Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 5:42 - ಕನ್ನಡ ಸಮಕಾಲಿಕ ಅನುವಾದ

42 ದಿನದಿನವೂ ಅವರು ದೇವಾಲಯಗಳಲ್ಲಿ ಮತ್ತು ಮನೆಯಿಂದ ಮನೆಗೆ ಹೋಗಿ ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದನ್ನೂ ಬೋಧಿಸುವುದನ್ನೂ ನಿಲ್ಲಿಸಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

42 ಹಿರೀಸಭೆಯ ಎದುರಿನಿಂದ ಹೊರಟುಹೋಗಿ, ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ, ಮನೆಮನೆಗಳಲ್ಲಿಯೂ, ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ಕುರಿತು ಶುಭವರ್ತಮಾನವನ್ನು ಸಾರುತ್ತಾ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

42 ಯೇಸುವೇ ಲೋಕೋದ್ಧಾರಕನೆಂದು ಪ್ರತಿದಿನ ದೇವಾಲಯದಲ್ಲೂ ಮನೆಮನೆಗಳಲ್ಲೂ ಉಪದೇಶಿಸುವುದರಲ್ಲಿ ಹಾಗೂ ಸಾರುವುದರಲ್ಲಿ ನಿರತರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

42 ಹಿರೀಸಭೆಯ ಎದುರಿನಿಂದ ಹೊರಟುಹೋಗಿ ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

42 ಅವರು ಜನರಿಗೆ ಉಪದೇಶಿಸುವುದನ್ನು ನಿಲ್ಲಿಸಲಿಲ್ಲ. ಯೇಸುವೇ ಕ್ರಿಸ್ತನೆಂಬ ಶುಭವಾರ್ತೆಯನ್ನು ಜನರಿಗೆ ಹೇಳುವುದನ್ನು ಮುಂದುವರಿಸಿದರು. ಅವರು ಪ್ರತಿದಿನ ದೇವಾಲಯದಲ್ಲಿಯೂ ಜನರ ಮನೆಗಳಲ್ಲಿಯೂ ಉಪದೇಶಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

42 ತೆನಿ ಲೊಕಾಕ್ನಿ ಶಿಕ್ವುತಲೆ ಬಂದ್ ಕರುಕ್ನಾತ್, ಜೆಜುಚ್ ಕ್ರಿಸ್ತ್ ಮನ್ತತ್ಲಿ ಬರಿ ಖಬರ್ ಲೊಕಾಕ್ನಿ ಸಾಂಗುಲಾಲೆ ತೆನಿ ಹರ್ ಎಕ್ ದಿಸಾಬಿ ಗುಡಿತ್ನಿ, ಅನಿ ಲೊಕಾಂಚ್ಯಾ ಘರಾತ್ನಿ ಶಿಕಾಪ್ ಕರಿತ್ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 5:42
22 ತಿಳಿವುಗಳ ಹೋಲಿಕೆ  

ಪ್ರತಿದಿನವೂ ದೇವಾಲಯದಲ್ಲಿ ಒಮ್ಮನಸ್ಸಿನಿಂದ ಸಭೆ ಕೂಡಿಬರುವುದನ್ನು ಕ್ರಮವಾಗಿ ಮುಂದುವರೆಸಿದರು. ತಮ್ಮ ಮನೆಗಳಲ್ಲಿ ರೊಟ್ಟಿ ಮುರಿಯುತ್ತಾ ಆನಂದದಿಂದಲೂ ಸರಳ ಹೃದಯದಿಂದಲೂ ಊಟಮಾಡುತ್ತಿದ್ದರು.


ನಿಮಗೆ ಹಿತಕರವಾದುದ್ದೆಲ್ಲವನ್ನೂ ಬೋಧಿಸಲು ನಾನು ಹಿಂಜರಿಯಲಿಲ್ಲ. ಬಹಿರಂಗದಲ್ಲಿಯೂ ಮನೆಮನೆಗಳಲ್ಲಿಯೂ ನಾನು ನಿಮಗೆ ಬೋಧಿಸಿದ್ದೇನೆ.


ವಾಕ್ಯವನ್ನು ಸಾರು; ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಸಿದ್ಧವಾಗಿರು. ಎಲ್ಲಾ ತಾಳ್ಮೆಯಿಂದ ಉಪದೇಶಿಸಿ ಖಂಡಿಸು, ಗದರಿಸು, ಪ್ರೋತ್ಸಾಹಿಸು.


ಪವಿತ್ರ ವೇದದ ಆ ಭಾಗದಿಂದಲೇ ಪ್ರಾರಂಭಿಸಿ ಫಿಲಿಪ್ಪನು ಅವನಿಗೆ ಯೇಸುವಿನ ಕುರಿತಾದ ಶುಭವಾರ್ತೆಯನ್ನು ತಿಳಿಸಿದನು.


ಯೇಸು ಹಗಲಿನಲ್ಲಿ ದೇವಾಲಯದೊಳಗೆ ಬೋಧಿಸುತ್ತಾ ಇದ್ದು, ರಾತ್ರಿಯಲ್ಲಿ ಹೊರಟುಹೋಗಿ ಓಲಿವ್ ಗುಡ್ಡದಲ್ಲಿ ವಾಸಿಸುತ್ತಿದ್ದರು.


ಕ್ರಿಸ್ತ ಯೇಸು ಯಾತನೆಯನ್ನು ಅನುಭವಿಸಿ, ಸತ್ತವರೊಳಗಿಂದ ಜೀವಂತವಾಗಿ ಎದ್ದು ಬರಬೇಕಾಗಿತ್ತೆಂಬುದನ್ನು ವಿವರಿಸಿ, “ನಾನು ನಿಮಗೆ ಪ್ರಕಟಿಸುತ್ತಿರುವ ಯೇಸುವೇ ಆ ಕ್ರಿಸ್ತ,” ಎಂದು ಅವನು ಅವರ ಮುಂದೆ ಬಹಿರಂಗಪಡಿಸಿದನು.


ತಡಮಾಡದೆ, ಯೇಸುವೇ “ದೇವಪುತ್ರ” ಎಂದು ಸಭಾಮಂದಿರಗಳಲ್ಲಿ ಸಾರಲು ಪ್ರಾರಂಭಿಸಿದನು.


ಕರ್ತದೇವರೇ, ಈಗ ಅವರ ಬೆದರಿಕೆಯನ್ನು ನೋಡಿರಿ; ಬಹುಧೈರ್ಯದಿಂದ ನಿಮ್ಮ ವಾಕ್ಯವನ್ನು ಹೇಳಲು ನಿಮ್ಮ ಸೇವಕರನ್ನು ಬಲಪಡಿಸಿರಿ.


ನನಗಾದರೋ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಶಿಲುಬೆಯನ್ನು ಬಿಟ್ಟು ಹೆಚ್ಚಳ ಪಡುವುದು ಬೇಡವೇ ಬೇಡ. ಅವರ ಮೂಲಕ ಲೋಕವು ನನ್ನ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡಿತು. ನಾನು ಲೋಕದ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ.


ಶಿಲುಬೆಗೆ ಹಾಕಲಾದ ಯೇಸು ಕ್ರಿಸ್ತನನ್ನೇ ಹೊರತು ನಿಮ್ಮಲ್ಲಿ ಬೇರೆ ಯಾವುದನ್ನೂ ತಿಳಿಯದವನಾಗಿರುವೆನೆಂದು ತೀರ್ಮಾನಿಸಿಕೊಂಡೆನು.


ಆದರೆ ಎಪಿಕೂರಿಯರು ಹಾಗೂ ಸ್ತೋಯಿಕರು ಎಂಬ ತತ್ವಜ್ಞಾನಿಗಳಲ್ಲಿ ಸಹ ಕೆಲವರು ಅವನೊಂದಿಗೆ ವಾಗ್ವಾದ ಮಾಡಲು ಪ್ರಾರಂಭಿಸಿ, “ಈ ಬಾಯಿಬಡುಕ ಏನು ಹೇಳಬೇಕೆಂದಿದ್ದಾನೆ?” ಎಂದರು. ಇನ್ನೂ ಕೆಲವರು, “ಅವನು ವಿದೇಶದ ದೇವರುಗಳ ಬಗ್ಗೆ ಪ್ರಸ್ತಾಪಿಸುವಂತೆ ತೋರುತ್ತದೆ,” ಎಂದರು. ಏಕೆಂದರೆ ಅವನು ಯೇಸುವನ್ನು ಮತ್ತು ಪುನರುತ್ಥಾನವನ್ನು ಕುರಿತ ಸುವಾರ್ತೆ ಸಾರುತ್ತಿದ್ದನು.


ಆದರೆ ಅವರಲ್ಲಿ, ಕೆಲವರು ಅಂದರೆ ಸೈಪ್ರಸ್ ಮತ್ತು ಕುರೇನೆದ ಪುರುಷರು ಅಂತಿಯೋಕ್ಯಕ್ಕೆ ಹೋಗಿ ಗ್ರೀಕರಿಗೂ ಕರ್ತ ಯೇಸುವಿನ ಶುಭಸಮಾಚಾರ ಸಾರಲು ಪ್ರಾರಂಭಿಸಿದರು.


ಫಿಲಿಪ್ಪನು ಸಮಾರ್ಯದ ಒಂದು ಪಟ್ಟಣಕ್ಕೆ ಹೋಗಿ ಅಲ್ಲಿ ಕ್ರಿಸ್ತ ಯೇಸುವಿನ ಸಂದೇಶ ಸಾರಿದನು.


ಏಕೆಂದರೆ ಕಂಡಿದ್ದನ್ನೂ ಕೇಳಿದ್ದನ್ನೂ ಕುರಿತು ನಾವು ಮಾತನಾಡದೆ ಇರಲಾರೆವು,” ಎಂದು ಉತ್ತರಕೊಟ್ಟರು.


ನಾನು ನಿಮ್ಮ ಸಂಗಡ ಪ್ರತಿದಿನವೂ ದೇವಾಲಯದಲ್ಲಿದ್ದಾಗ, ನೀವು ನನ್ನನ್ನು ಹಿಡಿಯಲಿಲ್ಲ. ಆದರೆ ಇದು ನಿಮ್ಮ ಸಮಯ, ಅಂಧಕಾರ ದೊರೆತನ ಮಾಡುವ ಕಾಲ,” ಎಂದರು.


ನಾನು ಇನ್ನೂ ಇದಕ್ಕಿಂತ ಅಲ್ಪನಾಗಿರುವುದಕ್ಕೂ, ಹೀನೈಸಿಕೊಳ್ಳುವುದಕ್ಕೂ, ಸಿದ್ಧನಾಗಿದ್ದೇನೆ. ಆದರೆ ನೀನು ಹೇಳಿದ ದಾಸಿಯರಿಂದ ನಿಶ್ಚಯವಾಗಿ ಘನತೆಯನ್ನು ಹೊಂದುವೆನು,” ಎಂದನು.


“ನಾವು ನಿಮಗೆ, ದೇವರು ನಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ್ದನ್ನು ಶುಭವರ್ತಮಾನವನ್ನಾಗಿ ಹೇಳುತ್ತಿದ್ದೇವೆ.


ದೇವರು ತಮ್ಮ ಪುತ್ರನನ್ನು ನನ್ನಲ್ಲಿ ಪ್ರಕಟಿಸಿ, ಯೆಹೂದ್ಯರಲ್ಲದವರಲ್ಲಿ ಸುವಾರ್ತೆಯನ್ನು ಸಾರಬೇಕೆಂದು ಮನಸ್ಸು ಮಾಡಿದರು. ಕೂಡಲೇ ದೇವರ ಪುತ್ರ ಆಗಿರುವವರ ಪ್ರಕಟಣೆಯ ತರುವಾಯ ನಾನು ಯಾವ ಮನುಷ್ಯರನ್ನು ವಿಚಾರಿಸಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು