Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 27:21 - ಕನ್ನಡ ಸಮಕಾಲಿಕ ಅನುವಾದ

21 ಅವನು ಯಾಜಕನಾದ ಎಲಿಯಾಜರನ ಮುಂದೆ ನಿಲ್ಲಬೇಕು. ಎಲಿಯಾಜರನು ಯೆಹೋವ ದೇವರ ಮುಂದೆ ಊರೀಮ್ ನ್ಯಾಯದ ಪ್ರಕಾರ ಅವನಿಗೋಸ್ಕರ ವಿಚಾರಣೆಯನ್ನು ಮಾಡಬೇಕು. ಯೆಹೋಶುವನ ಆಜ್ಞೆಯ ಪ್ರಕಾರವೇ ಅವನು ಮತ್ತು ಅವನ ಸಂಗಡ ಇರುವ ಸಮಸ್ತ ಇಸ್ರಾಯೇಲರ ಸಮೂಹವೂ ಹೊರಡಬೇಕು ಹಾಗು ಹಿಂದಿರುಗಬೇಕು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಯೆಹೋವನ ಚಿತ್ತವನ್ನು ತಿಳಿದುಕೊಳ್ಳುವುದಕ್ಕೆ ಅವನು ಮಹಾಯಾಜಕನಾದ ಎಲ್ಲಾಜಾರನ ಹತ್ತಿರ ಬರಬೇಕು. ಎಲ್ಲಾಜಾರನು ಯೆಹೋವನ ಸನ್ನಿಧಿಯಲ್ಲಿ ಊರೀಮಿನ ನ್ಯಾಯದ ಪ್ರಕಾರ ಅವನಿಗೋಸ್ಕರ ವಿಚಾರಣೆಯನ್ನು ಮಾಡಬೇಕು. ಯೆಹೋಶುವನೂ ಮತ್ತು ಇಸ್ರಾಯೇಲರ ಸರ್ವಸಮೂಹದವರೂ ಅವನ ಮಾತಿನಂತೆ ಹೊರಡಬೇಕು, ಹಿಂತಿರುಗಬೇಕು, ಅವನ ಮಾತಿನಂತೆ ನಡೆಯಬೇಕು.” ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ದೈವೇಚ್ಛೆಯನ್ನು ತಿಳಿದುಕೊಳ್ಳಲು ಅವನು ಮಹಾಯಾಜಕ ಎಲ್ಲಾಜಾರನ ಹತ್ತಿರ ಬರಬೇಕು. ಎಲ್ಲಾಜಾರನು ಸರ್ವೇಶ್ವರನ ಸನ್ನಿಧಿಯಲ್ಲಿ ‘ಊರಿಮ್’ ಎಂಬ ವಸ್ತುವಿನ ಮೂಲಕ ಅವನ ಪರವಾಗಿ ವಿಚಾರಿಸುವನು, ಯೆಹೋಶುವನು ಮತ್ತು ಇಸ್ರಾಯೇಲ್ ಸಮಾಜದವರೆಲ್ಲರು ಅವನ ಮಾತಿನಂತೆ ಹೊರಡಬೇಕು ಹಾಗು ಹಿಂದಿರುಗಬೇಕು,” ಎಂದು ಆಜ್ಞಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 [ಯೆಹೋವನ ಚಿತ್ತವನ್ನು ತಿಳುಕೊಳ್ಳುವದಕ್ಕೆ] ಅವನು ಮಹಾಯಾಜಕನಾದ ಎಲ್ಲಾಜಾರನ ಹತ್ತಿರ ಬರಬೇಕು. ಎಲ್ಲಾಜಾರನು ಯೆಹೋವನ ಸನ್ನಿಧಿಯಲ್ಲಿ ಊರೀಮ್ ಎಂಬ ವಸ್ತುವಿನ ಮೂಲಕ ಅವನಿಗೋಸ್ಕರ ವಿಚಾರಣೆಮಾಡುವನು. ಯೆಹೋಶುವನೂ ಇಸ್ರಾಯೇಲ್ಯರ ಸರ್ವಸಮೂಹದವರೂ ಅವನ ಮಾತಿನಂತೆ ಹೊರಡಲೂಬೇಕು ಬರಲೂಬೇಕು ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಯೆಹೋಶುವನು ತೀರ್ಮಾನವೇನಾದರೂ ಮಾಡಬೇಕಾದರೆ ಅವನು ಯಾಜಕನಾದ ಎಲ್ಲಾಜಾರನ ಬಳಿಗೆ ಹೋಗಲಿ, ಎಲ್ಲಾಜಾರನು ಊರೀಮಿನಿಂದ ಯೆಹೋವನ ಉತ್ತರವನ್ನು ಪಡೆಯುವನು. ಆಗ ಯೆಹೋಶುವನೂ ಇಸ್ರೇಲರೆಲ್ಲರೂ ದೇವರು ಹೇಳುವ ಕಾರ್ಯಗಳನ್ನು ಮಾಡುವರು. ಆತನು, ‘ಯುದ್ಧಕ್ಕೆ ಹೋಗಿರಿ’ ಎಂದು ಹೇಳಿದರೆ ಅವರು ಯುದ್ಧಕ್ಕೆ ಹೋಗುವರು. ಆತನು, ‘ಮನೆಗೆ ಹೋಗಿರಿ’ ಎಂದು ಹೇಳಿದರೆ ಅವರು ಮನೆಗೆ ಹೋಗುವರು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 27:21
23 ತಿಳಿವುಗಳ ಹೋಲಿಕೆ  

ಸೌಲನು ಯೆಹೋವ ದೇವರನ್ನು ಕೇಳಿಕೊಂಡಾಗ, ಯೆಹೋವ ದೇವರು ಅವನಿಗೆ ಸ್ವಪ್ನಗಳಿಂದಲಾದರೂ, ಊರೀಮಿನಿಂದಲಾದರೂ, ಪ್ರವಾದಿಗಳಿಂದಲಾದರೂ ಉತ್ತರ ಕೊಡಲಿಲ್ಲ.


ಆಗ ಇಸ್ರಾಯೇಲರು ಅವರ ಆಹಾರದಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಅವರು ಯೆಹೋವ ದೇವರಿಂದ ಆಲೋಚನೆಯನ್ನು ಕೇಳಲಿಲ್ಲ.


ನಿರ್ಣಯವನ್ನು ತಿಳಿಸುವ ಎದೆಪದಕದಲ್ಲಿ ಊರೀಮ್ ಮತ್ತು ತುಮ್ಮೀಮ್‌ಗಳನ್ನು ಇಡಬೇಕು. ಆರೋನನು ಯೆಹೋವ ದೇವರ ಸನ್ನಿಧಿಗೆ ಬರುವ ಸಮಯದಲ್ಲಿ ಅವು ಅವನ ಹೃದಯದ ಮೇಲೆ ಇರಬೇಕು. ಹೀಗೆ ಆರೋನನು ಯೆಹೋವ ದೇವರ ಮುಂದೆ ಯಾವಾಗಲೂ ಇಸ್ರಾಯೇಲರ ನಿರ್ಣಯಗಳನ್ನು ತನ್ನ ಹೃದಯದ ಮೇಲೆ ಹೊರಬೇಕು.


ಆದ್ದರಿಂದ ಊರೀಮ್, ತುಮ್ಮೀಮ್ ಮುಖಾಂತರ ದೈವನಿರ್ಣಯವನ್ನು ತಿಳಿಸಬಲ್ಲ ಯಾಜಕನು ದೊರೆಯುವ ತನಕ, ಇವರು ಮಹಾಪರಿಶುದ್ಧವಾದ ಪದಾರ್ಥಗಳನ್ನು ತಿನ್ನಬಾರದೆಂದು ರಾಜ್ಯಪಾಲನು ಆದೇಶಿಸಿದನು.


ಆದ್ದರಿಂದ ಊರೀಮ್, ತುಮ್ಮೀಮ್ ಮುಖಾಂತರ ದೈವನಿರ್ಣಯವನ್ನು ತಿಳಿಸಬಲ್ಲ ಯಾಜಕನು ದೊರೆಯುವ ತನಕ, ಇವರು ಮಹಾಪರಿಶುದ್ಧವಾದ ಪದಾರ್ಥಗಳನ್ನು ತಿನ್ನಬಾರದೆಂದು ರಾಜ್ಯಪಾಲನು ಆದೇಶಿಸಿದನು.


ಆಗ ದಾವೀದನು ಅಹೀಮೆಲೆಕನ ಮಗ ಅಬಿಯಾತರನೆಂಬ ಯಾಜಕನಿಗೆ, “ನೀನು ದಯಮಾಡಿ ಏಫೋದನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದನು. ಹಾಗೆಯೇ ಅಬ್ಯತಾರನು ಏಫೋದನ್ನು ದಾವೀದನ ಬಳಿಗೆ ತಂದನು.


ಸೌಲನು ತನಗೆ ಕೇಡನ್ನು ಮಾಡಲು ಗುಟ್ಟಾಗಿ ಯೋಚಿಸುತ್ತಿದ್ದಾನೆಂದು ದಾವೀದನು ತಿಳಿದಿದ್ದರಿಂದ ಯಾಜಕನಾದ ಅಬಿಯಾತರನಿಗೆ, “ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ,” ಎಂದನು.


ಇಸ್ರಾಯೇಲರು ಯೆಹೋವ ದೇವರ ಬಳಿಗೆ ಹೋಗಿ, ಅವರ ಮುಂದೆ ಸಂಜೆಯವರೆಗೆ ಅತ್ತು, “ನಮ್ಮ ಸಹೋದರರಾದ ಬೆನ್ಯಾಮೀನ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗಬೇಕೋ?” ಎಂದು ಯೆಹೋವ ದೇವರನ್ನು ಕೇಳಿದರು. ಅದಕ್ಕೆ ಯೆಹೋವ ದೇವರು, “ಅವರ ಮೇಲೆ ಹೋಗಿರಿ,” ಎಂದರು. ಎರಡನೆಯ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರ ಬಳಿಗೆ ಬಂದರು.


ಆಗ ಇಸ್ರಾಯೇಲರು ಬೇತೇಲಿಗೆ ಹೋಗಿ, ತಮ್ಮಲ್ಲಿ ಮೊದಲು ಬೆನ್ಯಾಮೀನ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗಬೇಕಾದವರು ಯಾರೆಂದು ದೇವರನ್ನು ಕೇಳಿದರು. ಅದಕ್ಕೆ ಯೆಹೋವ ದೇವರು, “ಯೆಹೂದ ಗೋತ್ರದವರು ಮೊದಲು ಹೋಗಬೇಕು,” ಎಂದರು.


ಯೆಹೋಶುವನು ಮರಣ ಹೊಂದಿದ ಬಳಿಕ ಇಸ್ರಾಯೇಲರು, “ಕಾನಾನ್ಯರೊಡನೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ಯೆಹೋವ ದೇವರನ್ನು ಕೇಳಿದರು.


ಲೇವಿ ಕುಲದ ವಿಷಯದಲ್ಲಿ ಹೇಳಿದ್ದೇನೆಂದರೆ: “ನಿಮ್ಮ ನಿರ್ಣಯವನ್ನು ತಿಳಿಸುವ ಊರೀಮ್, ತುಮ್ಮೀಮ್ ಎಂಬ ವಸ್ತುಗಳು ನಿಮ್ಮ ಭಕ್ತರಾದ ಇವರ ವಶದಲ್ಲಿ ಉಂಟಷ್ಟೆ. ನೀವು ಮಸ್ಸದಲ್ಲಿ ಅವರನ್ನು ಪರೀಕ್ಷಿಸಿದಿರಿ. ಮೆರೀಬಾದಲ್ಲಿ ನೀರು ಹೊರಟ ಸ್ಥಳದ ಹತ್ತಿರ ಅವರೊಡನೆ ವಿವಾದ ಮಾಡಿದಿರಿ.


ಅವನು ಅವರ ಮುಂದಾಗಿ ಹೋಗಲಿ, ಅವರ ಮುಂದಾಗಿ ಬರಲಿ. ಅವರನ್ನು ಕರೆದುಕೊಂಡು ಹೋಗಲಿ, ಕರೆದುಕೊಂಡು ಬರಲಿ. ಯೆಹೋವ ದೇವರ ಈ ಜನಸಮೂಹವು ಕುರುಬನಿಲ್ಲದ ಕುರಿಗಳ ಹಾಗೆ ಇರಬಾರದು,” ಎಂದನು.


ಅವನ ಮೇಲೆ ಎದೆಪದಕವನ್ನು ಹಾಕಿ, ಆ ಎದೆಪದಕದಲ್ಲಿ ಊರೀಮ್ ಮತ್ತು ತುಮ್ಮೀಮ್ ಇವುಗಳನ್ನೂ ಸಹ ಹಾಕಿದನು.


ಮೋಶೆಯು ಅವರ ವ್ಯಾಜ್ಯವನ್ನು ಯೆಹೋವ ದೇವರ ಮುಂದೆ ತಂದನು.


ಇಸ್ರಾಯೇಲರ ಸಮಸ್ತ ಸಭೆಯು ಅವನಿಗೆ ವಿಧೇಯರಾಗುವಂತೆ, ನಿನಗಿರುವ ಗೌರವವನ್ನು ಅವನಿಗೆ ಕೊಡಬೇಕು.


ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನು ಮಾಡಿ, ಯೆಹೋಶುವನನ್ನು ತೆಗೆದುಕೊಂಡು, ಅವನನ್ನು ಯಾಜಕನಾದ ಎಲಿಯಾಜರನ ಮುಂದೆಯೂ, ಸಮಸ್ತ ಸಭೆಯ ಮುಂದೆಯೂ ನಿಲ್ಲಿಸಿ,


ಸೌಲನು ಯಾಜಕನ ಸಂಗಡ ಇನ್ನೂ ಮಾತನಾಡುತ್ತಿರುವಾಗ, ಫಿಲಿಷ್ಟಿಯರ ದಂಡಿನಲ್ಲಿ ಕೋಲಾಹಲವು ಹೆಚ್ಚಾಯಿತು. ಆದ್ದರಿಂದ ಸೌಲನು ಯಾಜಕನಿಗೆ, “ನಿನ್ನ ಕೈ ಹಿಂದೆ ತೆಗೆದುಕೋ,” ಎಂದನು.


ದಾವೀದನ ದಿವಸಗಳಲ್ಲಿ ವರ್ಷದಿಂದ ವರ್ಷಕ್ಕೆ ಮೂರು ವರ್ಷ ಬರ ಉಂಟಾಗಿತ್ತು. ಆಗ ದಾವೀದನು ಯೆಹೋವ ದೇವರನ್ನು ವಿಚಾರಿಸಿದನು. ಆಗ ಯೆಹೋವ ದೇವರು, “ಸೌಲನು ಗಿಬ್ಯೋನ್ಯರನ್ನು ಕೊಂದುಹಾಕಿದ್ದರಿಂದ ಅವನಿಗೋಸ್ಕರವೂ ರಕ್ತಾಪರಾಧವುಳ್ಳ ಅವನ ಮನೆಗೋಸ್ಕರವೂ ಈ ಬರ ಬಂದಿದೆ,” ಎಂದು ಹೇಳಿದರು.


“ಯಾಜಕನ ತುಟಿಗಳು ತಿಳುವಳಿಕೆಯನ್ನು ಕಾಪಾಡ ತಕ್ಕದ್ದು. ದೈವ ಬೋಧನೆಯನ್ನು ಅವನ ಬಾಯಲ್ಲಿ ಹುಡುಕತಕ್ಕದ್ದು, ಏಕೆಂದರೆ ಅವನು ಸೇನಾಧೀಶ್ವರ ಯೆಹೋವ ದೇವರ ದೂತನು.


ಇವರು ಸಭೆಯ ಗುಡಾರದ ಬಾಗಿಲಿನ ಹತ್ತಿರದಲ್ಲಿದ್ದ ಮೋಶೆ, ಯಾಜಕನಾದ ಎಲಿಯಾಜರ್, ಪ್ರಧಾನರು ಮತ್ತು ಸಮಸ್ತ ಸಭೆಯವರ ಮುಂದೆ ಬಂದು ನಿಂತು ಅವರಿಗೆ,


ನಿಮ್ಮ ದೇವರಾದ ಯೆಹೋವ ದೇವರು ತಾವೇ ನಿಮ್ಮ ಮುಂದೆ ಹೋಗುವರು. ಅವರು ಆ ಜನಾಂಗಗಳನ್ನು ನಿಮ್ಮ ಮುಂದೆ ಸೋಲಿಸುವರು. ನೀವು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವಿರಿ. ಯೆಹೋವ ದೇವರು ಹೇಳಿದ ಪ್ರಕಾರ ಯೆಹೋಶುವನು ನಿಮ್ಮ ಮುಂದೆ ಹೋಗುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು