Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 16:5 - ಕನ್ನಡ ಸಮಕಾಲಿಕ ಅನುವಾದ

5 ಕೋರಹನಿಗೂ, ಅವನ ಸಮಸ್ತ ಸಮೂಹಕ್ಕೂ, “ಯೆಹೋವ ದೇವರು ತಮ್ಮ ಹತ್ತಿರ ಬರಮಾಡಿಕೊಳ್ಳುವ ಹಾಗೆ ತನ್ನವರು ಯಾರಾರೆಂಬುದನ್ನು ಮತ್ತು ಪರಿಶುದ್ಧ ಯಾರು ಎಂಬುದನ್ನು ನಾಳೆ ತೋರಿಸುವರು. ಅವರು ಯಾರನ್ನು ಆಯ್ದುಕೊಳ್ಳುವರೋ, ಅವರನ್ನು ಹತ್ತಿರ ಬರಮಾಡಿಕೊಳ್ಳುವರು. ನೀವು ಇದನ್ನು ಮಾಡಿರಿ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಮೋಶೆಯು ಕೋರಹನಿಗೂ ಮತ್ತು ಅವನ ಎಲ್ಲಾ ಸಮೂಹದವರಿಗೂ, “ತನ್ನವರು ಯಾರು ಎಂಬುದನ್ನು ಯೆಹೋವನು ನಾಳೆ ತಿಳಿಸುವನು. ಯಾರನ್ನು ಯೆಹೋವನು ಪ್ರತಿಷ್ಠಿಸಿದ್ದಾನೋ, ಯಾರನ್ನು ಆದುಕೊಂಡಿದ್ದಾನೋ ಅವರನ್ನು ಮಾತ್ರ ಆತನು ತನ್ನ ಹತ್ತಿರಕ್ಕೆ ಬರಗೊಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಕೋರಹನಿಗೂ ಅವನ ಪಂಗಡದವರೆಲ್ಲರಿಗೂ ಹೀಗೆಂದನು: “ಸರ್ವೇಶ್ವರ ತನ್ನವರು ಯಾರೆಂದು ನಾಳೆ ತಿಳಿಸುವರು. ಯಾರನ್ನು ಪ್ರತಿಷ್ಠಿಸಿದ್ದಾರೋ ಹಾಗೂ ತಾವೇ ಆರಿಸಿಕೊಂಡಿದ್ದಾರೋ ಅವರನ್ನು ಮಾತ್ರ ತಮ್ಮ ಹತ್ತಿರಕ್ಕೆ ಬರಗೊಳಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ತನ್ನವರು ಯಾರಾರೆಂಬದನ್ನು ಯೆಹೋವನು ನಾಳೆ ತಿಳಿಸುವನು. ಯಾರನ್ನು ಯೆಹೋವನು ಪ್ರತಿಷ್ಠಿಸಿದ್ದಾನೋ ಯಾರನ್ನು ತಾನೇ ಆದು ಕೊಂಡಿದ್ದಾನೋ ಅವರನ್ನು ಮಾತ್ರ ಆತನು ತನ್ನ ಹತ್ತಿರಕ್ಕೆ ಬರಗೊಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಕೋರಹ ಮತ್ತು ಅವನ ಹಿಂಬಾಲಕರೆಲ್ಲರಿಗೆ ಹೇಳಿದ್ದೇನೆಂದರೆ: “ನಾಳೆ ಮುಂಜಾನೆ ಯಾವನು ತನ್ನವನೆಂದು ಮತ್ತು ಪವಿತ್ರನೆಂದು ಯೆಹೋವನು ತೋರಿಸುವನು. ತಾನು ಆರಿಸಿಕೊಂಡವನನ್ನು ಯೆಹೋವನು ತನ್ನ ಹತ್ತಿರ ಬರಮಾಡಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 16:5
38 ತಿಳಿವುಗಳ ಹೋಲಿಕೆ  

ನೀವು ಆಯ್ದುಕೊಂಡು ನಿಮ್ಮ ಬಳಿಗೆ ಬರಮಾಡಿಕೊಳ್ಳುವವನು ಧನ್ಯನು. ಏಕೆಂದರೆ ನಿಮ್ಮ ಅಂಗಳಗಳಲ್ಲಿ ಅವನು ವಾಸವಾಗಿರುವನು. ನಿಮ್ಮ ಪರಿಶುದ್ಧ ಮಂದಿರವಾದ ನಿಮ್ಮ ಆಲಯದ ಒಳ್ಳೆಯ ಸಂಗತಿಗಳಿಂದ ನಮಗೆ ತೃಪ್ತಿಯಾಗಲಿ.


ನಾನು ಯಾವನನ್ನು ಆಯ್ದುಕೊಳ್ಳುತ್ತೇನೋ, ಆ ಮನುಷ್ಯನ ಕೋಲು ಚಿಗುರುವುದು. ಹೀಗೆ ಇಸ್ರಾಯೇಲರು ನಿಮಗೆ ವಿರೋಧವಾಗಿ ಗೊಣಗುಟ್ಟುವುದನ್ನು ನಾನು ನಿಲ್ಲಿಸಿಬಿಡುವೆನು,” ಎಂದರು.


ತರುವಾಯ ಮೋಶೆಯು ಆರೋನನಿಗೆ, “ಯೆಹೋವ ದೇವರು ಹೇಳಿದ್ದು ಇದೇ. ಅದೇನೆಂದರೆ: “ ‘ನನ್ನನ್ನು ಸಮೀಪಿಸುವವರ ಮುಖಾಂತರ ನನ್ನ ಪರಿಶುದ್ಧತೆಯನ್ನು ತೋರಿಸುವೆನು ಮತ್ತು ಜನರೆಲ್ಲರ ಮುಂದೆ ನನ್ನ ಮಹಿಮೆಯನ್ನು ತೋರ್ಪಡಿಸುವೆನು,’ ” ಎಂದನು. ಆಗ ಆರೋನನು ಮಾತನಾಡದೆ ಸುಮ್ಮನಿದ್ದನು.


ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ, “ತನ್ನವರು ಯಾರಾರೆಂಬುದನ್ನು ಕರ್ತದೇವರು ತಿಳಿದಿದ್ದಾರೆ!” ಎಂತಲೂ, “ಕರ್ತದೇವರ ಹೆಸರನ್ನು ಅರಿಕೆಮಾಡುವವರೆಲ್ಲರೂ ದುಷ್ಟತನವನ್ನು ಬಿಟ್ಟುಬಿಡಬೇಕು!” ಎಂತಲೂ ಮುದ್ರೆ ಉಂಟು.


ಅವರು ಮೋಶೆಗೂ, ಆರೋನನಿಗೂ ವಿರೋಧವಾಗಿ ಕೂಡಿಕೊಂಡು, “ನೀವು ಹೆಚ್ಚು ಅಧಿಕಾರ ತೆಗೆದುಕೊಳ್ಳುತ್ತೀರಿ, ಏಕೆಂದರೆ ಈ ಸಮೂಹದಲ್ಲಿರುವ ಎಲ್ಲರೂ ಪರಿಶುದ್ಧರು. ಯೆಹೋವ ದೇವರು ಅವರ ಮಧ್ಯದಲ್ಲಿದ್ದಾರೆ. ಹೀಗಿರಲಾಗಿ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದು ಏಕೆ?” ಎಂದು ಅವರಿಗೆ ಕೇಳಿದರು.


ನಮ್ಮನ್ನು ಒಂದು ರಾಜ್ಯವನ್ನಾಗಿಯೂ ತಮ್ಮ ತಂದೆಯಾದ ದೇವರಿಗೆ ಸೇವೆ ಸಲ್ಲಿಸುವ ಯಾಜಕರನ್ನಾಗಿಯೂ ಮಾಡಿರುವ ಕ್ರಿಸ್ತ ಯೇಸುವಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯು, ಬಲವು ಇರಲಿ ಆಮೆನ್.


“ಆಗ ಅವನು, ‘ನಮ್ಮ ಪಿತೃಗಳ ದೇವರು ತಮ್ಮ ಚಿತ್ತವನ್ನು ನೀನು ತಿಳಿದುಕೊಳ್ಳುವುದಕ್ಕಾಗಿಯೂ ನೀತಿವಂತ ಆಗಿರುವ ಒಬ್ಬರನ್ನು ಕಾಣುವುದಕ್ಕಾಗಿಯೂ ಅವರ ಬಾಯಿಂದ ಒಂದು ಮಾತನ್ನು ಕೇಳುವುದಕ್ಕಾಗಿಯೂ ನಿನ್ನನ್ನು ಮುಂದಾಗಿಯೇ ನೇಮಿಸಿದ್ದಾರೆ.


ಇವರೆಲ್ಲರೂ ಕರ್ತದೇವರನ್ನು ಆರಾಧಿಸಿ, ಉಪವಾಸಮಾಡುತ್ತಿದ್ದರು. ಆಗ ಪವಿತ್ರಾತ್ಮ ದೇವರು, “ಬಾರ್ನಬನನ್ನೂ ಸೌಲನನ್ನೂ ನಾನು ಕರೆದಿರುವ ಕಾರ್ಯಕ್ಕಾಗಿ ಅವರನ್ನು ನನಗಾಗಿ ಪ್ರತ್ಯೇಕಿಸಿರಿ,” ಎಂದರು.


ಆಮೇಲೆ ಅವರು, “ಕರ್ತ ಯೇಸುವೇ, ಪ್ರತಿಯೊಬ್ಬರ ಹೃದಯವನ್ನು ನೀವು ತಿಳಿದವರು. ಈ ಸೇವೆಯಿಂದ ಯೂದನು ಭ್ರಷ್ಟನಾಗಿ ತನಗೆ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ,


ಅಂದರೆ, ಯೇಸು ಆರಿಸಿಕೊಂಡ ಅಪೊಸ್ತಲರಿಗೆ ಪವಿತ್ರಾತ್ಮ ದೇವರ ಮುಖಾಂತರ ಆಜ್ಞಾಪಿಸಿದ ದಿನ ಮೊದಲುಗೊಂಡು ಸ್ವರ್ಗಕ್ಕೆ ಏರಿಹೋಗುವ ದಿನದವರೆಗೆ ಮಾಡಿದ್ದೆಲ್ಲವನ್ನೂ ಬರೆದಿದ್ದೇನೆ.


ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಹೋಗಿ ಫಲಕೊಡುವಂತೆಯೂ ನಿಮ್ಮ ಫಲವು ಸ್ಥಿರವಾಗಿರುವಂತೆಯೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗೆ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅವರು ನಿಮಗೆ ಕೊಡುವರು.


ಆಗ ನೀವು ನೀತಿವಂತನಿಗೂ, ದುಷ್ಟನಿಗೂ, ದೇವರ ಸೇವೆ ಮಾಡುವವನಿಗೂ, ಮಾಡದವನಿಗೂ ಇರುವ ವ್ಯತ್ಯಾಸವನ್ನು ಪುನಃ ನೋಡುವಿರಿ.


ಉತ್ತರಕ್ಕೆ ಅಭಿಮುಖವಾಗಿರುವ ಕೊಠಡಿ ಬಲಿಪೀಠದ ಮೇಲ್ವಿಚಾರಕರಾದ ಯಾಜಕರದು. ಚಾದೋಕನ ಪುತ್ರರಾದ ಇವರು ಲೇವಿಯ ಕುಲದವರಲ್ಲಿ ಯೆಹೋವ ದೇವರ ಸನ್ನಿಧಿಯ ಸೇವಕರಾಗಿದ್ದಾರೆ.”


ದೇವರು ತಮ್ಮ ಸೇವಕ ಮೋಶೆಯನ್ನೂ, ಆಯ್ದುಕೊಂಡ ಆರೋನನನ್ನೂ ಕಳುಹಿಸಿದರು.


ನನ್ನ ಬಲಿಪೀಠದ ಮೇಲೆ ಬಲಿಯನ್ನು ಅರ್ಪಿಸುವುದಕ್ಕೂ, ಧೂಪವನ್ನು ಸುಡುವುದಕ್ಕೂ, ನನ್ನ ಮುಂದೆ ಏಫೋದನ್ನು ಧರಿಸಿಕೊಂಡಿರುವುದಕ್ಕೂ, ನಾನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ನನಗೆ ಯಾಜಕನಾಗಿರಬೇಕೆಂದು ನಾನು ಅವನನ್ನು ಆಯ್ದುಕೊಳ್ಳಲಿಲ್ಲವೋ? ನಿನ್ನ ತಂದೆಯ ಮನೆಗೆ ಇಸ್ರಾಯೇಲರು ಮಾಡುವ ದಹನಬಲಿಗಳನ್ನೆಲ್ಲಾ ಕೊಡಲಿಲ್ಲವೋ?


“ನನಗೆ ಯಾಜಕ ಸೇವೆ ಮಾಡುವುದಕ್ಕೆ ನೀನು ಇಸ್ರಾಯೇಲರಿಂದ ನಿನ್ನ ಅಣ್ಣನಾದ ಆರೋನನನ್ನೂ, ಅವನ ಮಕ್ಕಳಾದ ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್ ಎಂಬುವರನ್ನು ನಿನ್ನ ಹತ್ತಿರ ಬರಮಾಡಬೇಕು.


ಎಲ್ಲರ ಸಂಗಡ ಸಮಾಧಾನದಿಂದ ಜೀವಿಸಲು ಮತ್ತು ಪವಿತ್ರರಾಗಿರಲು ಸರ್ವಪ್ರಯತ್ನ ಮಾಡಿರಿ. ಪರಿಶುದ್ಧತೆಯಿಲ್ಲದೆ ಯಾರೂ ದೇವರನ್ನು ಕಾಣುವುದಿಲ್ಲ.


ಮೊದಲು ಕ್ರಿಸ್ತ ಯೇಸುವಿಗೆ ದೂರವಾಗಿದ್ದ ನೀವು ಈಗ ಕ್ರಿಸ್ತನ ರಕ್ತದ ಮೂಲಕ ಹತ್ತಿರವಾಗಿದ್ದೀರಿ.


ಬಹಳ ಚರ್ಚೆಯಾಗುತ್ತಿರುವಾಗ ಪೇತ್ರನು ಎದ್ದು ನಿಂತು ಅವರಿಗೆ, “ಸಹೋದರರೇ, ಯೆಹೂದ್ಯರಲ್ಲದವರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬಬೇಕೆಂಬ ಉದ್ದೇಶದಿಂದ ನಿಮ್ಮೊಳಗಿಂದ ನನ್ನನ್ನು ದೇವರು ಬಹು ದಿನಗಳ ಹಿಂದೆ ಆಯ್ದುಕೊಂಡರೆಂಬುದು ನಿಮಗೆ ತಿಳಿದೇ ಇದೆ.


“ಆರೋನನನ್ನೂ, ಅವನೊಂದಿಗೆ ಅವನ ಪುತ್ರರನ್ನೂ, ಉಡುಪುಗಳನ್ನೂ, ಅಭಿಷೇಕ ತೈಲವನ್ನೂ, ಪಾಪ ಪರಿಹಾರದ ಬಲಿಗಾಗಿ ಹೋರಿಯನ್ನೂ ಎರಡು ಟಗರುಗಳನ್ನೂ ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯನ್ನೂ ತೆಗೆದುಕೋ.


ಆರೋನನೂ ಅವನ ಪುತ್ರರೂ ದೇವದರ್ಶನದ ಗುಡಾರಕ್ಕೆ ಬರುವ ಸಮಯದಲ್ಲಿಯೂ ಪರಿಶುದ್ಧ ಸ್ಥಳದಲ್ಲಿ ಸೇವೆ ಮಾಡುವುದಕ್ಕೆ ಬಲಿಪೀಠದ ಸಮೀಪಕ್ಕೆ ಬರುವ ಸಮಯದಲ್ಲಿಯೂ ದೋಷವನ್ನು ಹೊತ್ತು ಸಾಯದ ಹಾಗೆ ಇವುಗಳನ್ನು ಹಾಕಿಕೊಂಡಿರಬೇಕು. “ಇದೇ ಆರೋನನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಇರಬೇಕಾದ ನಿತ್ಯವಾದ ಕಟ್ಟಳೆ.


ಕೋರಹನೂ, ಅವನ ಸಮೂಹವೆಲ್ಲವೂ ಧೂಪ ಸುಡುವ ಪಾತ್ರೆಗಳನ್ನು ತೆಗೆದುಕೊಂಡು,


ಮರುದಿವಸದಲ್ಲಿ, ಮೋಶೆಯು ಸಾಕ್ಷಿ ಗುಡಾರದೊಳಗೆ ಪ್ರವೇಶಿಸುವಾಗ, ಲೇವಿಯ ಮನೆಯ ಕೋಲಾಗಿದ್ದ ಆರೋನನ ಕೋಲು ಚಿಗುರಿ, ಮೊಗ್ಗು ಬಿಟ್ಟು, ಹೂವು ಅರಳಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು.


ಅವರ ಪ್ರಮುಖನು ಅವರೊಳಗೆ ಇರುವರು. ಅವರನ್ನು ಆಳುವವನು ಅವರ ಮಧ್ಯದಲ್ಲಿಂದ ಹೊರಡುವನು. ನಾನು ಅವನನ್ನು ಹತ್ತಿರ ಬರಮಾಡುವೆನು. ಅವನು ನನಗೆ ಸಮೀಪಿಸುವನು. ಆದರೆ ನನಗೆ ಸಮೀಪಿಸುವುದಕ್ಕೆ ತನ್ನ ಹೃದಯ ನಿಶ್ಚಯಮಾಡಿಕೊಂಡ ಇವನ್ಯಾರು,’ ಎಂದು ಯೆಹೋವ ದೇವರು ಹೇಳುತ್ತಾರೆ.


“ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ದಟ್ಟ ಅಡವಿಯಿಂದ ಬಲವಾದ ಗೋಮಾಳಕ್ಕೆ ವಿರೋಧವಾಗಿ ಏರಿ ಬರುವನು; ಆದರೆ ನಾನು ಕ್ಷಣಮಾತ್ರದಲ್ಲಿ ಅವರನ್ನು ಅಲ್ಲಿಂದ ದೂರವಾಗಿ ಓಡಿಸಿಬಿಡುವೆನು. ಅದನ್ನು ಕಾಯುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಕರೆಯುವವನು ಯಾರು? ನನಗೆ ಎದುರಾಗಿ ನಿಲ್ಲತಕ್ಕ ಕುರುಬನು ಯಾರು?”


ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ದಟ್ಟ ಅಡವಿಯಿಂದ ಬಲವಾದ ಗೋಮಾಳಕ್ಕೆ ವಿರೋಧವಾಗಿ ಏರಿ ಬರುವನು; ಆದರೆ ನಾನು ಕ್ಷಣಮಾತ್ರದಲ್ಲಿ ಆ ಬಾಬಿಲೋನಿಯರನ್ನು ಅಲ್ಲಿಂದ ದೂರವಾಗಿ ಓಡಿಸಿಬಿಡುವೆನು; ಅದನ್ನು ಕಾಯುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಕರೆಯುವವನು ಯಾರು? ನನಗೆ ಎದುರಾಗಿ ನಿಲ್ಲತಕ್ಕ ಕುರುಬನು ಯಾರು?”


ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ನನಗೆ ಸೇವೆ ಮಾಡುವುದಕ್ಕಾಗಿ ನನ್ನ ಬಳಿಗೆ ಸಮೀಪಿಸುವ ಚಾದೋಕನ ವಂಶದವರಾದ ಯಾಜಕರಿಗೂ ಲೇವಿಯರಿಗೂ ದೋಷಪರಿಹಾರ ಬಲಿಗಾಗಿ ಎಳೆಯ ಹೋರಿಯನ್ನು ಕೊಡಬೇಕು.


ದೇಶದ ಪರಿಶುದ್ಧ ಭಾಗವು ಯೆಹೋವ ದೇವರಿಗೆ ಸೇವೆ ಮಾಡಲು ಸಮೀಪಿಸುವಂತೆ, ಪರಿಶುದ್ಧಸ್ಥಳದ ಸೇವಕರಾದಂಥ ಯಾಜಕರದಾಗಿರಬೇಕು. ಅದು ಅವರ ಮನೆಗಳಿಗೆ ಸ್ಥಳವಾಗಿಯೂ ಪರಿಶುದ್ಧ ಸ್ಥಳಕ್ಕೆ ಪರಿಶುದ್ಧ ಜಾಗವಾಗಿಯೂ ಇರಬೇಕು.


ಅವುಗಳನ್ನು ನಿನ್ನ ಸಹೋದರ ಆರೋನನ ಮತ್ತು ಅವನ ಪುತ್ರರಿಗೆ ತೊಡಿಸಿ, ಅವರನ್ನು ಅಭಿಷೇಕಿಸಿ, ಪ್ರತಿಷ್ಠೆ ಮಾಡು. ಅವರು ನನಗೆ ಯಾಜಕ ಸೇವೆ ಮಾಡುವ ಹಾಗೆ ಅವರನ್ನು ಶುದ್ಧಮಾಡು.


ಆರೋನನ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು