ಅರಣ್ಯಕಾಂಡ 23:8 - ಕನ್ನಡ ಸಮಕಾಲಿಕ ಅನುವಾದ8 ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಯೆಹೋವ ದೇವರು ಎದುರಿಸದವನನ್ನು ನಾನು ಹೇಗೆ ಎದುರಿಸಲಿ? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಯೆಹೋವನು ಎದುರಿಸದವನನ್ನು ನಾನು ಹೇಗೆ ಎದುರಿಸಲಿ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ದೇವರೇ ಶಪಿಸಿಲ್ಲದವರನ್ನು ನಾನೇನೆಂತು ಶಪಿಸಲಿ? ಸರ್ವೇಶ್ವರನೇ ಧಿಕ್ಕರಿಸಿಲ್ಲದವರನ್ನು ನಾನೇನೆಂತು ಧಿಕ್ಕರಿಸಲಿ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ನಾನು ಅವರನ್ನು ಏನೆಂದು ಶಪಿಸಲಿ; ದೇವರು ಶಪಿಸಲಿಲ್ಲವಲ್ಲಾ. ಏನೆಂದು ಆಕ್ರೋಶಿಸಲಿ; ಯೆಹೋವನು ಆಕ್ರೋಶಿಸಲಿಲ್ಲವಲ್ಲಾ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಆದರೆ ದೇವರು ಅವರನ್ನು ಆಶೀರ್ವದಿಸಿರುವಾಗ ನಾನು ಅವರನ್ನು ಶಪಿಸಲು ಆಗುವುದಿಲ್ಲ. ಯೆಹೋವನು ಅವರ ಮೇಲೆ ನಾಶನವನ್ನು ಬರಮಾಡಲಿಲ್ಲ. ಆದ್ದರಿಂದ ನಾಶನವು ಅವರ ಮೇಲೆ ಇಳಿದುಬರುವಂತೆ ಮಾಡಲು ನನಗೆ ಸಾಧ್ಯವಿಲ್ಲ. ಅಧ್ಯಾಯವನ್ನು ನೋಡಿ |
ಅವರು ನನಗಿಂತ ಬಲವುಳ್ಳವರಾಗಿದ್ದರಿಂದ ಈಗ ನೀನು ದಯಮಾಡಿ ಬಂದು, ಈ ಜನರನ್ನು ನನಗಾಗಿ ಶಪಿಸು. ಆಗ ನಾನು ಅವರನ್ನು ಗೆದ್ದು, ದೇಶದೊಳಗಿಂದ ಹೊರಡಿಸುವುದಕ್ಕೆ ನನ್ನಿಂದ ಸಾಧ್ಯವಾಗಬಹುದು. ಏಕೆಂದರೆ ನೀನು ಯಾವನನ್ನು ಆಶೀರ್ವದಿಸುತ್ತೀಯೋ, ಅವನು ಆಶೀರ್ವಾದ ಹೊಂದಿರುವನು; ನೀನು ಯಾವನನ್ನು ಶಪಿಸುತ್ತೀಯೋ, ಅವನು ಶಾಪಗ್ರಸ್ತನಾಗಿರುವನು; ಎಂದು ನಾನು ಬಲ್ಲೆನು,” ಎಂದು ಹೇಳಿ ಕಳುಹಿಸಿದನು.