Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 21:26 - ಕನ್ನಡ ಸಮಕಾಲಿಕ ಅನುವಾದ

26 ಹೆಷ್ಬೋನ್ ಪಟ್ಟಣವು ಅಮೋರಿಯರ ಅರಸನಾದ ಸೀಹೋನನ ಪಟ್ಟಣವಾಗಿತ್ತು. ಅವನು ಮೋವಾಬ್ ದೇಶದ ಹಿಂದಿನ ಅರಸನ ಸಂಗಡ ಯುದ್ಧಮಾಡಿ, ಅವನ ಸಮಸ್ತ ದೇಶವನ್ನು ಅರ್ನೋನ್ ನದಿಯವರೆಗೂ ಅವನಿಂದ ವಶಪಡಿಸಿಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಹೆಷ್ಬೋನ್ ಪಟ್ಟಣವು ಅಮೋರಿಯರ ಅರಸನಾದ ಸೀಹೋನನ ರಾಜಧಾನಿ. ಅವನು ಮೋವಾಬ್ಯರ ಪೂರ್ವದ ಅರಸನ ಮೇಲೆ ಯುದ್ಧಮಾಡಿ ಅರ್ನೋನ್ ನದಿಯ ವರೆಗೂ ಅವನ ದೇಶವನ್ನೆಲ್ಲಾ ಸ್ವಾಧೀನ ಮಾಡಿಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಹೆಷ್ಬೋನ್ ಪಟ್ಟಣ ಅಮೋರಿಯರ ಅರಸನಾದ ಸೀಹೋನನ ರಾಜಧಾನಿ. ಅವನು ಮೋವಾಬ್ಯರ ಹಿಂದಿನ ಅರಸನ ಮೇಲೆ ಯುದ್ಧಮಾಡಿ ಅರ್ನೋನ್ ಹೊಳೆಯವರೆಗೂ ಅವನ ನಾಡನ್ನೆಲ್ಲಾ ಸ್ವಾಧೀನಮಾಡಿಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಹೆಷ್ಬೋನ್ ಪಟ್ಟಣವು ಅಮೋರಿಯರ ಅರಸನಾದ ಸೀಹೋನನ ರಾಜಧಾನಿ. ಅವನು ಮೋವಾಬ್ಯರ ಪೂರ್ವದ ಅರಸನ ಮೇಲೆ ಯುದ್ಧಮಾಡಿ ಅರ್ನೋನ್ ಹೊಳೆಯವರೆಗೂ ಅವನ ದೇಶವನ್ನೆಲ್ಲಾ ಸ್ವಾಧೀನ ಮಾಡಿಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಹೆಷ್ಬೋನಿನಲ್ಲಿ ಅಮೋರಿಯರ ಅರಸನಾದ ಸೀಹೋನನು ವಾಸಿಸುತ್ತಿದ್ದನು. ಸೀಹೋನನು ಮೊದಲಿನ ಮೋವಾಬ್ಯರ ಅರಸನೊಡನೆ ಯುದ್ಧ ಮಾಡಿದ್ದನು. ಸೀಹೋನನು ಅರ್ನೋನ್ ನದಿಯವರೆಗಿರುವ ಆ ರಾಜನ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 21:26
13 ತಿಳಿವುಗಳ ಹೋಲಿಕೆ  

ಇಸ್ರಾಯೇಲರು ಆ ಪಟ್ಟಣಗಳನ್ನೆಲ್ಲಾ ವಶಮಾಡಿಕೊಂಡರು. ಇಸ್ರಾಯೇಲರು ಅಮೋರಿಯರ ಸಮಸ್ತ ಪಟ್ಟಣಗಳಲ್ಲಿಯೂ ಹೆಷ್ಬೋನಿನಲ್ಲಿಯೂ ಅದರ ಸಮಸ್ತ ಗ್ರಾಮಗಳಲ್ಲಿಯೂ ವಾಸಮಾಡಿದರು.


ಇದರ ಬಗ್ಗೆ ಕವಿಗಳು ಹೀಗೆಂದು ಹಾಡಿದ್ದಾರೆ: “ಹೆಷ್ಬೋನಿಗೆ ಬನ್ನಿರಿ ಅದನ್ನು ತಿರುಗಿ ಕಟ್ಟಬೇಕು. ಸೀಹೋನನ ಪಟ್ಟಣವನ್ನು ಪುನಃಸ್ಥಾಪನೆ ಮಾಡಬೇಕು.


ಇಸ್ರಾಯೇಲು ಹೆಷ್ಬೋನಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ; ಅರೋಯೇರಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ; ಅರ್ನೋನಿನ ತೀರವಾದ ಎಲ್ಲಾ ಪಟ್ಟಣಗಳಲ್ಲಿಯೂ, ಮುನ್ನೂರು ವರ್ಷಗಳಿಂದ ವಾಸಿಸಿರುವಾಗ, ಇಷ್ಟರವರೆಗೆ ನೀವು ಅದನ್ನು ಬಿಡಿಸದೆ ಹೋದದ್ದೇನು?


ನಿನ್ನ ಕೊರಳು ದಂತದ ಗೋಪುರ. ನಿನ್ನ ಕಣ್ಣುಗಳು ಬತ್ ರಬ್ಬೀಮ್ ಬಾಗಿಲ ಬಳಿಯಲ್ಲಿರುವ ಹೆಷ್ಬೋನಿನ ಕೊಳಗಳು. ನಿನ್ನ ಮೂಗು, ದಮಸ್ಕದ ಕಡೆಗಿರುವ ಲೆಬನೋನಿನ ಗೋಪುರದ ಹಾಗಿದೆ.


“ಓಡಿ ಹೋದವರು ಹೆಷ್ಬೋನಿನ ನೆರಳಿನಲ್ಲಿ ಅದರ ಶಕ್ತಿಯ ನಿಮಿತ್ತ ನಿಂತುಕೊಂಡರು; ಆದರೆ ಹೆಷ್ಬೋನಿನೊಳಗಿಂದ ಬೆಂಕಿಯೂ, ಸೀಹೋನನ ಮಧ್ಯದಿಂದ ಜ್ವಾಲೆಯೂ ಹೊರಟು ಮೋವಾಬಿನ ಮೂಲೆಯನ್ನೂ, ಗದ್ದಲದ ಮಕ್ಕಳ ನಡುನೆತ್ತಿಯನ್ನೂ ದಹಿಸಿಬಿಡುವುದು.


ಅವನು ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿಯರ ಅರಸನಾದ ಸೀಹೋನನನ್ನು ಸೋಲಿಸಿದ ಮೇಲೆಯೂ, ಅಷ್ಟಾರೋತ್‌ನಲ್ಲಿ, ವಾಸಮಾಡಿದ ಬಾಷಾನಿನ ಅರಸನಾದ ಓಗನನ್ನೂ ಎದ್ರೈಯಲ್ಲಿ ಸೋಲಿಸಿದ ಮೇಲೆಯೂ ಮೋಶೆ ಇಸ್ರಾಯೇಲರಿಗೆ ಈ ಮಾತುಗಳನ್ನು ತಿಳಿಸಿದನು.


ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣವು ಮೊದಲುಗೊಂಡು, ಮೇದೆಬಾದ ಬಳಿಯಲ್ಲಿರುವ ಸಕಲ ಸಮನಾದ ಭೂಮಿಯೂ,


ಸಮನಾದ ಭೂಮಿಯಲ್ಲಿರುವ ಹೆಷ್ಬೋನ್ ಪಟ್ಟಣವೂ ಅದರ ಎಲ್ಲಾ ಪಟ್ಟಣಗಳಾದ ದೀಬೋನ್, ಬಾಮೋತ್ ಬಾಳ್, ಬೇತ್ ಬಾಳ್ ಮೆಯೋನ್,


ಯಜ್ಜೇರ್ ಪ್ರದೇಶ, ಗಿಲ್ಯಾದಿನ ಸಮಸ್ತ ಪಟ್ಟಣಗಳೂ ರಬ್ಬಾ ಊರಿನ ಎದುರಾಗಿರುವ ಅರೋಯೇರ್ ಪಟ್ಟಣವರೆಗೂ ಇರುವ ಅಮ್ಮೋನಿಯರ ಅರ್ಧ ದೇಶವು.


ಹೆಷ್ಬೋನನ್ನೂ ಯಜ್ಜೇರನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.


ನಿನ್ನ ತಲೆಯು ಕರ್ಮೆಲ್ ಬೆಟ್ಟದಂತೆ ವೈಭವ. ನಿನ್ನ ತಲೆಕೂದಲು ಧೂಮ್ರ ಬಣ್ಣದ ಹಾಗೆ ಇದೆ. ಹೆಣೆದ ಆ ಜಡೆಯಿಂದ ಅರಸನಿಗೂ ಆಕರ್ಷಣ.


ಮೋವಾಬಿನ ಸ್ತೋತ್ರ ಇನ್ನು ಮೇಲೆ ಇರುವುದೇ ಇಲ್ಲ; ಹೆಷ್ಬೋನಿನಲ್ಲಿ ಅದಕ್ಕೆ ವಿರೋಧವಾಗಿ ಕೇಡನ್ನು ಆಲೋಚಿಸಿದ್ದಾರೆ; ಬನ್ನಿ, ರಾಷ್ಟ್ರವಿಲ್ಲದ ಹಾಗೆ ಅದನ್ನು ಕಡಿದುಬಿಡೋಣ; ಮದ್ಮೆನೇ, ನೀನು ಸಹ ಸುಮ್ಮನಾಗುವೆ; ಖಡ್ಗವು ನಿನ್ನನ್ನು ಹಿಂದಟ್ಟುವುದು.


ಮೋವಾಬು ಚದರಿಹೋಯಿತೆಂದು ನಾಚಿಕೆಗೆ ಈಡಾಗಿದೆ. ಗೋಳಾಡಿರಿ, ಕೂಗಿರಿ; ಮೋವಾಬು ಹಾಳಾಯಿತೆಂದು ಅರ್ನೋನಿನಲ್ಲಿ ತಿಳಿಸಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು