Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 7:39 - ಕನ್ನಡ ಸಮಕಾಲಿಕ ಅನುವಾದ

39 “ಆದರೆ ನಮ್ಮ ಪಿತೃಗಳು ಅವನಿಗೆ ವಿಧೇಯರಾಗಲು ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಬದಲಾಗಿ ಅವರು ಅವನನ್ನು ತಿರಸ್ಕರಿಸಿ, ತಮ್ಮ ಹೃದಯಗಳಲ್ಲಿ ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಹೋಗಬೇಕೆಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 “ಆದರೆ ನಮ್ಮ ಪೂರ್ವಿಕರು ಅವನ ಮಾತುಗಳನ್ನು ಕೇಳುವುದಕ್ಕೆ ಮನಸ್ಸಿಲ್ಲದೆ ಅವನನ್ನು ತಳ್ಳಿಬಿಟ್ಟು, ಪುನಃ ಐಗುಪ್ತದೇಶದ ಕಡೆಗೆ ಮನಸ್ಸಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

39 “ಆದರೆ ನಮ್ಮ ಪಿತೃಗಳು ಅವನಿಗೆ ವಿಧೇಯರಾಗಲು ನಿರಾಕರಿಸಿದರು. ಅವನನ್ನು ತಿರಸ್ಕರಿಸಿ ಈಜಿಪ್ಟ್ ದೇಶಕ್ಕೆ ಹಿಂದಿರುಗಲು ಮನಸ್ಸು ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ಆದರೆ ನಮ್ಮ ಪಿತೃಗಳು ಅವನ ಮಾತುಗಳನ್ನು ಕೇಳುವದಕ್ಕೆ ಮನಸ್ಸಿಲ್ಲದವರಾಗಿ ಅವನನ್ನು ತಳ್ಳಿ ಬಿಟ್ಟು ತಿರಿಗಿ ಐಗುಪ್ತದೇಶದ ಕಡೆಗೆ ಮನಸ್ಸಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

39 “ಆದರೆ ಮೋಶೆಗೆ ವಿಧೇಯರಾಗಲು ನಮ್ಮ ಪಿತೃಗಳಿಗೆ ಇಷ್ಟವಿರಲಿಲ್ಲ. ಅವರು ಅವನನ್ನು ತಿರಸ್ಕರಿಸಿ, ಈಜಿಪ್ಟಿಗೆ ಹಿಂತಿರುಗಬೇಕೆಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

39 ಖರೆ ಮೊಯ್ಜೆಚ್ಯಾ ಗೊಸ್ಟಿಯಾಕ್ನಿ ಮಾನುಕ್ ತ್ಯಾ ಲೊಕಾಕ್ನಿ ಮನ್ ನತ್ತೊ, ತೆನಿ ತೆಕಾ ಸೊಡುನ್ ಇಜಿಪ್ತಾಕ್ ಪರ್ತುನ್ ಪಳುನ್ ಜಾವ್ಚೆ ಮನುನ್ ಚಿಂತಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 7:39
15 ತಿಳಿವುಗಳ ಹೋಲಿಕೆ  

ನಾವು ಈಜಿಪ್ಟ್ ದೇಶದಲ್ಲಿ ಉಚಿತವಾಗಿ ತಿಂದ ಮೀನನ್ನೂ ಸವತೆ ಕಾಯಿಯನ್ನೂ ಕರ್ಬೂಜಗಳನ್ನೂ ನೀರುಳ್ಳಿ ಈರುಳ್ಳಿ ಬೆಳ್ಳುಳ್ಳಿಗಳನ್ನೂ ಜ್ಞಾಪಿಸಿಕೊಳ್ಳುತ್ತೇವೆ.


ಇಸ್ರಾಯೇಲರು ಅವರಿಗೆ, “ನಾವು ಈಜಿಪ್ಟ್ ದೇಶದಲ್ಲಿ ಮಾಂಸದ ಪಾತ್ರೆಗಳ ಬಳಿಯಲ್ಲಿ ಕುಳಿತುಕೊಂಡು ಸಾಕಾಗುವಷ್ಟು ರೊಟ್ಟಿಯನ್ನು ತಿನ್ನುತ್ತಿದ್ದಾಗ, ಯೆಹೋವ ದೇವರ ಕೈಯಿಂದ ಸತ್ತು ಹೋಗಿದ್ದರೆ ಒಳ್ಳೆಯದಾಗಿತ್ತು. ಇಡೀ ಜನಾಂಗವೇ ಹಸಿವೆಯಿಂದ ಸತ್ತು ಹೋಗುವಂತೆ ನಮ್ಮನ್ನು ಈ ಮರುಭೂಮಿಗೆ ಬರಮಾಡಿದ್ದೀರಿ,” ಎಂದರು.


ಹೀಗೆಯೇ ಯೆಹೋವ ದೇವರು ಶೀಲೋವಿನಲ್ಲಿ ಏಲಿಯ ಮನೆಯನ್ನು ಕುರಿತು ಹೇಳಿದ ವಾಕ್ಯವು ಈಡೇರುವುದಕ್ಕೆ ಸೊಲೊಮೋನನು ಅಬಿಯಾತರನನ್ನು ಯೆಹೋವ ದೇವರಿಗೆ ಯಾಜಕನಾಗಿರದ ಹಾಗೆ ಹೊರಡಿಸಿಬಿಟ್ಟನು.


ಇದಲ್ಲದೆ ಗಿಲ್ಯಾದನ ಹೆಂಡತಿ ಅವನಿಗೆ ಪುತ್ರರನ್ನು ಪಡೆದಳು. ಅವನ ಹೆಂಡತಿಯ ಮಕ್ಕಳು ದೊಡ್ಡವರಾದಾಗ ಅವರು ಯೆಫ್ತಾಹನಿಗೆ, “ನೀನು ನಮ್ಮ ತಂದೆಯ ಮನೆಯ ಬಾಧ್ಯಸ್ಥನಲ್ಲ. ಏಕೆಂದರೆ ನೀನು ಪರಸ್ತ್ರೀಯ ಮಗನು,” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.


ಆದಕಾರಣ ಜನರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತನಾಡಿ, “ನಾವು ಮರುಭೂಮಿಯಲ್ಲಿ ಸಾಯುವ ಹಾಗೆ ನಮ್ಮನ್ನು ಈಜಿಪ್ಟ್ ದೇಶದಿಂದ ಏಕೆ ಬರಮಾಡಿದ್ದೀರಿ? ಇಲ್ಲಿ ರೊಟ್ಟಿ ಇಲ್ಲ, ನೀರೂ ಇಲ್ಲ. ನಾವು ಈ ನಿಸ್ಸಾರವಾದ ರೊಟ್ಟಿಯನ್ನು ತಿಂದು ನಮಗೆ ಬೇಸರವಾಗಿದೆ,” ಎಂದರು.


ಅಲ್ಲಿ ಜನರು ದಾಹಗೊಂಡು ಮೋಶೆಗೆ ವಿರುದ್ಧವಾಗಿ ಗೊಣಗುಟ್ಟಿ, “ನಮ್ನನ್ನೂ, ನಮ್ಮ ಮಕ್ಕಳನ್ನೂ, ನಮ್ಮ ಪಶುಗಳನ್ನೂ ದಾಹದಿಂದ ಕೊಲ್ಲುವುದಕ್ಕಾಗಿ ಏಕೆ ಈಜಿಪ್ಟಿನೊಳಗಿಂದ ಇಲ್ಲಿಗೆ ಬರಮಾಡಿದೆ,” ಎಂದರು.


“ಆದರೆ ಹೊಡೆಯುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧೀಶನನ್ನಾಗಿಯೂ ನೇಮಿಸಿದವರು ಯಾರು?


ಇಸ್ರಾಯೇಲರು ಪಾಳೆಯದಲ್ಲಿ ಮೋಶೆಯ ಮೇಲೆಯೂ, ಯೆಹೋವ ದೇವರಿಗೆ ಪ್ರತಿಷ್ಠಿತನಾದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಟ್ಟರು.


ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು