ಅರಣ್ಯಕಾಂಡ 15:38 - ಕನ್ನಡ ಸಮಕಾಲಿಕ ಅನುವಾದ38 “ನೀನು ಇಸ್ರಾಯೇಲರಿಗೆ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ಅವರು ತಮ್ಮ ತಲತಲಾಂತರಗಳಲ್ಲಿ ತಮ್ಮ ವಸ್ತ್ರಗಳ ಸೆರಗುಗಳ ಅಂಚಿನಲ್ಲಿ ಗೊಂಡೆಗಳನ್ನು ಮಾಡಿಕೊಳ್ಳಬೇಕು. ಸೆರಗಿನ ಗೊಂಡೆಗಳ ಮೇಲೆ ನೀಲಿ ದಾರವನ್ನು ಹಾಕಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201938 “ನೀನು ಇಸ್ರಾಯೇಲರ ಸಂತತಿಯವರ ಸಂಗಡ ಮಾತನಾಡಿ, ಅವರು ತಮ್ಮ ವಸ್ತ್ರಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು, ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿ ದಾರದಿಂದ ಕಟ್ಟಿರಬೇಕು ಎಂದು ಅವರಿಗೆ ಆಜ್ಞಾಪಿಸು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)38 “ಇಸ್ರಯೇಲರು ಮತ್ತು ಅವರ ಸಂತತಿಯವರು ತಮ್ಮ ಬಟ್ಟೆಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿದಾರದಿಂದ ಕೂಡಿರಬೇಕೆಂದು ಆಜ್ಞಾಪಿಸು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)38 ಇಸ್ರಾಯೇಲ್ಯರೂ ಅವರ ಸಂತತಿಯವರೂ ತಮ್ಮ ವಸ್ತ್ರಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿದಾರದಿಂದ ಕೂಡಿರಬೇಕೆಂದು ಅವರಿಗೆ ಆಜ್ಞಾಪಿಸು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್38 “ಇಸ್ರೇಲರಿಗೆ ಈ ಸಂಗತಿಗಳನ್ನು ತಿಳಿಸು: ನನ್ನ ಅಪ್ಪಣೆಗಳನ್ನು ಜ್ಞಾಪಕಮಾಡುವುದಕ್ಕೆ ನಿಮಗೆ ಒಂದು ಗುರುತನ್ನು ಕೊಡುತ್ತೇನೆ. ನಿಮ್ಮ ಬಟ್ಟೆಗಳ ಮೂಲೆಯಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿದಾರದಿಂದ ಕೂಡಿರಬೇಕು. ನೀವು ಇವುಗಳನ್ನು ಇಂದಿನಿಂದ ಯಾವಾಗಲೂ ಧರಿಸಿಕೊಳ್ಳಬೇಕು. ಅಧ್ಯಾಯವನ್ನು ನೋಡಿ |