Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 13:20 - ಕನ್ನಡ ಸಮಕಾಲಿಕ ಅನುವಾದ

20 ಆ ಭೂಮಿಯು ಎಂಥಾದ್ದೋ? ಸಾರವಾದದ್ದೋ? ನಿಸ್ಸಾರವಾದದ್ದೋ? ಮರಗಳುಳ್ಳದ್ದೋ? ಇಲ್ಲದಿರುವುದೋ? ಎಂದು ನೋಡಿರಿ. ನೀವು ಧೈರ್ಯವುಳ್ಳವರಾಗಿದ್ದು, ಆ ಭೂಮಿಯ ಫಲವನ್ನು ತರಬೇಕು,” ಎಂದನು. ಆ ಕಾಲವು ಪ್ರಥಮ ದ್ರಾಕ್ಷಿ ಹಣ್ಣುಗಳ ಕಾಲವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಭೂಮಿಯು ಸಾರವಾದುದೋ ಅಥವಾ ನಿಸ್ಸಾರವಾದುದೋ, ಮರಗಳುಳ್ಳದ್ದೋ ಅಥವಾ ಬಯಲುಪ್ರದೇಶವೋ ಎಂದು ನೋಡಿ ತಿಳಿದುಕೊಳ್ಳಬೇಕು. ಅದಲ್ಲದೆ ನೀವು ಧೈರ್ಯವುಳ್ಳವರಾಗಿದ್ದು ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಬೇಕು” ಎಂದು ಹೇಳಿದನು. ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಭೂಮಿ ಸಾರವತ್ತಾದುದೋ ನಿಸ್ಸಾರವಾದುದೋ ಮರಗಿಡಗಳಿಂದ ಕೂಡಿದೆಯೋ ಬೈಲುಪ್ರದೇಶವಾಗಿದೆಯೋ ನೋಡಿ ತಿಳಿದುಕೊಳ್ಳಿ. ಅದಲ್ಲದೆ, ಆ ನಾಡಿನ ಉತ್ಪನ್ನಗಳಲ್ಲಿ ಕೆಲವನ್ನು ಪ್ರಯಾಸಪಟ್ಟು ತರಬೇಕು.” ಅದು ದ್ರಾಕ್ಷೆಯ ಪ್ರಥಮ ಫಲಕಾಲವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಭೂವಿುಯು ಸಾರವಾದದ್ದೋ ನಿಸ್ಸಾರವಾದದ್ದೋ, ಮರಗಳುಳ್ಳದ್ದೋ ಬೈಲೋ ನೋಡಿ ತಿಳಿದುಕೊಳ್ಳಬೇಕು. ಅದಲ್ಲದೆ ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ಸಾಹಸಮಾಡಿ ತರಬೇಕೆಂದು ಬೋಧಿಸಿದನು. ಆಗ ದ್ರಾಕ್ಷಾಲತೆಗಳ ಪ್ರಥಮಫಲಕಾಲವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಭೂಮಿಯು ಸಾರವಾದದ್ದೋ ಅಥವಾ ನಿಸ್ಸಾರವಾದದ್ದೋ, ಮರಗಳನ್ನು ಹೊಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ಅದಲ್ಲದೆ ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಲು ಪ್ರಯತ್ನ ಮಾಡಿ” ಎಂದು ಹೇಳಿದನು. (ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.)

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 13:20
19 ತಿಳಿವುಗಳ ಹೋಲಿಕೆ  

ಅವನು ನೂನನ ಮಗನಾದ ಯೆಹೋಶುವನಿಗೆ ಆಜ್ಞಾಪಿಸಿ, “ಶೂರನಾಗಿರು, ಧೈರ್ಯವಾಗಿರು, ಏಕೆಂದರೆ ನೀನು ಇಸ್ರಾಯೇಲರನ್ನು ನಾನು ಅವರಿಗೆ ಪ್ರಮಾಣ ಮಾಡಿದ ದೇಶಕ್ಕೆ ತರುವೆ, ನಾನು ನಿನ್ನ ಸಂಗಡ ಇರುವೆನು,” ಎಂದು ಹೇಳಿದನು.


ನಾನು ಒಳ್ಳೆಯ ಮೇವಿನಲ್ಲಿ ಅವುಗಳನ್ನು ಮೇಯಿಸುವೆನು. ಇಸ್ರಾಯೇಲಿನ ಎತ್ತರವಾದ ಪರ್ವತಗಳಲ್ಲಿ ಮಂದೆಯು ಇರುವುದು. ಅವುಗಳು ಆ ಒಳ್ಳೆಯ ಮಂದೆಯಲ್ಲಿ ಮಲಗಿ ಇಸ್ರಾಯೇಲಿನ ಪರ್ವತಗಳ ಮೇಲೆ ಪುಷ್ಟಿಯುಳ್ಳ ಮೇವನ್ನು ಮೇಯುವುವು.


ಅವರು ತಮ್ಮ ರಾಜ್ಯದಲ್ಲಿಯೂ, ನೀವು ಅವರಿಗೆ ಮಾಡಿದ ಮಹಾ ಉಪಕಾರದಲ್ಲಿಯೂ ನೀವು ಅವರಿಗೆ ಕೊಟ್ಟ ವಿಸ್ತಾರವಾದ, ರಸವತ್ತಾದ ದೇಶದಲ್ಲಿಯೂ, ನಿಮ್ಮನ್ನು ಸೇವಿಸಲಿಲ್ಲ. ತಮ್ಮ ಕೆಟ್ಟ ಕಾರ್ಯಗಳನ್ನು ಬಿಟ್ಟು ತಿರುಗಲೂ ಇಲ್ಲ.


ಅವರು ಕೋಟೆ ಪಟ್ಟಣಗಳನ್ನೂ, ರಸವತ್ತಾದ ಭೂಮಿಯನ್ನೂ ವಶಪಡಿಸಿಕೊಂಡರು. ಉತ್ತಮವಾದವುಗಳಿಂದ ತುಂಬಿದ ಮನೆಗಳನ್ನೂ, ಅಗಿದ ಬಾವಿಗಳನ್ನೂ, ದ್ರಾಕ್ಷಿತೋಟಗಳನ್ನೂ, ಓಲಿವ್ ತೋಪುಗಳನ್ನೂ, ಸಮೃದ್ಧಿಯಾದ ಹಣ್ಣಿನ ಮರಗಳನ್ನೂ ಸ್ವಾಧೀನಮಾಡಿಕೊಂಡರು. ಹೀಗೆ ಅವರು ತಿಂದು ತೃಪ್ತಿಪಟ್ಟು, ಪುಷ್ಟಿಯಾಗಿ ನಿಮ್ಮ ಮಹಾ ಉಪಕಾರದಲ್ಲಿ ಆನಂದಿಸುತ್ತಿದ್ದರು.


ಆದ್ದರಿಂದ, “ಕರ್ತದೇವರು ನನ್ನ ಸಹಾಯಕರು, ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?” ಎಂದು ನಾವು ಧೈರ್ಯವಾಗಿ ಹೇಳುವೆವು.


ಎಂತಹ ಸಂಕಟ ನನ್ನದು! ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವವರ ಹಾಗೆಯೂ ದ್ರಾಕ್ಷಿ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ. ತಿನ್ನುವುದಕ್ಕೆ ಗೊಂಚಲೇ ಇಲ್ಲ. ನನಗೆ ಪ್ರಿಯವಾದ ಮೊದಲು ಮಾಗಿದ ಅಂಜೂರದ ಹಣ್ಣುಗಳೂ ಇಲ್ಲ.


“ನನ್ನ ಮಗನೇ, ಯೆಹೋವ ದೇವರು ನಿನ್ನನ್ನು ಕುರಿತು ಹೇಳಿದ ಪ್ರಕಾರ, ನೀನು ಕೃತಾರ್ಥನಾಗಿ, ನೀನು ನಿನ್ನ ದೇವರಾದ ಯೆಹೋವ ದೇವರ ಆಲಯವನ್ನು ಕಟ್ಟಿಸುವಂತೆ ಅವರು ನಿನ್ನ ಸಂಗಡ ಇರಲಿ.


ಆಗ ಯೆರಿಕೋವಿನ ಅರಸನು ರಾಹಾಬಳಿಗೆ, “ನಿನ್ನ ಬಳಿಗೆ ಬಂದು ನಿನ್ನ ಮನೆಯಲ್ಲಿ ಪ್ರವೇಶಿಸಿದ ಮನುಷ್ಯರನ್ನು ಹೊರಗೆ ಕರೆದುಕೊಂಡು ಬಾ. ಏಕೆಂದರೆ ಅವರು ದೇಶವನ್ನೆಲ್ಲಾ ಗೂಢಚಾರ ಮಾಡಲು ಬಂದಿದ್ದಾರೆ,” ಎಂದನು.


ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ, ಬಲಿಷ್ಠನಾಗಿರು. ಧೈರ್ಯದಿಂದಿರು, ಭಯಪಡಬೇಡ, ನಿರುತ್ಸಾಹಗೊಳ್ಳಬೇಡ. ಏಕೆಂದರೆ ನೀನು ಹೋಗುವ ಕಡೆಯೆಲ್ಲಾ ನಿನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ,” ಎಂದು ಹೇಳಿದರು.


ಬಲಿಷ್ಠನಾಗಿರು, ಧೈರ್ಯದಿಂದಿರು. ಏಕೆಂದರೆ ನಾನು ಈ ಜನರಿಗೆ ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನು ಇವರಿಗೆ ಸ್ವಾಧೀನಪಡಿಸಬೇಕಾದವನು ನೀನೇ.


ಆ ದೇಶದ ಫಲದಲ್ಲಿ ಕೆಲವನ್ನು ಕೈಯಲ್ಲಿ ತೆಗೆದುಕೊಂಡು, ನಮ್ಮ ಬಳಿಗೆ ತಂದು ತೋರಿಸಿ, “ನಮ್ಮ ದೇವರಾದ ಯೆಹೋವ ದೇವರು ನಮಗೆ ಕೊಡುವ ದೇಶವು ಒಳ್ಳೆಯದು,” ಎಂದು ವರದಿಮಾಡಿದರು.


ಅವರು ವಾಸಿಸುವ ದೇಶವು ಎಂಥಾದ್ದೋ? ಅದು ಒಳ್ಳೆಯದಾಗಿದೆಯೋ, ಕೆಟ್ಟದ್ದಾಗಿದೆಯೋ? ಅವರು ವಾಸಿಸುವ ಪಟ್ಟಣಗಳು ಎಂಥವುಗಳೋ? ಅವರು ವಾಸಿಸುವುದು ಡೇರೆಗಳಲ್ಲಿಯೋ, ಬಲವಾದ ಕೋಟೆಗಳಲ್ಲಿಯೋ? ಎಂದೂ,


ಅವರು ಹೋಗಿ ಬೆಟ್ಟವನ್ನೇರಿ, ಎಷ್ಕೋಲೆಂಬ ಹಳ್ಳದ ಬಳಿಗೆ ಬಂದು, ಅದನ್ನು ಸಂಚರಿಸಿ ನೋಡಿ,


ನೆಮ್ಮದಿಯ ಕಾಲದಲ್ಲಿ ಸಂಸ್ಥಾನಗಳ ಫಲವತ್ತಾದ ಪ್ರದೇಶಗಳಲ್ಲಿ ನುಗ್ಗಿ, ತಂದೆ ತಾತಂದಿರು ಮಾಡದ ಕಾರ್ಯಗಳನ್ನು ಮಾಡುವನು. ಸೂರೆ, ಸುಲಿಗೆ, ಕೊಳ್ಳೆ ಹೊಡೆದವುಗಳನ್ನು, ತನ್ನನ್ನು ಅವರಿಗೆ ಹಂಚುವನು. ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕ್ಲುಪ್ತಕಾಲದ ತನಕ ಕಲ್ಪಿಸುತ್ತಿರುವನು.


ನೂನನ ಮಗನಾದ ಯೆಹೋಶುವನು ಇಬ್ಬರು ಗೂಢಚಾರರನ್ನು ಶಿಟ್ಟೀಮಿನಿಂದ ಗುಪ್ತವಾಗಿ ಕಳುಹಿಸಿ, ಅವರಿಗೆ, “ನೀವು ಹೋಗಿ ದೇಶವನ್ನೂ, ವಿಶೇಷವಾಗಿ ಯೆರಿಕೋ ಪಟ್ಟಣವನ್ನೂ ಸುತ್ತಿ ನೋಡಿರಿ,” ಎಂದನು. ಅವರು ಹೋಗಿ ರಾಹಾಬಳೆಂಬ ಹೆಸರುಳ್ಳ ಒಬ್ಬ ವೇಶ್ಯೆಯ ಮನೆಯಲ್ಲಿ ಇಳಿದು ಅಲ್ಲಿಯೇ ಉಳಿದುಕೊಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು