Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 6:6 - ಕನ್ನಡ ಸಮಕಾಲಿಕ ಅನುವಾದ

6 ಇವರನ್ನು ಅಪೊಸ್ತಲರ ಮುಂದೆ ತಂದು ನಿಲ್ಲಿಸಿದರು. ಅವರು ಪ್ರಾರ್ಥನೆಮಾಡಿ ಅವರ ಮೇಲೆ ತಮ್ಮ ಹಸ್ತಗಳನ್ನಿಟ್ಟು ನೇಮಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅಪೊಸ್ತಲರು ಅವರ ಮೇಲೆ ಕೈಗಳನ್ನಿಟ್ಟು ಪ್ರಾರ್ಥನೆಮಾಡಿ ಆ ಕಾರ್ಯಕ್ಕಾಗಿ ಅವರನ್ನು ನೇಮಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಪ್ರೇಷಿತರ ಮುಂದೆ ಅವರನ್ನು ನಿಲ್ಲಿಸಿದರು. ಪ್ರೇಷಿತರು ಪ್ರಾರ್ಥನೆಮಾಡಿ ಅವರ ಮೇಲೆ ಹಸ್ತನಿಕ್ಷೇಪ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅಪೊಸ್ತಲರು ಪ್ರಾರ್ಥನೆ ಮಾಡಿ ಅವರ ಮೇಲೆ ಕೈಗಳನ್ನಿಟ್ಟು ನೇವಿುಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಬಳಿಕ ಅವರು ಈ ಏಳು ಮಂದಿಯನ್ನು ಅಪೊಸ್ತಲರ ಮುಂದೆ ನಿಲ್ಲಿಸಿದರು. ಅಪೊಸ್ತಲರು ಪ್ರಾರ್ಥಿಸಿ, ಅವರ ತಲೆಗಳ ಮೇಲೆ ತಮ್ಮ ಕೈಗಳನ್ನಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

6 ತನ್ನಾ ಹ್ಯಾ ಸಾತ್ ಲೊಕಾಕ್ನಿ ಅಪೊಸ್ತಲಾಂಚ್ಯಾ ಇದ್ರಾಕ್ ಇಬೆ ಕರ್‍ಲ್ಯಾನಿ, ಅಪೊಸ್ತಲಾನಿ ಮಾಗ್ನಿ ಕರುನ್ ತೆಂಚ್ಯಾ ಟಕ್ಲ್ಯಾಂಚ್ಯಾ ವರ್‍ತಿ ಅಪ್ಲಿ ಹಾತಾ ಥವ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 6:6
14 ತಿಳಿವುಗಳ ಹೋಲಿಕೆ  

ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತಗಳನ್ನು ಇಟ್ಟಿದ್ದರ ಮೂಲಕ ನಿನಗೆ ದೊರಕಿದ ದೇವರ ವರವು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಕ ಮಾಡುತ್ತೇನೆ.


ನೀನು ಲೇವಿಯರನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಕರೆತಂದಾಗ, ಇಸ್ರಾಯೇಲರು ತಮ್ಮ ಕೈಗಳನ್ನು ಲೇವಿಯರ ಮೇಲೆ ಇಡಬೇಕು.


ಆಮೇಲೆ ಅವರು, “ಕರ್ತ ಯೇಸುವೇ, ಪ್ರತಿಯೊಬ್ಬರ ಹೃದಯವನ್ನು ನೀವು ತಿಳಿದವರು. ಈ ಸೇವೆಯಿಂದ ಯೂದನು ಭ್ರಷ್ಟನಾಗಿ ತನಗೆ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ,


ನಿನ್ನಲ್ಲಿರುವ ವರವನ್ನು ಅಲಕ್ಷ್ಯ ಮಾಡಬೇಡ. ಅದು ಸಭೆಯ ಹಿರಿಯರು ಪ್ರವಾದನೆಯ ಮೂಲಕ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ನಿನಗೆ ಕೊಡಲಾಯಿತಲ್ಲವೇ?


ಆಗ ಪೇತ್ರ ಮತ್ತು ಯೋಹಾನರು ಅವರ ಮೇಲೆ ತಮ್ಮ ಕೈಗಳನ್ನಿಡಲು, ಅವರು ಪವಿತ್ರಾತ್ಮ ವರವನ್ನು ಹೊಂದಿದರು.


ಆಗ ಅವರು ಉಪವಾಸವಿದ್ದು ಪ್ರಾರ್ಥನೆಮಾಡಿ, ಅವರಿಬ್ಬರ ಮೇಲೆ ಕೈಗಳನ್ನಿಟ್ಟು ಕಳುಹಿಸಿಬಿಟ್ಟರು.


