Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 26:5 - ಕನ್ನಡ ಸಮಕಾಲಿಕ ಅನುವಾದ

5 ಇಸ್ರಾಯೇಲನ ಚೊಚ್ಚಲ ಮಗ ರೂಬೇನನೂ, ರೂಬೇನನ ಮಕ್ಕಳೂ; ಹನೋಕನೂ, ಇವನಿಂದ ಹನೋಕ್ಯರ ಕುಟುಂಬ; ಪಲ್ಲೂವಿನಿಂದ ಪಲ್ಲೂವಿಯರ ಕುಟುಂಬ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಇಸ್ರಾಯೇಲನ ಚೊಚ್ಚಲು ಮಗನಾದ ರೂಬೇನನಿಂದುಂಟಾದ ಕುಟುಂಬಗಳು ಯಾವುವೆಂದರೆ: ಹನೋಕನ ವಂಶಸ್ಥರಾದ ಹನೋಕ್ಯರು, ಪಲ್ಲೂವಿನ ವಂಶಸ್ಥರಾದ ಪಲ್ಲೂವಿನವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಯಕೋಬನ ಜೇಷ್ಠ ಪುತ್ರನಾದ ರೂಬೇನನ ವಂಶಸ್ಥರು ಇವರು: ಹನೋಕನಿಂದ ಹನೋಕ್ಯರು, ಪಲ್ಲೂವಿನಿಂದ ಪಲ್ಲೂವಿನವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಇಸ್ರಾಯೇಲನ ಚೊಚ್ಚಲುಮಗನಾದ ರೂಬೇನನಿಂದುಂಟಾದ ಕುಟುಂಬಗಳು ಯಾವವಂದರೆ - ಹನೋಕನ ವಂಶಸ್ಥರಾದ ಹನೋಕ್ಯರು, ಪಲ್ಲೂವಿನ ವಂಶಸ್ಥರಾದ ಪಲ್ಲೂವಿನವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ರೂಬೇನ್ ಕುಲದ ಜನರು: (ರೂಬೇನನು ಇಸ್ರೇಲನ ಚೊಚ್ಚಲ ಮಗನು.) ಹನೋಕನ ಕುಟುಂಬದವರಾದ ಹನೋಕ್ಯರು; ಪಲ್ಲೂವಿನ ಕುಟುಂಬದವರಾದ ಪಲ್ಲೂವಿನವರು;

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 26:5
11 ತಿಳಿವುಗಳ ಹೋಲಿಕೆ  

ಇಸ್ರಾಯೇಲಿನ ಚೊಚ್ಚಲ ಮಗ ರೂಬೇನನ ಪುತ್ರರು: ಹನೋಕ್, ಪಲ್ಲೂ, ಹೆಚ್ರೋನನು, ಕರ್ಮೀ.


ಇಸ್ರಾಯೇಲಿನ ಚೊಚ್ಚಲಮಗನಾದ ರೂಬೇನನ ಪುತ್ರರು ಇವರು: ಅವನು ಚೊಚ್ಚಲ ಮಗನಾಗಿದ್ದನು. ಆದರೆ ಅವನು ತನ್ನ ತಂದೆಯ ಹಾಸಿಗೆಯನ್ನು ಅಪವಿತ್ರ ಮಾಡಿದ್ದರಿಂದ ಅವನ ಚೊಚ್ಚಲುತನದ ಹಕ್ಕು ಇಸ್ರಾಯೇಲಿನ ಮಗ ಯೋಸೇಫನ ಪುತ್ರರಿಗೆ ಕೊಡಲಾಗಿತ್ತು. ಆದ್ದರಿಂದ ಈ ವಂಶಾವಳಿಯು ಚೊಚ್ಚಲುತನದ ಪ್ರಕಾರ ಬರೆದಿರುವುದಿಲ್ಲ.


ಇಸ್ರಾಯೇಲ್ ಗೋತ್ರಗಳ ಮನೆಯ ಮುಖ್ಯಸ್ಥರು ಇವರೇ: ಇಸ್ರಾಯೇಲನ ಜೇಷ್ಠ ಪುತ್ರನಾದ ರೂಬೇನನ ಪುತ್ರರು: ಹನೋಕ್, ಪಲ್ಲೂ, ಹೆಚ್ರೋನ್, ಕರ್ಮೀ. ಇವರು ರೂಬೇನನ ಗೋತ್ರಗಳ ಮೂಲ ಪುರುಷರು.


ಲೇಯಳು ಗರ್ಭಿಣಿಯಾಗಿ ಮಗನನ್ನು ಹೆತ್ತು, “ನಿಜವಾಗಿ ಯೆಹೋವ ದೇವರು ನನ್ನ ಬಾಧೆಯನ್ನು ನೋಡಿದ್ದಾರೆ. ಆದ್ದರಿಂದ ನನ್ನ ಗಂಡನು ನನ್ನನ್ನು ಪ್ರೀತಿ ಮಾಡುವನು,” ಎಂದು ಹೇಳಿ ಮಗುವಿಗೆ ರೂಬೇನ್ ಎಂದು ಹೆಸರಿಟ್ಟಳು.


ಇಸ್ರಾಯೇಲಿನ ಚೊಚ್ಚಲ ಮಗ ರೂಬೇನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.


“ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ, ಇಪ್ಪತ್ತು ವರ್ಷದವರನ್ನೂ ಅದಕ್ಕೆ ಅಧಿಕವಾದ ಪ್ರಾಯವುಳ್ಳವರನ್ನೂ ಎಣಿಸಬೇಕು.” ಈಜಿಪ್ಟ್ ದೇಶದಿಂದ ಹೊರಟು ಬಂದಿದ್ದ ಇಸ್ರಾಯೇಲರು ಇವರು:


ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಕರ್ಮೀಯಿಂದ ಕರ್ಮೀಯರ ಕುಟುಂಬ.


ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ, ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿ ಬಿಲ್ಹಳ ಸಂಗಡ ಮಲಗಿದನು. ಈ ವಿಷಯ ಇಸ್ರಾಯೇಲನಿಗೆ ತಿಳಿಯಿತು. ಯಾಕೋಬನಿಗೆ ಹನ್ನೆರಡು ಮಂದಿ ಪುತ್ರರು ಇದ್ದರು.


ಅವರಲ್ಲಿ ಲೇಯಳ ಪುತ್ರರು: ಯಾಕೋಬನ ಚೊಚ್ಚಲ ಮಗ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು