ಅರಣ್ಯಕಾಂಡ 24:17 - ಕನ್ನಡ ಸಮಕಾಲಿಕ ಅನುವಾದ17 “ನಾನು ಅವನನ್ನು ನೋಡುವೆನು, ಈಗಲ್ಲ. ಅವನನ್ನು ದೃಷ್ಟಿಸುವೆನು, ಸಮೀಪದಲ್ಲಿ ಅಲ್ಲ. ಯಾಕೋಬನಿಂದ ನಕ್ಷತ್ರ ಉದಯಿಸುವುದು. ಇಸ್ರಾಯೇಲನಿಂದ ರಾಜದಂಡ ಏಳುವುದು. ಅದು ಮೋವಾಬಿನ ಮೂಲೆಗಳನ್ನು ಹೊಡೆದು, ಸೇಥನ ಎಲ್ಲಾ ಮಕ್ಕಳನ್ನು ಸಂಹರಿಸುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ನಾನು ಅವನನ್ನು ನೋಡುವೆನು, ಈಗಲ್ಲ. ಆತನನ್ನು ದೃಷ್ಟಿಸುವೆನು, ಆದರೆ ಸಮೀಪದಲ್ಲಿ ಅಲ್ಲ. ಯಾಕೋಬ ವಂಶದವರಲ್ಲಿ ನಕ್ಷತ್ರವು ಉದಯಿಸುವುದು. ಇಸ್ರಾಯೇಲರಲ್ಲಿ ರಾಜದಂಡವು ಏಳುವುದು. ಅದು ಮೋವಾಬ್ಯರ ತಲೆಯನ್ನು ಸೀಳಿಹಾಕುವುದು ಸೇತನ ಎಲ್ಲಾ ಮಕ್ಕಳನ್ನು ಸಂಹರಿಸಿವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಒಬ್ಬಾತನನ್ನು ನೋಡುತ್ತಿದ್ದೇನೆ; ಆತ ಈಗಿನವನಲ್ಲ. ಆತ ಕಾಣಿಸುತ್ತಾನೆ, ಆದರೆ ಸಮೀಪದಲ್ಲಿಲ್ಲ. ನಕ್ಷತ್ರಪ್ರಾಯನೊಬ್ಬನು ಉದಯಿಸಿದ್ದಾನೆ ಯಕೋಬವಂಶದಲ್ಲಿ ರಾಜದಂಡ ಹಿಡಿದವನು ಕಂಡು ಬಂದಿದ್ದಾನೆ ಇಸ್ರಯೇಲರಲ್ಲಿ. ಆತ ಸೀಳಿಹಾಕಿದ್ದಾನೆ ಮೋವಾಬ್ಯರ ತಲೆಯನ್ನು; ಕೆಡವಿಬಿಟ್ಟಿದ್ದಾನೆ ಯುದ್ಧವೀರರೆಲ್ಲರನ್ನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಒಬ್ಬಾತನನ್ನು ನೋಡುತ್ತಿದ್ದೇನೆ, ಆತನು ಈಗಿನವನಲ್ಲ; ಆತನು ಕಾಣಿಸುತ್ತಾನೆ, ಆದರೆ ಸಮೀಪದಲ್ಲಿ ಅಲ್ಲ. ಯಾಕೋಬವಂಶದವರಲ್ಲಿ ನಕ್ಷತ್ರಪ್ರಾಯನೊಬ್ಬನು ಉದಯಿಸಿದ್ದಾನೆ; ಇಸ್ರಾಯೇಲ್ಯರಲ್ಲಿ ರಾಜದಂಡ ಹಿಡಿದವನು ಕಂಡುಬಂದಿದ್ದಾನೆ. ಅವನು ಮೋವಾಬ್ಯರ ತಲೆಯನ್ನು ಸೀಳಿಹಾಕಿದ್ದಾನೆ; ಯುದ್ಧವೀರರೆಲ್ಲರನ್ನೂ ಕೆಡವಿ ಬಿಟ್ಟಿದ್ದಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 “ಬರುತ್ತಿರುವ ಒಬ್ಬನನ್ನು ನೋಡುತ್ತಿದ್ದೇನೆ. ಆದರೆ ಈಗಲ್ಲ. ಬರುತ್ತಿರುವ ಒಬ್ಬನನ್ನು ನೋಡುತ್ತಿದ್ದೇನೆ, ಆದರೆ ಬೇಗನೆ ಅಲ್ಲ. ಯಾಕೋಬನ ವಂಶದಿಂದ ನಕ್ಷತ್ರವೊಂದು ಬರುವುದು. ಇಸ್ರೇಲರಿಂದ ಅರಸನೊಬ್ಬನು ಬರುವನು. ಅವನು ಮೋವಾಬ್ಯರ ತಲೆಯನ್ನು ಜಜ್ಜುವನು. ಆ ಅರಸನು ಶೇತನ ಪುತ್ರರೆಲ್ಲರ ತಲೆಗಳನ್ನು ಜಜ್ಜುವನು. ಅಧ್ಯಾಯವನ್ನು ನೋಡಿ |