Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 24:5 - ಕನ್ನಡ ಸಮಕಾಲಿಕ ಅನುವಾದ

5 “ಯಾಕೋಬೇ, ನಿನ್ನ ಡೇರೆಗಳೂ; ಇಸ್ರಾಯೇಲರೇ, ನಿಮ್ಮ ಗುಡಾರಗಳೂ ಉತ್ತಮವಾಗಿವೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಯಾಕೋಬೇ, ನಿಮ್ಮ ಡೇರೆಗಳು ಎಷ್ಟೋ ಚೆಲುವಾಗಿವೆ, ಇಸ್ರಾಯೇಲರೇ, ನಿಮ್ಮ ನಿವಾಸಗಳು ಎಷ್ಟೋ ರಮ್ಯವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಯಕೋಬ್ಯರೇ, ನಿಮ್ಮ ಡೇರೆಗಳೆಷ್ಟು ರಮ್ಯ! ಇಸ್ರಯೇಲರೇ, ನಿಮ್ಮ ನಿವಾಸಗಳೆಷ್ಟು ಸುಂದರ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಯಾಕೋಬ್ಯರೇ, ನಿಮ್ಮ ಡೇರೆಗಳು ಎಷ್ಟೋ ಚೆಲುವಾಗಿವೆ; ಇಸ್ರಾಯೇಲ್ಯರೇ, ನಿಮ್ಮ ನಿವಾಸಗಳು ಎಷ್ಟೋ ರಮ್ಯವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 “ಯಾಕೋಬ್ಯರೇ, ನಿಮ್ಮ ಡೇರೆಗಳು ಬಹಳ ಸುಂದರವಾಗಿವೆ! ಇಸ್ರೇಲರೇ, ನೀವು ವಾಸಿಸುವ ಸ್ಥಳಗಳು ಬಹಳ ರಮ್ಯವಾಗಿವೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 24:5
13 ತಿಳಿವುಗಳ ಹೋಲಿಕೆ  

ದೇವರ ಮಾತುಗಳನ್ನು ಕೇಳಿದವನೂ, ಸರ್ವಶಕ್ತರ ದರ್ಶನವನ್ನು ನೋಡಿದವನೂ, ಪರವಶನಾಗಿ ತೆರೆದ ಕಣ್ಣುಳ್ಳವನೂ ಹೇಳಿದ್ದು:


“ಅವು ಕಣಿವೆಗಳ ಹಾಗೆ ವಿಸ್ತರಿಸಿವೆ. ನದಿತೀರದಲ್ಲಿರುವ ತೋಟಗಳ ಹಾಗೆಯೂ, ಯೆಹೋವ ದೇವರು ನೆಟ್ಟ ಅಗರು ಮರಗಳ ಹಾಗೆಯೂ ನೀರಿನ ಬಳಿಯಲ್ಲಿರುವ ದೇವದಾರುಗಳ ಹಾಗೆಯೂ ಇರುತ್ತವೆ.


ದೇವದರ್ಶನದ ಗುಡಾರಕ್ಕೆ ಅಂದರೆ ಒಡಂಬಡಿಕೆಯ ನಿಯಮದ ಗುಡಾರ ನಿರ್ಮಾಣಕ್ಕೆ ಬಳಸಿದ ವಸ್ತುಗಳ ಲೆಕ್ಕ ಇವು: ಮೋಶೆಯ ಆಜ್ಞೆಯ ಮೇರೆಗೆ ಯಾಜಕನಾದ ಆರೋನನ ಮಗನಾದ ಈತಾಮಾರನ ನಿರ್ದೇಶನದಲ್ಲಿ ಲೇವಿಯರ ಕೈಯಿಂದ ಲೆಕ್ಕ ಮಾಡಿಸಿದ್ದು.


ಏಳು ದಿವಸಗಳವರೆಗೆ ನೀವು ಗುಡಾರಗಳಲ್ಲಿ ವಾಸಿಸಬೇಕು. ಸ್ವದೇಶೀಯರಾದ ಇಸ್ರಾಯೇಲರಾಗಿ ಹುಟ್ಟಿದವರೆಲ್ಲರೂ ಗುಡಾರಗಳಲ್ಲಿ ವಾಸಿಸಬೇಕು.


ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಎಲ್ಲವನ್ನೂ ಮಾಡಿದರು. ಹಾಗೆಯೇ ತಮ್ಮ ಧ್ವಜಗಳ ಪ್ರಕಾರವೂ ತಮ್ಮ ತಮ್ಮ ವಂಶಗಳ ಪ್ರಕಾರವೂ ತಮ್ಮ ಕುಟುಂಬಗಳ ಪ್ರಕಾರವೂ ಪಾಳೆಯವನ್ನು ಹಾಕಿಕೊಳ್ಳುತ್ತಾ ಮುಂದುವರಿಯುತ್ತಿದ್ದರು.


ಬಿಳಾಮನು ತನ್ನ ಕಣ್ಣೆತ್ತಿ ಇಸ್ರಾಯೇಲರು ಅವರವರ ಗೋತ್ರಗಳ ಪ್ರಕಾರ ತಮ್ಮ ಡೇರೆಗಳಲ್ಲಿ ವಾಸವಾಗಿರುವುದನ್ನು ನೋಡಿದಾಗ, ದೇವರಾತ್ಮ ಪ್ರೇರಿತನಾಗಿ


ಇಸ್ರಾಯೇಲರೇ, ನೀವು ಎಷ್ಟೋ ಧನ್ಯರು. ಯೆಹೋವ ದೇವರಿಂದ ರಕ್ಷಣೆಹೊಂದಿದ ಜನಾಂಗವೇ ನಿಮ್ಮಂತೆ ಯಾರಿದ್ದಾರೆ? ದೇವರೇ ನಿಮಗೆ ಗುರಾಣಿ ಹಾಗೂ ಸಹಾಯಕ. ದೇವರು ನಿಮ್ಮ ಮಹಿಮಾ ಖಡ್ಗ. ನಿಮ್ಮ ವೈರಿಗಳು ನಿಮ್ಮ ಮುಂದೆ ಮುದುರಿಕೊಳ್ಳುವರು ಮತ್ತು ಅವರ ಉನ್ನತ ಸ್ಥಳಗಳನ್ನು ನೀವು ತುಳಿದುಬಿಡುವಿರಿ.”


ಆದರೆ ನಾನು ಬಿಳಾಮನ ಮಾತನ್ನು ಕೇಳಲು ಮನಸ್ಸಿಲ್ಲದ್ದರಿಂದ ಅವನು ನಿಮ್ಮನ್ನು ಆಶೀರ್ವದಿಸುತ್ತಲೇ ಇರಬೇಕಾಯಿತು. ಹೀಗೆ ನಾನು ಅವನ ಕೈಯಿಂದ ನಿಮ್ಮನ್ನು ತಪ್ಪಿಸಿದೆನು.


ಏಕೆಂದರೆ ಅವರು ಅನ್ನಪಾನಗಳೊಡನೆ ಇಸ್ರಾಯೇಲರನ್ನು ಎದುರುಗೊಳ್ಳಲಿಲ್ಲ. ಅವರು ಇಸ್ರಾಯೇಲರನ್ನು ಶಪಿಸುವುದಕ್ಕಾಗಿ ಬಿಳಾಮನಿಗೆ ಹಣಕೊಟ್ಟು ಕರೆಸಿದ್ದರು. ಆದರೆ ನಮ್ಮ ದೇವರು ಆ ಶಾಪವನ್ನು ಆಶೀರ್ವಾದವಾಗಿ ಮಾಡಿದರು.


ಯೆಹೋವ ದೇವರ ಅಂಗಳಗಳಲ್ಲಿ ಸೇರಲು ನನ್ನ ಪ್ರಾಣವು ಬಯಸಿ ಕುಂದುತ್ತದೆ. ನನ್ನ ಹೃದಯವೂ, ನನ್ನ ಶರೀರವೂ ಜೀವವುಳ್ಳ ದೇವರಿಗಾಗಿ ಕೂಗಿಕೊಳ್ಳುತ್ತದೆ.


ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿ, ನಿನ್ನಲ್ಲಿ ದೋಷವೇನೂ ಇಲ್ಲ.


ನನ್ನ ಪ್ರಿಯಳೇ, ನೀನು ತಿರ್ಚ ನಗರದಂತೆ ಸುಂದರಿ, ಯೆರೂಸಲೇಮಿನ ಹಾಗೆ ರಮ್ಯಳು, ಧ್ವಜಗಳಿರುವ ದಂಡಿನ ಹಾಗೆ ಗಂಭೀರಳೂ ಆಗಿರುವೆ.


ಇದನ್ನು ಮಾಡುವ ಮನುಷ್ಯನನ್ನು ಅವನು ಯಾರೇ ಆಗಲಿ, ಅವನು ಯೆಹೋವ ದೇವರಿಗೆ ಕಾಣಿಕೆ ಅರ್ಪಿಸಲು ತಂದರೂ ಸಹ, ಯಾಕೋಬನ ಗುಡಾರಗಳೊಳಗಿಂದ ಸೇನಾಧೀಶ್ವರ ಯೆಹೋವ ದೇವರು ತೆಗೆದು ಹಾಕಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು