Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 23:9 - ಕನ್ನಡ ಸಮಕಾಲಿಕ ಅನುವಾದ

9 ಬೆಟ್ಟಗಳ ತುದಿಯಿಂದ ಅವರನ್ನು ನೋಡುತ್ತೇನೆ. ಎತ್ತರದ ಗುಡ್ಡಗಳಿಂದ ಅವರನ್ನು ದೃಷ್ಟಿಸಿದ್ದೇನೆ. ನಾನು ಆ ಪ್ರತ್ಯೇಕವಾಗಿ ವಾಸಿಸುವ ಜನರನ್ನು ನೋಡುತ್ತೇನೆ. ಆ ಜನಾಂಗವು ತಾನು ಇತರ ಜನಾಂಗಗಳಂತೆ ಸಾಧಾರಣವೆಂದು ಎಣಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಬಂಡೆಗಳ ಶಿಖರದಿಂದ ನಾನು ಅವರನ್ನು ನೋಡುತ್ತೇನೆ; ಗುಡ್ಡದಿಂದ ಅವರನ್ನು ದೃಷ್ಟಿಸುತ್ತೇನೆ. ಆ ಜನಾಂಗವು ಪ್ರತ್ಯೇಕವಾಗಿ ವಾಸಿಸುವುದು. ಆ ಜನಾಂಗವು ಇತರ ಜನಾಂಗಗಳಂತೆ ಸಾಧಾರಣ ಜನರೆಂದು ಎಣಿಸಲ್ಪಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ನಾನವರನ್ನು ಕಂಡೆ ಬೆಟ್ಟದ ಶಿಖರದಿಂದ ನೋಡಿದೆನವರನ್ನು ಗುಡ್ಡದೆತ್ತರದಿಂದ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಬೆಟ್ಟದ ಶಿಖರದಿಂದ ನಾನು ಅವರನ್ನು ಕಂಡೆನು; ಗುಡ್ಡದಿಂದ ಅವರನ್ನು ನೋಡಿದೆನು. ಆ ಜನಾಂಗವು ತಾನು ಇತರ ಜನಾಂಗಗಳಂತಲ್ಲವೆಂದು ಭಾವಿಸಿಕೊಂಡು ಪ್ರತ್ಯೇಕವಾಗಿ ವಾಸಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಬೆಟ್ಟದ ಶಿಖರದಿಂದ ಅವರನ್ನು ನಾನು ನೋಡಿದೆನು; ಗುಡ್ಡದಿಂದ ಅವರನ್ನು ಕಂಡೆನು. ಅವರು ತಮ್ಮನ್ನು ಇತರ ಜನಾಂಗಗಳಿಗಿಂತ ಬೇರೆಯಾದವರು ಎಂದು ಪರಿಗಣಿಸಿಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 23:9
15 ತಿಳಿವುಗಳ ಹೋಲಿಕೆ  

ಆದಕಾರಣ ಆಕಾಶದಿಂದ ಮಂಜನ್ನು ಸುರಿಯುವ, ಧಾನ್ಯ, ಹೊಸ ದ್ರಾಕ್ಷಾರಸ ಸಮೃದ್ಧಿಯಾಗಿರುವ ನಾಡಿನಲ್ಲಿ, ಯಾಕೋಬನ ವಂಶದವರು ಸುರಕ್ಷಿತರಾದರು. ಇಸ್ರಾಯೇಲರು ನಿರ್ಭಯವಾಗಿ ವಾಸಿಸುವವರಾದರು.


ಮಹೋನ್ನತ ದೇವರು ಜನಾಂಗಗಳಿಗೆ ಸ್ಥಳವನ್ನು ಕೊಡುವಾಗಲೂ, ಅವರು ಮಾನವರನ್ನು ವಿಂಗಡಿಸುವಾಗಲೂ, ಇಸ್ರಾಯೇಲರ ಲೆಕ್ಕದ ಪ್ರಕಾರ ಜನರ ಮೇರೆಗಳನ್ನು ಗುರುತಿಸಿಕೊಂಡರು.


ಏಕೆಂದರೆ ನನಗೂ ನಿಮ್ಮ ಜನರಿಗೂ ನಿಮ್ಮ ದೃಷ್ಟಿಯಲ್ಲಿ ದಯೆ ದೊರಕಿತೆಂದು ಯಾವುದರಿಂದ ತಿಳಿದುಬರುವುದು? ನೀವು ನನ್ನೊಂದಿಗೆ ಹೋಗುವುದರಿಂದಲ್ಲವೋ? ಹೀಗೆ ನಾನೂ ನಿಮ್ಮ ಜನರೂ ಭೂಮಿಯ ಮೇಲಿರುವ ಎಲ್ಲಾ ಜನರಿಂದ ಪ್ರತ್ಯೇಕವಾಗಿರುವೆವು,” ಎಂದನು.


ಆಗ ಹಾಮಾನನು ಅರಸನಾದ ಅಹಷ್ವೇರೋಷನಿಗೆ, “ನಿನ್ನ ರಾಜ್ಯದ ಸಕಲ ಪ್ರಾಂತಗಳಲ್ಲಿರುವ ಜನರೊಳಗೆ ಚದರಿ ಬಂದು ವಾಸಿಸುವ ಪ್ರತ್ಯೇಕವಾದ ಜನಾಂಗದ ಜನರಿದ್ದಾರೆ. ಅವರ ರೀತಿನೀತಿಗಳು ಎಲ್ಲಾ ಜನರಿಗಿಂತಲೂ ಬೇರೆಯಾಗಿರುತ್ತವೆ. ಈ ಜನರು ಅರಸನ ನಿಯಮಗಳನ್ನು ಕೈಗೊಳ್ಳುವುದೇ ಇಲ್ಲ. ಆದಕಾರಣ ಇಂಥವರನ್ನು ಸುಮ್ಮನೇ ಬಿಡುವುದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ.


ಇಸ್ರಾಯೇಲರು ತಮಗೂ, ತಮ್ಮ ಪುತ್ರರಿಗೂ ಅವರ ಪುತ್ರಿಯರನ್ನು ತೆಗೆದುಕೊಂಡರು. ಆದಕಾರಣ ಪರಿಶುದ್ಧ ಸಂತಾನದವರು ಈ ದೇಶದ ಜನರ ಸಂಗಡ ಬೆರೆತುಕೊಂಡಿದ್ದಾರೆ. ನಿಶ್ಚಯವಾಗಿ ಪ್ರಧಾನರು ಮತ್ತು ಅಧಿಕಾರಸ್ಥರು ಈ ಅಪನಂಬಿಗಸ್ತಿಕೆಗೆ ಮುಂದಾಳುಗಳಾದರು,” ಎಂದು ತಿಳಿಸಿದರು.


ಆದರೆ ಕತ್ತಲೆಯೊಳಗಿದ್ದ ನಿಮ್ಮನ್ನು ಕರೆದು ತಮ್ಮ ಆಶ್ಚರ್ಯಕರವಾದ ಬೆಳಕಿಗೆ ಸೇರಿಸಿದ ದೇವರನ್ನು ಕೊಂಡಾಡುವವರಾಗುವಂತೆ ನೀವು ಆಯ್ದುಕೊಂಡ ಜನರೂ ರಾಜತನದ ಯಾಜಕರೂ ಪರಿಶುದ್ಧ ಜನಾಂಗವೂ ದೇವರ ಜನರೂ ಆಗಿದ್ದೀರಿ.


ಕ್ರಿಸ್ತ ಯೇಸು ನಮ್ಮನ್ನು ಎಲ್ಲಾ ದುಷ್ಟತನದಿಂದ ವಿಮೋಚಿಸಿ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಂತ ಜನರನ್ನು ತಮಗಾಗಿ ಪರಿಶುದ್ಧ ಮಾಡುವಂತೆ ನಮಗೋಸ್ಕರ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು.


ಆದ್ದರಿಂದ, “ಅವರ ನಡುವೆಯಿಂದ ಹೊರಟುಬಂದು ಪ್ರತ್ಯೇಕವಾಗಿರಿ. ಅಶುದ್ಧವಾದ ಯಾವುದನ್ನೂ ಮುಟ್ಟದಿರಿ, ನಾನು ನಿಮ್ಮನ್ನು ಸ್ವೀಕರಿಸುವೆನು ಎಂದು ಕರ್ತದೇವರು ಹೇಳುತ್ತಾರೆ.”


ಧಾನ್ಯವನ್ನು ಜರಡಿಯಲ್ಲಿ ಜಾಲಿಸುವಂತೆ ನಾನು ಇಸ್ರಾಯೇಲರನ್ನು ಎಲ್ಲಾ ಜನಾಂಗಗಳಲ್ಲಿ ಹಾಕಿ ಜಾಲಿಸಬೇಕೆಂದು ಆಜ್ಞಾಪಿಸುವೆನು. ಆದರೂ ಒಂದು ಕಾಳಾದರೂ ನೆಲಕ್ಕೆ ಬೀಳುವುದಿಲ್ಲ.


ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡಬೇಡ,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿ ಓಡಿಸಿದೆನೋ, ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ಮುಗಿಸಿಬಿಡುತ್ತೇನೆ; ಆದರೆ ನಿನ್ನನ್ನು ಸಂಪೂರ್ಣವಾಗಿ ಮುಗಿಸಿಬಿಡುವುದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದರೂ ನಿನ್ನನ್ನು ಶಿಕ್ಷಿಸದೆ ಬಿಡುವುದಿಲ್ಲ.”


“ಏಳಿರಿ, ಭದ್ರವಾಗಿ ವಾಸಿಸುವ ಸುಖವುಳ್ಳ ಜನಾಂಗದ ಬಳಿಗೆ ಹೋಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. “ಅದಕ್ಕೆ ಬಾಗಿಲುಗಳು ಇಲ್ಲ; ಅಗುಳಿಗಳು ಇಲ್ಲ; ಅದರ ಜನರು ಅಪಾಯದಿಂದ ದೂರ ವಾಸಿಸುತ್ತಾರೆ.


ನಿನ್ನ ಜನರನ್ನೂ ಏಕಾಂತವಾಗಿ ಅಡವಿಯಲ್ಲಿ ಕರ್ಮೆಲಿನ ನಡುವೆ ವಾಸವಾಗಿರುವ ನಿನ್ನ ಬಾಧ್ಯತೆಯ ಮಂದೆಯನ್ನೂ ನಿನ್ನ ಕೋಲಿನಿಂದ ಮೇಯಿಸು. ಅವರು ಪೂರ್ವದ ದಿವಸಗಳಲ್ಲಾದ ಹಾಗೆ ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು