Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 23:19 - ಕನ್ನಡ ಸಮಕಾಲಿಕ ಅನುವಾದ

19 ದೇವರು ಮನುಷ್ಯನಂತೆ ಸುಳ್ಳಾಡುವವರಲ್ಲ. ನರಪುತ್ರರಂತೆ ಮನಸ್ಸನ್ನು ಬದಲಾಯಿಸಿಕೊಳ್ಳುವವರಲ್ಲ. ಅವರು ನುಡಿದದ್ದನ್ನು ಮಾಡದಿರುವರೇ? ವಾಗ್ದಾನ ಮಾಡಿದ್ದನ್ನು ಅವರು ನೆರವೇರಿಸದಿರುವರೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ. ಮಾನವನಂತೆ ಮನಸ್ಸನ್ನು ಬದಲಾಯಿಸುವವನಲ್ಲ. ತಾನು ಹೇಳಿದ ಪ್ರಕಾರ ನಡೆಯದಿರುತ್ತಾನೆಯೇ? ಮಾತುಕೊಟ್ಟ ನಂತರ ನೆರವೇರಿಸುವುದಿಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ನರಮಾನವರಂತೆ ದೇವರು ಎರಡು ಮಾತಿನವರಲ್ಲ ನರಪುತ್ರರಂತೆ ಮನಸ್ಸನ್ನು ಬದಲಾಯಿಸಿಕೊಳ್ಳುವವರಲ್ಲ. ಆತ ನುಡಿದಂತೆ ನಡೆಯದಿರುತ್ತಾನೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತು ಕೊಟ್ಟನಂತರ ನೆರವೇರಿಸುವದಿಲ್ಲವೋ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ದೇವರು ಮನುಷ್ಯನಲ್ಲ; ಆತನು ಸುಳ್ಳಾಡುವುದಿಲ್ಲ. ದೇವರು ಮಾನವನಲ್ಲ; ಆತನ ಉದ್ದೇಶಗಳು ಬದಲಾಗುವುದಿಲ್ಲ. ಯೆಹೋವನು ತಾನು ಮಾಡುತ್ತೇನೆಂದು ಹೇಳಿದರೆ, ಅದನ್ನು ಮಾಡಿಯೇ ಮಾಡುತ್ತಾನೆ. ಯೆಹೋವನು ವಾಗ್ದಾನ ಮಾಡಿದರೆ, ಅದನ್ನು ನೆರವೇರಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 23:19
36 ತಿಳಿವುಗಳ ಹೋಲಿಕೆ  

ಇಸ್ರಾಯೇಲಿನ ಪ್ರತಾಪರು ಸುಳ್ಳು ಹೇಳುವವರಲ್ಲ, ಮಾತನ್ನು ಹಿಂತೆಗೆದುಕೊಳ್ಳುವವರಲ್ಲ. ಏಕೆಂದರೆ ಅವರು ಮನಸ್ಸು ಬದಲಾಯಿಸುವಂಥ ಮನುಷ್ಯರಲ್ಲ,” ಎಂದನು.


ಎಲ್ಲಾ ಉತ್ತಮ ಮತ್ತು ಪೂರ್ಣವಾದ ವರಗಳೂ ಮೇಲಿನಿಂದ ಬಂದವುಗಳೇ, ಅವು ಪರಲೋಕದ ಬೆಳಕಿನ ತಂದೆಯಿಂದ ಇಳಿದು ಬರುತ್ತವೆ. ಆ ತಂದೆಯು ಬದಲಾಗುವ ನೆರಳಿನಂತೆ ಬದಲಾಗುವವರಲ್ಲ.


“ನಾನು ಯೆಹೋವ ದೇವರು. ನಾನು ಬದಲಾಗುವುದಿಲ್ಲ. ಆದ್ದರಿಂದ ನೀವು ಯಾಕೋಬಿನ ವಂಶಜರೇ, ನಾಶವಾಗುವುದಿಲ್ಲ.


ದೇವರ ವಾಗ್ದಾನ ಮತ್ತು ಆಣೆ ಇವೆರಡೂ ಬದಲಾಗದ ಆಧಾರಗಳು. ಇವುಗಳ ವಿಷಯವಾಗಿ ದೇವರು ನಮಗೆ ಸುಳ್ಳಾಡುವವರಲ್ಲ. ಇದರಿಂದಾಗಿ, ದೇವರ ಆಶ್ರಯವನ್ನು ಹೊಂದುವುದಕ್ಕೆ ಓಡಿಬಂದಿರುವ ನಾವು, ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಳ್ಳಲು ಬಲವಾದ ಉತ್ತೇಜನ ಉಂಟಾಯಿತು.


ಸುಳ್ಳಾಡದ ದೇವರು, ಕಾಲಾರಂಭಕ್ಕೆ ಮುಂಚೆಯೇ ನಿತ್ಯಜೀವದ ನಿರೀಕ್ಷೆಯನ್ನು ವಾಗ್ದಾನಮಾಡಿದ್ದಾರೆ.


ದೇವರು ಕೊಡುವ ವರಗಳನ್ನು, ಕರೆಗಳನ್ನು ಅವರು ಎಂದಿಗೂ ಹಿಂತೆಗೆದುಕೊಳ್ಳುವವರಲ್ಲ.


ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.


ಏಕೆಂದರೆ ಪ್ರಕಟನೆಯು ಇನ್ನೂ ನೇಮಕವಾದ ಕಾಲಕ್ಕಾಗಿ ಎದುರು ನೋಡುವುದು. ಅದು ಅಂತ್ಯದ ಬಗ್ಗೆ ಮಾತಾಡುವುದು. ಅದು ಸುಳ್ಳಾಗದು. ಅದು ತಡವಾದರೂ, ಅದಕ್ಕೆ ಕಾದುಕೊಂಡಿರು. ಏಕೆಂದರೆ ಅದು ತಡಮಾಡದೆ ನಿಶ್ಚಯವಾಗಿ ಬರುವುದು.


ಒಂದೇ ಸಾರಿ ನನ್ನ ಪರಿಶುದ್ಧತ್ವದಿಂದ ಆಣೆಯಿಟ್ಟು ಹೇಳಿದ್ದೇನೆ. ದಾವೀದನಿಗೆ ಸುಳ್ಳಾಡೆನು.


ನನ್ನ ಕೋಪದ ಉರಿಯನ್ನು ನಾನು ತೀರಿಸುವುದಿಲ್ಲ. ನಾನು ಎಫ್ರಾಯೀಮನ್ನು ತಿರುಗಿ ನಾಶಮಾಡುವುದಿಲ್ಲ. ಏಕೆಂದರೆ ನಾನು ಮನುಷ್ಯನಲ್ಲ, ದೇವರೇ. ನಿನ್ನ ಮಧ್ಯದಲ್ಲಿ ಪರಿಶುದ್ಧನಾಗಿದ್ದೇನೆ. ನಾನು ಅವರ ಪಟ್ಟಣಗಳ ವಿರುದ್ಧ ಬರುವುದಿಲ್ಲ.


ನೀನು ಪುರಾತನ ಕಾಲದಿಂದಲೂ ನಮ್ಮ ಪಿತೃಗಳಿಗೆ ಪ್ರಮಾಣಮಾಡಿರುವಂತೆ ಯಾಕೋಬನ ವಂಶದವರಿಗೆ ಸತ್ಯಪರನಾಗಿಯೂ, ಅಬ್ರಹಾಮನ ವಂಶದವರಿಗೆ ಪ್ರೀತಿಪರನಾಗಿಯೂ ನಡೆಯುವಿ.


ಯೆಹೋವ ದೇವರೇ, ಇದು ನಿಮ್ಮ ದೃಷ್ಟಿಯಲ್ಲಿ ಅಲ್ಪವೆಂದು ಕಾಣಿಸಿದರೂ ನೀವು ನಿಮ್ಮ ಸೇವಕನ ಸಂತಾನದ ಭವಿಷ್ಯದ ಕುರಿತೂ ವಾಗ್ದಾನಮಾಡಿರುವಿರಿ. ಯೆಹೋವ ದೇವರೇ, ನೀವು ನನ್ನನ್ನು ಮನುಷ್ಯರಲ್ಲಿ ಅತ್ಯುನ್ನತ ವ್ಯಕ್ತಿಯಂತೆ ನೋಡಿರುವಿರಿ.


ಇದು ದೇವರ ವಾಕ್ಯವು ನೆರವೇರಲಿಲ್ಲ ಎಂಬಂತೆ ಅಲ್ಲ. ಏಕೆಂದರೆ ಇಸ್ರಾಯೇಲ್ ವಂಶದಲ್ಲಿ ಬಂದವರೆಲ್ಲರೂ ಇಸ್ರಾಯೇಲರಲ್ಲ.


ನಾವು ಅಪನಂಬಿಗಸ್ತರಾಗಿದ್ದರೂ ಅವರು ನಂಬಿಗಸ್ತರಾಗಿಯೇ ಉಳಿದಿರುವರು. ಅವರು ತಮ್ಮ ಸ್ವಭಾವವನ್ನು ತಾವೇ ನಿರಾಕರಿಸಲಾರರು.


ಆದರೆ ಯೇಸು ದೇವರ ಆಣೆಯಿಂದಲೇ ಯಾಜಕರಾದರು. ಹೀಗೆ ದೇವರು ಹೇಳಿದ್ದೇನೆಂದರೆ: “ ಕರ್ತ ಆಗಿರುವ ನಾನು ಆಣೆಯಿಟ್ಟು ಹೇಳಿದ್ದೇನೆ. ನಾನು ಎಂದಿಗೂ ಮನಸ್ಸನ್ನು ಬದಲಾಯಿಸುವುದಿಲ್ಲ. ‘ನೀನು ಸದಾಕಾಲವೂ ಯಾಜಕನಾಗಿದ್ದೀ.’ ”


ಅಥವಾ ದೇವರು ನಮ್ಮಲ್ಲಿ ವಾಸವಾಗಿರಲು ನಮಗೆ ಕೊಟ್ಟಿರುವ ಪವಿತ್ರಾತ್ಮ ದೇವರು, ನಾವು ಅವರಿಗೆ ಮಾತ್ರ ಸೇರಿದವರಾಗಿರಬೇಕೆಂದು ಬಲವಾದ ಬಯಕೆ ಉಳ್ಳವರಾಗಿದ್ದಾರೆಂದು ಪವಿತ್ರ ವೇದವು ವ್ಯರ್ಥವಾಗಿ ಹೇಳುತ್ತದೆ ಎಂದು ನೀವು ಭಾವಿಸುತ್ತೀರೋ?


ಇಗೋ, ನಾನು ನಿನ್ನ ಸಂಗಡ ಇದ್ದು, ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಪಾಡಿ, ಈ ದೇಶಕ್ಕೆ ನಿನ್ನನ್ನು ತಿರುಗಿ ಬರಮಾಡುವೆನು. ಏಕೆಂದರೆ ನಾನು ನಿನಗೆ ಹೇಳಿದ್ದನ್ನು ಮಾಡುವವರೆಗೆ ನಿನ್ನನ್ನು ಬಿಡುವುದಿಲ್ಲ,” ಎಂದರು.


ಯೆಹೋವ ದೇವರಾದ ನಾನು ಇದನ್ನು ಮಾತನಾಡಿದ್ದೇನೆ. ನನಗೆ ವಿರೋಧವಾಗಿ ಸೇರಿರುವ ಈ ದುಷ್ಟ ಸಭೆಗೆಲ್ಲಾ ಇದನ್ನು ನಿಶ್ಚಯವಾಗಿ ಮಾಡುವೆನು. ಈ ಮರುಭೂಮಿಯಲ್ಲಿ ಅವರು ಕ್ಷೀಣವಾಗಿ ಅದರಲ್ಲೇ ಸಾಯುವರು,” ಎಂದರು.


ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ: “ಬಾಲಾಕನೇ, ಎದ್ದು ಕೇಳು; ಚಿಪ್ಪೋರನ ಮಗನೇ, ನನಗೆ ಕಿವಿಗೊಡು.


ನನ್ನ ಒಡಂಬಡಿಕೆಯನ್ನು ನಾನು ಮುರಿಯೆನು. ಇಲ್ಲವೆ ನನ್ನ ತುಟಿಗಳಿಂದ ಹೊರಟದ್ದನ್ನು ಬದಲಾಯಿಸೆನು.


“ನೀವು ಸದಾಕಾಲವೂ ಮೆಲ್ಕಿಜೆದೇಕನ ಕ್ರಮದ ಯಾಜಕರಾಗಿದ್ದೀರಿ,” ಎಂದು ಯೆಹೋವ ದೇವರು ಆಣೆಯಿಟ್ಟು ಹೇಳಿದ್ದಾರೆ. ಅವರು ತಮ್ಮ ಮನಸ್ಸನ್ನು ಬದಲಾಯಿಸರು.


ಬಿಲ್ಲುಗಾರರಲ್ಲಿ ಕೆಲವರೂ, ಕೇದಾರಿನ ಬಲಿಷ್ಠರಲ್ಲಿ ಕೆಲವರು ಮಾತ್ರ ಉಳಿಯುವರು,” ಎಂದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ನುಡಿದಿದ್ದಾರೆ.


ಆದರೂ ಅವರು ಜ್ಞಾನಿ, ಕೇಡನ್ನು ಬರಮಾಡುವರು. ಅವರು ತಮ್ಮ ಮಾತನ್ನು ಹಿಂದೆಗೆಯುವುದಿಲ್ಲ. ಆದರೆ ಕೆಡುಕರ ಮನೆತನಕ್ಕೂ, ಅನ್ಯಾಯಗಾರರ ಸಹಾಯಕರಿಗೂ ವಿರುದ್ಧವಾಗಿ ಏಳುವನು.


ಹುಲ್ಲು ಒಣಗಿಹೋಗುವುದು, ಹೂವು ಬಾಡಿಹೋಗುವುದು. ಆದರೆ ನಮ್ಮ ದೇವರ ವಾಕ್ಯವಾದರೋ ಸದಾಕಾಲ ಇರುವುದು,” ಎಂದು ಉತ್ತರವಾಯಿತು.


ಪೂರ್ವದಿಂದ ಒಂದು ಕ್ರೂರವಾದ ಪಕ್ಷಿಯೂ, ದೂರದೇಶದಿಂದ ನನ್ನ ಆಜ್ಞೆಯನ್ನು ನಡೆಸುವ ಮನುಷ್ಯನೂ ಬರಲಿ, ಎಂದು ಕರೆದಿದ್ದೇನೆ. ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು. ಆಲೋಚಿಸಿದ್ದೇನೆ, ನಾನು ಅದನ್ನು ಮಾಡುವೆನು.


ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ, ನಾನು ಉದ್ದೇಶಿಸಿದ್ದನ್ನು ಕೈಗೂಡಿಸದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ.


ಇದರ ನಿಮಿತ್ತ ಭೂಮಿಯು ದುಃಖಿಸುವುದು. ಮೇಲಿರುವ ಆಕಾಶವು ಕಪ್ಪಾಗುವುದು. ಏಕೆಂದರೆ ನಾನು ಅದನ್ನು ಹೇಳಿದ್ದರಿಂದ ನಿಶ್ಚಯಿಸಿದ್ದೇನೆ. ಮಾನಸಾಂತರ ಪಡುವುದಿಲ್ಲ. ಇಲ್ಲವೆ ಅದರಿಂದ ಹಿಂದಿರುಗುವುದಿಲ್ಲ.”


ಅರಸನಾದ ನೆಬೂಕದ್ನೆಚ್ಚರನಿಗೆ ಇದೆಲ್ಲವೂ ಸಂಭವಿಸಿತು.


ಈ ದೇಶದಲ್ಲಿ ಪ್ರವಾಸಿಯಾಗಿರು. ಆಗ ನಾನು ನಿನ್ನ ಸಂಗಡ ಇದ್ದು, ನಿನ್ನನ್ನು ಆಶೀರ್ವದಿಸುವೆನು. ನಿನಗೂ, ನಿನ್ನ ಸಂತಾನಕ್ಕೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ತಂದೆ ಅಬ್ರಹಾಮನಿಗೆ ನಾನು ಮಾಡಿದ ಪ್ರಮಾಣವನ್ನು ಈಡೇರಿಸುವೆನು.


ಯೆಹೋವ ದೇವರು ಇಸ್ರಾಯೇಲರಿಗೆ ಹೇಳಿದ ಅತಿ ಶ್ರೇಷ್ಠವಾಗ್ದಾನಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ. ಎಲ್ಲಾ ನೆರವೇರಿದವು.


ಏಕೆಂದರೆ ನಾನು ಏಲಿಯ ಮನೆಯನ್ನು ಕುರಿತು ಹೇಳಿದ್ದನ್ನೆಲ್ಲಾ ಅವರಿಗೆ ಆ ದಿವಸದಲ್ಲಿ ಮಾಡುತ್ತೇನೆ. ನಾನು ಆರಂಭಿಸಿದ ಹಾಗೆ ಅಂತ್ಯವನ್ನು ಮಾಡುವೆನು.


ಯಾರೊಬ್ಬಾಮನವರಲ್ಲಿ ಯಾವನು ಪಟ್ಟಣದಲ್ಲಿ ಸಾಯುವನೋ ಅವನನ್ನು ನಾಯಿಗಳು ತಿಂದುಬಿಡುವವು. ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿಂದುಬಿಡುವವು,’ ಎಂದು ಯೆಹೋವ ದೇವರು ಹೇಳಿದ್ದಾರೆ.


ಆಗ ಅರಸನಿಗೆ ಹಸ್ತಕನಾದ ಅಧಿಕಾರಿಯು ದೇವರ ಮನುಷ್ಯನಿಗೆ ಉತ್ತರವಾಗಿ, “ಇಗೋ, ಯೆಹೋವ ದೇವರು ಆಕಾಶದಲ್ಲಿ ಕಿಟಕಿಗಳನ್ನು ಮಾಡಿದರೆ, ಈ ಕಾರ್ಯ ಸಂಭವಿಸುವುದೋ?” ಎಂದನು. ಅದಕ್ಕವನು, “ನೀನು ನಿನ್ನ ಕಣ್ಣುಗಳಿಂದ ಅದನ್ನು ನೋಡುವೆ, ಆದರೆ ಅದರಲ್ಲಿ ಯಾವುದನ್ನೂ ತಿನ್ನುವುದಿಲ್ಲ,” ಎಂದನು.


“ನಿನ್ನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು,” ಎಂದು ಯೆಹೋವ ದೇವರು ಯೇಹುವಿಗೆ ಹೇಳಿದ ವಾಕ್ಯದಂತೆ ಇವೆಲ್ಲವೂ ನೆರವೇರಿತು.


ದೇವರು ಕರುಣಿಸುವುದನ್ನು ಮರೆತು ಬಿಟ್ಟಿದ್ದಾರೋ? ತಮ್ಮ ಅಂತಃಕರಣವನ್ನು ಬೇಸರದಿಂದ ತಡೆಹಿಡಿದಿದ್ದಾರೋ?”


ಯೆಹೋವ ದೇವರು ದಾವೀದನಿಗೆ ಸತ್ಯದ ಆಣೆ ಇಟ್ಟಿದ್ದಾರೆ; ತಾವು ಹೀಗೆಂದು ಆಣೆಯಿಟ್ಟುಕೊಟ್ಟ ಮಾತನ್ನು ದೇವರು ಬದಲಿಸುವುದಿಲ್ಲ, “ನಿನ್ನ ಸಂತತಿಯವನನ್ನೇ ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು