Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 11:10 - ಕನ್ನಡ ಸಮಕಾಲಿಕ ಅನುವಾದ

10 ಆಗ ಪ್ರತಿಯೊಂದು ಕುಟುಂಬದ ಜನರು ತಮ್ಮ ಗುಡಾರದ ಬಾಗಿಲಿನಲ್ಲಿ ನಿಂತು ಅಳುವುದನ್ನು ಮೋಶೆ ಕೇಳಿದನು. ಯೆಹೋವ ದೇವರು ಬಹಳ ಕೋಪಗೊಂಡರು. ಮೋಶೆ ಗಲಿಬಿಲಿಗೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಎಲ್ಲಾ ಕುಟುಂಬದವರೂ ತಮ್ಮ ತಮ್ಮ ಡೇರೆ ಬಾಗಿಲುಗಳಲ್ಲಿ ನಿಂತು ಕಣ್ಣೀರಿಟ್ಟು ಅಳುವ ಆ ಶಬ್ದವು ಮೋಶೆಗೆ ಕೇಳಿಸಿತು. ಆಗ ಯೆಹೋವನು ಬಹಳ ಕೋಪಗೊಂಡನು. ಅವರ ಗುಣುಗುಟ್ಟುವಿಕೆಯಿಂದ ಮೋಶೆಗೆ ಬೇಸರವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಎಲ್ಲ ಕುಟುಂಬದವರು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತು ನಿಷ್ಠೂರವಾಗಿ ಮಾತನಾಡಿಕೊಳ್ಳುತ್ತಿದ್ದದ್ದು ಮೋಶೆಗೆ ಕೇಳಿಸಿತು. ಆಗ ಸರ್ವೇಶ್ವರನ ಕೋಪ ಉಕ್ಕೇರಿತು; ಮೋಶೆಗೆ ಇದನ್ನು ಸಹಿಸಲಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಎಲ್ಲಾ ಕುಟುಂಬದವರೂ ತಮ್ಮ ತಮ್ಮ ಡೇರೇಬಾಗಲುಗಳಲ್ಲಿ ನಿಂತು ಅಳುತ್ತಿರಲಾಗಿ ಆ ಶಬ್ದವು ಮೋಶೆಗೆ ಕೇಳಿಸಿತು. ಆಗ ಯೆಹೋವನು ಬಹಳ ಕೋಪಗೊಂಡನು. ಮೋಶೆಗೆ ಬೇಸರವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಎಲ್ಲಾ ಕುಟುಂಬದವರೂ ತಮ್ಮತಮ್ಮ ಗುಡಾರದ ಬಾಗಿಲುಗಳಲ್ಲಿ ನಿಂತು ಗುಣಗುಟ್ಟುತ್ತಿರುವ ಶಬ್ದವು ಮೋಶೆಗೆ ಕೇಳಿಸಿತು. ಆಗ ಯೆಹೋವನು ಬಹು ಕೋಪಗೊಂಡನು. ಇದರಿಂದಾಗಿ ಮೋಶೆಗೆ ಬಹಳ ಬೇಸರವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 11:10
19 ತಿಳಿವುಗಳ ಹೋಲಿಕೆ  

ಯೆಹೋವ ದೇವರು ಇದನ್ನು ಕೇಳಿ ಬೇಸರಗೊಂಡರು. ಯಾಕೋಬ್ಯರಲ್ಲಿ ಬೆಂಕಿ ಹೊತ್ತಿತು. ಇಸ್ರಾಯೇಲರು ದಂಡನೆಗೆ ಒಳಗಾದರು.


ಯೇಸು ಅದನ್ನು ಕಂಡಾಗ ಕೋಪಗೊಂಡು ಅವರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ. ಅವುಗಳಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಇಂಥವರದೇ.


ಆಗ ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ನೋಡಿ, ಅವರ ಹೃದಯಕಾಠಿಣ್ಯಕ್ಕಾಗಿ ದುಃಖಪಟ್ಟು, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದು ಹೇಳಿದರು. ಅವನು ಕೈಚಾಚಿದಾಗ, ಅವನ ಕೈ ಸಂಪೂರ್ಣವಾಗಿ ಗುಣವಾಯಿತು.


ಆಗ ನಿನ್ನ ದೋಷದಿಂದಲೇ ನೀನು ನಾನು ನಿನಗೆ ಕೊಟ್ಟ ಸೊತ್ತನ್ನು ಬಿಟ್ಟು ಬಿಡುವೆ. ನಿನಗೆ ತಿಳಿಯದ ದೇಶದಲ್ಲಿ ನಿನ್ನನ್ನು ನಿನ್ನ ಶತ್ರುಗಳಿಗೆ ದಾಸರನ್ನಾಗಿ ಮಾಡುವೆನು. ಏಕೆಂದರೆ ನೀವು ನನ್ನ ರೋಷಾಗ್ನಿಯನ್ನು ಹತ್ತಿಸಿದ್ದೀರಿ. ಅದು ನಿತ್ಯವೂ ಪ್ರಜ್ವಲಿಸುತ್ತಿರುವುದು.”


ಆದಕಾರಣ ಯೆಹೋವ ದೇವರು ಕೋಪಗೊಂಡು ಜನರಿಗೆ ವಿರೋಧವಾಗಿ ಉರಿಗೊಂಡು ಅವರ ಮೇಲೆ ತಮ್ಮ ಕೈಚಾಚಿ, ಅವರನ್ನು ಹೊಡೆದಿದ್ದಾರೆ, ಬೆಟ್ಟಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿರುವುವು. ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇರುವುದು.


ಯೆಹೋವ ದೇವರೇ, ನಿಮ್ಮನ್ನು ದ್ವೇಷಿಸುವವರನ್ನು ನಾನು ದ್ವೇಷಿಸದಿರುವೆನೋ? ನಿಮಗೆ ವಿರೋಧವಾಗಿ ತಿರುಗಿ ಬಿದ್ದವರನ್ನು ನಾನು ಹೀನೈಸದಿರುವೆನೋ?


ತಮ್ಮ ಗುಡಾರಗಳಲ್ಲಿ ಗೊಣಗುಟ್ಟಿ ಯೆಹೋವ ದೇವರ ಮಾತನ್ನು ಹೇಳದೆ ಹೋದರು.


ದೇವರು ಇದನ್ನು ಕಂಡಾಗ, ಬೇಸರಗೊಂಡು ಇಸ್ರಾಯೇಲನ್ನು ಪರಿಪೂರ್ಣವಾಗಿ ತಿರಸ್ಕರಿಸಿಬಿಟ್ಟರು.


ಏಕೆಂದರೆ ನನ್ನ ರೋಷ ಬೆಂಕಿಯಂತಿದೆ, ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ, ಅದರ ಫಲವನ್ನೂ ತಿಂದು ಬಿಟ್ಟು, ಬೆಟ್ಟಗಳ ಅಸ್ತಿವಾರವನ್ನು ದಹಿಸುವುದು.


ಆದಕಾರಣ ಜನರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತನಾಡಿ, “ನಾವು ಮರುಭೂಮಿಯಲ್ಲಿ ಸಾಯುವ ಹಾಗೆ ನಮ್ಮನ್ನು ಈಜಿಪ್ಟ್ ದೇಶದಿಂದ ಏಕೆ ಬರಮಾಡಿದ್ದೀರಿ? ಇಲ್ಲಿ ರೊಟ್ಟಿ ಇಲ್ಲ, ನೀರೂ ಇಲ್ಲ. ನಾವು ಈ ನಿಸ್ಸಾರವಾದ ರೊಟ್ಟಿಯನ್ನು ತಿಂದು ನಮಗೆ ಬೇಸರವಾಗಿದೆ,” ಎಂದರು.


ಆಗ ಅವರು ಕೋರಹನ ದಾತಾನ್, ಅಬೀರಾಮರ ಡೇರೆಗಳ ಸುತ್ತಲಿಂದ ದೂರ ಹೋದರು. ದಾತಾನನೂ, ಅಬೀರಾಮನೂ ತಮ್ಮ ಹೆಂಡತಿಯರೂ, ಪುತ್ರರೂ, ಚಿಕ್ಕ ಮಕ್ಕಳೂ ತಮ್ಮ ಗುಡಾರಗಳ ಬಾಗಿಲುಗಳಲ್ಲಿ ನಿಂತುಕೊಂಡರು.


ಆದರೆ ಮೋಶೆ ಎಂಬವನು ಭೂಲೋಕದಲ್ಲಿರುವ ಸಕಲ ಮನುಷ್ಯರೆಲ್ಲರಿಗಿಂತ ಬಹು ದೀನನಾಗಿದ್ದನು.


ಇಸ್ರಾಯೇಲ್ ಜನರು ತಮಗೆ ಕಷ್ಟವಾಯಿತೆಂದು ಗೊಣಗುಟ್ಟಿದಾಗ, ಯೆಹೋವ ದೇವರು ಅದನ್ನು ಕೇಳಿ ಕೋಪಗೊಂಡು ಅವರ ಮಧ್ಯದಲ್ಲಿ ಬೆಂಕಿ ಬೀಳುವಂತೆ ಮಾಡಿದ್ದರಿಂದ ಅವರ ಪಾಳೆಯದ ಕಟ್ಟಕಡೆಯ ಭಾಗದಲ್ಲಿದ್ದವರು ಸುಟ್ಟುಹೋದರು.


ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುವಾಗ ಅದರೊಂದಿಗೆ ಮನ್ನವು ಬೀಳುತ್ತಿತ್ತು.


ಮೋಶೆಯು ಯೆಹೋವ ದೇವರಿಗೆ, “ಈ ಎಲ್ಲಾ ಜನರ ಭಾರವನ್ನು ನನ್ನ ಮೇಲೆ ಹೊರಿಸಿ ನೀವು ಏಕೆ ತೊಂದರೆಯನ್ನು ನಿಮ್ಮ ಸೇವಕನ ಮೇಲೆ ತಂದಿದ್ದೀರಿ? ನಿಮ್ಮನ್ನು ಅತೃಪ್ತಿಗೊಳಿಸಲು ನಾನೇನು ಮಾಡಿದ್ದೇನೆ?


ಆಗ ಯೆಹೋವ ದೇವರು ಅವರ ಮೇಲೆ ಕೋಪಗೊಂಡು ಹೊರಟು ಹೋದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು