Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 11:32 - ಕನ್ನಡ ಸಮಕಾಲಿಕ ಅನುವಾದ

32 ಜನರು ಆ ದಿನವೆಲ್ಲಾ, ಆ ರಾತ್ರಿಯೆಲ್ಲಾ, ಮರು ದಿವಸವೆಲ್ಲಾ ಲಾವಕ್ಕಿಗಳನ್ನು ಕೂಡಿಸಿದರು. ಕಡಿಮೆ ಕೂಡಿಸಿದವನು ಸಾವಿರ ಕಿಲೋಗ್ರಾಮಿನಷ್ಟು ಕೂಡಿಸಿದನು. ಅವರು ಪಾಳೆಯದ ಸುತ್ತಲೂ ಅವುಗಳನ್ನು ಹರಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಇಸ್ರಾಯೇಲರು ಆ ದಿನವೆಲ್ಲಾ, ರಾತ್ರಿಯೆಲ್ಲಾ, ಮರುದಿನವೆಲ್ಲಾ ಲಾವಕ್ಕಿಗಳನ್ನು ಕೂಡಿಸಿದರು. ಯಾರು ಹತ್ತು ಹೋಮೆರಿಗಿಂತ ಕಡಿಮೆ ಕೂಡಿಸಿಕೊಳ್ಳಲಿಲ್ಲ. ಅವರು ಪಾಳೆಯದ ಸುತ್ತಲೂ ಅವುಗಳನ್ನು ಹರಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಇಸ್ರಯೇಲರು ಆ ದಿನ ಹಗಲಿರುಳೂ ಮರುದಿನ ಹಗಲೂ ಆ ಲಾವಕ್ಕಿಗಳನ್ನು ಕೂಡಿಸಿಕೊಂಡರು. ಕಡಿಮೆ ಕೂಡಿಸಿಕೊಂಡವರು ಕೂಡ ಸಾವಿರ ಕಿಲೋಗ್ರಾಂನಷ್ಟು ಕೂಡಿಸಿಕೊಂಡರು. ಅವುಗಳನ್ನು ಪಾಳೆಯದ ಸುತ್ತಲೂ ಹರವಿ ಒಣಗಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಇಸ್ರಾಯೇಲ್ಯರು ಎದ್ದು ಆ ದಿನ ಹಗಲಿರುಳೂ ಮರುದಿನ ಹಗಲೂ ಆ ಲಾವಕ್ಕಿಗಳನ್ನು ಕೂಡಿಸಿಕೊಳ್ಳುತ್ತಿದ್ದರು; ಸ್ವಲ್ಪವಾಗಿ ಕೂಡಿಸಿಕೊಂಡವರು ಹದಿನೆಂಟು ಖಂಡುಗ ಕೂಡಿಸಿದರು. ಅವುಗಳನ್ನು ಪಾಳೆಯದ ಸುತ್ತಲೂ ಹರವಿ ಒಣಗಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಜನರು ಎದ್ದು ಆ ದಿನವೆಲ್ಲಾ ಮತ್ತು ರಾತ್ರಿಯೆಲ್ಲಾ ಮತ್ತು ಮರುದಿನವೆಲ್ಲಾ ಲಾವಕ್ಕಿಗಳನ್ನು ಕೂಡಿಸಿಕೊಂಡರು. ಸ್ವಲ್ಪ ಕೂಡಿಸಿಕೊಂಡವನು ಅರವತ್ತು ಕಿಲೋಗ್ರಾಂ ಕೂಡಿಸಿಕೊಂಡನು. ಬಳಿಕ ಜನರು ಲಾವಕ್ಕಿಗಳ ಮಾಂಸವನ್ನು ಪಾಳೆಯದ ಸುತ್ತಲೂ ಹರಡಿ ಬಿಸಿಲಿನಲ್ಲಿ ಒಣಗಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 11:32
3 ತಿಳಿವುಗಳ ಹೋಲಿಕೆ  

ಎಫಾ ಎಂಬ ಧಾನ್ಯದ ಅಳತೆ ಮತ್ತು ಬತ್ ಎಂಬ ರಸದ್ರವ್ಯದ ಅಳತೆ ಒಂದೇ ಪ್ರಮಾಣವಾಗಿರಬೇಕು; ಬತ್ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು, ಎಫಾ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು; ಈ ಹೋಮೆರ್ ಎರಡಕ್ಕೂ ಪ್ರಮಾಣಿತ ಅಳತೆಗೆ ಸಂಬಂಧವಾಗಿರಬೇಕು.


ಓಮೆರ್ ಎಂದರೆ ಏಫಾದಲ್ಲಿ ಹತ್ತನೆಯ ಒಂದು ಪಾಲು ಹಿಡಿಯುವಂಥ ಅಳತೆ.


ಆದರೆ ಮಾಂಸವು ಇನ್ನೂ ಅವರ ಹಲ್ಲುಗಳ ನಡುವೆ ಇದ್ದಾಗ, ಅದನ್ನು ಅಗಿಯುವುದಕ್ಕಿಂತ ಮುಂಚೆ ಯೆಹೋವ ದೇವರು ಜನರನ್ನು ಘೋರ ವ್ಯಾಧಿಯಿಂದ ಸಾಯಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು