Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 8:37 - ಕನ್ನಡ ಸಮಕಾಲಿಕ ಅನುವಾದ

37 “ನೀನು ಪೂರ್ಣಹೃದಯದಿಂದ ನಂಬಿದರೆ ನಿನಗೆ ದೀಕ್ಷಾಸ್ನಾನವಾಗಬಹುದು,” ಎಂದು ಫಿಲಿಪ್ಪನು ಹೇಳಿದನು. “ಕ್ರಿಸ್ತ ಯೇಸುವೇ ದೇವಪುತ್ರರು ಎಂದು ನಾನು ನಂಬುತ್ತೇನೆ,” ಎಂದು ಕಂಚುಕಿಯು ಪ್ರಕಟಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಕಂಚುಕಿಯು, “ಆಗೋ, ನೀರು; ನನಗೆ ದೀಕ್ಷಾಸ್ನಾನವಾಗುವುದಕ್ಕೆ ಅಡ್ಡಿ ಏನು?” ಎಂದು ಹೇಳಿ ರಥವನ್ನು ನಿಲ್ಲಿಸು ಎಂದು ಅಪ್ಪಣೆ ಕೊಟ್ಟನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 (ಫಿಲಿಪ್ಪನು, “ನೀವು ಹೃದಯಪೂರ್ವಕವಾಗಿ ವಿಶ್ವಾಸಿಸುವುದಾದರೆ ದೀಕ್ಷಾಸ್ನಾನವನ್ನು ಪಡೆಯಬಹುದು,” ಎಂದನು. “ಯೇಸುಕ್ರಿಸ್ತ ದೇವರ ಪುತ್ರ ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಅಧಿಕಾರಿ ಪ್ರತ್ಯುತ್ತರವಿತ್ತನು).

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

37 ತನ್ನಾ ಪಿಲಿಪಾನ್ ಅಧಿಕಾರಿಕ್ “ ತಿಯಾ ಫುರಾ ಮನಾನ್ ವಿಶ್ವಾಸ್ ಕರ್‍ತಲೊ ಹೊಲ್ಯಾರ್ ಬಾಲ್ತಿಮ್ ಘೆವ್ಕ್ ಹೊತಾ” ಮಟ್ಲ್ಯಾನ್, ತನ್ನಾ ಅದಿಕಾರಿನ್ “ಜೆಜು ಕ್ರಿಸ್ತ್ ದೆವಾಚೊ ಲೆಕ್ ಮನುನ್ ಮಿಯಾ ವಿಶ್ವಾಸ್ ಕರ್‍ತಾ” ಮನುನ್ ಜವಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 8:37
20 ತಿಳಿವುಗಳ ಹೋಲಿಕೆ  

ಮಾರ್ಗದಲ್ಲಿ ಅವರು ಮುಂದೆ ಪ್ರಯಾಣ ಮಾಡುತ್ತಿದ್ದಾಗ, ನೀರಿದ್ದ ಸ್ಥಳಕ್ಕೆ ಬಂದರು. ಆಗ ಕಂಚುಕಿ, “ಇಗೋ ಇಲ್ಲಿ ನೀರಿದೆ. ನನಗೆ ಏಕೆ ದೀಕ್ಷಾಸ್ನಾನ ಕೊಡಬಾರದು?” ಎಂದನು.


ರಥವನ್ನು ನಿಲ್ಲಿಸಲು ಅಪ್ಪಣೆಕೊಟ್ಟ ನಂತರ ಫಿಲಿಪ್ಪನು ಮತ್ತು ಕಂಚುಕಿ ಇಬ್ಬರೂ ನೀರೊಳಗೆ ಹೋದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು.


ಅದಕ್ಕೆ ಸೀಮೋನ ಪೇತ್ರನು ಉತ್ತರವಾಗಿ, “ನೀವು ಕ್ರಿಸ್ತ ಮತ್ತು ಜೀವಂತ ದೇವರ ಪುತ್ರರಾಗಿದ್ದೀರಿ,” ಎಂದು ಉತ್ತರಕೊಟ್ಟನು.


ಆದ್ದರಿಂದ ನೀವು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ,


ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.


ಸೀಮೋನ್ ಪೇತ್ರನು ಯೇಸುವಿಗೆ, “ಸ್ವಾಮೀ, ನಾವು ಯಾರ ಬಳಿಗೆ ಹೋಗೋಣ? ನಿಮ್ಮಲ್ಲಿಯೇ ನಿತ್ಯಜೀವದ ವಾಕ್ಯಗಳಿವೆ.


ಯೆಹೂದಿ ನಾಯಕರು ಅವನನ್ನು ಸಭಾಮಂದಿರದಿಂದ ಹೊರಗೆ ಹಾಕಿದ್ದನ್ನು ಯೇಸು ಕೇಳಿ, ಅವನನ್ನು ಕಂಡು, “ನೀನು ಮನುಷ್ಯಪುತ್ರನನ್ನು ನಂಬುತ್ತೀಯಾ?” ಎಂದರು.


ಆಕೆಯು ಯೇಸುವಿಗೆ, “ಹೌದು, ಸ್ವಾಮೀ, ಲೋಕಕ್ಕೆ ಬರಬೇಕಾಗಿದ್ದ ದೇವರ ಪುತ್ರನಾದ ಕ್ರಿಸ್ತನು ನೀವೇ ಎಂದು ನಾನು ನಂಬಿದ್ದೇನೆ,” ಎಂದಳು.


ಆದರೆ ಯೇಸುವೇ ದೇವಪುತ್ರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ ನಂಬಿ ಅವರ ಹೆಸರಿನ ಮೂಲಕ ನಿತ್ಯಜೀವವನ್ನು ಪಡೆದುಕೊಳ್ಳುವಂತೆಯೂ ಇವುಗಳು ಬರೆಯಲಾಗಿದೆ.


ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಪಶ್ಚಾತ್ತಾಪಪಟ್ಟು, ನಿಮ್ಮ ಪಾಪಗಳ ಕ್ಷಮೆಗಾಗಿ ಕ್ರಿಸ್ತ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಿರಿ. ಆಗ ನೀವು ಪವಿತ್ರಾತ್ಮ ವರವನ್ನು ಪಡೆದುಕೊಳ್ಳುವಿರಿ.


ಆದರೆ ಫಿಲಿಪ್ಪನು ದೇವರ ರಾಜ್ಯದ ಶುಭವರ್ತಮಾನವನ್ನೂ ಕ್ರಿಸ್ತ ಯೇಸುವಿನ ಹೆಸರನ್ನೂ ಪ್ರಕಟಿಸಿದಾಗ ಅಲ್ಲಿಯ ಸ್ತ್ರೀ ಪುರುಷರು ಅದನ್ನು ನಂಬಿ ದೀಕ್ಷಾಸ್ನಾನವನ್ನು ಹೊಂದಿದರು.


ನಿನ್ನ ಹೃದಯವು ದೇವರ ದೃಷ್ಟಿಯಲ್ಲಿ ಸರಿಯಾಗಿಲ್ಲವಾದ್ದರಿಂದ ಈ ಸೇವೆಯಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ.


ತಡಮಾಡದೆ, ಯೇಸುವೇ “ದೇವಪುತ್ರ” ಎಂದು ಸಭಾಮಂದಿರಗಳಲ್ಲಿ ಸಾರಲು ಪ್ರಾರಂಭಿಸಿದನು.


ನೀನು ನಿನ್ನ ಹೃದಯದಿಂದ ನಂಬಿ ನೀತಿವಂತನೆಂದು ಎಣಿಸಿಕೊಳ್ಳುವಿ ಮತ್ತು ನಿನ್ನ ಬಾಯಿಂದ ನಿನ್ನ ವಿಶ್ವಾಸವನ್ನು ಅರಿಕೆ ಮಾಡಿದಾಗ ರಕ್ಷಣೆ ಹೊಂದುತ್ತಿ.


ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ: ದೇವರಾತ್ಮರಿಂದ ಮಾತನಾಡುವ ಯಾವನೂ, “ಯೇಸು ಶಾಪಗ್ರಸ್ತನು,” ಎಂದು ಹೇಳುವುದಿಲ್ಲ. ಪವಿತ್ರಾತ್ಮರಿಂದಲೇ ಹೊರತು, ಯಾವನೂ, “ಯೇಸು ಕರ್ತದೇವರು,” ಎಂದು ಹೇಳಲಾರನು.


ಈ ನೀರು ದೀಕ್ಷಾಸ್ನಾನವನ್ನು ಸೂಚಿಸುವಂತದ್ದಾಗಿದೆ. ಈ ದೀಕ್ಷಾಸ್ನಾನ ಕ್ರಿಸ್ತ ಯೇಸುವಿನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ. ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ. ಆದರೆ ಒಳ್ಳೆಯ ಮನಸ್ಸಾಕ್ಷಿಯು ಬೇಕೆಂದು ದೇವರನ್ನು ಬೇಡಿಕೊಳ್ಳುವಂಥದ್ದಾಗಿದೆ.


ಯೇಸು ದೇವರ ಪುತ್ರರಾಗಿದ್ದಾರೆಂದು ಯಾರು ಒಪ್ಪಿಕೊಳ್ಳುತ್ತಾರೋ, ಅವರಲ್ಲಿ ದೇವರು ಬಾಳುತ್ತಾರೆ ಮತ್ತು ಅವರು ದೇವರಲ್ಲಿ ಬಾಳುವವರಾಗಿದ್ದಾರೆ.


ಯೇಸುವೇ ಕ್ರಿಸ್ತ ಎಂದು ನಂಬುವ ಪ್ರತಿಯೊಬ್ಬರೂ ದೇವರಿಂದ ಹುಟ್ಟಿದವರಾಗಿದ್ದಾರೆ. ತಂದೆಯನ್ನು ಪ್ರೀತಿಸುವ ಪ್ರತಿಯೊಬ್ಬರು ದೇವರಿಂದ ಹುಟ್ಟಿದವರನ್ನು ಸಹ ಪ್ರೀತಿಸುತ್ತಾರೆ.


ಯೇಸುವು ದೇವಪುತ್ರ ಎಂದು ನಂಬಿದವರೇ ಹೊರತು ಲೋಕವನ್ನು ಜಯಿಸುವವರು ಯಾರು?


ದೇವಪುತ್ರ ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಟ್ಟವರು ಆ ಸಾಕ್ಷಿಯನ್ನು ಸ್ವೀಕರಿಸುತ್ತಾರೆ. ದೇವರನ್ನು ನಂಬದವರು ದೇವರನ್ನು ಸುಳ್ಳುಗಾರನನ್ನಾಗಿ ಮಾಡಿದ್ದಾರೆ. ಹೇಗೆಂದರೆ ದೇವರು ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾಗಿ ಕೊಟ್ಟ ಸಾಕ್ಷಿಯಲ್ಲಿ ಅಂಥವರು ನಂಬಿಕೆಯಿಡಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು