Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 25:7 - ಕನ್ನಡ ಸಮಕಾಲಿಕ ಅನುವಾದ

7 ಕೂಡಲೆ ಮಾಹಾಯಾಜಕ ಆರೋನನ ಮಗನಾಗಿದ್ದ ಎಲಿಯಾಜರನ ಮಗ ಫೀನೆಹಾಸನು ಅದನ್ನು ನೋಡಿ, ಜನರ ಮಧ್ಯದಿಂದ ಎದ್ದು, ತನ್ನ ಕೈಯಲ್ಲಿ ಈಟಿಯನ್ನು ಹಿಡಿದುಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಕೂಡಲೆ ಮಹಾಯಾಜಕನಾದ ಆರೋನನ ಮೊಮ್ಮಗನೂ, ಎಲ್ಲಾಜಾರನ ಮಗನಾದ ಫೀನೆಹಾಸನು ಸಭೆಯ ಮಧ್ಯದಲ್ಲಿ ಎದ್ದು ಈಟಿಯನ್ನು ಕೈಯಲ್ಲಿ ಹಿಡಿದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಕೂಡಲೆ ಮಹಾಯಾಜಕ ಆರೋನನ ಮೊಮ್ಮಗನೂ ಹಾಗು ಎಲ್ಲಾಜಾರನ ಮಗನೂ ಆದ ಫೀನೆಹಾಸನು ಸಭೆಯ ನಡುವೆಯಿಂದೆದ್ದು ಈಟಿಯನ್ನು ಕೈಗೆ ತೆಗೆದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಕೂಡಲೆ ಮಾಹಾಯಾಜಕ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಸಭೆಯ ನಡುವೆಯಿಂದೆದ್ದು ಈಟಿಯನ್ನು ಕೈಯಲ್ಲಿ ಹಿಡಿದು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಕೂಡಲೇ ಯಾಜಕನಾಗಿದ್ದ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಸಭೆಯ ನಡುವೆಯಿಂದೆದ್ದು ಈಟಿಯನ್ನು ತೆಗೆದುಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 25:7
12 ತಿಳಿವುಗಳ ಹೋಲಿಕೆ  

ಆರೋನನ ಮಗ ಎಲಿಯಾಜರನು ಪೂಟಿಯೇಲನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಯಾದನು. ಆಕೆಯು ಅವನಿಗೆ ಫೀನೆಹಾಸನನ್ನು ಹೆತ್ತಳು. ಗೋತ್ರಗಳ ಪ್ರಕಾರ ಇವರು ಲೇವಿಯರ ಗೋತ್ರಗಳ ಮುಖ್ಯಸ್ಥರು.


ಆಗ ಫೀನೆಹಾಸನು ಎದ್ದು ಬಂದು ದಂಡಿಸಿದ್ದರಿಂದ ವ್ಯಾಧಿ ನಿಂತುಹೋಯಿತು.


ಸೌಲನು ತನ್ನ ಕೈಯಲ್ಲಿ ಈಟಿಯನ್ನು ಹಿಡಿದು, ತನ್ನ ಮನೆಯೊಳಗೆ ಕುಳಿತಿರುವಾಗ, ಯೆಹೋವ ದೇವರಿಂದ ಕಳುಹಿಸಲಾದ ದುರಾತ್ಮವು ಅವನ ಮೇಲೆ ಬಂತು. ದಾವೀದನು ತನ್ನ ಕೈಯಿಂದ ಕಿನ್ನರಿ ಬಾರಿಸಿದನು.


ಆರೋನನ ಮೊಮ್ಮಗನೂ, ಎಲಿಯಾಜರನ ಮಗನೂ ಆದ ಫೀನೆಹಾಸನು ಅವರ ಮುಂದೆ ನಿಂತಿದ್ದದರಿಂದಲೂ, ಇಸ್ರಾಯೇಲರು, “ನಮ್ಮ ಸಹೋದರರಾದ ಬೆನ್ಯಾಮೀನ್ಯರಿಗೆ ವಿರೋಧವಾಗಿ ಇನ್ನೂ ಯುದ್ಧಮಾಡುವುದಕ್ಕೆ ಹೋಗಬೇಕೋ ಬೇಡವೋ?” ಎಂದು ದೇವರನ್ನು ಕೇಳಿಕೊಂಡರು. ಯೆಹೋವ ದೇವರು, “ಹೋಗಿರಿ, ಏಕೆಂದರೆ ನಾಳೆ ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದರು.


ಲೇವಿಯರು ಮೋಶೆಯು ಆಜ್ಞಾಪಿಸಿದಂತೆ ಮಾಡಿದರು. ಆ ದಿನ ಹೆಚ್ಚು ಕಡಿಮೆ ಮೂರು ಸಾವಿರ ಜನರು ಸತ್ತರು.


ಅವರು ಗಿಲ್ಯಾದ್ ನಾಡಿನಲ್ಲಿರುವ ರೂಬೇನ್ಯರ, ಗಾದ್ಯರ ಹಾಗು ಮನಸ್ಸೆಯ ಅರ್ಧ ಗೋತ್ರದವರ ಬಳಿಗೆ ಯಾಜಕ ಎಲಿಯಾಜರನ ಮಗ ಫೀನೆಹಾಸನನ್ನೂ


ಎಲಿಯಾಜರನ ಮಗನಾದ ಫೀನೆಹಾಸನು ಮುಂಚೆ ಅವರ ಮೇಲೆ ಅಧಿಕಾರಿಯಾಗಿದ್ದನು. ಯೆಹೋವ ದೇವರು ಅವರ ಸಂಗಡ ಇದ್ದರು.


“ನಮ್ಮ ಒಡಂಬಡಿಕೆಯು ಜೀವದ ಹಾಗೂ ಶಾಂತಿಯ ಒಡಂಬಡಿಕೆಯಾಗಿತ್ತು. ಅವುಗಳನ್ನು ನಾನೇ ಅವನಿಗೆ ಕೊಟ್ಟೆನು. ಅವನು ನನಗೆ ಭಯಪಟ್ಟು, ನನ್ನ ಹೆಸರನ್ನು ಘನಪಡಿಸಿದನು.


ಮೋಶೆ ಒಂದೊಂದು ಗೋತ್ರದಿಂದ ಸಾವಿರ ಮಂದಿಯಾಗಿರುವ ಅವರನ್ನೂ ಯಾಜಕನಾದ ಎಲಿಯಾಜರನ ಮಗ ಫೀನೆಹಾಸನನ್ನೂ ಪರಿಶುದ್ಧ ಸಲಕರಣೆಗಳ ಸಂಗಡವೂ ಸೂಚಿಸುವದಕ್ಕೋಸ್ಕರ ತುತೂರಿಗಳ ಸಂಗಡವೂ ಯುದ್ಧಕ್ಕೆ ಕಳುಹಿಸಿದನು.


ಇವನು ಅಬೀಷೂವನ ಮಗನು; ಇವನು ಫೀನೆಹಾಸನ ಮಗನು; ಇವನು ಎಲಿಯಾಜರನ ಮಗನು; ಇವನು ಮುಖ್ಯಯಾಜಕನಾದ ಆರೋನನ ಮಗನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು