಜನರು ಅರ್ಪಿಸುವ ಸ್ವಂತ ಇಚ್ಛೆಯಿಂದ ತಂದ ಬಲಿದಾನಗಳ ಬಲಿಯನ್ನೂ ಸಮರ್ಪಿಸಿದರು.


ಇನ್ನು ವ್ಯರ್ಥವಾದ ಕಾಣಿಕೆಗಳನ್ನು ತರಬೇಡಿರಿ! ನಿಮ್ಮ ಧೂಪವು ನನಗೆ ಅಸಹ್ಯ. ಅಮಾವಾಸ್ಯೆಗಳು, ಸಬ್ಬತ್ ದಿನಗಳು, ಸಭೆಗಳು ಕೂಡುವುದು ಇವು ಬೇಡ. ದುಷ್ಟತನದಿಂದ ಕೂಡಿದ ವಿಶೇಷ ಕೂಟವನ್ನು ಸಹ ಸಹಿಸಲಾರೆನು.


ಇದಲ್ಲದೆ ಎತ್ತರ ಸ್ಥಳಗಳಲ್ಲಿ ಅರ್ಪಿಸುವವನನ್ನೂ, ತನ್ನ ದೇವರುಗಳಿಗೆ ಧೂಪಸುಡುವವನನ್ನೂ ಮೋವಾಬಿನಲ್ಲಿ ನಿಲ್ಲಿಸಿಬಿಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.


ರಾಜಕುಮಾರನು ಯೆಹೋವ ದೇವರಿಗೆ ಸಬ್ಬತ್ ದಿನದಲ್ಲಿ ಪೂರ್ಣಾಂಗವಾದ ಆರು ಕುರಿಮರಿಗಳು, ಪೂರ್ಣಾಂಗವಾದ ಒಂದು ಟಗರು ದಹನಬಲಿಯಾಗಿ ಅರ್ಪಿಸಬೇಕು.


ಯಾಜಕರೇ, ಗೋಣಿತಟ್ಟು ಕಟ್ಟಿಕೊಂಡು ಗೋಳಾಡಿರಿ. ಬಲಿಪೀಠದ ಸೇವಕರೇ, ಗೋಳಾಡಿರಿ. ನನ್ನ ದೇವರ ಸೇವಕರೇ, ಬಂದು ಗೋಣಿತಟ್ಟಿನಲ್ಲಿ ರಾತ್ರಿಯೆಲ್ಲಾ ಕಳೆಯಿರಿ. ಏಕೆಂದರೆ, ಧಾನ್ಯ ಸಮರ್ಪಣೆಯೂ ಪಾನಾರ್ಪಣೆಯೂ ನಿಮ್ಮ ದೇವರ ಆಲಯದಿಂದ ನಿಂತುಹೋಗಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು