Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 7:26 - ಕನ್ನಡ ಸಮಕಾಲಿಕ ಅನುವಾದ

26 ಮರುದಿನ ಇಬ್ಬರು ಇಸ್ರಾಯೇಲರು ಜಗಳವಾಡುತ್ತಿರುವುದನ್ನು ಮೋಶೆ ಕಂಡು, ‘ಗೆಳೆಯರೇ, ನೀವು ಸಹೋದರರಲ್ಲವೇ; ಒಬ್ಬರಿಗೊಬ್ಬರು ಏಕೆ ಜಗಳಮಾಡುತ್ತಿದ್ದೀರಿ?’ ಎಂದು ಹೇಳಿ ಅವರನ್ನು ಸಮಾಧಾನಪಡಿಸಲು ಯತ್ನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಮರುದಿನ ತಾವು ತಾವೇ ಹೊಡೆದಾಡಿಕೊಳ್ಳುತ್ತಿರುವಾಗ ಅವನು ಅವರಿಗೆ ಎದುರಾಗಿ ಬಂದು, ‘ಜನರೇ, ನೀವು ಸಹೋದರರಲ್ಲವೇ, ನೀವೇಕೆ ಒಬ್ಬರಿಗೊಬ್ಬರು ಅನ್ಯಾಯ ಮಾಡುತ್ತೀರಿ?’ ಎಂದು ಹೇಳಿ ಅವರನ್ನು ಸಮಾಧಾನ ಪಡಿಸಲು ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಮಾರನೆಯ ದಿನ ಇಬ್ಬರು ಇಸ್ರಯೇಲರೇ ಜಗಳವಾಡುತ್ತಿರುವುದನ್ನು ಕಂಡನು. ಮೋಶೆ ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದನು. ಅವರಿಗೆ, ‘ಗೆಳೆಯರೇ, ನೀವು ಸಹೋದರರಲ್ಲವೆ? ಹೀಗೇಕೆ ಕಿತ್ತಾಡುತ್ತಿದ್ದೀರಿ?’ ಎಂದು ಸಮಾಧಾನ ಪಡಿಸಲು ಯತ್ನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಮರುದಿನ ತಾವು ತಾವೇ ಹೊಡೆದಾಡಿಕೊಳ್ಳುತ್ತಿರುವಾಗ ಅವನು ಎದುರಾಗಿ ಬಂದು - ಜನರೇ, ನೀವು ಸಹೋದರರಲ್ಲವೇ? ನೀವೇಕೆ ಒಬ್ಬರಿಗೊಬ್ಬರು ಅನ್ಯಾಯಮಾಡುತ್ತೀರಿ ಎಂದು ಹೇಳಿ ಅವರನ್ನು ಸಮಾಧಾನಪಡಿಸಬೇಕೆಂದಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 “ಮರುದಿನ, ಇಬ್ಬರು ಯೆಹೂದ್ಯರು ಹೊಡೆದಾಡುವುದನ್ನು ಮೋಶೆಯು ಕಂಡನು. ಅವರನ್ನು ಸಮಾಧಾನಪಡಿಸಲು ಅವನು ಪ್ರಯತ್ನಿಸಿ ‘ಗೆಳೆಯರೇ, ನೀವು ಸಹೋದರರಾಗಿದ್ದೀರಿ! ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡುವುದೇಕೆ?’ ಎಂದು ಅವರನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

26 ದುಸ್ರ್ಯಾಂದಿಸಿ ತೆನಿ ಎಕಾಮೆಕಾಕ್ನಿ ಮಾರುನ್ ಘೆಯ್ತ್ ರಾತಾನಾ ತೊ ಮೊಯ್ಜೆ ತೆಂಚ್ಯಾ ಇದ್ರಾಕ್ ಯೆವ್ನ್ ಸಮಾಧಾನ್ ಕರುಕ್ ಸಾಟ್ನಿ ತೆಂಕಾ, ತುಮಿ ಭಾವ್ ಭಾವಾ ಹೊವ್ನ್ ಬಿ ಕಶ್ಯಾಕ್ ಎಕಾಮೆಕಾಕ್ ದುಕ್ವುನ್ ಘೆತ್ಯಾಶಿ? ಮನುನ್ ಇಚಾರುಕ್ ಗೆಲೊ .

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 7:26
12 ತಿಳಿವುಗಳ ಹೋಲಿಕೆ  

ಸ್ವಾರ್ಥ ಉದ್ದೇಶದಿಂದಾಗಲಿ, ವ್ಯರ್ಥ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ ಪ್ರತಿಯೊಬ್ಬನೂ ದೀನತ್ವದಿಂದ ಮತ್ತೊಬ್ಬನನ್ನು ತನಗಿಂತಲೂ ಶ್ರೇಷ್ಠನೆಂದು ಎಣಿಸಲಿ.


ನೀವು ಕ್ರಿಸ್ತನೊಂದಿಗೆ ಐಕ್ಯವಾಗಿರುವುದರಿಂದ ಉತ್ತೇಜನ, ಅವರ ಪ್ರೀತಿಯಿಂದ ಸಂತೈಸುವಿಕೆ, ಆತ್ಮನಲ್ಲಿ ಅನ್ಯೋನ್ಯತೆ, ಕನಿಕರದ ವಾತ್ಸಲ್ಯಗಳು ಇರುವುದಾದರೆ,


ಬಲವಾದ ಪಟ್ಟಣವನ್ನು ಗೆಲ್ಲುವುದಕ್ಕಿಂತ ಬೇಸರಗೊಂಡ ಸಹೋದರನನ್ನು ಗೆಲ್ಲುವುದು ಕಷ್ಟಕರ; ಅವರ ಕಲಹಗಳು ಕೋಟೆಯ ಬಾಗಿಲಿಗೆ ಅಗುಳಿಗಳಂತೆ ಇವೆ.


ಸಹೋದರರು ಒಂದಾಗಿ ಬಾಳುವುದು ಎಷ್ಟೋ ಒಳ್ಳೆಯದು! ಎಷ್ಟೋ ರಮ್ಯವಾದದ್ದು!


ಯೋಸೇಫನು ಅವರಿಗೆ, “ಮಾರ್ಗದಲ್ಲಿ ಜಗಳವಾಡಬೇಡಿರಿ,” ಎಂದು ಹೇಳಿ ಕಳುಹಿಸಿದನು.


ಅಬ್ರಾಮನು ಲೋಟನಿಗೆ, “ನನಗೂ, ನಿನಗೂ; ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಿರಬಾರದು. ಏಕೆಂದರೆ ನಾವು ಬಳಗದವರು.


ಇದಾದ ಕೂಡಲೇ ಯೇಸು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ, ತಮ್ಮ ಶಿಷ್ಯರು ದೋಣಿಯನ್ನು ಹತ್ತಿ ತಮಗಿಂತ ಮುಂದಾಗಿ ಆಚೆದಡಕ್ಕೆ ಹೋಗಬೇಕೆಂದು ಆಜ್ಞಾಪಿಸಿದರು.


ದೇವರು ಸ್ವಜನರಿಗೆ ತನ್ನ ಮೂಲಕವಾಗಿ ಬಿಡುಗಡೆಯನ್ನು ಕೊಡುವನೆಂದು ಅವರು ಅರ್ಥ ಮಾಡಿಕೊಳ್ಳುವರೆಂದು ಮೋಶೆ ಭಾವಿಸಿದ್ದನು. ಸ್ವಜನರೋ, ಇದನ್ನು ಅರ್ಥಮಾಡಿಕೊಳ್ಳಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು