Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 10:33 - ಕನ್ನಡ ಸಮಕಾಲಿಕ ಅನುವಾದ

33 ಅವರು ಯೆಹೋವ ದೇವರ ಪರ್ವತದ ಬಳಿಯಿಂದ ಮೂರು ದಿವಸಗಳವರೆಗೆ ಪ್ರಯಾಣಮಾಡಿದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅವರಿಗೆ ಇಳಿದುಕೊಳ್ಳುವ ಸ್ಥಳವನ್ನು ಹುಡುಕುವುದಕ್ಕೆ ಅವರ ಮೂರು ದಿವಸಗಳ ಪ್ರಯಾಣದಲ್ಲಿ ಅವರ ಮುಂದಾಗಿ ಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಅವರು ಯೆಹೋವನ ಬೆಟ್ಟವನ್ನು ಬಿಟ್ಟು ಮೂರು ದಿನದ ಪ್ರಯಾಣದಷ್ಟು ದೂರ ಹೋದರು. ಇಳಿದುಕೊಳ್ಳಲು ಸೂಕ್ತವಾದ ಸ್ಥಳವನ್ನು ನೋಡುವುದಕ್ಕಾಗಿ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಮೂರು ದಿನಗಳು ಅವರ ಮುಂದಾಗಿ ಹೋಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಅವರು ಸರ್ವೇಶ್ವರನ ಬೆಟ್ಟವನ್ನು ಬಿಟ್ಟು ಮೂರುದಿನದ ಪ್ರಯಾಣದಷ್ಟು ದೂರಹೋದರು. ಇಳಿದುಕೊಳ್ಳಲು ಸೂಕ್ತವಾದ ಸ್ಥಳವನ್ನು ನೋಡಲು ಸರ್ವೇಶ್ವರನ ಒಡಂಬಡಿಕೆಯ ಮಂಜೂಷವು ಆ ಮೂರು ದಿವಸ ಅವರಿಗೆ ಮುಂದಾಗಿ ಹೋಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಅವರು ಯೆಹೋವನ ಬೆಟ್ಟವನ್ನು ಬಿಟ್ಟು ಮೂರು ದಿನದ ಪ್ರಯಾಣದಷ್ಟು ದೂರ ಹೋದರು. ಇಳುಕೊಳ್ಳತಕ್ಕ ಸ್ಥಳವನ್ನು ನೋಡುವದಕ್ಕೋಸ್ಕರ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಮೂರು ದಿವಸ ಅವರ ಮುಂದಾಗಿ ಹೋಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಅವರು ಯೆಹೋವನ ಬೆಟ್ಟದಿಂದ ಹೊರಟು ಮೂರು ದಿನ ಪ್ರಯಾಣ ಮಾಡಿದರು. ಲೇವಿಯರು ಹೊತ್ತುಕೊಂಡಿದ್ದ ಯೆಹೋವನ ಒಡಂಬಡಿಕೆ ಪೆಟ್ಟಿಗೆಯು ಮತ್ತೆ ಪಾಳೆಯ ಹಾಕಲು ಯೋಗ್ಯವಾದ ಸ್ಥಳವನ್ನು ಎದುರು ನೋಡುತ್ತಾ ಜನರ ಮುಂದೆ ಮೂರು ದಿನಗಳವರೆಗೆ ಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 10:33
25 ತಿಳಿವುಗಳ ಹೋಲಿಕೆ  

ಅವರೇ ನಿಮಗೆ ಇಳಿದುಕೊಳ್ಳುವುದಕ್ಕೆ ಸ್ಥಳವನ್ನು ಗೊತ್ತುಮಾಡಿ ನೀವು ಹೋಗತಕ್ಕ ಮಾರ್ಗವನ್ನು ನಿಮಗೆ ತೋರಿಸಲು ರಾತ್ರಿ ಹೊತ್ತು ಬೆಂಕಿಯಲ್ಲಿಯೂ ಹಗಲು ಹೊತ್ತು ಮೇಘದಲ್ಲಿಯೂ ನಿಮ್ಮ ಮುಂದೆ ಹೋದರು.


ಮೋಶೆಯು ತನ್ನ ಮಾವನೂ ಮಿದ್ಯಾನಿನ ಯಾಜಕನೂ ಆದ ಇತ್ರೋವನ ಮಂದೆಯನ್ನು ಮೇಯಿಸುತ್ತಿದ್ದನು. ಮರುಭೂಮಿಯ ಹಿಂಭಾಗಕ್ಕೆ ನಡೆಸಿಕೊಂಡು ಹೋಗಿ ಹೋರೇಬ್ ಎಂಬ ದೇವರ ಬೆಟ್ಟಕ್ಕೆ ಬಂದನು.


ಕುರಿ ಹಿಂಡಿಗೆ ಮಹಾಕುರುಬ ಆಗಿರುವ ನಮ್ಮ ಕರ್ತ ಯೇಸುವನ್ನು ನಿತ್ಯಒಡಂಬಡಿಕೆಯ ರಕ್ತದ ಮೂಲಕ ಸಮಾಧಾನದ ದೇವರು ಸತ್ತವರೊಳಗಿಂದ ಜೀವಂತವಾಗಿ ಬರಮಾಡಿದರು.


ನಾನು ಅವರಿಗೆ ಪ್ರಮಾಣಮಾಡಿ ಈಜಿಪ್ಟ್ ದೇಶದಿಂದ ಹೊರಗೆ ತಂದು, ಅವರಿಗೋಸ್ಕರ ನಾನೇ ನೋಡಿಕೊಂಡಂಥ ಹಾಲೂ ಜೇನೂ ಹರಿಯುವ ಕೀರ್ತಿಯುಳ್ಳ ದೇಶಕ್ಕೆ ಅವರನ್ನು ಆ ದಿವಸದಲ್ಲಿ ಕರೆತಂದೆನು.


ಯೆಹೋವ ದೇವರು ಹೀಗೆ ಹೇಳುತ್ತಾರೆ: “ಮಾರ್ಗಗಳಲ್ಲಿ ನಿಂತುಕೊಂಡು ನೋಡಿರಿ, ಮೊದಲಿನ ಹಾದಿಗಳನ್ನು ಕೇಳಿಕೊಳ್ಳಿರಿ, ಒಳ್ಳೆಯ ಮಾರ್ಗ ಎಲ್ಲಿದೆಯೋ ಅದರಲ್ಲಿ ನಡೆಯಿರಿ. ಆಗ ನಿಮ್ಮ ಪ್ರಾಣಗಳಿಗೆ ವಿಶ್ರಾಂತಿ ಸಿಕ್ಕುವುದು, ಆದರೆ ಅವರು, ‘ನಾವು ನಡೆಯುವುದಿಲ್ಲ,’ ಎಂದರು.


ನೀವು ದೇಶದಲ್ಲಿ ಅಭಿವೃದ್ಧಿಯಾಗಿ ಫಲವುಳ್ಳವರಾದ ಮೇಲೆ ಆ ದಿವಸಗಳಲ್ಲಿ, ‘ಯೆಹೋವ ದೇವರ ಒಡಂಬಡಿಕೆಯ ಮಂಜೂಷವು,’ ಎಂದು ಇನ್ನು ಮೇಲೆ ಅವರು ಹೇಳದಿರುವರು. ಅದು ಮನಸ್ಸಿಗೆ ಬರುವುದಿಲ್ಲ, ಯಾರು ಅದನ್ನು ಸ್ಮರಿಸುವುದಿಲ್ಲ, ಅದರ ಬಗ್ಗೆ ವಿಚಾರಿಸುವುದೂ ಇಲ್ಲ; ಇನ್ನು ಮೇಲೆ ಸರಿಯಾಗುವುದಿಲ್ಲ ಎಂದು ಯೆಹೋವ ದೇವರು ನುಡಿಯುತ್ತಾರೆ.


ಯೆಹೋವ ದೇವರು ಹೇಳುವುದೇನೆಂದರೆ: “ಆಕಾಶವೇ ನನ್ನ ಸಿಂಹಾಸನ, ಭೂಮಿಯೇ ನನ್ನ ಪಾದ ಪೀಠ, ನೀವು ನನಗೋಸ್ಕರ ಕಟ್ಟುವ ಮನೆ ಎಲ್ಲಿ? ನನ್ನ ವಿಶ್ರಾಂತಿಯ ಸ್ಥಳವು ಎಲ್ಲಿ?


ಆತನು ಮೊದಲು, “ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ, ಬಳಲಿದವರನ್ನು ವಿಶ್ರಮಗೊಳಿಸಿರಿ. ನಿಮಗೆ ಅನುಕೂಲವಾದ ಉಪಶಮನ ಇದೇ,” ಎಂದು ಹೇಳಿದಾಗಲೂ ಅವರು ಕೇಳಲಿಲ್ಲ.


ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,’ ” ಎಂದು ನಾನು ಅಸಂತೋಷದಿಂದ ಆಣೆ ಇಟ್ಟುಕೊಂಡೆನು.


ಜನರು ಪಾಳೆಯಕ್ಕೆ ಬಂದಾಗ ಇಸ್ರಾಯೇಲಿನ ಹಿರಿಯರು, “ಈ ಹೊತ್ತು ಯೆಹೋವ ದೇವರು ಫಿಲಿಷ್ಟಿಯರ ಮುಂದೆ ನಮ್ಮನ್ನು ಹೊಡೆಸಿದ್ದೇನು? ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ನಮ್ಮಲ್ಲಿದ್ದು ನಮ್ಮನ್ನು ನಮ್ಮ ಶತ್ರುಗಳಿಂದ ತಪ್ಪಿಸಿ ರಕ್ಷಿಸುವ ಹಾಗೆ, ನಾವು ಅದನ್ನು ಶೀಲೋವಿನಿಂದ ತರಿಸೋಣ,” ಎಂದರು.


ಏಕೆಂದರೆ ಆ ದಿವಸಗಳಲ್ಲಿ ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿದ್ದದರಿಂದಲೂ,


ನೀವು ಅವರಿಗೆ, ‘ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಯೊರ್ದನ್ ನದಿಯ ನೀರು ವಿಭಾಗವಾಯಿತು. ಒಡಂಬಡಿಕೆಯ ಮಂಜೂಷವು ಯೊರ್ದನ್ ನದಿಯನ್ನು ದಾಟುವಾಗ, ಯೊರ್ದನ್ ನದಿಯ ನೀರು ನಿಂತುಹೋಯಿತು. ಈ ಕಲ್ಲುಗಳು ಇಸ್ರಾಯೇಲರಿಗೆ ಎಂದೆಂದಿಗೂ ಜ್ಞಾಪಕಾರ್ಥವಾದ ಗುರುತು,’ ಎಂದು ಉತ್ತರಕೊಡಬೇಕು,” ಎಂದನು.


“ದೇವರ ನಿಯಮದ ಈ ಗ್ರಂಥವನ್ನು ತೆಗೆದುಕೊಂಡು ನಿಮ್ಮ ದೇವರಾದ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಬಳಿಯಲ್ಲಿ ಇಡಿರಿ. ಅದು ನಿಮಗೆ ವಿರೋಧವಾದ ಸಾಕ್ಷಿಯಾಗಿ ಅಲ್ಲಿ ಇರಲಿ.


ಆ ಕಲ್ಲಿನ ಹಲಗೆಗಳು ಅಂದರೆ, ಯೆಹೋವ ದೇವರು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯ ಹಲಗೆಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಬೆಟ್ಟದ ಮೇಲೆ ಏರಿದಾಗ, ನಲವತ್ತು ದಿವಸ ಹಗಲುರಾತ್ರಿ ಬೆಟ್ಟದಲ್ಲಿದ್ದೆನು. ರೊಟ್ಟಿ ತಿನ್ನಲಿಲ್ಲ, ನೀರೂ ಕುಡಿಯಲಿಲ್ಲ.


ಆಗ ಇಸ್ರಾಯೇಲರು ತಮ್ಮ ಕ್ರಮಗಳ ಪ್ರಕಾರ ಸೀನಾಯಿ ಮರುಭೂಮಿಯಿಂದ ಪ್ರಯಾಣಮಾಡಿದರು. ಮೇಘವು ಪಾರಾನ್ ಎಂಬ ಮರುಭೂಮಿಯಲ್ಲಿ ಇಳಿಯಿತು.


ಮೋಶೆಯು ದೇವರ ಸನ್ನಿಧಿಗೆ ಬೆಟ್ಟದ ಮೇಲೆ ಹೋದನು. ಆಗ ಯೆಹೋವ ದೇವರು ಸೀನಾಯಿ ಪರ್ವತದ ಮೇಲಿನಿಂದ ಅವನನ್ನು ಕರೆದು ಅವನಿಗೆ, “ನೀನು ಯಾಕೋಬನ ಮನೆತನದವರಾದ ಇಸ್ರಾಯೇಲರಿಗೆ ಇದನ್ನು ತಿಳಿಸು:


ಆ ದಿನದಲ್ಲಿ ಇಷಯನ ವಂಶದಿಂದ ಜನರಿಗೆ ಒಂದು ಬೇರು ಗುರುತಿನ ಧ್ವಜವಾಗಿ ನಿಲ್ಲುವುದು. ಅವರ ವಿಶ್ರಾಂತಿ ಸ್ಥಳವು ಮಹಿಮೆಯುಳ್ಳದ್ದಾಗಿರುವುದು.


ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಾನು ಅವರಿಗೆ ವಿಶ್ರಾಂತಿ ಕೊಡುವುದಕ್ಕೆ ಹೋಗಲಾಗಿ, ಖಡ್ಗಕ್ಕೆ ತಪ್ಪಿಸಿಕೊಂಡ ಇಸ್ರಾಯೇಲಿನ ಜನರಿಗೆ ಮರುಭೂಮಿಯಲ್ಲಿ ದಯೆ ದೊರಕಿತು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು