ಅರಣ್ಯಕಾಂಡ 10:1 - ಕನ್ನಡ ಸಮಕಾಲಿಕ ಅನುವಾದ1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಅವನಿಗೆ ಹೇಳಿದ್ದು: ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಯೆಹೋವನು ಮೋಶೆಯ ಸಂಗಡ ಮಾತನಾಡಿ, ಆಜ್ಞಾಪಿಸಿದ್ದೇನೆಂದರೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದು ಆಜ್ಞಾಪಿಸಿದರು: ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನಂದರೆ - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ: ಅಧ್ಯಾಯವನ್ನು ನೋಡಿ |
ಯಾಜಕರು ತಮ್ಮ ತಮ್ಮ ಸೇವೆಯಲ್ಲಿ ನಿಂತರು. ಹಾಗೆಯೇ ಲೇವಿಯರು ಯೆಹೋವ ದೇವರ ಗೀತವಾದ್ಯಗಳನ್ನು ಹಿಡಿದುಕೊಂಡು ನಿಂತರು. ಅರಸನಾದ ದಾವೀದನು ಯೆಹೋವ ದೇವರನ್ನು ಕೊಂಡಾಡುವುದಕ್ಕೆ ಇವುಗಳನ್ನು ಮಾಡಿಸಿದ್ದನು. “ಯೆಹೋವ ದೇವರ ಪ್ರೀತಿಯು ಯುಗಯುಗಕ್ಕೂ ಇರುವುದು,” ಎಂಬುದಾಗಿ ಆ ವಾದ್ಯಗಳೊಡನೆ ಭಜಿಸುತ್ತಿದ್ದರು. ಯಾಜಕರು ಲೇವಿಯರ ಮುಂದೆ ನಿಂತು ತುತೂರಿಗಳನ್ನು ಊದುತ್ತಿದ್ದರು. ಸಮಸ್ತ ಇಸ್ರಾಯೇಲರೂ ನಿಂತಿದ್ದರು.
ಅರಸನು ಪ್ರವೇಶಿಸುವ ಸ್ಥಳದಲ್ಲಿ ತನ್ನ ಸ್ತಂಭದ ಬಳಿಯಲ್ಲಿ ನಿಂತಿದ್ದನು. ಪ್ರಧಾನರೂ, ತುತೂರಿ ಊದುವವರೂ, ಅರಸನ ಬಳಿಯಲ್ಲಿ ನಿಂತಿದ್ದರು. ಇದಲ್ಲದೆ ದೇಶದ ಜನರೆಲ್ಲರೂ ಸಂತೋಷಪಟ್ಟು ತುತೂರಿಗಳನ್ನು ಊದುತ್ತಿದ್ದರು. ಹಾಗೆಯೇ ಹಾಡುಗಾರರು ಗೀತವಾದ್ಯಗಳನ್ನು ಹಿಡಿದು ಸ್ತುತಿಸುವವರೂ ಬೋಧಿಸುವವರೂ ಇದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದುಕೊಂಡು, “ದ್ರೋಹ, ದ್ರೋಹ,” ಎಂದು ಕೂಗಿದಳು.