Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 21:35 - ಕನ್ನಡ ಸಮಕಾಲಿಕ ಅನುವಾದ

35 ಈ ಪ್ರಕಾರ ಅವರು ಅವನನ್ನೂ ಅವನ ಮಕ್ಕಳನ್ನೂ ಅವನ ಸಮಸ್ತ ಜನರನ್ನೂ ಅವನಿಗೆ ಒಬ್ಬನಾದರೂ ಉಳಿಯದಂತೆ ಹೊಡೆದು, ಅವನ ದೇಶವನ್ನು ವಶಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಆದಕಾರಣ ಇಸ್ರಾಯೇಲರು, ಅವರಲ್ಲಿ ಒಬ್ಬನೂ ಉಳಿಯದಂತೆ ಅವನನ್ನೂ, ಅವನ ಮಕ್ಕಳನ್ನೂ, ಅವನ ಜನರನ್ನೆಲ್ಲಾ ನಾಶಮಾಡಿ ಅವನ ದೇಶವನ್ನು ಸ್ವಾಧೀನಪಡಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಹಾಗೆಯೇ ಇಸ್ರಯೇಲರು ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ, ಒಬ್ಬನನ್ನೂ ಬಿಡದೆ ಕೊಂದು ಅವನ ನಾಡನ್ನು ಸ್ವಾಧೀನಪಡಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಆದಕಾರಣ ಇಸ್ರಾಯೇಲ್ಯರು ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ ಒಬ್ಬರಾದರೂ ಉಳಿಯದಂತೆ ಹತಮಾಡಿ ಅವನ ದೇಶವನ್ನು ಸ್ವಾಧೀನಪಡಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಇಸ್ರೇಲರು ಓಗನನ್ನೂ ಅವನ ಸೈನ್ಯವನ್ನೂ ಸೋಲಿಸಿದರು. ಅವರು ಅವನನ್ನೂ ಅವನ ಪುತ್ರರನ್ನೂ ಕೊಂದುಹಾಕಿ ಅವನ ಸೈನ್ಯವನ್ನೆಲ್ಲಾ ನಾಶಮಾಡಿದರು. ಯಾರನ್ನೂ ಜೀವಂತವಾಗಿ ಉಳಿಸಲಿಲ್ಲ. ಇಸ್ರೇಲರು ಅವನ ದೇಶವನ್ನು ವಶಪಡಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 21:35
13 ತಿಳಿವುಗಳ ಹೋಲಿಕೆ  

ಅಂದರೆ, ಬಾಷಾನಿನಲ್ಲಿ ಅಷ್ಟಾರೋತ್, ಎದ್ರೈ ಎಂಬ ಊರುಗಳಲ್ಲಿ ಆಳಿದ ರೆಫಾಯರ ವಂಶಸ್ಥನಾದ ಓಗನ ಸಮಸ್ತ ರಾಜ್ಯವೆಲ್ಲಾ ಇವುಗಳೇ. ಮೋಶೆಯು ಇವೆಲ್ಲವುಗಳನ್ನು ಜಯಿಸಿ, ಅವರ ದೇಶಗಳನ್ನು ಸ್ವಾಧೀನಮಾಡಿಕೊಂಡಿದ್ದನು.


ಇವೆಲ್ಲವುಗಳಲ್ಲಿಯೂ ನಾವು ನಮ್ಮನ್ನು ಪ್ರೀತಿಸಿದಾತನ ಮೂಲಕ ಜಯ ಹೊಂದಿದವರಿಗಿಂತಲೂ ಹೆಚ್ಚಿನವರಾಗಿದ್ದೇವೆ.


ಅದೇ ಪೂರ್ವಕಾಲದಲ್ಲಿ ಹೋರಿಯರು ಸೇಯೀರಿನಲ್ಲಿ ವಾಸವಾಗಿದ್ದರು. ತರುವಾಯ ಇಸ್ರಾಯೇಲರು ತಮಗೆ ಯೆಹೋವ ದೇವರು ಕೊಟ್ಟ ನಾಡನ್ನು ಹೇಗೆ ಸ್ವಾಧೀನ ಮಾಡಿಕೊಂಡರೋ, ಹಾಗೆಯೇ ಏಸಾವ್ಯರು ಬಂದು ಹೋರಿಯರನ್ನು ಸಂಹರಿಸಿ, ಅವರ ನಾಡಿನಲ್ಲಿ ವಾಸಮಾಡಿದರು.


ಯೆಹೋವ ದೇವರು ಇಸ್ರಾಯೇಲರ ಸಮೂಹಕ್ಕೆ ಅಧೀನಪಡಿಸಿದ ಪ್ರದೇಶವು ಪಶುಗಳ ಮೇವಿಗೆ ಸೂಕ್ತವಾಗಿದೆ. ನಿಮ್ಮ ಸೇವಕರಿಗೂ ಪಶುಗಳು ಉಂಟು.


ಯೊರ್ದನ್ ನದಿಯ ಆಚೆಯಲ್ಲಿ ಬೇತ್ ಪೆಗೋರಿಗೆ ಎದುರಾಗಿರುವ ತಗ್ಗಿನಲ್ಲಿ ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿಯರ ಅರಸನಾದ ಸೀಹೋನನ ದೇಶದಲ್ಲಿ ಅವನನ್ನು ಮೋಶೆಯೂ, ಇಸ್ರಾಯೇಲರೂ ಈಜಿಪ್ಟಿನೊಳಗಿಂದ ಹೊರಟ ಮೇಲೆ ಸೋಲಿಸಿದರು.


ಸೀಹೋನನ ದೇಶವನ್ನೂ, ಬಾಷಾನಿನ ಅರಸನಾದ ಓಗನ ದೇಶವನ್ನೂ ಯೊರ್ದನಿನ ಆಚೆಯಲ್ಲಿ ಪೂರ್ವದಿಕ್ಕಿನಲ್ಲಿದ್ದ ಅಮೋರಿಯರ ಇಬ್ಬರು ಅರಸರ ದೇಶಗಳನ್ನೂ ಗೆದ್ದುಕೊಂಡರು.


ಯೆಹೋವ ದೇವರು ಅಮೋರಿಯರ ಅರಸನಾದ ಸೀಹೋನನಿಗೂ, ಓಗನಿಗೂ, ಅವರ ದೇಶಕ್ಕೂ ಮಾಡಿದ ಪ್ರಕಾರ ಆ ಜನಾಂಗಗಳನ್ನು ದಂಡಿಸುವರು.


ಯೆಹೋವ ದೇವರು ಇಸ್ರಾಯೇಲರಿಗೆ, “ನಾನು ನಿಮ್ಮನ್ನು ಈಜಿಪ್ಟ್, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು