ಅರಣ್ಯಕಾಂಡ 16:9 - ಕನ್ನಡ ಸಮಕಾಲಿಕ ಅನುವಾದ9 ಯೆಹೋವ ದೇವರ ಗುಡಾರದ ಸೇವೆಯನ್ನು ಮಾಡುವುದಕ್ಕೂ, ಸಮೂಹದ ಮುಂದೆ ಇರುವ ಅವರ ಸೇವೆಯಲ್ಲಿ ನಿಲ್ಲುವುದಕ್ಕೂ ಇಸ್ರಾಯೇಲರ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲರೊಳಗಿಂದಲೇ ನಿಮ್ಮನ್ನು ಪ್ರತ್ಯೇಕಿಸಿದ್ದು, ನಿಮಗೆ ಅಲ್ಪವಾಗಿ ತೋರಿತೋ? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಇಸ್ರಾಯೇಲರ ದೇವರಾದ ಯೆಹೋವನು ತನ್ನ ಗುಡಾರದ ಸೇವಾಕಾರ್ಯವನ್ನು ಮಾಡುವುದಕ್ಕೂ, ಸರ್ವಸಮೂಹದವರಿಗೋಸ್ಕರ ಸೇವೆಯನ್ನು ಮಾಡುವುದಕ್ಕೂ ನಿಮ್ಮನ್ನು ಹತ್ತಿರ ಬರಮಾಡಿಕೊಂಡು, ಸಮೂಹದವರಿಂದ ನಿಮ್ಮನ್ನು ಪ್ರತ್ಯೇಕಿಸಿದ್ದು ನಿಮಗೆ ಅಲ್ಪವಾಗಿ ತೋರುತ್ತದೋ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಇಸ್ರಯೇಲರ ದೇವರು ತಮ್ಮ ಸಮೂದಾಯದವರಾದ ನಿಮ್ಮನ್ನು ಪ್ರತ್ಯೇಕಿಸಿ ತಮ್ಮ ಗುಡಾರದ ಪರಿಚರ್ಯವನ್ನು ಮಾಡಲು ಹಾಗೂ ಸರ್ವಸಮುದಾಯದ ಸೇವೆಯನ್ನು ಕೈಗೊಳ್ಳಲು ತಮ್ಮ ಬಳಿಯಲ್ಲೇ ಇಟ್ಟುಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಇಸ್ರಾಯೇಲ್ಯರ ದೇವರು ಅವರ ಸಮೂಹದವರಿಂದ ನಿಮ್ಮನ್ನು ಪ್ರತ್ಯೇಕಿಸಿ ತನ್ನ ಗುಡಾರದ ಪರಿಚರ್ಯವನ್ನು ಮಾಡಲೂ ಸರ್ವಸಮೂಹದವರಿಗೋಸ್ಕರ ಸೇವೆಯನ್ನು ಮಾಡಲೂ [ಕೋರಹನೇ,] ನಿನ್ನನ್ನೂ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಇಸ್ರೇಲರ ದೇವರು ನಿಮ್ಮನ್ನು ಸರ್ವಸಮೂಹದಿಂದ ಆರಿಸಿಕೊಂಡದ್ದಕ್ಕಾಗಿ ನೀವು ಸಂತೋಷಪಡಬೇಕು. ದೇವರ ಪವಿತ್ರ ಗುಡಾರಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವುದಕ್ಕೂ ಇಸ್ರೇಲರ ಸೇವೆಯನ್ನು ಮಾಡುವುದಕ್ಕೂ ಮತ್ತು ಯಜ್ಞಗಳನ್ನು ಸಿದ್ಧಪಡಿಸುವುದರಲ್ಲಿ ಅವರಿಗೆ ಸಹಾಯಮಾಡುವುದಕ್ಕೂ ಯೆಹೋವನು ನಿಮ್ಮನ್ನು ತನ್ನ ಸಮೀಪಕ್ಕೆ ಬರಗೊಡಿಸಿದ್ದಾನೆ. ಅದು ನಿಮಗೆ ಸಾಕಾಗಲಿಲ್ಲವೇ? ಅಧ್ಯಾಯವನ್ನು ನೋಡಿ |
ಅದೇ ಕಾಲದಲ್ಲಿ ಯಾಜಕರಿಗೋಸ್ಕರವೂ, ಲೇವಿಯರಿಗೋಸ್ಕರವೂ ಮೋಶೆಯ ನಿಯಮದಲ್ಲಿ ನೇಮಕವಾದ ಪ್ರಕಾರ, ಪಟ್ಟಣಗಳ ಹೊಲಗಳಿಂದ ಬರಬೇಕಾದ ಪಾಲುಗಳನ್ನು ಕೂಡಿಸುವ ಹಾಗೆ, ಬೊಕ್ಕಸಗಳನ್ನೂ, ಕಾಣಿಕೆಗಳನ್ನೂ, ಪ್ರಥಮ ಫಲಗಳನ್ನೂ, ಹತ್ತನೆಯ ಪಾಲುಗಳನ್ನೂ ಇರಿಸುವ ಉಗ್ರಾಣಗಳ ಮೇಲೆ ಪಾರುಪತ್ಯಗಾರರನ್ನು ನೇಮಿಸಿದರು. ಏಕೆಂದರೆ ಸೇವೆಮಾಡುತ್ತಿದ್ದ ಯಾಜಕರನ್ನೂ, ಲೇವಿಯರನ್ನೂ ಕುರಿತು ಯೆಹೂದದವರು ಬಹು ಸಂತೋಷಪಟ್ಟರು.