ಆಮೇಲೆ ಅನನೀಯನು ಆ ಮನೆಗೆ ಹೋಗಿ ಒಳಗೆ ಪ್ರವೇಶಿಸಿದನು. ತನ್ನ ಕೈಗಳನ್ನು ಸೌಲನ ಮೇಲಿಟ್ಟು, “ಸಹೋದರ ಸೌಲನೇ, ನೀನು ಇಲ್ಲಿಗೆ ಬರುತ್ತಿದ್ದಾಗ ದಾರಿಯಲ್ಲಿ ನಿನಗೆ ದರ್ಶನಕೊಟ್ಟ ಕರ್ತ ಯೇಸು, ನಿನಗೆ ಪುನಃ ದೃಷ್ಟಿ ಬರುವಂತೆಯೂ ನೀನು ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ಕಳುಹಿಸಿದ್ದಾರೆ,” ಎಂದು ಹೇಳಲು,


ಅವಸರದಿಂದ ಯಾರ ಮೇಲೆಯೂ ಹಸ್ತವನ್ನಿಟ್ಟು, ಸಭಾ ಹಿರಿಯರನ್ನಾಗಿ ನೇಮಿಸಬೇಡ. ಇತರರ ಪಾಪಗಳಲ್ಲಿ ಪಾಲುಗಾರನಾಗಬೇಡ. ನಿನ್ನನ್ನು ಶುದ್ಧನಾಗಿ ಕಾಪಾಡಿಕೋ.


ದೀಕ್ಷಾಸ್ನಾನಗಳ ಬೋಧನೆಯೂ ಹಸ್ತಾರ್ಪಣೆಯೂ ಸತ್ತವರ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪೂ ಮುಂತಾದವುಗಳನ್ನು ಪುನಃ ಅಸ್ತಿವಾರವನ್ನಾಗಿ ಹಾಕದೆ, ನಾವು ಪರಿಪೂರ್ಣತೆಗೆ ಹೋಗೋಣ.


ಆಗ ಯೆಹೋವ ದೇವರು ಮೋಶೆಗೆ, “ಪವಿತ್ರಾತ್ಮವುಳ್ಳವನಾಗಿರುವ ನೂನನ ಮಗ ಯೆಹೋಶುವನನ್ನು ತೆಗೆದುಕೊಂಡು, ನಿನ್ನ ಕೈಯನ್ನು ಅವನ ಮೇಲೆ ಇಟ್ಟು,


ಇದಲ್ಲದೆ ನೂನನ ಮಗ ಯೆಹೋಶುವನು ಜ್ಞಾನದ ಆತ್ಮದಿಂದ ತುಂಬಿದವನಾಗಿದ್ದನು. ಏಕೆಂದರೆ ಮೋಶೆ ಅವನ ಮೇಲೆ ತನ್ನ ಕೈಗಳನ್ನು ಇಟ್ಟಿದ್ದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಇಸ್ರಾಯೇಲರು ಯೆಹೋಶುವನ ಮಾತು ಕೇಳಿದರು.


“ನನ್ನ ಚಿಕ್ಕ ಮಗಳು ಸಾಯುತ್ತಿದ್ದಾಳೆ. ಅವಳು ಗುಣಹೊಂದಿ ಬದುಕುವಂತೆ ದಯಮಾಡಿ ಬಂದು ಅವಳ ಮೇಲೆ ನಿಮ್ಮ ಕೈಗಳನ್ನಿಡಬೇಕು,” ಎಂದು ಬಹಳವಾಗಿ ಬೇಡಿಕೊಂಡನು.


ತನ್ನ ದೃಷ್ಟಿ ಪುನಃ ಬರುವಂತೆ ಅನನೀಯ ಎಂಬ ಹೆಸರಿನ ಒಬ್ಬ ಮನುಷ್ಯನು ಬಂದು ತನ್ನ ಮೇಲೆ ಕೈಗಳನ್ನಿಡುವುದನ್ನು ಅವನು ದರ್ಶನದಲ್ಲಿ ಕಂಡಿದ್ದಾನೆ,” ಎಂದು ಹೇಳಿದರು.


ಪೌಲನು ಅವರ ಮೇಲೆ ತನ್ನ ಕೈಗಳನ್ನಿಡಲು, ಅವರ ಮೇಲೆ ಪವಿತ್ರಾತ್ಮ ಬಂದರು. ಆಗ ಅವರು ಅನ್ಯಭಾಷೆಗಳಲ್ಲಿ ಮಾತನಾಡಿದರು ಹಾಗೂ ಪ್ರವಾದಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು