ಅರಣ್ಯಕಾಂಡ 16:42 - ಕನ್ನಡ ಸಮಕಾಲಿಕ ಅನುವಾದ42 ಜನರು ಮೋಶೆಗೂ ಆರೋನನಿಗೂ ವಿರೋಧವಾಗಿ ಕೂಡಿಕೊಂಡಾಗ, ಅವರು ದೇವದರ್ಶನ ಗುಡಾರದ ಕಡೆಗೆ ನೋಡಲಾಗಿ, ಮೇಘವು ಅದನ್ನು ಮುಚ್ಚಿಕೊಂಡು, ಯೆಹೋವ ದೇವರ ಮಹಿಮೆಯು ಕಾಣಬಂತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201942 ಸರ್ವಸಮೂಹದವರೆಲ್ಲರೂ ಹೀಗೆ ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಸೇರಿ ಬಂದಾಗ ದೇವದರ್ಶನದ ಗುಡಾರದ ಮೇಲೆ, ಮೇಘವು ಆವರಿಸಿಕೊಂಡಿತು ಮತ್ತು ಯೆಹೋವನ ತೇಜಸ್ಸು ಅಲ್ಲಿ ಕಾಣಿಸಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)42 ಸಮುದಾಯದವರೆಲ್ಲರೂ ಹೀಗೆ ಮೋಶೆ ಮತ್ತು ಆರೋನರ ವಿರುದ್ಧ ಪ್ರತಿಭಟಿಸಲು ಸಭೆ ಸೇರಿದರು. ಅವರು ದೇವದರ್ಶನದ ಗುಡಾರದತ್ತ ನೋಡಿದಾಗ, ಮೇಘವೊಂದು ಅದನ್ನು ಆವರಿಸಿತು ಮತ್ತು ಸರ್ವೇಶ್ವರನ ತೇಜಸ್ಸು ಹೊಳೆಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)42 ಸಮೂಹದವರೆಲ್ಲರೂ ಹೀಗೆ ಮೋಶೆ ಆರೋನರಿಗೆ ವಿರೋಧವಾಗಿ ಕೂಡಿದ್ದಾಗ ದೇವದರ್ಶನದ ಗುಡಾರದ ಕಡೆಗೆ ನೋಡಲಾಗಿ ಆಹಾ, ಮೇಘವು ಅದನ್ನು ಮುಚ್ಚಿಕೊಂಡಿತು, ಮತ್ತು ಯೆಹೋವನ ತೇಜಸ್ಸು ಹೊಳೆಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್42 ಮೋಶೆ ಆರೋನರನ್ನು ಎದುರಿಸಲು ಜನರು ಒಟ್ಟಾಗಿ ಸೇರಿಬಂದಿದ್ದಾಗ, ದೇವದರ್ಶನಗುಡಾರದ ಕಡೆಗೆ ತಿರುಗಿ ನೋಡಲಾಗಿ, ದೇವದರ್ಶನಗುಡಾರವನ್ನು ಮೋಡ ಮುಚ್ಚಿಕೊಂಡಿರುವುದನ್ನೂ ಯೆಹೋವನ ಮಹಿಮೆಯು ಪ್ರತ್ಯಕ್ಷವಾಗಿರುವುದನ್ನೂ ಅವರು ಕಂಡರು. ಅಧ್ಯಾಯವನ್ನು ನೋಡಿ |