Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 14:34 - ಕನ್ನಡ ಸಮಕಾಲಿಕ ಅನುವಾದ

34 ನೀವು ಆ ದೇಶವನ್ನು ಪರೀಕ್ಷಿಸಿದ ನಲವತ್ತು ದಿವಸಗಳ ಪ್ರಕಾರ ಒಂದು ದಿನಕ್ಕೆ ಒಂದು ವರುಷವಾಗಿ ಈ ಪ್ರಕಾರ ನಲವತ್ತು ವರುಷ ನಿಮ್ಮ ಅಪರಾಧಗಳನ್ನು ಹೊತ್ತು, ನನ್ನ ವಾಗ್ದಾನವನ್ನು ಭಂಗಪಡಿಸಿದ ಫಲವನ್ನು ನೀವು ಅನುಭವಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲ್ವತ್ತು ದಿನಗಳ ಪ್ರಕಾರ, ಒಂದು ದಿನಕ್ಕೆ ಒಂದು ವರ್ಷವಾಗಿ ಈ ಪ್ರಕಾರ ನಲ್ವತ್ತು ವರ್ಷ ನಿಮ್ಮ ಪಾಪಫಲವನ್ನು ಅನುಭವಿಸುವವರಾಗಿ ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ನೀವು ಆ ನಾಡನ್ನು ನಾಲ್ವತ್ತು ದಿನಗಳು ಸಂಚರಿಸಿ ನೋಡಿದಿರಿ. ಅಂತೆಯೇ ಒಂದು ದಿನಕ್ಕೆ ಒಂದು ವರ್ಷದ ಮೇರೆಗೆ ನಾಲ್ವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸಿರಿ; ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ನೀವು ಆ ದೇಶವನ್ನು ಸಂಚರಿಸಿ ನೋಡಿದ ನಾಲ್ವತ್ತು ದಿನಗಳಿಗೆ ಸಮನಾಗಿ, ದಿನ ಒಂದಕ್ಕೆ ಒಂದು ಸಂವತ್ಸರದ ಮೇರೆಗೆ, ನಾಲ್ವತ್ತು ವರುಷ ನಿಮ್ಮ ಪಾಪದ ಫಲವನ್ನು ಅನುಭವಿಸುವವರಾಗಿ ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲವತ್ತು ದಿನಗಳಿಗೆ ಸಮನಾಗಿ, ದಿನ ಒಂದಕ್ಕೆ ಒಂದು ಸಂವತ್ಸರದ ಮೇರೆಗೆ ನಲವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸುವಿರಿ. ನನ್ನನ್ನು ತಿರಸ್ಕರಿಸುವುದೆಂದರೆ ಏನೆಂಬುದು ನಿಮಗೆ ಗೊತ್ತಾಗುತ್ತದೆ.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 14:34
26 ತಿಳಿವುಗಳ ಹೋಲಿಕೆ  

“ನೀನು ಇವುಗಳನ್ನು ಮಾಡಿದ ಮೇಲೆ ಇನ್ನೊಂದು ಸಾರಿ ಬಲಗಡೆಯಲ್ಲಿ ಮಲಗಿ, ಯೆಹೂದ ಜನರ ಅಕ್ರಮವನ್ನು ನಲವತ್ತು ದಿವಸ ಹೊರಬೇಕು. ನಾನು ನಿನಗೆ ಒಂದೊಂದು ದಿನವನ್ನು ಒಂದೊಂದು ವರ್ಷಕ್ಕೆ ನೇಮಿಸಿದ್ದೇನೆ.


ಅವರು ದೇಶವನ್ನು ಸಂಚರಿಸಿ ನೋಡಿ, ನಲವತ್ತು ದಿವಸಗಳಾದ ಮೇಲೆ ತಿರುಗಿ ಬಂದರು.


“ಅಕ್ರಮಗಳನ್ನು ಮುಗಿಸುವುದಕ್ಕೂ, ಪಾಪಗಳನ್ನು ಮುಚ್ಚುವುದಕ್ಕೂ, ಅಪರಾಧಗಳಿಗೆ ಪ್ರಾಯಶ್ಚಿತ್ತ ಮಾಡುವುದಕ್ಕೂ, ನಿತ್ಯವಾದ ನೀತಿಯನ್ನು ಬರಮಾಡುವುದಕ್ಕೂ, ಆ ದರ್ಶನಕ್ಕೂ, ಪ್ರವಾದಿಯ ನುಡಿಗೆ ಮುದ್ರೆಹಾಕುವುದಕ್ಕೂ, ಮಹಾಪರಿಶುದ್ಧ ಸ್ಥಳವನ್ನು ಅಭಿಷೇಕ ಮಾಡುವುದಕ್ಕೂ ನಿನ್ನ ಜನರ ಮೇಲೆಯೂ, ನಿನ್ನ ಪರಿಶುದ್ಧ ಪಟ್ಟಣದ ಮೇಲೆಯೂ ಎಪ್ಪತ್ತು ವಾರಗಳು ಕಳೆಯಬೇಕು ಎಂದು ನಿಷ್ಕರ್ಷೆಯಾಗಿದೆ.


ಹೀಗಿರಲಾಗಿ ದೇವರ ವಿಶ್ರಾಂತಿಯಲ್ಲಿ ಸೇರುವೆವು ಎಂಬ ವಾಗ್ದಾನವು ಇನ್ನೂ ಉಳಿದಿರಲು ನಿಮ್ಮಲ್ಲಿ ಯಾರಾದರೂ ಅದನ್ನು ಹೊಂದದೆ ಇರಬಾರದು ಎಂದು ಎಚ್ಚರವಹಿಸೋಣ.


ನಾಲ್ವತ್ತು ವರ್ಷ ಆ ಸಂತತಿಗೆ ಬೇಸರಗೊಂಡು, ‘ಇವರು ತಮ್ಮ ಹೃದಯದಲ್ಲಿ ತಪ್ಪಿಹೋಗುವ ಜನರಾಗಿದ್ದಾರೆ, ನನ್ನ ಮಾರ್ಗಗಳನ್ನು ಇವರು ಅರಿಯರು,’ ಎಂದೆನು.


ಹೀಗೆ ಯೆರೆಮೀಯನ ಮುಖಾಂತರವಾಗಿ ಹೇಳಿಸಿದ ಯೆಹೋವ ದೇವರ ವಾಕ್ಯವು ನೆರವೇರಿತು. ದೇಶವು ಅದರ ಸಬ್ಬತ್ ದಿನಗಳನ್ನು ಅನುಭವಿಸುವುದಕ್ಕೆ ಮಾರ್ಗವಾಯಿತು. ಅದು ಎಪ್ಪತ್ತು ವರ್ಷ ಹಾಳುಬಿದ್ದು, ಆ ಕಾಲಾವಧಿಯಲ್ಲಿ ವಿಶ್ರಾಂತಿಯನ್ನು ಅನುಭವಿಸುತ್ತಾ ಇತ್ತು.


“ಆದ್ದರಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, ‘ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಯೆಹೋವ ದೇವರು ಹೇಳುವುದೇನೆಂದರೆ: ನನಗೆ ಅದು ದೂರವಾಗಿರಲಿ. ಏಕೆಂದರೆ ನನ್ನನ್ನು ಸನ್ಮಾನಿಸುವವರನ್ನು ನಾನು ಸನ್ಮಾನಿಸುವೆನು. ನನ್ನನ್ನು ತಿರಸ್ಕರಿಸುವವರನ್ನು ನಾನು ತಿರಸ್ಕರಿಸುವೆನು.


ನನ್ನ ಇಬ್ಬರು ಸಾಕ್ಷಿಗಳಿಗೆ ಗೋಣಿತಟ್ಟುಗಳನ್ನು ಹೊದ್ದುಕೊಂಡು, ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವಂತೆ ಮಾಡುವೆನು,”


ಆಗ “ಕೃಪೆ” ಎಂಬ ನನ್ನ ಕೋಲನ್ನು ತೆಗೆದುಕೊಂಡು ಅದನ್ನು ಮುರಿದುಬಿಟ್ಟೆನು. ಹೀಗೆ ಎಲ್ಲಾ ಜನಾಂಗಗಳ ಸಂಗಡ ನಾನು ಮಾಡಿದ್ದ ನನ್ನ ಒಡಂಬಡಿಕೆಯನ್ನು ರದ್ದುಗೊಳಿಸಿದೆನು.


ಅವರು ತಮ್ಮ ಅಕ್ರಮದ ದಂಡನೆಯನ್ನು ಹೊರುವರು. ವಿಚಾರಿಸುವವನ ದಂಡನೆಯು ಹೇಗೆಯೋ ಹಾಗೆಯೇ, ಪ್ರವಾದಿಗೆ ದಂಡನೆಯೂ ಇರುವುದು.


ಹೀಗೆ ದೇವರು ತಮ್ಮ ಪರಿಶುದ್ಧ ವಾಗ್ದಾನವನ್ನೂ, ತಮ್ಮ ಸೇವಕನಾದ ಅಬ್ರಹಾಮನನ್ನೂ ಜ್ಞಾಪಕಮಾಡಿಕೊಂಡರು.


ದೇವರ ಒಡಂಬಡಿಕೆಯ ಪ್ರೀತಿಯು ಸದಾಕಾಲಕ್ಕೆ ನಿಂತು ಹೋಯಿತೋ? ತಲತಲಾಂತರಕ್ಕೂ ವಾಗ್ದಾನ ಮುಗಿದು ಹೋಯಿತೋ?


ಏಕೆಂದರೆ, ನನ್ನ ಅಕ್ರಮಗಳು ನನ್ನ ತಲೆಯ ಮೇಲೆ ಏರಿ ಹೋಗಿವೆ; ದೋಷ ಭಾವನೆಯ ಹೊರೆಯು ನನಗೆ ಬಹುಭಾರವಾಗಿವೆ.


“ತಮ್ಮ ಜನರಾದ ಇಸ್ರಾಯೇಲರಿಗೆ ತಾವು ಮಾತುಕೊಟ್ಟ ಪ್ರಕಾರ ವಿಶ್ರಾಂತಿಯನ್ನು ಕೊಟ್ಟ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಅವರು ತಮ್ಮ ಸೇವಕನಾದ ಮೋಶೆಯ ಮುಖಾಂತರ ಹೇಳಿದ ಎಲ್ಲಾ ಉತ್ತಮವಾದ ವಾಗ್ದಾನಗಳಲ್ಲಿ ಒಂದು ವಾಗ್ದಾನವಾದರೂ ಬಿದ್ದು ಹೋಗಲಿಲ್ಲ.


ಆದರೆ ಲೇವಿಯರೇ ದೇವದರ್ಶನ ಗುಡಾರದ ಸೇವೆಯನ್ನು ಮಾಡಬೇಕು. ಅವರು ಅಲ್ಲಿ ಅಕ್ರಮವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರಬೇಕು. ಇದು ನಿಮ್ಮ ಸಂತತಿಗಳಿಗೆ ಶಾಶ್ವತ ಕಟ್ಟಳೆಯಾಗಿದೆ, ಇಸ್ರಾಯೇಲರ ಮಧ್ಯದಲ್ಲಿ ಲೇವಿಯರಿಗೆ ಸ್ವಾಸ್ತ್ಯ ಇರಬಾರದು.


“ ‘ನೀನು ನಿನ್ನ ತಾಯಿಯ ಸಹೋದರಿ ಇಲ್ಲವೆ ತಂದೆಯ ಸಹೋದರಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಬೇಡ. ಅದು ಸಮೀಪ ಬಂಧುವನ್ನು ಅಗೌರವಿಸಿದ ಹಾಗೆ ಅದಕ್ಕೆ ನೀವಿಬ್ಬರೂ ಜವಾಬ್ದಾರರು.


ಅರಣ್ಯದಲ್ಲಿ ಸುಮಾರು ನಲವತ್ತು ವರ್ಷ ಅವರ ನಡತೆಯನ್ನು ಸಹಿಸಿಕೊಂಡರು.


ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಎಲ್ಲಾ ಕೈಕೆಲಸದಲ್ಲಿ ನಿಮ್ಮನ್ನು ಆಶೀರ್ವದಿಸಿದ್ದಾರೆ. ನೀವು ಈ ದೊಡ್ಡ ಮರುಭೂಮಿಯಲ್ಲಿ ಸಂಚಾರ ಮಾಡಿದ್ದನ್ನು ದೇವರು ಗಮನಿಸಿದ್ದಾರೆ. ಈ ನಲವತ್ತು ವರ್ಷ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಇದ್ದರು. ನಿಮಗೆ ಏನೂ ಕಡಿಮೆ ಆಗಲಿಲ್ಲ.


ನಾನು ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮದ ವರ್ಷಗಳನ್ನು ನಿನಗೆ ನೇಮಿಸಿದ್ದೇನೆ. ಅವು ಮುನ್ನೂರ ತೊಂಬತ್ತು ದಿವಸಗಳಾಗಿವೆ. ಹೀಗೆ ನೀನು ಇಸ್ರಾಯೇಲಿನ ಜನರ ಅಕ್ರಮಗಳನ್ನು ಹೊರಬೇಕು.


ಯೆಹೋವ ದೇವರು ಇಸ್ರಾಯೇಲರ ಮೇಲೆ ಕೋಪೋದ್ರೇಕಗೊಂಡದ್ದರಿಂದ, ಅವರ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ ಸಂತತಿಯು ದಹಿಸುವವರೆಗೆ ಅವರನ್ನು ಮರುಭೂಮಿಯಲ್ಲಿ ನಲವತ್ತು ವರ್ಷ ಅಲೆದಾಡುವಂತೆ ಮಾಡಿದರು.


“ಈಗ ಯೆಹೋವ ದೇವರು ಮೋಶೆಗೆ ಈ ವಾಕ್ಯವನ್ನು ಹೇಳಿದಂದಿನಿಂದ ಇಸ್ರಾಯೇಲರು ಮರುಭೂಮಿಯಲ್ಲಿ ಸಂಚರಿಸಿದ ನಾಲ್ವತ್ತೈದು ವರ್ಷ ಯೆಹೋವ ದೇವರು ಹೇಳಿದ ಹಾಗೆಯೇ ನನ್ನನ್ನು ಜೀವದಿಂದ ಇಟ್ಟಿದ್ದಾರೆ. ಈಗ ನಾನು ಇಂದು ಎಂಬತ್ತೈದು ವರ್ಷ ಪ್ರಾಯದವನಾಗಿದ್ದೇನೆ.


“ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ನನ್ನನ್ನು ಮರೆತುಬಿಟ್ಟು ನನ್ನನ್ನು ನಿನ್ನ ಬೆನ್ನಿನ ಮೇಲೆ ಮರೆಮಾಡಿದ ಮೇಲೆ ನೀನು ನಿನ್ನ ದುಷ್ಕರ್ಮವನ್ನೂ ವ್ಯಭಿಚಾರದ ಪ್ರತಿಫಲವನ್ನೂ ಅನುಭವಿಸಲೇಬೇಕು.”


ಅವರು ತಮ್ಮ ಮಕ್ಕಳನ್ನು ಬೆಳೆಸಿದ್ದರೂ, ಅವರ ಮಕ್ಕಳಲ್ಲಿ ಯಾರೂ ಉಳಿಯದ ಹಾಗೆ ನಾನು ಅವರನ್ನು ಮಕ್ಕಳಿಲ್ಲದವರನ್ನಾಗಿ ಮಾಡುವೆನು. ನಾನು ಅವರನ್ನು ಬಿಟ್ಟು ಹೋಗುವಾಗ ಅವರಿಗೆ ಕಷ್ಟ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು