Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 1:50 - ಕನ್ನಡ ಸಮಕಾಲಿಕ ಅನುವಾದ

50 ಆದರೆ ನೀನು ಸಾಕ್ಷಿಯ ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಅದಕ್ಕೆ ಬೇಕಾದ ಎಲ್ಲವನ್ನೂ ನೋಡಿಕೊಳ್ಳಲು ಲೇವಿಯರನ್ನು ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಹೊತ್ತುಕೊಳ್ಳುವರು. ಅದರ ಸೇವೆಮಾಡಿ, ಗುಡಾರದ ಸುತ್ತುಮುತ್ತಲೂ ಇಳಿದುಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

50 ಆಜ್ಞಾಶಾಸನಗಳಿರುವ ಗುಡಾರವನ್ನೂ ಅದರ ಸಾಮಾನು, ಉಪಕರಣ ಇವುಗಳನ್ನೂ ನೋಡಿಕೊಳ್ಳುವುದಕ್ಕಾಗಿ ಲೇವಿಯರನ್ನು ನೇಮಿಸಬೇಕು. ಅವರು ಆ ಗುಡಾರವನ್ನೂ ಮತ್ತು ಅದರ ಸಾಮಾನುಗಳನ್ನೂ ಹೊರುವುದಕ್ಕಾಗಿ ಇರಬೇಕು. ಅವರು ಅದರ ಸೇವೆಯನ್ನು ಮಾಡುವವರಾಗಿ ಅದರ ಸುತ್ತಲೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

50 ಆಜ್ಞಾಶಾಸನಗಳಿರುವ ಗುಡಾರವನ್ನು ಹಾಗು ಅವರ ಸಾಮಾನು ಸರಂಜಾಮುಗಳನ್ನು ನೋಡಿಕೊಳ್ಳುವುದಕ್ಕೆ ಅವರನ್ನು ನೇಮಿಸಬೇಕು. ಅವರು ಆ ಗುಡಾರವನ್ನು ಅದರ ಉಪಕರಣಗಳನ್ನು ಹೊರುವವರಾಗಿರಬೇಕು. ಅದರ ಸೇವೆ ಮಾಡುವವರಾಗಿ ಅದರ ಸುತ್ತಲೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

50 ಆಜ್ಞಾಶಾಸನಗಳಿರುವ ಗುಡಾರವನ್ನೂ ಅದರ ಸಾಮಾನು, ಉಪಕರಣ ಇವುಗಳನ್ನೂ ನೋಡಿಕೊಳ್ಳುವದಕ್ಕೆ ಅವರನ್ನು ನೇವಿುಸಬೇಕು. ಅವರು ಆ ಗುಡಾರವನ್ನೂ ಅದರ ಸಾಮಾನನ್ನೂ ಹೊರುವದಕ್ಕಾಗಿ ಇರಬೇಕು. ಮತ್ತು ಅವರು ಅದರ ಸೇವೆಯನ್ನು ಮಾಡುವವರಾಗಿ ಅದರ ಸುತ್ತಲೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

50 ಒಡಂಬಡಿಕೆಯ ಪವಿತ್ರ ಗುಡಾರವನ್ನು ನೋಡಿಕೊಳ್ಳುವ ಜವಾಬ್ದಾರಿಯು ಲೇವಿಯರಿಗೆ ಸೇರಿರುವುದರಿಂದ ಅವರಿಗೆ ಅದನ್ನು ತಿಳಿಸು. ಅವರು ಅದನ್ನೂ ಅದರ ಉಪಕರಣಗಳನ್ನೂ ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಯೊಂದನ್ನೂ ನೋಡಿಕೊಳ್ಳಬೇಕು. ಅವರು ಪವಿತ್ರ ಗುಡಾರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಹೊತ್ತುಕೊಂಡು ಹೋಗಬೇಕು. ಅವರು ಅದರ ಸುತ್ತಲೂ ಪಾಳೆಯಮಾಡಿಕೊಂಡು ಅದನ್ನು ನೋಡಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 1:50
30 ತಿಳಿವುಗಳ ಹೋಲಿಕೆ  

ದೇವದರ್ಶನದ ಗುಡಾರಕ್ಕೆ ಅಂದರೆ ಒಡಂಬಡಿಕೆಯ ನಿಯಮದ ಗುಡಾರ ನಿರ್ಮಾಣಕ್ಕೆ ಬಳಸಿದ ವಸ್ತುಗಳ ಲೆಕ್ಕ ಇವು: ಮೋಶೆಯ ಆಜ್ಞೆಯ ಮೇರೆಗೆ ಯಾಜಕನಾದ ಆರೋನನ ಮಗನಾದ ಈತಾಮಾರನ ನಿರ್ದೇಶನದಲ್ಲಿ ಲೇವಿಯರ ಕೈಯಿಂದ ಲೆಕ್ಕ ಮಾಡಿಸಿದ್ದು.


“ಆರೋನನು ಮತ್ತು ಅವನ ಪುತ್ರರು ಪರಿಶುದ್ಧ ಸ್ಥಳವನ್ನೂ, ಪರಿಶುದ್ಧಸ್ಥಳದ ಎಲ್ಲಾ ಸಲಕರಣೆಗಳನ್ನೂ ಮುಚ್ಚಿದ ಮೇಲೆ, ಪಾಳೆಯವು ಹೊರಡುವಾಗ ಕೊಹಾತ್ಯರು ಅದನ್ನು ಹೊತ್ತುಕೊಂಡು ಹೋಗುವುದಕ್ಕೆ ಪ್ರವೇಶಿಸಬೇಕು. ಆದರೆ ಅವರು ಸಾಯದೆ ಇರಬೇಕಾದರೋ, ಪರಿಶುದ್ಧವಾದ ಯಾವುದನ್ನೂ ಮುಟ್ಟಬಾರದು. ದೇವದರ್ಶನದ ಗುಡಾರದಲ್ಲಿ ಕೊಹಾತ್ಯನ ಪುತ್ರರ ಹೊರೆಗಳು ಇವೇ ಆಗಿವೆ.


ಯೆಹೋವ ದೇವರು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ, ಅವನಿಗೆ ಸಾಕ್ಷಿಯ ಎರಡು ಹಲಗೆಗಳನ್ನೂ ದೇವರು ಬೆರಳಿನಿಂದ ಬರೆದ ಕಲ್ಲಿನ ಹಲಗೆಗಳನ್ನೂ ಕೊಟ್ಟನು.


ಆಗ ಲೇವಿಯರು ತಮ್ಮನ್ನು ಶುಚಿ ಮಾಡಿಕೊಂಡು ಬಂದು ಸಬ್ಬತ್ ದಿನವನ್ನು ಪರಿಶುದ್ಧವಾಗಿ ಆಚರಿಸಬೇಕೆಂದೂ, ಬಾಗಿಲುಗಳನ್ನು ಕಾಯಬೇಕೆಂದೂ ಅವರಿಗೆ ಹೇಳಿದೆನು. ನನ್ನ ದೇವರೇ, ಇದಕ್ಕಾಗಿ ಸಹ ನೀವು ನನ್ನನ್ನು ನೆನಸಿ, ನಿಮ್ಮ ಮಹಾ ಪ್ರೀತಿಯ ಪ್ರಕಾರ ನನ್ನನ್ನು ಕರುಣಿಸಿರಿ.


ಮೋಶೆಯು ತನ್ನ ಕೈಯನ್ನು ಎತ್ತಿ, ತನ್ನ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು. ಆಗ ಬಹಳ ನೀರು ಹೊರಗೆ ಬಂತು, ಜನರೂ ಅವರ ಪಶುಗಳೂ ಕುಡಿದರು.


ಅಲ್ಲಿಗೆ ಗೋತ್ರಗಳು, ಯೆಹೋವ ದೇವರು ಇಸ್ರಾಯೇಲಿಗೆ ಕೊಟ್ಟ ಕಟ್ಟಳೆಗಳ ಪ್ರಕಾರ ಯೆಹೋವ ದೇವರ ಹೆಸರನ್ನು ಕೊಂಡಾಡುವುದಕ್ಕೆ ಗೋತ್ರಗಳು ಯಾತ್ರೆಯಾಗಿ ಬರುತ್ತಿದ್ದವು.


ಲೇವಿಯರಿಗೂ, ಹಾಡುಗಾರರಿಗೂ, ದ್ವಾರಪಾಲಕರಿಗೂ ನೇಮಕವಾದ ಕಾಣಿಕೆಗಳನ್ನೂ, ಧೂಪವನ್ನೂ, ಸಾಮಗ್ರಿಗಳನ್ನೂ, ಧಾನ್ಯದ ಹತ್ತನೆಯ ಪಾಲುಗಳನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ, ಯಾಜಕರ ಕಾಣಿಕೆಗಳನ್ನೂ ಪೂರ್ವಕಾಲದಲ್ಲಿ ಇಡುತ್ತಿದ್ದ ದೊಡ್ಡ ಕೊಠಡಿಯನ್ನು ಎಲ್ಯಾಷೀಬನು ಟೋಬೀಯನಿಗೋಸ್ಕರ ಸಿದ್ಧ ಮಾಡಿಕೊಟ್ಟಿದ್ದನು.


ಆದ್ದರಿಂದ ಜೆರುಬ್ಬಾಬೆಲನ ದಿವಸಗಳಲ್ಲಿಯೂ, ನೆಹೆಮೀಯನ ದಿವಸಗಳಲ್ಲಿಯೂ ಇಸ್ರಾಯೇಲರೆಲ್ಲರು ಹಾಡುಗಾರರಿಗೂ, ದ್ವಾರಪಾಲಕರಿಗೂ, ನಿತ್ಯದ ಕಟ್ಟಳೆಯಾದ ಅವರವರ ಪಾಲನ್ನು ಕೊಟ್ಟರು. ಇದಲ್ಲದೆ ಅವರು ಇತರ ಲೇವಿಯರಿಗೆ ಭಾಗವನ್ನು ಪ್ರತ್ಯೇಕವಾಗಿಟ್ಟರು ಮತ್ತು ಲೇವಿಯರು ಆರೋನನ ವಂಶಸ್ಥರಿಗೆ ಭಾಗವನ್ನು ಪ್ರತ್ಯೇಕವಾಗಿಟ್ಟರು.


ಎಲ್ಯಾಷೀಬ್, ಯೋಯಾದ, ಯೋಹಾನಾನ್, ಯದ್ದೂವ, ಇವರ ದಿವಸಗಳಲ್ಲಿ ಲೇವಿಯರೂ, ಯಾಜಕರೂ, ಪಾರಸಿಯನಾದ ದಾರ್ಯಾವೆಷನ ಆಳಿಕೆಯವರೆಗೆ ಪಿತೃಗಳ ಮುಖ್ಯಸ್ಥರಾಗಿ ಬರೆಯಲಾಗಿದೆ.


ಲೇವಿಯರು ಯಾರೆಂದರೆ: ಯೇಷೂವ, ಬಿನ್ನೂಯ್, ಕದ್ಮಿಯೇಲ್, ಶೇರೇಬ್ಯ, ಯೆಹೂದ, ಕೃತಜ್ಞತೆಯ ಹಾಡುಗಳ ಜವಾಬ್ದಾರನಾಗಿದ್ದ ಮತ್ತನ್ಯನೂ, ಅವನ ಸಂಗಡಿಗರು.


ಅವರ ಹಿಂದೆ ಪರಿಶುದ್ಧ ವಸ್ತುಗಳನ್ನು ಹೊರುವ ಕೊಹಾತ್ಯರು ಹೊರಟರು. ಇವರು ಬರುವಷ್ಟರೊಳಗೆ ಉಳಿದ ಲೇವಿಯರು ಗುಡಾರವನ್ನು ನಿಲ್ಲಿಸಿದರು.


ತರುವಾಯ ದೇವದರ್ಶನ ಗುಡಾರವೂ ಲೇವಿಯರ ಪಾಳೆಯವೂ ಪಾಳೆಯಗಳ ಮಧ್ಯದಲ್ಲಿ ಹೊರಡಬೇಕು. ಅವರು ಇಳಿದುಕೊಳ್ಳುವ ಪ್ರಕಾರವೇ, ತಮ್ಮ ತಮ್ಮ ಕಡೆಯಲ್ಲಿಯೂ ತಮ್ಮ ತಮ್ಮ ಧ್ವಜಗಳ ಪ್ರಕಾರವಾಗಿಯೂ ಹೊರಡಬೇಕು.


ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದುಕೊಳ್ಳಬೇಕು. ಹೀಗೆ ಇಸ್ರಾಯೇಲರ ಸಭೆಯ ಮೇಲೆ ನನ್ನ ಕೋಪಕ್ಕೆ ಆಸ್ಪದವಿರದು. ಲೇವಿಯರು ಸಭೆಯ ಗುಡಾರ ಕಾಯುವ ಜವಾಬ್ದಾರಿಕೆಯುಳ್ಳವರಾಗಿರಬೇಕು.”


ಇದಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿರುವ ಸಾಕ್ಷಿಯ ಗುಡಾರದ ದೇವಾಲಯವು ತೆರೆದಿರುವುದನ್ನು ಕಂಡೆನು.


ಆಗ ಮೋಶೆಯು ಆ ಕೋಲುಗಳನ್ನು ಸಾಕ್ಷಿಯ ಗುಡಾರದ ಒಳಗೆ ಯೆಹೋವ ದೇವರ ಸಮ್ಮುಖದಲ್ಲಿ ಇಟ್ಟನು.


ಅರಸನು ಮುಖ್ಯಯಾಜಕನಾದ ಯೆಹೋಯಾದಾವನನ್ನು ಕರೆಕಳುಹಿಸಿ ಅವನಿಗೆ, “ಯೆಹೋವ ದೇವರ ಸೇವಕನಾದ ಮೋಶೆಯೂ, ಇಸ್ರಾಯೇಲಿನ ಸಭೆಯೂ ದೇವದರ್ಶನ ಗುಡಾರದ ನಿಮಿತ್ತ ಆಜ್ಞಾಪಿಸಿದ ಕಾಣಿಕೆಯನ್ನು ಯೆಹೂದದಿಂದಲೂ, ಯೆರೂಸಲೇಮಿನಿಂದಲೂ ಬರುವಂತೆ ಮಾಡಲು ನೀನು ಲೇವಿಯರನ್ನು ಏಕೆ ವಿಚಾರಿಸಲಿಲ್ಲ?” ಎಂದನು.


ಮೂವತ್ತು ವರ್ಷವಾದವರನ್ನೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರನ್ನೂ ಅಂದರೆ ಐವತ್ತು ವರ್ಷದವರವರೆಗೆ ದೇವದರ್ಶನ ಗುಡಾರದಲ್ಲಿ ಕೆಲಸ ಮಾಡುವುದಕ್ಕೆ ಬರುವವರನ್ನು ಲೆಕ್ಕಮಾಡು.


ಅವರು ದೇವದರ್ಶನದ ಗುಡಾರದಲ್ಲಿ ಇಸ್ರಾಯೇಲರ ಸೇವೆಯನ್ನು ಮಾಡುವುದಕ್ಕೂ ಇಸ್ರಾಯೇಲರಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೂ ಪರಿಶುದ್ಧ ಸ್ಥಳಕ್ಕೆ ಇಸ್ರಾಯೇಲರು ಸಮೀಪಿಸುವಾಗ ಇಸ್ರಾಯೇಲರೊಳಗೆ ವ್ಯಾಧಿಯು ಇರದಂತೆ ನಾನು ಲೇವಿಯರನ್ನು ಇಸ್ರಾಯೇಲರೊಳಗಿಂದ ಆರೋನನಿಗೂ, ಅವನ ಪುತ್ರರಿಗೂ ದಾನವಾಗಿ ಕೊಟ್ಟಿದ್ದೇನೆ.”


ಆಗ ಯೆಹೋವ ದೇವರು ಮೋಶೆಗೆ ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆಯೇ ಮೋಶೆಯೂ ಆರೋನನೂ ಮತ್ತು ಇಸ್ರಾಯೇಲರ ಸಮೂಹದವರೆಲ್ಲರೂ ಮಾಡಿದರು.


ತರುವಾಯ ಲೇವಿಯರು ದೇವದರ್ಶನದ ಗುಡಾರದಲ್ಲಿ ಆರೋನನ ಮುಂದೆಯೂ, ಅವನ ಪುತ್ರರ ಮುಂದೆಯೂ ಅವರ ಸೇವೆ ಮಾಡುವುದಕ್ಕೆ ಒಳಗೆ ಪ್ರವೇಶಿಸಿದರು. ಯೆಹೋವ ದೇವರು ಮೋಶೆಗೆ ಲೇವಿಯರ ವಿಷಯವಾಗಿ ಹೇಗೆ ಆಜ್ಞಾಪಿಸಿದರೋ, ಹಾಗೆಯೇ ಮಾಡಿದನು.


“ಇಸ್ರಾಯೇಲರ ಮೇಲೆ ಇನ್ನು ಮುಂದೆ ಎಂದಿಗೂ ನನ್ನ ಕೋಪಾಗ್ನಿಯು ಬಾರದ ಹಾಗೆ ಪರಿಶುದ್ಧ ಸ್ಥಳವನ್ನು ಮತ್ತು ಬಲಿಪೀಠವನ್ನು ನೀವೇ ನೋಡಿಕೊಳ್ಳಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು