Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 26:20 - ಕನ್ನಡ ಸಮಕಾಲಿಕ ಅನುವಾದ

20 ಕುಟುಂಬಗಳ ಪ್ರಕಾರ ಯೆಹೂದನ ಪುತ್ರರು. ಶೇಲಹನಿಂದ ಶೇಲಾನ್ಯರ ಕುಟುಂಬ; ಪೆರೆಚನಿಂದ ಪೆರೆಚ್ಯರ ಕುಟುಂಬ; ಜೆರಹನಿಂದ ಜೆರಹಿಯರ ಕುಟುಂಬ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಯೆಹೂದನ ಕುಲದಲ್ಲಿ ಉಳಿದ ಕುಟುಂಬಗಳು ಯಾವುವೆಂದರೆ: ಶೇಲಹನ ವಂಶಸ್ಥರಾದ ಶೇಲಾನ್ಯರು, ಪೆರೆಹನ ವಂಶಸ್ಥರಾದ ಪೆರೆಚ್ಯರು, ಜೆರಹನ ವಂಶಸ್ಥರಾದ ಜೆರಹಿಯರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಯೆಹೂದ ಕುಲದಲ್ಲಿ ಉಳಿದ ಕುಟು೦ಬಗಳು ಇವು - ಶೆಲಹನಿ೦ದ ಶೇಲಾನ್ಯರು, ಪೆರೆಚನಿ೦ದ ಪೆರೆಚ್ಯರು, ಹಾಗು ಜೆರಹನಿ೦ದ ಜೆರಹಿಯರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಯೆಹೂದ ಕುಲದಲ್ಲಿ ಉಳಿದ ಕುಟುಂಬಗಳು ಯಾವವಂದರೆ - ಶೇಲಹನ ವಂಶಸ್ಥರಾದ ಶೇಲಾನ್ಯರು, ಪೆರೆಚನ ವಂಶಸ್ಥರಾದ ಪೆರೆಚ್ಯರು, ಜೆರಹನ ವಂಶಸ್ಥರಾದ ಜೆರಹಿಯರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 26:20
18 ತಿಳಿವುಗಳ ಹೋಲಿಕೆ  

ಯೆಹೂದನ ಮಗ ಜೆರಹನ ಮಕ್ಕಳಲ್ಲಿ ಒಬ್ಬನಾಗಿರುವ ಮೆಷೇಜಬೇಲನ ಮಗನಾದ ಪೆತಹ್ಯನು ಜನರಿಗೋಸ್ಕರ ಸಕಲ ಕಾರ್ಯಗಳಲ್ಲಿ ಅರಸನ ಪ್ರತಿನಿಧಿಯಾಗಿದ್ದನು.


ಯೆಹೂದನ ಮಕ್ಕಳು: ಏರ್, ಓನಾನ್, ಶೇಲಹ, ಪೆರೆಚ್ ಮತ್ತು ಜೆರಹ. ಆದರೆ ಏರನೂ, ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್ ಮತ್ತು ಹಾಮೂಲ್ ಎಂಬುವರು.


ನಹಶೋನನು ಅಮ್ಮೀನಾದಾಬನ ಮಗನು, ಅಮ್ಮೀನಾದಾಬನು ಆರ್ನೈಯನ ಮಗನು, ಆರ್ನೈಯನು ಹೆಚ್ರೋನನ ಮಗನು, ಹೆಚ್ರೋನನು ಪೆರೆಸನ ಮಗನು, ಪೆರೆಸನು ಯೂದನ ಮಗನು,


ಯೂದನು ಪೆರೆಸ ಮತ್ತು ಜೆರಹನ ತಂದೆ, ತಾಮಾರಳು ಇವರ ತಾಯಿ, ಪೆರೆಸನು ಹೆಚ್ರೋನನ ತಂದೆ, ಹೆಚ್ರೋನನು ಅರಾಮನ ತಂದೆ,


ಯೆರೂಸಲೇಮಿನಲ್ಲಿ ವಾಸವಾಗಿರುವ ಪೆರೆಚನ ಪುತ್ರರೆಲ್ಲಾ 468 ಮಂದಿ. ಇವರು ಪರಾಕ್ರಮಶಾಲಿಗಳು.


ಯೆರೂಸಲೇಮಿನಲ್ಲಿ ಯೆಹೂದ ಮಕ್ಕಳಲ್ಲಿಯೂ, ಬೆನ್ಯಾಮೀನ್ಯರಲ್ಲಿಯೂ ಕೆಲವರು ವಾಸವಾಗಿದ್ದರು. ಯೆಹೂದನ ವಂಶಜರಲ್ಲಿ: ಒಬ್ಬನು ಅತಾಯನು, ಇವನು ಉಜ್ಜೀಯನ ಮಗ, ಜೆಕರ್ಯನ ಮಗ, ಅಮರ್ಯನ ಮಗ, ಶೆಫಟ್ಯನ ಮಗ, ಮಹಲಲೇಲನ ಮಗ, ಇವನು ಪೆರೆಚ್ ಸಂತಾನದವನು.


ಯೆಹೂದನ ಮಗ ಶೇಲಹನ ಪುತ್ರರು: ಲೇಕಾಹ್ಯನ ತಂದೆ ಏರನು, ಮಾರೇಷನ ತಂದೆ ಲದ್ದ; ಬೇತ್ ಅಷ್ಬೇಯ ಪಟ್ಟಣದಲ್ಲಿ ವಾಸಿಸಿದ ನೇಕಾರರ ಕುಟುಂಬಗಳವರು,


ಆಕೆಯು ವಿಧವೆಯ ವಸ್ತ್ರಗಳನ್ನು ತೆಗೆದಿಟ್ಟು, ಮುಸುಕುಹಾಕಿ ಮುಚ್ಚಿಕೊಂಡು, ತಿಮ್ನಾ ಊರಿನ ಮಾರ್ಗದಲ್ಲಿರುವ ಏನಯಿಮೂರಿನ ಬಹಿರಂಗ ಸ್ಥಳದಲ್ಲಿ ಕೂತುಕೊಂಡಳು. ಏಕೆಂದರೆ ಶೇಲಹನು ದೊಡ್ಡವನಾಗಿದ್ದರೂ ತನ್ನನ್ನು ಅವನಿಗೆ ಹೆಂಡತಿಯಾಗಿ ಕೊಡಲಿಲ್ಲವೆಂದು ಹಾಗೆ ಮಾಡಿದಳು.


ಆಗ ಯೆಹೂದನು ತನ್ನ ಸೊಸೆ ತಾಮಾರಳಿಗೆ, “ನನ್ನ ಮಗ ಶೇಲಹನು ದೊಡ್ಡವನಾಗುವವರೆಗೆ ವಿಧವೆಯಾಗಿದ್ದು, ನಿನ್ನ ತಂದೆಯ ಮನೆಯಲ್ಲಿರು,” ಎಂದನು. ಏಕೆಂದರೆ ಇವನು ಸಹ ತನ್ನ ಸಹೋದರರ ಹಾಗೆ ಸತ್ತಾನೆಂದು ಅಂದುಕೊಂಡನು. ತಾಮಾರಳಾದರೋ ಹೋಗಿ ತನ್ನ ತಂದೆಯ ಮನೆಯಲ್ಲಿ ವಾಸಮಾಡಿದಳು.


ಆಕೆಯು ಮತ್ತೊಂದು ಸಾರಿ ಮಗನನ್ನು ಹೆತ್ತು, ಅವನಿಗೆ ಶೇಲಹ ಎಂದು ಹೆಸರಿಟ್ಟಳು. ಆಕೆಯು ಅವನನ್ನು ಹೆತ್ತಾಗ, ಯೆಹೂದನು ಕೆಜೀಬಿನಲ್ಲಿ ಇದ್ದನು.


ಯೂದ ಕುಲದಿಂದ ಮುದ್ರೆಹಾಕಿಸಿಕೊಂಡವರು 12,000, ರೂಬೇನ್ ಕುಲದಿಂದ 12,000, ಗಾದ್ ಕುಲದಿಂದ 12,000,


“ಯೆಹೂದನೇ, ನಿನ್ನ ಸಹೋದರರು ನಿನ್ನನ್ನು ಹೊಗಳುವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವುದು. ನಿನ್ನ ತಂದೆಯ ಮಕ್ಕಳು ನಿನಗೆ ಅಡ್ಡಬೀಳುವರು.


ಪೆರೆಚನ ಪುತ್ರರು, ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ. ಹಾಮೂಲನಿಂದ ಹಾಮೂಲ್ಯರು ಕುಟುಂಬ


ಯೆಹೂದನ ಮಗನಾದ ಪೆರೆಚನ ಮಕ್ಕಳಲ್ಲಿ ಒಬ್ಬನಾದ ಬಾನೀಯ ಮಗನಾದ ಇಮ್ರಿಯು, ಇವನ ಮಗನಾದ ಒಮ್ರಿ, ಇವನ ಮಗನು ಅಮ್ಮೀಹೂದನು, ಇವನ ಮಗನು ಉತೈ.


ಶೇಲಾಹನರಲ್ಲಿ ಚೊಚ್ಚಲಮಗನಾದ ಅಸಾಯನು, ಅವನ ಪುತ್ರರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು