Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 26:54 - ಕನ್ನಡ ಸಮಕಾಲಿಕ ಅನುವಾದ

54 ಹೆಚ್ಚು ಮಂದಿಯುಳ್ಳ ಗೋತ್ರಕ್ಕೆ ಹೆಚ್ಚಾಗಿಯೂ ಕಡಿಮೆ ಮಂದಿಯುಳ್ಳ ಗೋತ್ರಕ್ಕೆ ಕಡಿಮೆಯಾಗಿಯೂ ಕೊಡು. ಹೀಗೆ ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸೊತ್ತನ್ನು ಹಂಚಿಕೊಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

54 ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ, ಕಡಿಮೆ ಮಂದಿಯುಳ್ಳ ಕುಲಕ್ಕೆ ಕಡಿಮೆಯಾಗಿಯೂ ಕೊಡಬೇಕು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿಯೊಂದು ಕುಲಕ್ಕೆ ಭೂಮಿಯನ್ನು ಸ್ವತ್ತಾಗಿ ಕೊಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

54 ಹೆಚ್ಚುಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಲಕ್ಕೆ ಕಡಿಮೆಯಾಗಿಯೂ ಕೊಡು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿ ಒಂದು ಕುಲಕ್ಕೆ ಭೂಮಿಯನ್ನು ಸೊತ್ತಾಗಿ ಕೊಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

54 ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಲಕ್ಕೆ ಕಡಿಮೆಯಾಗಿಯೂ ಕೊಡಬೇಕು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿಯೊಂದು ಕುಲಕ್ಕೆ ಭೂವಿುಯನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

54 ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಲಕ್ಕೆ ಕಡಿಮೆಯಾಗಿಯೂ ಕೊಡಬೇಕು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿಯೊಂದು ಕುಲಕ್ಕೆ ಭೂಮಿಯನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 26:54
7 ತಿಳಿವುಗಳ ಹೋಲಿಕೆ  

ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟುಹಾಕಿ, ಸ್ವಾಧೀನಮಾಡಿ ಹಂಚಿಕೊಳ್ಳಬೇಕು. ಹೆಚ್ಚಾದವರಿಗೆ ಸೊತ್ತನ್ನು ಹೆಚ್ಚಿಸಿ, ಕಡಿಮೆಯಾದವರಿಗೆ ಸೊತ್ತನ್ನು ಕಡಿಮೆ ಮಾಡಬೇಕು. ಒಬ್ಬೊಬ್ಬನಿಗೆ ಚೀಟು ಎಲ್ಲಿ ಬೀಳುವುದೋ, ಅದೇ ಅವನಿಗಾಗಬೇಕು. ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು.


ಯೋಸೇಫನ ಸಂತತಿಯರು ಯೆಹೋಶುವನಿಗೆ, “ಯೆಹೋವ ದೇವರು ನಮ್ಮನ್ನು ಈವರೆಗೂ ಆಶೀರ್ವದಿಸುತ್ತಾ ಬಂದದ್ದರಿಂದ, ನಾವು ಮಹಾ ಜನಾಂಗವಾಗಿದ್ದೇವೆ. ಹೀಗಿರುವಾಗ ನೀವು ನಮಗೆ ಸೊತ್ತಾಗಿ ಒಂದೇ ಒಂದು ಭಾಗವನ್ನು ಮಾತ್ರ ಪಾಲನ್ನಾಗಿ ಕೊಟ್ಟಿದ್ದು ಏಕೆ?” ಎಂದು ಕೇಳಿದರು.


ಆದ್ದರಿಂದ ನಮಗೆ ನಿಮ್ಮ ದೃಷ್ಟಿಯಲ್ಲಿ ದಯೆಯು ಸಿಕ್ಕಿದ್ದಾದರೆ, ಈ ದೇಶವನ್ನು ನಿಮ್ಮ ಸೇವಕರಿಗೆ ಸ್ವಾಸ್ತ್ಯಕ್ಕಾಗಿ ಕೊಡಬೇಕು. ನಮ್ಮನ್ನು ಯೊರ್ದನ್ ನದಿಯ ಆಚೆಗೆ ತೆಗೆದುಕೊಂಡು ಹೋಗಬೇಡಿರಿ,” ಎಂದರು.


“ಅಟಾರೋತ್, ದೀಬೋನ್, ಯಜ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬವುಗಳು,


“ಇವರಿಗೆ ನಾಡನ್ನು ಹೆಸರುಗಳ ಲೆಕ್ಕದ ಪ್ರಕಾರ ಸೊತ್ತಾಗಿ ಹಂಚಿಕೊಡು.


ನೀವು ಇಸ್ರಾಯೇಲರ ಸ್ವಾಧೀನದಿಂದ ಕೊಡುವ ಪಟ್ಟಣಗಳನ್ನು ಹೆಚ್ಚಾದವರ ಕಡೆಯಿಂದ ಹೆಚ್ಚಾಗಿ, ಕಡಿಮೆಯಾದವರ ಕಡೆಯಿಂದ ಕಡಿಮೆಯಾಗಿ ತೆಗೆದುಕೊಳ್ಳಬೇಕು. ಒಬ್ಬೊಬ್ಬನು ತಾನು ಹೊಂದುವ ಸೊತ್ತಿಗನುಸಾರವಾಗಿ ತನ್ನ ಪಟ್ಟಣಗಳೊಳಗಿಂದ ಲೇವಿಯರಿಗೆ ಕೊಡಬೇಕು,” ಎಂದು ಹೇಳಿದರು.


ಸಿಮೆಯೋನನ ಗೋತ್ರದವರಿಗೆ ಬಾಧ್ಯತೆ ಯೆಹೂದ ಗೋತ್ರದವರ ಭಾಗದಿಂದ ಸಿಕ್ಕಿತು. ಏಕೆಂದರೆ ಯೆಹೂದ ಗೋತ್ರದ ಭಾಗವು ಅವರಿಗೆ ಹೆಚ್ಚಾಗಿದ್ದ ಕಾರಣ, ಸಿಮೆಯೋನನ ಗೋತ್ರದವರು ಯೆಹೂದ ಗೋತ್ರದವರ ಎಲ್ಲೆಯ ಒಳಗಿಂದಲೇ ತಮ್ಮ ಪಾಲನ್ನು ಹೊಂದಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು